BREAKING NEWS | ಭದ್ರಾ ಜಲಾಶಯದ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಬಿಡಲಾಗುತ್ತಿದೆ?

Bhadra-Dam-gate-opened-2022

SHIVAMOGGA LIVE NEWS | BHADRAVATHI | 14 ಜುಲೈ 2022 ಭದ್ರಾ ಜಲಾಶಯ (BHADRA DAM) ಭರ್ತಿಯಾಗಿದ್ದು ನಾಲ್ಕು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಭದ್ರಾ ಜಲಾಶಯಕ್ಕೆ 43,051 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಇವತ್ತು 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ನೀರಿನ ಹೊರ … Read more

BREAKING NEWS | ಭದ್ರಾ ಜಲಾಶಯ ಭರ್ತಿ, ಇವತ್ತು ಗೇಟ್ ಓಪನ್

Bhadra-Dam-No-Water

SHIVAMOGGA LIVE NEWS | BHADRAVATHI | 14 ಜುಲೈ 2022 ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು ಇವತ್ತು ಗೇಟ್’ಗಳ ಮೂಲಕ ನೀರನ್ನು ಹೊರ ಬಿಡಲು ತೀರ್ಮಾನಿಸಲಾಗಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಜಲಾಶಯದಿಂದ ನೀರನ್ನು ಹೊಳೆಗೆ ಬಿಡಲು ತೀರ್ಮಾನಿಸಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಇವತ್ತು 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 43,051 ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೆ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಇವತ್ತು … Read more

ಭದ್ರಾ ಜಲಾಶಯದಿಂದ ಯಾವುದೆ ಸಂದರ್ಭದಲ್ಲಾದರೂ ನೀರು ಹೊರಕ್ಕೆ

Bhadra-Dam-No-Water

SHIVAMOGGA LIVE NEWS | BHADRAVATHI | 12 ಜುಲೈ 2022 ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಂಭವ ಇದೆ. ಆದ್ದರಿಂದ ಜನ, ಜಾನುವಾರು ನದಿ ಪಾತ್ರದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಜು.12 ರಂದು ಜಲಾಶಯದ ನೀರಿನ ಮಟ್ಟ 178.10 ಅಡಿಗಿಂತ ಹೆಚ್ಚಾಗಿದೆ. ಪ್ರಸ್ತುತ ಒಳಹರಿವಿನ ಪ್ರಮಾಣ 30,200 ಕ್ಯೂಸೆಕ್ ಆಗಿದೆ. ಇನ್ನು ಹೆಚ್ಚಿನ ಮಳೆಯಾಗುವ ಸಾದ್ಯತೆ ಇದೆ. ಮಳೆ ಪ್ರಮಾಣದ ಇದೇ ರೀತಿ … Read more

ಭದ್ರಾ ಜಲಾಶಯದಿಂದ ನೀರು ಹರಿಸಲು ಸೂಚನೆ, ಯಾವ್ಯಾವ ನಾಲೆಗೆ ಎಷ್ಟು ನೀರು ಹರಿಸಲಾಗುತ್ತದೆ?

Bhadra-Dam-General-Images

SHIVAMOGGA LIVE NEWS | SHIMOGA | 12 ಜುಲೈ 2022 ಭದ್ರಾ ಜಲಾಶಯದ (BHADRA DAM) ನಾಲೆಗಳಿಗೆ ಕೂಡಲೆ ನೀರು ಹರಿಸುವಂತೆ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಸೂಚಿಸಿದ್ದಾರೆ. ಜಲಾಶಯದ ಎಡ ದಂಡೆ ನಾಲೆಗೆ 150 ಕ್ಯೂಸೆಕ್, ಬಲದಂಡೆ ನಾಲೆಗೆ 1000 ಕ್ಯೂಸೆಕ್ ನೀರನ್ನು ಕೂಡಲೆ ಹರಿಸಬೇಕು ಎಂದು ಪವಿತ್ರಾ ರಾಮಯ್ಯ ಅವರು ಸೂಚಿಸಿದ್ದಾರೆ. 81ನೇ ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ, ಜೂನ್ 15ರ ಒಳಗೆ ನೀರಿನ ಮಟ್ಟ … Read more

ಗೋಡೆ ಕೊರೆದು ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಕಳವು, ಇಬ್ಬರು ಪೊಲೀಸ್ ಬಲೆಗೆ

Bhadravathi-jewellery-shop-theft

SHIVAMOGGA LIVE NEWS | BHADRAVATHI | 12 ಜುಲೈ 2022 ಗೋಡೆ ಕೊರೆದು ಚಿನ್ನಾಭರಣ ಅಂಗಡಿಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣ ಕಳವು (GOLD THEFT) ಮಾಡಿದ್ದ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಭದ್ರಾವತಿಯ ಚನ್ನಗಿರಿ (CHANNAGIRI ROAD) ರಸ್ತೆಯಲ್ಲಿರುವ ಎಸ್.ಎಸ್.ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು, ಶನಿವಾರ ರಾತ್ರಿ ಚಿನ್ನಾಭರಣ (GOLD ORNAMENTS) ಕಳವು ಮಾಡಲಾಗಿತ್ತು. 1.25 ಕೆ.ಜಿ ಚಿನ್ನದ ಆಭರಣ, 50 ಕೆಜಿ ಬೆಳ್ಳಿ ವಸ್ತುಗಳು ಕಳ್ಳತನವಾಗಿದ್ದವು. ಇಬ್ಬರು … Read more

ಅಂಗಡಿಯ ಗೋಡೆ ಕೊರೆದು ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಆಭರಣಗಳು ಕಳವು, ಸಿಸಿಟಿವಿ ಹೊತ್ತೊಯ್ದ ಖದೀಮರು

Bhadravathi-Gold-Shop-theft-Channagiri-Road

SHIVAMOGGA LIVE NEWS | BHADRAVATHI | 11 ಜುಲೈ 2022 ಚಿನ್ನಾಭರಣದ ಅಂಗಡಿಯೊಂದಕ್ಕೆ (JEWELLERY SHOP) ಕನ್ನ ಕೊರೆದು ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಕಳವು (THEFT) ಮಾಡಲಾಗಿದೆ. ಗ್ಯಾಸ್ ಕಟರ್, ದೊಡ್ಡ ರಾಡ್ ಬಳಸಿ ಕನ್ನ ಹಾಕಲಾಗಿದೆ. ಭದ್ರಾವತಿಯ (BHADRAVATHI) ಚನ್ನಗಿರಿ ರಸ್ತೆಯಲ್ಲಿ ಇರುವ ಎಸ್.ಎಸ್.ಜ್ಯುವೆಲರ್ಸ್ ಚಿನ್ನಾಭರಣ ಮಳಿಗೆಯ ಕನ್ನ ಕರೆದು ಕಳವು ಮಾಡಲಾಗಿದೆ. ಕನ್ನ ಕೊರೆದ ಖದೀಮರು ಚಿನ್ನಾಭರಣ ಮಳಿಗೆಯ ಹಿಂಭಾಗದಲ್ಲಿ ಗೋಡೆ ಕೊರೆದು ಕಳ್ಳರು ಒಳ ನುಗ್ಗಿದ್ದಾರೆ. ಅಂದಾಜು 1.25 ಕೆ.ಜಿ. … Read more

ಜಿಲ್ಲಾಧಿಕಾರಿ ವಾಸ್ತವ್ಯಕ್ಕೆ ಗ್ರಾಮ ನಿಗದಿ, ಜುಲೈ 16ರಂದು ಹಳ್ಳಿ ಕಡೆ ನಡೆ

Shimoga Dc Dr.selvamani

SHIVAMOGGA LIVE NEWS | SHIMOGA | 5 ಜುಲೈ 2022 ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಈ ತಿಂಗಳು ಗ್ರಾಮ (VILLAGE) ವಾಸ್ತವ್ಯ ಮಾಡಲು ಗ್ರಾಮ ನಿಗದಿಯಾಗಿದೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ, ವಾಸ್ತವ್ಯ ಮಾಡಲಿದ್ದಾರೆ. ಜುಲೈ 16ರಂದು ಹುಣಸೆಕಟ್ಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿ ಅವರು ವಾಸ್ತವ್ಯ ಮಾಡಲಿದ್ದಾರೆ. ಆ ದಿನ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಂದಾಯ ಮತ್ತು ಇತರೆ ಇಲಾಖೆ ಅಧಿಕಾರಿಗಳು ಗ್ರಾಮಸ್ಥರನ್ನು … Read more

ಹಳಿ ದಾಟುತ್ತಿದ್ದ ಕುರಿಗಳಿಗೆ ರೈಲು ಡಿಕ್ಕಿ, ಭದ್ರಾವತಿಯಲ್ಲಿ ಸಾಲು ಸಾಲು ಕುರಿಗಳು ಸಾವು

Train-Accident-at-Bhadravathi-Sheeps-dies-on-the-spot

SHIVAMOGGA LIVE NEWS | BHADRAVATHI | 4 ಜುಲೈ 2022 ರೈಲು ಡಿಕ್ಕಿಯಾಗಿ 40ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮೈಸೂರು – ಶಿವಮೊಗ್ಗ ಪ್ಯಾಸೆಂಜರ್ ರೈಲಿಗೆ (TRAIN) ಸಿಲುಕಿ ಕುರಿಗಳು ಮೃತಪಟ್ಟಿವೆ. ಸಂಜೆ ಭದ್ರಾವತಿ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ರೈಲು (TRAIN) ಕುರಿಗಳಿಗೆ ಡಿಕ್ಕಿ ಹೊಡೆದಿದೆ. ಭದ್ರಾವತಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಹಳಿ ದಾಟುತ್ತಿದ್ದ ವೇಳೆ ಕುರಿಗಳು ರೈಲಿಗೆ ಸಿಲುಕಿವೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕುರಿಗಳು ಸ್ಥಳದಲ್ಲಿ ಮೃತಪಟ್ಟಿವೆ. ಗಂಭೀರವಾಗಿ … Read more

ಭದ್ರಾವತಿಯಲ್ಲಿ ಪ್ರತಿಭಟನೆ ವೇಳೆ ಗಲಾಟೆ, ಅಂಗಡಿ ಗಾಜು ಪೀಸ್ ಪೀಸ್

Bhadravathi-Bajarangadala-Protest

SHIVAMOGGA LIVE NEWS | BHADRAVATHI | 3 ಜುಲೈ 2022 ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಭದ್ರಾವತಿಯಲ್ಲಿ ಇವತ್ತು ಪ್ರತಿಭಟನೆ (PROTEST) ನಡೆಸಲಾಯಿತು. ಈ ವೇಳೆ ಅನ್ಯ ಕೋಮಿನ ಯುವಕರಿಬ್ಬರು ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ವಿರುದ್ಧ ಕೇವಲವಾಗಿ ಮಾತನಾಡಿದರು ಎಂದು ಆರೋಪಿಸಿ, ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಟೈಲರ್ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಬಜರಂಗದಳ ಸಂಘಟನೆ ವತಿಯಿಂದ ಭದ್ರಾವತಿ ರಂಗಪ್ಪ ಸರ್ಕಲ್’ನಲ್ಲಿ ಪ್ರತಿಭಟನೆ ನಡೆಸಲಾಯಿತು. … Read more

ಹೊಳೆಹೊನ್ನೂರು ಸುತ್ತಮುತ್ತ ಜು.2ರಂದು ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗುತ್ತೆ?

holehonnur name graphics

SHIVAMOGGA LIVE NEWS | POWER CUT | 1 ಜುಲೈ 2022 ಹೊಳೆಹೊನ್ನೂರಿನ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕೆಲಸಗಳ ನಿರ್ವಹಣೆ ನಡೆಸಲಾಗುತ್ತಿದೆ. ಆದ್ದರಿಂದ ಹೊಳೆಹೊನ್ನೂರು ಸುತ್ತಮುತ್ತ ಜುಲೈ 2ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ? ಹೊಳೆಹೊನ್ನೂರು, ನಾಗತಿಬೆಳಗಲು, ಎಮ್ಮೆಹಟ್ಟಿ, ದಾಸರಕಲ್ಲಹಳ್ಳಿ, ಕನಸಿನಕಟ್ಟೆ, ಯಡೇಹಳ್ಳಿ, ಆಗರದಹಳ್ಳಿ, ಅರಹತೊಳಲು, ಡಾಣಾಯಕಪುರ, ಮೂಡಲ ವಿಠಲಾಪುರ, ಸಿದ್ಲಿಪುರ, ಕೈಮರ, ಕೆರೆಬೀರನಹಳ್ಳಿ, ಮಂಗೋಟೆ, … Read more