ಮನೆಯವರನ್ನು ಭೂಮಿ ಹುಣ್ಣಿಗೆ ಪೂಜೆಗೆ ಕಳುಹಿಸಿ, ಒಂದೆ ಸೀರೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಅತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI | 14 ಅಕ್ಟೋಬರ್ 2019 ಖಿನ್ನತೆಗೆ ಒಳಗಾಗಿ ಭೂಮಿ ಹುಣ್ಣಿಮೆಯಂದು ದಂಪತಿ ನೇಣಿಗೆ ಶರಣಾಗಿದ್ದಾರೆ. ಮನೆಯವರನ್ನು ಪೂಜೆ ಕಳುಹಿಸಿ, ಒಂದೆ ಸೀರಿಗೆ ನೇಣು ಬಿಗಿದುಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್ (32) ಮತ್ತು ಪಾರ್ವತಿ (27) ಮೃತ ದಂಪತಿ. ಭದ್ರಾವತಿ ತಾಲೂಕು ಅಗರದಳ್ಳಿ ಕ್ಯಾಂಪ್’ನಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಭೂಮಿ ಹುಣ್ಣಿಮೆ ಪೂಜೆಗಾಗಿ ಮನೆಯಲ್ಲಿ ಅಡುಗೆ ಸಿದ್ಧಪಡಿಸಿ, ಕುಟುಂಬದವರನ್ನು ಪೂಜೆ ಕಳುಹಿಸಿದ್ದರು. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ್, ಪಾರ್ವತಿ … Read more

ಭದ್ರಾವತಿಯಲ್ಲಿ ವಿಜಯದಶಮಿ ಮೆರವಣಿಗೆ ಜೋರು, ಹೇಗಿತ್ತು ಗೊತ್ತಾ ವೈಭವ?

ಶಿವಮೊಗ್ಗ ಲೈವ್.ಕಾಂ | BHADRAVATHI | 9 ಅಕ್ಟೋಬರ್ 2019 ಭದ್ರಾವತಿಯಲ್ಲಿ ವೈಭವದಿಂದ ವಿಜಯದಶಮಿ ಆಚರಿಸಲಾಯಿತು. ಲೋಯರ್ ಹುತ್ತಾದ ಶ್ರೀ ತಿರುಮಲ ದೇವಸ್ಥಾನದಲ್ಲಿ ಶಾಸಕ ಸಂಗಮೇಶ್ವರ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ದೇವಾನುದೇವತೆಗಳು ಪಾಲ್ಗೊಂಡಿದ್ದವು. ಅಲ್ಲವೆ ವಿವಿಧ ಕಲಾ ತಂಡಗಳು ಮೆರವಣಿಗೆ ಮೆರಗು ಹೆಚ್ಚಿಸಿದವು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ ಸಾಗಿದ ಮೆರವಣಿಗೆ, ಕನಕ ಮಂಟಪ ಮೈದಾನದಕ್ಕೆ ತಲುಪಿತು. ಕನಕ ಮಂಟಪ ಮೈದಾನದಲ್ಲಿ ಬನ್ನಿ ಮಂಟಪ ಸ್ಥಾಪಿಸಲಾಗಿತ್ತು. … Read more

ಭದ್ರಾವತಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್ ಓಪನ್, ಎಲ್ಲೆಲ್ಲಿ ಸ್ಥಾಪನೆಯಾಗಿವೆ ಗೊತ್ತಾ ಕ್ಯಾಂಟೀನ್’ಗಳು?

ಶಿವಮೊಗ್ಗ ಲೈವ್.ಕಾಂ | BHADRAVATHI | 2 ಅಕ್ಟೋಬರ್ 2019 ಗಾಂಧಿ ಜಯಂತಿಯಂದು ಭದ್ರಾವತಿಯಲ್ಲಿ ಎರಡು ಇಂದಿರಾ ಕ್ಯಾಂಟೀನ್’ಗಳಿಗೆ ಚಾಲನೆ ಸಿಕ್ಕಿದೆ. ಶಾಸಕ ಬಿ.ಕೆ.ಸಂಗಮೇಶ್ವರ ಅವರು ಇವತ್ತು ಇಂದಿರಾ ಕ್ಯಾಂಟೀನ್’ಗಳನ್ನು ಉದ್ಘಾಟನೆ ಮಾಡಿದರು. ಹೊಸ ಸೇತುವೆ ಸಮೀಪ ಮತ್ತು ಸಂತ ಮೈದಾನದ ಬಳಿಕ ಇಂದಿರಾ ಕ್ಯಾಂಟೀನ್’ಗಳನ್ನು ತೆರೆಯಾಗಲಿದೆ. ಕ್ಯಾಂಟೀನ್ ಉದ್ಘಾಟನೆ ಮಾಡಿದ ಶಾಸಕ ಸಂಗಮೇಶ್ವರ ಅವರು ಜನರಿಗೆ ತಿಂಡಿ ಬಡಿಸಿದರು. ಬಳಿಕ ಮಾತನಾಡಿದ ಶಾಸಕ ಸಂಗಮೇಶ್ವರ, ಕಡಿಮೆ ದರದಲ್ಲಿ ಗುಣಮಟ್ಟದ ಊಟ ಮತ್ತು ತಿಂಡಿಯನ್ನು ನೀಡಲಾಗುತ್ತದೆ. ಎಲ್ಲ … Read more

ಭದ್ರಾವತಿ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಸಿಎಂ, ಒಂಭತ್ತು ದಿನ ವಿಭಿನ್ನ ಕಾರ್ಯಕ್ರಮ, ಏನೆಲ್ಲ ವಿಶೇಷತೆಗಳಿವೆ?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 25 ಸೆಪ್ಟೆಂಬರ್ 2019 ಭದ್ರಾವತಿ ನಗರಸಭೆ ವತಿಯಿಂದ ಈ ಬಾರಿ ವಿಭಿನ್ನವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಒಂಭತ್ತು ದಿನ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕೊನೆಯ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, 21.5 ಲಕ್ಷ ರೂ. ವೆಚ್ಚದಲ್ಲಿ ವಿಭಿನ್ನವಾಗಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಇದೆ ಮೊದಲ ಬಾರಿ ಭದ್ರಾವತಿಯಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು … Read more

ಭದ್ರಾವತಿಯ ಬ್ಯಾಂಕ್’ನಲ್ಲಿ ಬೆಂಕಿ, ಧಗಧಗ ಉರಿದು ಹೋದ ವಸ್ತುಗಳು

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 17 ಸೆಪ್ಟೆಂಬರ್ 2019 ಭದ್ರಾವತಿ ನಗರದ ಬ್ಯಾಂಕ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ದಾಖಲೆಗಳು, ಹಣ ಸುಟ್ಟು ಭಸ್ಮವಾಗಿರುವ ಸಂಭವವಿದೆ. ಬಿ.ಹೆಚ್.ರಸ್ತೆಯಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಪಟ್ಟರು. ಬ್ಯಾಂಕ್ ಶಾಖೆ ಒಳಗಿರುವ ದಾಖಲೆಗಳು, ಹಣ ಸೇರಿದಂತೆ ವಸ್ತುಗಳು ಸುಟ್ಟು ಕರಕಲಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. … Read more

ನಾಳೆ ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ, ಭಾರಿ ಬಂದೋಬಸ್ತ್, ಪೊಲೀಸರಿಂದ ಪಥಸಂಚಲನ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 9 ಸೆಪ್ಟೆಂಬರ್ 2019 ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಭದ್ರಾವತಿಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಭದ್ರಾವತಿ ನಗರದ ಕನಕ ಮಂಟಪದಿಂದ ರಂಗಪ್ಪ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ಶಿವಾಜಿ ಸರ್ಕಲ್, ಸಿ.ಎನ್. ರಸ್ತೆ ಮೂಲಕ ಬಸ್ ನಿಲ್ದಾಣದವರೆಗೆ ಪಥಸಂಚಲನ ನಡೆಯಿತು. ಭದ್ರಾವತಿ ಡಿವೈಎಸ್ಪಿ ನೇತೃತ್ವದಲ್ಲಿ ಕೆ.ಎಸ್.ಆರ್.ಪಿ., ಆರ್.ಎ.ಎಪ್., ಡಿ.ಎ.ಆರ್. ಮತ್ತು ಸಿವಿಲ್ ಪೊಲೀಸ್ ಮತ್ತು ಅಧಿಕಾರಿಗಳಿಂದ ಪಥಸಂಚಲನ ನಡೆಸಲಾಯಿತು. ಗಣಪತಿ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಭದ್ರಾವತಿ … Read more

ಭದ್ರಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರ ಮೇಲೆ ಗಂಭೀರ ಹಲ್ಲೆ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 9 ಸೆಪ್ಟೆಂಬರ್ 2019 ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಭದ್ರಾವತಿಯ ಭದ್ರಾ ಕಾಲೋನಿಯಲ್ಲಿ ಸಂಜೆ ಘಟನೆ ನಡೆದಿದೆ. ಮಣೆ ಮತ್ತು ವಿದ್ಯಾರಾಜ್ ಎಂಬುವವರು ಹಲ್ಲೆಗೊಳಗಾದವರು. ಕುತ್ತಿಗೆ ಭಾಗದಲ್ಲಿ ಮಾರಕಾಸ್ತ್ರಗಳಿಂದ ಗಂಭೀರ ಸ್ವರೂಪದ ಹಲ್ಲೆ ನಡೆಸಲಾಗಿದೆ. ಕೂಡಲೆ ಇಬ್ಬರನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಕೂಡಲೆ ಇಬ್ಬರನ್ನು ಮಣಿಪಾಲದ … Read more

ಭದ್ರಾವತಿ ಹೊಸ ಸಿದ್ದಾಪುರದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿ ಸಾವು, ಮೂವರು ಆಸ್ಪತ್ರೆಗೆ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 8 ಸೆಪ್ಟೆಂಬರ್ 2019 ಮನೆ ಒಳಗಿನ ಗೋಡೆ ಕುಸಿದು ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಭದ್ರಾವತಿಯ ಹೊಸ ಸಿದ್ದಾಪುರ ಗ್ರಾಮದ ನಂಜಾಪುರ ರಸ್ತೆಯಲ್ಲಿರುವ ಮನೆಯೊಂದರ ಒಳಗಿನ ಗೋಡೆ ಕುಸಿದು ಗುರು (40) ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ ಮನೆಯಲ್ಲಿದ್ದ ಎಲ್ಲರು ಮಲಗಿದ್ದ ವೇಳೆ ಗೋಡೆ ಕುಸಿದು, ಗುರು ಅವರ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಗುರು ಸ್ಥಳದಲ್ಲೆ ಅಸುನೀಗಿದ್ದಾರೆ. ಹೆಂಡತಿ, ಮಕ್ಕಳಿಗೆ ಗಾಯ ಗೋಡೆ ಕುಸಿತದಿಂದ ಗುರು ಅವರ ಪತ್ನಿ … Read more

ಭಾರಿ ಮಳೆಗೆ ಕುಸಿದ ಗೋಡೆ, ಮಹಿಳೆ ಸಾವು, ಪತಿಯ ಕಾಲಿಗೆ ಗಾಯ, ಪವಾಡ ಸದೃಷ ಪಾರಾದ ಮಕ್ಕಳು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 7 ಸೆಪ್ಟೆಂಬರ್ 2019 ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮಹಿಳೆಯ ಪತಿಯ ಕಾಲು ಮುರಿದಿದೆ. ಘಟನೆಯಲ್ಲಿ ಮೂರು ಮಕ್ಕಳು ಅದೃಷ್ಟವಶಾತ್ ಪಾರಾಗಿದ್ದಾರೆ. ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ ಇವತ್ತು ಬೆಳಗಿನ ಜಾವದ ವೇಳೆಗೆ ಗೋಡೆ ಕುಸಿದಿದೆ. ಘಟನೆಯಲ್ಲಿ ಉಮೇರಾ ಅಂಜುಮ್ ಮೃತಪಟ್ಟಿದ್ದಾರೆ. ಗೋಡೆ ಕುಸಿದು ಅವರ ತಲೆ ಮೇಲೆ ಬಿದ್ದಿದ್ದರಿಂದ, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ … Read more

ಭದ್ರಾವತಿ ಬೆಡಗಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್’ಗೆ ಹೀರೋಯಿನ್

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 6 ಸೆಪ್ಟೆಂಬರ್ 2019 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೈವೋಲ್ಟೇಜ್ ಚಿತ್ರ ‘ರಾಬರ್ಟ್’ಗೆ ಭದ್ರಾವತಿ ಬೆಡಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ, ವೆಲ್’ಕಮ್ ಹೇಳಿದೆ. ರಾಬರ್ಟ್ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ದರ್ಶನ್ ಅವರಿಗೆ ನಾಯಕಿಯಾಗಿ ನಟಿಸುವವರು ಯಾರು ಅನ್ನುವ ಕುರಿತು ಕುತೂಹಲವಿತ್ತು. ಈಗ ಇದಕ್ಕೆ ತೆರೆ ಬಿದ್ದಿದೆ. ಆಶಾ ಭಟ್ ಅವರು ಹಿಂದಿ ಚಿತ್ರ ‘ಜಂಗ್ಲಿ’ಯಲ್ಲಿ ಅಭಿನಯಿಸಿದ್ದಾರೆ. ಯಾರು ಈ … Read more