‘ಆಗ ನಾನೇ ತಪ್ಪು ಮಾಡಿಬಿಟ್ಟೆ, ಇಲ್ಲವಾಗಿದ್ದಲ್ಲಿ ಸಂಗಮೇಶ್ವರ್ ನನ್ನ ಸಂಪುಟದಲ್ಲಿ ಮಂತ್ರಿಯಾಗಿರುತ್ತಿದ್ದರು’
BHADRAVATHI| ನಾನು ಮುಖ್ಯಮಂತ್ರಿ ಆಗಿದ್ದಾಗ ಸಂಗಮೇಶ್ವರ್ ಅವರಿಗೆ ಟಿಕೆಟ್ ಕೊಡದೆ ತಪ್ಪು ಮಾಡಿಬಿಟ್ಟೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಶ್ಚಾತ್ತಾಪದ ನುಡಿಗಳನ್ನು ಆಡಿದರು. (siddaramaiah at bhadravathi) ಭದ್ರಾವತಿಯ ಕನಕ ಮಂಟಪ ಮೈದಾನದಲ್ಲಿ ಶಾಸಕ ಸಂಗಮೇಶ್ವರ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಂಗಮೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಸಂಗಮೇಶ್ವರ್ ಅವರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿಬಿಟ್ಟೆ. ಆಗ ನನ್ನ ಸ್ನೇಹಿತ ಸಿ.ಎಂ.ಇಬ್ರಾಹಿಂಗೆ ಟಿಕೆಟ್ ಕೊಟ್ಟುಬಿಟ್ಟೆವು. … Read more