ಶಿವಮೊಗ್ಗದಲ್ಲಿ ಬಲೆ ಹಾಕಿ ಬೀದಿ ನಾಯಿ ಹಿಡಿದು ಕ್ರೂರವಾಗಿ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್‌

Attack-on-Street-dog-at-gopala-in-Shimoga

ಶಿವಮೊಗ್ಗ: ಬೀದಿ ನಾಯಿಗೆ ಬಲೆ ಹಾಕಿ ಹಿಡಿದು ಕ್ರೂರವಾಗಿ ಹೊಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಸಂಬಂಧ ಪ್ರಾಣಿ ರಕ್ಷಣಾ ಸೇವಾ ತಂಡದ ಸದಸ್ಯ ಸೂರಜ್.ಎಸ್ ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಲ್ಲಿ ಆಗಿದ್ದು? ಹೇಗಾಯ್ತು ಘಟನೆ? ಹಂದಿ ಹಿಡಿಯುವ ಗುಂಪೊಂದು ಬೀದಿ ನಾಯಿಯೊಂದನ್ನು ಬಲೆಯಲ್ಲಿ ಸೆರೆಹಿಡಿದು ದೊಣ್ಣೆಯಿಂದ ಹೊಡೆದು ಸಾಯಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನವೆಂಬರ್ 28ರ ಬೆಳಗ್ಗೆ 8.16ಕ್ಕೆ ಶಿವಮೊಗ್ಗದ ಗೋಪಾಳ ಪೊಲೀಸ್ ಲೇಔಟ್‌ನ ವೃದ್ಧಾಶ್ರಮದ ಎದುರು ನಡೆದಿದೆ ಎಂದು … Read more

ಕಾರಿನಲ್ಲಿ ಬಂದು ಹೊಟೇಲ್‌ನಲ್ಲಿ ಊಟ ಕೇಳಿ ಮಾಲೀಕನತ್ತ ಮಚ್ಚು ಬೀಸಿದ ವ್ಯಕ್ತಿ

Bhadravathi-Old-Town-Police-Station

ಭದ್ರಾವತಿ: ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊಟೇಲ್‌ (Hotel) ಮಾಲೀಕನತ್ತ ಮಚ್ಚು ಬೀಸಿದ್ದಾನೆ. ಆದೃಷ್ಟವಶಾತ್‌ ಹೊಟೇಲ್‌ ಮಾಲೀಕ ಪಾರಾಗಿದ್ದಾರೆ. ಭದ್ರಾವತಿಯ ವೀರಶೈವ ಸಭಾಭವನದ ಸಮೀಪ ರಾಮಾವರಂ ಹೊಟೇಲ್‌ನಲ್ಲಿ ಘಟನೆ ನಡೆದಿದೆ. ರಾತ್ರಿ 10 ಗಂಟೆ ಹೊತ್ತಿಗೆ ಹೊಟೇಲ್‌ ಬಂದ್‌ ಮಾಡುವಾಗ ವ್ಯಕ್ತಿಯೊಬ್ಬ ಮಚ್ಚು ಹಿಡಿದು ಬಂದಿದ್ದ. ಊಟ ಕೊಡುವಂತೆ ಕೇಳಿದ್ದ. ಹೊಟೇಲ್‌ ಬಂದ್‌ ಮಾಡುತ್ತಿರುವುದರಿಂದ ಊಟವಿಲ್ಲ ಎಂದು ಮಾಲೀಕ ರವೀಂದ್ರ ತಿಳಿಸಿದ್ದರು. ಹೊಟೇಲ್‌ ಬಾಗಿಲು ಹಾಕಿ ಮಾಲೀಕ ರವೀಂದ್ರ ಹೊರಗೆ ತೆರಳುತ್ತಿದ್ದಂತೆ ಅಲ್ಲಿಯೇ ಇದ್ದ ವ್ಯಕ್ತಿ ಏಕಾಏಕಿ ಮಚ್ಚು … Read more

BREAKING NEWS – ಶಿವಮೊಗ್ಗದಲ್ಲಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಒಬ್ಬನ ಸ್ಥಿತಿ ಗಂಭೀರ

021025-Amjad-Admitted-to-maxx-hospital.webp

ಶಿವಮೊಗ್ಗ: ನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ (Attack) ನಡೆಸಿದ್ದಾರೆ. ಟೆಂಪೊ ಸ್ಟಾಂಡ್‌ ಸಮೀಪ ಇಂದು ರಾತ್ರಿ ಘಟನೆ ಸಂಭವಿಸಿದೆ. ಅಮ್ಜದ್ (38) ಗಂಭೀರ ಗಾಯಗೊಂಡಿದ್ದು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಾಹಿದ್ ಎಂಬಾತನ ಜೊತೆಗೆ ಮಾತನಾಡುತ್ತ ನಿಂತಿದ್ದಾಗ ಅಮ್ಜದ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೈಗಳು, ಹೊಟ್ಟೆ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಘಟನೆ ಬೆನ್ನಿಗೆ ಕೂಡಲೆ ಅಮ್ಜದ್‌‌ನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೊಂದೆಡೆ ಶಾಹಿದ್ ಕೂಡ ಗಾಯಗೊಂಡಿದ್ದು … Read more

ಭದ್ರಾವತಿಯಲ್ಲಿ ತೋಟಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ

Bear-attack-on-a-person-at-mavinakere-in-Bhadravathi

ಭದ್ರಾವತಿ: ತೋಟಕ್ಕೆ ನಡೆದು ಹೋಗುತ್ತಿದ್ದ ವ್ಯಕ್ತಿ ಮೇಲೆ ಕರಡಿ (Bear) ದಾಳಿ ನಡೆಸಿದೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭದ್ರಾವತಿ ತಾಲೂಕು ಮಾವಿನಕೆರೆ ಬಳಿ ಘಟನೆ ಸಂಭವಿಸಿದೆ. ಮಧುಸೂದನ್‌ (38) ಎಂಬುವವರ ಮೇಲೆ ಕರಡಿ ದಾಳಿ ಮಾಡಿದೆ. ಬಂಡಿಗುಡ್ಡದ ಮಾವಿನಕೆರೆ ಬಳಿ ಮಧುಸೂದನ್‌, ತೋಟಕ್ಕೆ ನಡೆದು ಹೋಗುತ್ತಿದ್ದರು. ಈ ಸಂದರ್ಭ ಅವರ ಮೇಲೆರಗಿದೆ. ತೀವ್ರ ಗಾಯಗೊಂಡಿದ್ದ ಮಧುಸೂದನ್‌ ಕರಡಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಇದನ್ನೂ ಓದಿ »ಶಿವಮೊಗ್ಗದಲ್ಲಿ ಆನೆಗಳ ನಿಯಂತ್ರಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ವ್ಯಕ್ತಿಯ … Read more

ಕೊಡಚಾದ್ರಿ ಇ.ಡಿ.ಸಿ ಸಮಿತಿ ಸದಸ್ಯ ಸುಬ್ರಹ್ಮಣ್ಯ, ಪತ್ನಿ ಮೇಲೆ ಹಲ್ಲೆ, ಕಲ್ಲು ತೂರಾಟ

HOSANAGARA-NEWS-GENERAL

ಹೊಸನಗರ: ತಾಲ್ಲೂಕಿನ ಕಟ್ಟಿನಹೊಳೆ ನಿವಾಸಿ ಹಾಗೂ ಕೊಡಚಾದ್ರಿ (Kodachadri) ಇ.ಡಿ.ಸಿ ಸಮಿತಿ ಅಧ್ಯಕ್ಷ ಕೆ.ಟಿ.ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಮೀನಾಕ್ಷಿ ಅವರ ಮೇಲೆ ಶನಿವಾರ ರಾತ್ರಿ ಹಲ್ಲೆ ಹಾಗೂ ಕಲ್ಲು ತೂರಾಟ ನಡೆದಿದೆ. ಈ ಘಟನೆಯಲ್ಲಿ ಸುಬ್ರಹ್ಮಣ್ಯ ಅವರ ತಲೆಗೆ ಗಾಯವಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುಬ್ರಹ್ಮಣ್ಯ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಸಂಬಂಧಿಗಳಿಬ್ಬರು ಅತಿಕ್ರಮವಾಗಿ ಮನೆ ಪ್ರವೇಶಿಸಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆಯೇ ಇಬ್ಬರೂ ತಮ್ಮ … Read more

ಚಂದ್ರಗುತ್ತಿ ಹೋಬಳಿ, ಶ್ವಾನಗಳ ದಾಳಿಗೆ ಜಿಂಕೆ ಬಲಿ

SORABA-NEWS-UPDATE

ಸೊರಬ: ಶ್ವಾನಗಳ ದಾಳಿಗೆ ಜಿಂಕೆಯೊಂದು (Deer) ಮೃತಪಟ್ಟಿದೆ. ಆಹಾರ ಅರಸಿ ಕಾಡಿನಿಂದ ಬಂದ ಗಂಡು ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಚಂದ್ರಗುತ್ತಿ ಹೋಬಳಿಯಲ್ಲಿ ಶಿವಪುರ ಗ್ರಾಮದಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ನಾಯಿಗಳು ದಾಳಿ ನಡೆಸಿದಾಗ ಗ್ರಾಪಂ ಸದಸ್ಯ ಸಲೀಂ ಮತ್ತಿತರರು ಜಿಂಕೆಯನ್ನು ರಕ್ಷಣೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಜಿಂಕೆಗೆ ಪಶುವೈದ್ಯರು ಚಿಕಿತ್ಸೆ ನೀಡಿದರೂ ಸಾವಿಗೀಡಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜಿಂಕೆಯ ಕಳೇಬರ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ » ಸಿಗಂದೂರು ಸೇತುವೆ … Read more

ಪಾಕ್‌ ಮೇಲೆ ದಾಳಿ, ಪಹಲ್ಗಾಮ್‌ನಲ್ಲಿ ಮೃತರಾದ ರಿಯಲ್‌ ಎಸ್ಟೇಟ್‌ ಉದ್ಯಮಿ ತಾಯಿಯ ಮೊದಲ ರಿಯಾಕ್ಷನ್‌, ಏನಂದ್ರು?

Manjunatha-Rao-mother-sumathi-speaks-about-Operation-Sindoor

ಶಿವಮೊಗ್ಗ: ಪಹಲ್ಗಾಮ್‌ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಕಳೆದ ರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್‌ ಸಿಂಧೂರ (Operation Sindoor) ಹೆಸರಿನಲ್ಲಿ ನಡೆದ ದಾಳಿಗೆ ಶಿವಮೊಗ್ಗದಲ್ಲಿಯು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್‌ ದಾಳಿಯಲ್ಲಿ ಮೃತರಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥರಾವ್‌ ಅವರ ತಾಯಿ ಸುಮತಿ, ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಕಳೆದ ರಾತ್ರಿ ಎರಡ್ಮೂರು ಜನ ಎನ್‌ಐಎ ಅಧಿಕಾರಿಗಳು ಬಂದಿದ್ದರು. ಸರ್ಕಾರದ ಕಡೆಯಿಂದ ಎಂದು ತಿಳಿಸಿದ್ದರು. ಮಾಧ್ಯಮದವರು ಏನೆಲ್ಲ ಪ್ರಶ್ನೆ ಕೇಳುತ್ತಾರೋ ಅದೇ ರೀತಿಯ ಪ್ರಶ್ನೆಗಳನ್ನು … Read more

ಕೊಟ್ಟಿಗೆಯಲ್ಲಿದ್ದ ಕರು ಮೇಲೆ ದಾಳಿ ನಡೆಸಿ ಕೊಂದಹಾಕಿದ ಚಿರತೆ

leopard-attacks-calf-at-kudligere

ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದ ಮಹೇಶ್ ನಾಯ್ಕ ಅವರ ಕೊಟ್ಟಿಗೆಯಲ್ಲಿದ್ದ ಕರುವನ್ನು (Calf) ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗ್ರಾಮದ ಟಿವಿಎಸ್ ಫಾರಂ ತೋಟದ ಎಪಿಎಂಸಿ ಮಾಜಿ ಸದಸ್ಯೆ ಸುಜಾತಮ್ಮ ಮನೆ ಆವರಣದಲ್ಲಿ ಮಂಗಳವಾರ ಚಿರತೆಯು ಸಾಕು ನಾಯಿಗಳನ್ನು ಮತ್ತು ಬೆಕ್ಕನ್ನು ಅಪಹರಿಸಿತ್ತು. ಈಗ ಹಸುವನ್ನು ಕೊಂದಿದೆ. ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. … Read more

ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

Leopard-found-at-kudligere

ಭದ್ರಾವತಿ: ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ, ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತಾ ಅವರ ತೋಟದ ಮನೆಯಲ್ಲಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಇದನ್ನೂ ಓದಿ » ಕಾಶ್ಮೀರ ದಾಳಿ, ಸಾಂತ್ವನ ಹೇಳಲು ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದ 103 ವರ್ಷದ ವೃದ್ಧೆ ರಾತ್ರಿ 9.30ರ ಸಮಯದಲ್ಲಿ ಸಾಕುನಾಯಿಗಳು ಬೊಗಳಿವೆ. ಆಗ ಕಿಟಕಿಯಿಂದ ನೋಡಿದಾಗ, ಮನೆಯ ಜಗಲಿಯ ಮೇಲಿಂದ ಚಿರತೆ ಹಾದು ಹೋಗಿದೆ. ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು ನಾಯಿಗಳ … Read more

ಶಿವಮೊಗ್ಗದಲ್ಲಿ ಸಿಡಿದೆದ್ದ ಜನ, ಪೆಹಾಲ್ಗಾಮ್‌ ಹಂತಕರ ವಿರುದ್ಧ ಆಕ್ರೋಶ, ಕ್ಯಾಂಡಲ್‌ ಬೆಳಗಿ ಶ್ರದ್ಧಾಂಜಲಿ

Candle-March-at-shimoga-aginst-pahalgam-attack

ಶಿವಮೊಗ್ಗ : ಕಾಶ್ಮೀರದ ಪೆಹಾಲ್ಗಾಮ್‌ನಲ್ಲಿ ಅಟ್ಟಹಾಸ ಮೆರೆದ ಉಗ್ರರ (terrorist) ವಿರುದ್ಧ ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಉಗ್ರರು, ಉಗ್ರಗಾಮಿಗಳಿಗೆ ಪ್ರಚೋದನೆ ನೀಡುವವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗ್ಗೆಯಿಂದ ವಿವಿಧ ಸಂಘಟನೆಗಳು ಸಾಲು ಸಾಲು ಪ್ರತಿಭಟನೆ ನಡೆಸಿವೆ. ಪೆಹಾಲ್ಗಾಮ್‌ನಲ್ಲಿ ಉಗ್ರರ (terrorist) ಗುಂಡಿಗೆ ಹತರಾದವರಿಗೆ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸಿದರು. ಎಲ್ಲೆಲ್ಲಿ ಯಾರೆಲ್ಲ ಪ್ರತಿಭಟನೆ ನಡೆಸಿದರು? ಇದನ್ನೂ ಓದಿ » ನಾಳೆ ಅರ್ಧ ದಿನ ಶಿವಮೊಗ್ಗ ಸಿಟಿ ಬಂದ್, … Read more