ಶಿವಮೊಗ್ಗದಲ್ಲಿ ಕನ್ನಡದ ಪುಸ್ತಕಗಳ ಮೇಲೆ ರಿಯಾಯಿತಿ, ರಾಜ್ಯೋತ್ಸವ ವಿಶೇಷ
SHIVAMOGGA LIVE NEWS | 1 NOVEMBER 2023 SHIMOGA : ನಗರದ ಡಯಾನ ಬುಕ್ ಗ್ಯಾಲರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ.1ರಿಂದ 30ರವರೆಗೆ ಕನ್ನಡ ಪುಸ್ತಕಗಳ ಮೇಲೆ ರಿಯಾಯಿತಿ (Discount) ನೀಡಲಾಗುತ್ತಿದೆ. 500 ರೂ. ಮೇಲ್ಪಟ್ಟ ಪುಸ್ತಕಗಳ ಖರೀದಿ ಮೇಲೆ ಶೇ.15, ಸಾವಿರ ರೂ. ಮೇಲ್ಪಟ್ಟ ಖರೀದಿಗೆ ಶೇ.25 ರಿಯಾಯಿತಿ ನೀಡಲಾಗುತ್ತಿದೆ. ಕುವೆಂಪು ಹಾಗೂ ಎಸ್.ಎಲ್.ಭೈರಪ್ಪ ಅವರ ಕೃತಿಗಳಿಗೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ- ಶಿವಮೊಗ್ಗದಲ್ಲಿ ಪುಸ್ತಕ ಪ್ರದರ್ಶನ, ನವೆಂಬರ್ ತಿಂಗಳು … Read more