ಭದ್ರಾ ಜಲಾಶಯಕ್ಕೆ ಒಂದೇ ದಿನ ಐದು ಅಡಿ ನೀರು, ಒಳಹರಿವು ಎಷ್ಟಿದೆ? ಈಗ ಎಷ್ಟು ಅಡಿ ನೀರಿದೆ?

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಆಗಸ್ಟ್ 2020 ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ದಾಖಲಾಗಿದೆ. ಭದ್ರಾ ಜಲಾಶಯಕ್ಕೆ ಇವತ್ತು 57,477 ಕ್ಯೂಸೆಕ್ ನೀರು ಒಳಹರಿವು ಇದೆ. ಇದರಿಂದ ಜಲಾಶಯದ ನೀರಿನ ಮಟ್ಟ 164.5 ಅಡಿಗೆ ಏರಿಕೆಯಾಗಿದೆ. ಗುರುವಾರ 159.5 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಒಂದೆ ದಿನದಲ್ಲಿ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಐದು ಅಡಿಯಷ್ಟು ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಸಂಜೆ ವೇಳೆಗೆ … Read more

ಭದ್ರಾವತಿ ಕೂಡ್ಲಿಗೆರೆ ಬಳಿ ಎರಡು ಆಲೆಮನೆಗಳ ಮೇಲೆ ತಹಶೀಲ್ದಾರ್ ನೇತೃತ್ವದ ತಂಡದಿಂದ ದಿಢೀರ್ ದಾಳಿ

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಜುಲೈ 2020 ಎರಡು ಆಲೆಮನೆಗಳ ಮೇಲೆ ದಿಢೀರ್ ದಾಳಿ ನಡೆಸಿದ ತಹಶೀಲ್ದಾರ್ ನೇತೃತ್ವದ ತಂಡ, ಪ್ರಕರಣ ದಾಖಲಿಸಿದೆ. ಸಕ್ಕರೆ ಬಳಸಿ ಬೆಲ್ಲ ತಯಾರಿಸುತ್ತಿದ್ದರಿಂದ ಈ ಕ್ರಮ ಕೈಗೊಳ‍್ಳಲಾಗಿದೆ. ಕೂಡ್ಲಿಗೆರೆ ಹೋಬಳಿಯ ಅರಳಿಹಳ್ಳಿ ಮತ್ತು ಕಾಗೆಹಳ್ಳ ಗ್ರಾಮದ ಎರಡು ಆಲೆಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಕಬ್ಬು ಬಳಸಿ ಬೆಲ್ಲ ತಯಾರಿಸಬೇಕು. ಆದರೆ ಈ ಆಲೆ ಮನೆಗಳಲ್ಲಿ ಸಕ್ಕರೆ ಬಳಸಿ ಬೆಲ್ಲ ಸಿದ್ಧಪಡಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ … Read more

ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಭದ್ರಾವತಿ ತಾಲೂಕಿನ ಏಳು ಮಂದಿಯಲ್ಲಿ ಕರೋನ ಸೋಂಕು

Corona PPE Kit and swab box

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಜುಲೈ 2020 ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ಏಳು ಮಂದಿಯಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಕೂಡ್ಲಿಗೆರೆಯ ಅರಣ್ಯ ಸಿಬ್ಬಂದಿ (35), ಹುತ್ತ ಕಾಲೋನಿಯ ಅರಣ್ಯ ಸಿಬ್ಬಂದಿ (35) ಇವರಲ್ಲಿ ಸೋಂಕು ಪತ್ತೆಯಾಗಿದೆ. ಮತ್ತೊಂದೆಡೆ ಗಾಂಧಿ ನಗರದ ನಿವಾಸಿ (43), ಹಳೇ ಬುಳ್ಳಾಪುರದ ಪುರುಷ (34), ವಿಜಯನಗರದ ಪುರುಷ (30), ಕಲ್ಲಹಳ್ಳಿಯ ಪುರುಷ (30), ಮಾಚೇನಹಳ್ಳಿಯ ಪುರುಷ (35) ಇವರಲ್ಲಿ ಸೋಂಕು … Read more

ಭದ್ರಾವತಿ ಪೊಲೀಸರಿಂದ ದಾಳಿ, ಮನೆ ಹಿತ್ತಲಲ್ಲಿ ಬೆಳೆಸಿದ್ದ 10 ಕೆ.ಜಿ ಗಾಂಜಾ ಗಿಡ ವಶಕ್ಕೆ, ಒಬ್ಬ ಅರೆಸ್ಟ್

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 25 ಜುಲೈ 2020 ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಯುವರಾಜ(೩3) ಬಂಧಿತ ವ್ಯಕ್ತಿ. ಮನೆ ಹಿತ್ತಲಿನಲ್ಲಿ ಚೆಂಡು ಹೂ ಬೆಳೆದಿದ್ದರು. ಇದರ ನಡುವೆ ಗಾಂಜಾ ಬೆಳೆಸಿದ್ದರು. 10 ಕೆ.ಜಿ 300 ಗ್ರಾಂನಷ್ಟು ಗಾಂಜಾ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಡಿವೈಎಸ್‍ಪಿ ಸುಧಾಕರ್ ನಾಯಕ್, ಭದ್ರಾವತಿ ಗ್ರಾಮಾಂತರ ಠಾಣೆ … Read more

ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ಎಡ, ಬಲ ನಾಲೆಗಳಿಗೆ ನೀರು

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2020 ಇವತ್ತು ಮಧ್ಯರಾತ್ರಿಯಿಂದ ಭದ್ರಾ ಜಲಾಶಯದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲವಾಗಲಿ ಎಂದು ಜುಲೈ 22ರ ಮಧ್ಯರಾತ್ರಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ಕಾಲುವೆ ಪಾತ್ರದಲ್ಲಿ ಸಾರ್ವಜನಿರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ಇತರೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ … Read more

ಭದ್ರಾವತಿಯಲ್ಲಿ ಮತ್ತೆ ನಾಲ್ಕು ಮಂದಿಗೆ ಕರೋನ, ಇಬ್ಬರಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲ, ಯಾರಿಗೆಲ್ಲ ಸೋಂಕು ತಗುಲಿದೆ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 18 ಜುಲೈ 2020 ಭದ್ರಾವತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಕ್ರವಾರ ಬಿಡುಗಡೆಯಾಗಿರುವ ವರದಿಯಲ್ಲಿ ನಾಲ್ವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಪೈಕಿ ಇಬ್ಬರಿಗೆ ಟ್ರಾವಲ್ ಹಿಸ್ಟರಿ ಇಲ್ಲ. ಯಾರಿಗೆಲ್ಲ ಸೋಂಕು ತಗುಲಿದೆ? ಕೆಎಸ್‍ಆರ್‍ಟಿಸಿ ಬಸ್ ಡಿಪೋದ ಹಿಂಭಾಗದಲ್ಲಿ 49 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ತಗುಲಿದೆ. ಇವರು ಇತ್ತೀಚೆಗಷ್ಟೇ ಉಡುಪಿ ಜಿಲ್ಲೆಗೆ ಹೋಗಿ ಬಂದಿದ್ದರು ಎಂದು ಹೇಳಲಾಗುತ್ತಿದೆ. ಇನ್ನು, ಸೀಗೆಬಾಗಿಯ ಯುವಕನೊಬ್ಬನಿಗೆ ಕರೋನ ಪಾಸಿಟಿವ್ ಬಂದಿದೆ. ಈತ ಮಾಚೇನಹಳ್ಳಿ … Read more

ಭದ್ರಾವತಿಯಲ್ಲಿ ಸಹೋದರರಿಗೆ ಕರೋನ ಪಾಸಿಟಿವ್, ಶಾಸಕರ ಮನೆ ಮುಂಭಾಗದ ರಸ್ತೆ ಸೀಲ್ ಡೌನ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಜುಲೈ 2020 ಬೆಂಗಳೂರಿಗೆ ಹೋಗಿ ಹಿಂತಿರುಗಿದ್ದ ಸಹೋದರರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಅವರ ಮನೆ ಇರುವ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಭದ್ರಾವತಿಯ ಎನ್‍ಎಂಸಿ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಸಹೋದರರು ಬೆಂಗಳೂರಿಗೆ ಹೋಗಿ ಹಿಂತಿರುಗಿದ್ದರು. ಜುಲೈ 9ರಂದು ಬೆಂಗಳೂರಿನಿಂದ ಹಿಂತಿರುಗುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರು. ಜುಲೈ 11ರಂದು ಕರೋನ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಹೋದರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ … Read more

ಕರೋನ ವಾರಿಯರ್ ಕುಟುಂಬಕ್ಕೆ ಸೊಂಕು ಅಂತಾ ಸುಳ್ಳು ಸುದ್ದಿ, ಭದ್ರಾವತಿಯಲ್ಲಿ ಮೂವರ ವಿರುದ್ಧ ಕೇಸ್‌ಗೆ ಸೂಚನೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 11 ಜುಲೈ 2020 ಕರೋನ ವಾರಿಯರ್‌ಗೆ ಸೋಂಕು ತಗುಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಅವರು ಪಿಡಿಒ ಒಬ್ಬರಿಗೆ ಸೂಚನೆ ನೀಡಿದ್ದಾರೆ. ಮೂವರ ವಿರುದ್ಧ ಪ್ರಕರಣ ದಾಖಲಾಗುವ ಸಾದ್ಯತೆ ಇದೆ. ಯಾರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಯ್ತು? ಭದ್ರಾವತಿ ತಾಲೂಕು ಹನುಮಂತಾಪುರದ ನಿವಾಸಿ, ತಾಲೂಕು ನೇತ್ರಾಧಿಕಾರಿ ಡಾ.ರುದ್ರೇಶ್ ಅವರ ವಿರುದ್ಧ ಸುಳ್ಳು ಸುದ್ದಿ ಹಬ್ಬಸಿಲಾಗಿತ್ತು. ಡಾ.ರುದ್ರೇಶ್ ಮತ್ತು ಅವರ ಕುಟುಂಬಕ್ಕೆ ಕರೋನ … Read more

ಎಂಪಿಎಂನಿಂದ ಭದ್ರಾವತಿ ನಗರಸಭೆಗೆ ನೊಟೀಸ್, ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ

MPM Factory Bhadravathi

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಜುಲೈ 2020 ಎಂಪಿಎಂ ಕ್ವಾರ್ಟರ್ಸ್‍ನಲ್ಲಿ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ, ಕಾರ್ಖಾನೆ ಆಡಳಿತ ಮಂಡಳಿ ವತಿಯಿಂದ ನೊಟೀಸ್ ನೀಡಲಾಗಿದೆ. ಕಾಗದ ನಗರದಲ್ಲಿ ಎಂಪಿಎಂ ವಸತಿ ಪ್ರದೇಶದಲ್ಲಿ ಭದ್ರಾವತಿ ನಗರಸಭೆ ವತಿಯಿಂದ ಕೆಲವು ಮಳಿಗೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಾಡಿಗೆಗೆ ನೀಡಲಾಗಿದೆ. ಈಗ ಈ ಮಳಿಗೆಗಳನ್ನು ತೆರವು ಮಾಡುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ಸಚಿವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಂಗಡಿಗಳನ್ನು ತೆರವು ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ … Read more

ಭದ್ರಾವತಿಯಲ್ಲಿ ಕಂಡಕ್ಟರ್‌ಗೆ ಕರೋನ, ರಸ್ತೆ ಸೀಲ್ ಡೌನ್

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2020 ಭದ್ರಾವತಿಯಲ್ಲಿ KSRTC ಕಂಡಕ್ಟರ್ ಒಬ್ಬರಿಗೆ ಕರೋನ ಸೋಂಕು ತಗುಲಿದೆ. ಅವರ ತಂದೆ, ತಾಯಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಕಂಡಕ್ಟರ್‍ಗೆ ಸೋಂಕು ತಗುಲಿದ್ದು ಹೇಗೆ? ಬೆಂಗಳೂರು ಡಿಪೋದಲ್ಲಿ ಕಂಡಕ್ಟರ್ ಆಗಿದ್ದರು. ನಿತ್ಯ ಬೆಂಗಳೂರು ಮಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಸೋಂಕು ತಗುಲಿದೆ. ಜೂ.25ರಂದು ಭದ್ರಾವತಿಗೆ ಬಂದಿದ್ದರು. ಜೂನ್ 26ರಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಜೂ.27ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನ ಪರೀಕ್ಷೆ ನಡೆಸಲಾಗಿತ್ತು. ಜೂ.30ರಂದು … Read more