ಉದ್ಯಮಿಗಳೇ ಹುಷಾರ್‌, ಶಿವಮೊಗ್ಗ ಜಿಲ್ಲೆಯ ಡಾಂಬಾರು ವ್ಯಾಪಾರಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

SMS-Fraud-Shimoga-CEN-Police-Station.

ಶಿವಮೊಗ್ಗ: ಡಾಂಬರ್ ವ್ಯಾಪಾರಿಯೊಬ್ಬರಿಗೆ (bitumen trader) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI) ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ₹31,06,300 ವಂಚಿಸಲಾಗಿದೆ. ಹೇಗಾಯ್ತು ವಂಚನೆ? ಶಿವಮೊಗ್ಗ ಜಿಲ್ಲೆಯ ಡಾಂಬಾರ್‌ ವ್ಯಾಪಾರಿಯೊಬ್ಬರು (ಹೆಸರು ಗೌಪ್ಯ) ತಮ್ಮ ವ್ಯಾಪಾರಕ್ಕಾಗಿ ಜಸ್ಟ್ ಡಯಲ್‌ನಲ್ಲಿ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿದ್ದರು. ಇದನ್ನು ಬಳಸಿಕೊಂಡ ಅಪರಿಚಿತರು, ತಾವು ರಾಕ್ಯಾಲಿಡ್ ಎಂಬ ಕಂಪನಿಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಕರೆ ಮಾಡಿದ್ದರು. ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಡಾಂಬರ್ ಸರಬರಾಜು ಮಾಡಲು ನೋಂದಣಿ ಅಗತ್ಯವಿದೆ ಎಂದು ನಂಬಿಸಿದ್ದರು. ಇದಕ್ಕಾಗಿ ವಿವಿಧ ಹಂತಗಳಲ್ಲಿ ನೋಂದಣಿ … Read more

ಗಾಂಧಿ ಬಜಾರ್‌ನ ಅಂಗಡಿ ಮೇಲೆ ಅಧಿಕಾರಿಗಳು ದಾಳಿ, ಮಾಲೀಕನ ವಿರುದ್ಧ ಕೇಸ್‌, ಯಾಕೆ?

041023 Gandhi Bazaar In Shimoga.webp

ಶಿವಮೊಗ್ಗ: ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಮಾಹಿತಿ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿರುವ ಆಹಾರ ಸಂಸ್ಕರಣಾ ಮಳಿಗೆ (shop) ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಮಳಿಗೆಯಲ್ಲಿ ಗೃಹಬಳಕೆಯ ಎರಡು ಖಾಲಿ ಸಿಲಿಂಡರ್‌ಗಳು ಪತ್ತೆಯಾಗಿವೆ. ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿರುವ ಹಿನ್ನೆಲೆ ಅಂಗಡಿ ಮಾಲೀಕನ ವಿರುದ್ಧ ದೂರು ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಇನ್ನೋವಾ ಕಾರು ಅಡ್ಡಗಟ್ಟಿ ಫೋನ್‌ ಪೇ ಮೂಲಕ ದುಡ್ಡು ಹಾಕಿಸಿಕೊಂಡು, ಮೊಬೈಲ್‌ಗಳ ದರೋಡೆ

Sagara-Road-Gadikoppa-Shimoga-city

ಶಿವಮೊಗ್ಗ: ಇನ್ನೋವಾ ಕಾರಿನಲ್ಲಿ ತೆರಳುತ್ತಿದ್ದವರನ್ನು ಅಡ್ಡಗಟ್ಟಿ, ಬೆದರಿಸಿ ದರೋಡೆ (robbery) ಮಾಡಲಾಗಿದೆ. ಶಿವಮೊಗ್ಗದ ಸಾಗರ ರಸ್ತೆಯ ವಾಜಪೇಯಿ ಲೇಔಟ್ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹದಲ್ಲಿ ಬಂದ ಮೂವರು ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ಒಂದು ರೈಲು ಜನವರಿ 4ರಂದು ರದ್ದು ವಿನೋಬನಗರದ ನಿವಾಸಿ ಬಾಬು ಎಂಬುವವರು ಶ್ವೇತಾ ಅವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತರು ಕಾರನ್ನು ಅಡ್ಡಗಟ್ಟಿದ್ದಾರೆ. ಬಾಬು ಅವರ ಮೇಲೆ ಹಲ್ಲೆ ನಡೆಸಿ, ಅವರ ಫೋನ್ ಪೇ ಮೂಲಕ … Read more

ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

Kote Police station building

ಶಿವಮೊಗ್ಗ: ನಗರದ ರೈಸ್ ಮಿಲ್ (rice mill) ಮಾಲೀಕ ಶಿವಕುಮಾರ್ ಅವರಿಗೆ ಅಕ್ಕಿ ವ್ಯಾಪಾರದಲ್ಲಿ ಸುಮಾರು ₹30 ಲಕ್ಷಕ್ಕು ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು? ಹಾಸನದ ವಾಸೀಂ ಎಂಬಾತ ಕಳೆದ ಒಂದು ವರ್ಷದಿಂದ ಶಿವಕುಮಾರ್ ಅವರ ಮಿಲ್‌ನಿಂದ ಅಕ್ಕಿ ಮೂಟೆಗಳನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಸಕಾಲಕ್ಕೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದರು. ನಂತರ ಅಕ್ಕಿ ಪಡೆದು ಹಣ ನೀಡದೆ ಸತಾಯಿಸಿದ್ದಾರೆ … Read more

‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

bh-road-in-Shimoga-shivappanayaka-statue

ಶಿವಮೊಗ್ಗ: ಕರ್ನಾಟಕ ಸಂಘದ ಎದುರಿಗೆ ಇರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ (Bank ATM) ಮಹಿಳೆಯೊಬ್ಬರಿಗೆ ನಂಬಿಸಿ ಹಣ ದೋಚಿರುವ ಘಟನೆ ನಡೆದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ ಹೊಳೆಹೊನ್ನೂರಿನ ಶಿವಮ್ಮ ಎಂಬುವವರು ಹಣ ಬಿಡಿಸಲು ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಹಣ ಬಿಡಿಸಿಕೊಡುವುದಾಗಿ ನಂಬಿಸಿದ್ದಾನೆ. ಆತನ ಮಾತು ನಂಬಿ ಮಹಿಳೆಯು ತನ್ನ ಎಟಿಎಂ ಕಾರ್ಡ್ ಹಾಗೂ ಪಿನ್ ನೀಡಿದ್ದಾರೆ. ವ್ಯಕ್ತಿಯು ಹಣ ಬರುತ್ತಿಲ್ಲ … Read more

ಶಿವಮೊಗ್ಗದ ಮಹಿಳೆಯರೆ ಎಚ್ಚರ, ವಾಕಿಂಗ್‌ ವೇಳೆ ನಡೆಯಿತು ದುಷ್ಕೃತ್ಯ, ದೂರು ದಾಖಲು

Crime-News-General-Image

ಶಿವಮೊಗ್ಗ: ಕೆಂಚಪ್ಪ ಬಡಾವಣೆಯ ಅಂಗನವಾಡಿ ಸಮೀಪ ವಾಕಿಂಗ್‌ ಮಾಡುತ್ತಿದ್ದ ವೃದ್ಧೆಯೊಬ್ಬರ ಚಿನ್ನದ ಸರವನ್ನು (Chain snatching) ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ ಮನೆಯ ಮುಂದೆ ವಾಕಿಂಗ್ ಮಾಡುತ್ತಿದ್ದ ಜಯಲಕ್ಷ್ಮಿ ಎಂಬುವವರನ್ನು ಹಿಂಬಾಲಿಸಿದ ಇಬ್ಬರು ಅಪರಿಚಿತರು, ಅವರ ಕೊರಳಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕಳ್ಳರು ಜಯಲಕ್ಷ್ಮಿ ಅವರನ್ನು ಕೆಳಕ್ಕೆ ತಳ್ಳಿದ್ದು, ಅವರು … Read more

ಮೈಸೂರು ಮೂಲದ ಲಾರಿಯೊಳಗೆ ಶಿವಮೊಗ್ಗದಲ್ಲಿ ದಿಢೀರ್‌ ಪ್ರತ್ಯಕ್ಷವಾದ ದುಷ್ಕರ್ಮಿಗಳು, ದರೋಡೆ

crime name image

ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್‌, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಲಾಂಗ್‌ ತೋರಿಸಿ, ಮೊಬೈಲ್‌ ಮತ್ತು ನಗದು ದರೋಡೆ (robbed) ಮಾಡಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಚಾಲಕನ ಎರಡು ಕಾಲಿಗು ಲಾಂಗ್‌ ಉಲ್ಟಾ ಮಾಡಿಕೊಂಡು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್‌ ಹಿತೇಶ್‌ ನಾಯಕ ಎಂಬುವವರನ್ನು ಬೆದರಿಸಲಾಗಿದೆ. ಇಬ್ಬರೂ ಬಾಡಿಗೆಗಾಗಿ ಕಾಯುತ್ತ ಶಿವಮೊಗ್ಗದ … Read more

ಶಿವಮೊಗ್ಗ ಕೋರ್ಟ್‌ನಿಂದ ಹೊರ ಬಂದ ಆಟೋ ಡ್ರೈವರ್‌ಗೆ ಕಾದಿತ್ತು ಆಘಾತ

Shivamogga-Court-Balaraja-Urs-Road

ಶಿವಮೊಗ್ಗ: ಕೋರ್ಟ್‌ನಲ್ಲಿ ಕೆಲಸ ಮುಗಿಸಿ ಹೊರ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನವಾಗಿದೆ ಎಂದು ಆರೋಪಿಸಿ ಆಟೋ ಡ್ರೈವರ್‌ ಮಹೊಮದ್‌ ಖಾಸಿಮ್‌ ದೂರು ನೀಡಿದ್ದಾರೆ. ಮೊಹಮದ್‌ ಖಾಸಿಮ್‌ ಅವರು ತಮ್ಮ ಮಾವನ ಸ್ಪ್ಲೆಂಡರ್‌ ಪ್ಲಸ್‌ ಬೈಕಿನಲ್ಲಿ ಕೋರ್ಟ್‌ಗೆ ಬಂದಿದ್ದರು. ಗೇಟ್‌ ಪಕ್ಕದಲ್ಲಿ ಬೈಕ್‌ ನಿಲ್ಲಿಸಿ ಕೋರ್ಟ್‌ ಒಳಗೆ ಹೋಗಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಹರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ಹುಷಾರ್‌, ನಿಮಗು ಬರಬಹುದು ಇವರ ಫೋನ್‌, ಭಯ ಪಟ್ಟರೆ ಅಕೌಂಟ್‌ ಖಾಲಿಯಾಗೋದು ಗ್ಯಾರಂಟಿ

Online-Fraud-In-Shimoga

ಶಿವಮೊಗ್ಗ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಎಂದು ಹೆದರಿಸಿ ಶಿವಮೊಗ್ಗದ ಹಿರಿಯ ನಾಗರಿಕರೊಬ್ಬರ (senior citizen) ಬ್ಯಾಂಕ್‌ ಖಾತೆಯಿಂದ ₹2,50,000 ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಇದನ್ನೂ ಓದಿ » ಗೃಹಿಣಿಗೆ ಅಪರಿಚಿತ ನಂಬರ್‌ಗಳಿಂದ ಫೋನ್‌, ಇನ್‌ಸ್ಟಾಗ್ರಾಂ ತೆಗೆದಾಗ ಕಾದಿತ್ತು ಬಿಗ್‌ ಶಾಕ್ ಅರೆಸ್ಟ್‌ ವಾರಂಟ್‌ ಕಳುಹಿಸಿ ಬೆದರಿಕೆ ಹಿರಿಯ ನಾಗರಿಕರೊಬ್ಬರ ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿ ಎಂದು ಪರಿಚಿಯಿಸಿಕೊಂಡಿದ್ದ. ‘ನಿಮ್ಮ ಹೆಸರಿನಲ್ಲಿರುವ ಸಿಮ್‌ … Read more

ಗಿಫ್ಟ್‌ ಆಸೆಗೆ ತಾಯಿ, ಮಗಳು ಕಳೆದುಕೊಂಡರು ಲಕ್ಷ ಲಕ್ಷ ಹಣ, ಏನಿದು ಪ್ರಕರಣ?

SMS-Fraud-Shimoga-CEN-Police-Station.

ಶಿವಮೊಗ್ಗ: ನೈಜೀರಿಯ ದೇಶದಿಂದ ಗಿಫ್ಟ್‌ ಬಂದಿದೆ. ಇದನ್ನು ಪಡೆಯಲು ಸರ್ವಿಸ್‌ ಟ್ಯಾಕ್ಸ್‌ ಕಟ್ಟಬೇಕು ಎಂದು ನಂಬಿಸಿ ತಾಯಿ ಮತ್ತು ಮಗಳಿಗೆ ಲಕ್ಷಾಂತರ ರುಪಾಯಿ ವಂಚಿಸಲಾಗಿದೆ (Cheated). ಸೆಪ್ಟೆಂಬರ್‌ 26ರಂದು ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಮುಂಬೈ ಕಸ್ಟಮ್ಸ್‌ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ನೈಜೀರಿಯಾದಿಂದ ಗಿಫ್ಟ್‌ ಬಂದಿದೆ. ಅದನ್ನು ಪಡೆಯಲು ಸರ್ವಿಸ್‌ ಟ್ಯಾಕ್ಸ್‌ ಕಟ್ಟಬೇಕು ಎಂದು ನಂಬಿಸಿದ್ದ. ವಂಚಕ ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ತಾಯಿ ಮತ್ತು ಮಗಳು ಹಣ ವರ್ಗಾಯಿಸಿದ್ದಾರೆ. ಒಟ್ಟು ₹2,80,590 ಹಣ ವರ್ಗಾವಣೆ … Read more