ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

ಶಿವಮೊಗ್ಗ: ನಗರದ ರೈಸ್ ಮಿಲ್ (rice mill) ಮಾಲೀಕ ಶಿವಕುಮಾರ್ ಅವರಿಗೆ ಅಕ್ಕಿ ವ್ಯಾಪಾರದಲ್ಲಿ ಸುಮಾರು ₹30 ಲಕ್ಷಕ್ಕು ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ.

ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

ಹಾಸನದ ವಾಸೀಂ ಎಂಬಾತ ಕಳೆದ ಒಂದು ವರ್ಷದಿಂದ ಶಿವಕುಮಾರ್ ಅವರ ಮಿಲ್‌ನಿಂದ ಅಕ್ಕಿ ಮೂಟೆಗಳನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಸಕಾಲಕ್ಕೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದರು. ನಂತರ ಅಕ್ಕಿ ಪಡೆದು ಹಣ ನೀಡದೆ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾಸೀಂ ಒಟ್ಟು ₹30,90,631 ಬಾಕಿ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 3, 2026 at 4:20 PM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 3, 2026

Leave a Comment