ದೇಗುಲದ ಮುಂದೆ ಅನುಚಿತ ವರ್ತನೆ, ಧಾರ್ಮಿಕ ಭಾವನೆಗೆ ಧಕ್ಕೆ, ಎರಡು ಆಟೋ, ನಾಲ್ವರು ಯುವಕರ ವಿರುದ್ಧ ಕೇಸ್

211021 Auto Drivers at Sagara Aghoreshwara Temple

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಅಕ್ಟೋಬರ್ 2021 ಈದ್ ಮಿಲಾದ್ ಸಂದರ್ಭ ಮುಸ್ಲಿಂ ಯುವಕರ ಅನುಚಿತ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಗರ ತಾಲೂಕು ಇಕ್ಕೇರಿ ಅಘೋರೇಶ್ವರ ದೇವಸ್ಥಾನದ ಮುಂದೆ, ಎರಡು ಆಟೋದಲ್ಲಿ ಬಂದ ಯುವಕರ ಗುಂಪು, ಭಕ್ತರಿಗೆ ಅಡ್ಡಿಪಡಿಸಿದ್ದಾರೆ. ಆಟೋಗಳ ಮೇಲೆ ಧ್ವಜಗಳನ್ನು ಕಟ್ಟಿಕೊಂಡು, ಘೋಷಣೆಗಳನ್ನು ಕೂಗುತ್ತ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಆಟೋಗಳನ್ನು ಅಜಾಗರೂಕವಾಗಿ … Read more

ಶಿವಮೊಗ್ಗ – ಆಯನೂರು ರಸ್ತೆಯಲ್ಲಿ ಭೀಕರ ಅಪಘಾತ

201021 Car Truck Accident Near Muddinakoppa

ಕಾರು, ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದ್ದು, ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಕಾರು ಚಾಲಕ ನಾಗೇಂದ್ರ ಮೃತ ದುರ್ದೈವಿ. ಅವರು ಆಯನೂರು ಕಡೆಯಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಶಿವಮೊಗ್ಗದ ಕಡೆಯಿಂದ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಮುದ್ದಿನಕೊಪ್ಪ ಗ್ರಾಮದ ಬಳಿಕ ಘಟನೆ ಸಂಭವಿಸಿದೆ. ಲಾರಿ ಚಾಲಕ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ಈ ವೇಳೆ ಲಾರಿ ಏಕಾಏಕಿ ಬಲಭಾಗಕ್ಕೆ ತಿರುಗಿಸಿದ್ದರಿಂದ ಕಾರಿಗೆ ಗುದ್ದಿದೆ. … Read more

ವಿಷ ಕುಡಿದು ಯುವಕ ಸಾವು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್, 5 ತಿಂಗಳ ಬಳಿಕ ಬಯಲಾಯ್ತು ರಹಸ್ಯ, ಮನೆಯಲ್ಲೇ ಇದ್ದ ಹಂತಕ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಅಕ್ಟೋಬರ್ 2021 ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದಕ್ಕೆ ಐದು ತಿಂಗಳ ಬಳಿಕ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಮೃತ ಯುವಕನ ಅಣ್ಣನನ್ನೇ ಪೊಲೀಸರು ಬಂಧಿಸಿದ್ದಾರೆ. ಸಾಗರ ತಾಲೂಕು ಅಂದಾಸುರ ಗ್ರಾಮದ ಹರೀಶ್ (29) ವಿಷ ಸೇವಿಸಿ ಮೃತಪಟ್ಟಿದ್ದ ಎಂದು ಹೇಳಲಾಗಿತ್ತು. ಆದರೆ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅಣ್ಣನಿಂದಲೇ ತಮ್ಮ ಹತ್ಯೆಯಾಗಿರುವುದು ತಿಳಿದು ಬಂದಿದೆ. ಏನಿದು ಪ್ರಕರಣ? ಹೇಗಾಯ್ತು … Read more

ಜೋಗದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

JOG SAGARA NEWS 1

ಶಿವಮೊಗ್ಗ ಲೈವ್.ಕಾಂ | JOG NEWS | 18 ಅಕ್ಟೋಬರ್ 2021 ಜೋಗ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಜೋಗದ ನಿವಾಸಿ ಗಂಗಾಧರ್ (38) ನೇಣು ಬಿಗಿದುಕೊಂಡವನು. ರಾತ್ರಿ ಮನೆಯಿಂದ ಹೊರೆಗೆ ಬಂದಿದ್ದ ಗಂಗಾಧರ್, ಸಮೀಪದ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೋಗ ಠಾಣೆ ಪಿಎಸ್ಐ ನಿರ್ಮಲಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮತಾಂತರ ಆರೋಪ, ಮನೆ ಮುಂದೆ ಜಮಾಯಿಸಿದ ಜನ, ಸಾಗರದ ಬಡಾವಣೆಯೊಂದರಲ್ಲಿ ಕೆಲಕಾಲ ಗೊಂದಲ

171021 Hindu Organizations Irk Over Christian Missioneries

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಅಕ್ಟೋಬರ್ 2021 ಮನೆಯ ಸದಸ್ಯರು ಮತಾಂತರವಾಗುತ್ತಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿದ್ದರು. ಇದರಿಂದ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಗರ ಪಟ್ಟಣದ ಗೋಪಾಲಗೌಡ ನಗರದ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು, ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದರು. ಮನೆಯವರು ಶಿಲುಬೆ ಧರಿಸಿ, ಮರಿಯಾ ಮಾತೆಯ ಪೂಜೆ ಮಾಡುತ್ತಿದ್ದಾರೆ. ಮೆಷಿನರಿಗಳು ಹಣದಾಸೆಗೆ ಹಿಂದೂಗಳ … Read more

ನಟ ಯಶ್ ನೇತೃತ್ವದ ಸಂಸ್ಥೆಯಿಂದ ಶಿವಮೊಗ್ಗ ಜಿಲ್ಲೆಯ ಪುರಾತನ ಕಲ್ಯಾಣಿಯ ಪುನರುಜ್ಜೀವನ, ಇವತ್ತಿಂದ ಕೆಲಸ ಶುರು

171021 Yashomarga Kalyani cleaning at Anandapuram

ಶಿವಮೊಗ್ಗ ಲೈವ್.ಕಾಂ | SAGARA NEWS | 17 ಅಕ್ಟೋಬರ್ 2021 ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ಪುರಾತನ ಕೊಳವೊಂದರ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಾಗರ ತಾಲೂಕು ಆನಂದಪುರದಲ್ಲಿರುವ ಕಲ್ಯಾಣಿ ಚಂಪಕ ಸರಸ್ಸುವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಹೈದರಾಬಾದ್ ಮೂಲದ ಫ್ರೀಡಂ ಆಯಿಲ್ ಅಸೋಸಿಯೇಷನ್ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿದೆ. ಜಲ ತಜ್ಞ ಶಿವಾನಂದ ಕಳವೆ ಅವರು ಕಲ್ಯಾಣಿ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ, ಅಖಿಲ ಭಾರತ ಯಶ್ … Read more

ಭದ್ರಾವತಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ರಾಮ ಮಂದಿರಕ್ಕೆ ಸಂಗ್ರಹವಾದ ಹಣದ ಲೆಕ್ಕ ಕೊಡುವಂತೆ ಸವಾಲು

210921 HD Kumaraswamy about Bhadravathi Candidate

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 17 ಅಕ್ಟೋಬರ್ 2021 (FILE PHOTO) ರಾಮ ಮಂದಿರ ನಿರ್ಮಾಣ ಸಂಬಂಧದ ಲೆಕ್ಕವನ್ನು ಜನತೆ ಮುಂದಿಡಬೇಕು. ನಿಷ್ಠೆ, ಪಾರದರ್ಶಕತೆ ಬಗ್ಗೆ ಮಾತನಾಡುವವರು ಲೆಕ್ಕ ಕೊಡಲು ಹಿಂದೇಟು ಹಾಕುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಭದ್ರಾವತಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು, ಮೊದಲ ಹಂತದಲ್ಲಿ 1989 ರಿಂದ 91ರವರೆಗೆ ಅಡ್ವಾಣಿ ಅವರು ರಥಯಾತ್ರೆ ನಡೆಸಿದ್ದರು. ಆ ಸಂದರ್ಭ ಸಂಗ್ರಹವಾದ ಹಣದ ಬಗ್ಗೆ ಲೆಕ್ಕ ಯಾರಿಟ್ಟಿದ್ದಾರೆ. ಅದನ್ನು … Read more

ರಸ್ತೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ವ್ಯಕ್ತಿ ಸಾವು, ಭಯಾನಕ ಘಟನೆಗೆ ಕಾರಣವೇನು?

131021 Man Commits Suicide in Aklapura

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 ಅಕ್ಟೋಬರ್ 2021 ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿ ಸೀಮೆ ಎಣ್ಣೆ ಸುರಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಸ್ತಿ ವ್ಯಾಜ್ಯ ಸಂಬಂಧ ಮನನೊಂದು ಕೃತ್ಯ ಎಸಗಿರುವ ಶಂಕೆ ಇದೆ. ತೀರ್ಥಹಳ್ಳಿ ತಾಲೂಕು ಅಕ್ಲಾಪುರ ಗ್ರಾಮದ ರಾಘವೇಂದ್ರ (40) ಮೃತ ವ್ಯಕ್ತಿ. ಮನೆಯಿಂದಲೇ ಸೀಮೆ ಎಣ್ಣೆ ತಂದಿದ್ದ ರಾಘವೇಂದ್ರ, ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ತೀವ್ರ ಸುಟ್ಟಗಾಯಗಳಿಂದಾಗಿ ರಾಘವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಾರಿಯಲ್ಲಿ ಹೋಗುವವರು ಘಟನೆ ಕಂಡು ಪೊಲೀಸರಿಗೆ … Read more

ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ, ಶಿವಮೊಗ್ಗ ಡಿಸಿ ವಾಸ್ತವ್ಯಕ್ಕೆ ಗ್ರಾಮ ಫೈನಲ್, ದಿನಾಂಕ ಫಿಕ್ಸ್

200520 Shimoga DC KB Shivakumar 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2021 ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಪರಿಕಲ್ಪನೆ ಪುನಾರಂಭವಾಗಿದೆ. ಈ ಭಾರಿ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಗಾಜನರೂ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರತಿ ತಿಂಗಳು ಮೂರನೆ ಶನಿವಾರದಂದು ಜಿಲ್ಲಾಧಿಕಾರಿ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅಕ್ಟೋಬರ್ 16ರಂದು ಶಿವಮೊಗ್ಗ ತಾಲೂಕಿನ ನಿಧಿಗೆ ಹೋಬಳಿಯ ಗಾಜನೂರು ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಆ ದಿನ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಗಾಜನೂರಿಗೆ ಭೇಟಿ … Read more

ನೂತನ ರೈಲ್ವೆ ಮಾರ್ಗದ ಪರಿಶೀಲನೆ, ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ಬಗ್ಗೆ ಮಹತ್ವದ ಚರ್ಚೆ

131021 Meeting Over Shikaripura Railway Route

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2021 ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗವನ್ನು ಹಿರಿಯ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಅಲ್ಲದೆ ಈ ಮಾರ್ಗದ ಕುರಿತು ಸಂಪೂರ್ಣ ಮಾಹಿತಿ ಪಡೆದಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ತಂಡವು ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗವನ್ನು ಪರಿಶೀಲನೆ ನಡೆಸಿತು. ರೈಲ್ವೆ ಮಾರ್ಗದ ಭೂ ಸ್ವಾಧೀನ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಿತು. ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಭೇಟಿಯಾದ … Read more