ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗುತ್ತೆ ಜೋಗ, ಇಲ್ಲಿ ಏನೇನೆಲ್ಲ ನಿರ್ಮಾಣವಾಗುತ್ತೆ? ಯಾವೆಲ್ಲ ಸೌಲಭ್ಯ ಸಿಗಲಿವೆ?

100920 Jog Falls Meeting in Sagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020 ವಿಶ್ವ ವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ರೂ. ಅನುಮೋದನೆ ನೀಡಿದ್ದು, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು. ಜೋಗ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸುವ ಕುರಿತು ಜೋಗದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು. ಜೋಗದಲ್ಲಿ ಪ್ರವಾಸಿಗರು ಇಡೀ … Read more

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಆರು ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಂಸದ ರಾಘವೇಂದ್ರ ಗುದ್ದಲಿ ಪೂಜೆ

100920 Raghavendra Gudddali Pooje for road 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಸೆಪ್ಟಂಬರ್ 2020 ಶಿವಮೊಗ್ಗ ತಾಲೂಕಿನ ಅಗಸವಳ್ಳಿ ಗ್ರಾಪಂ ವ್ಯಾಪ್ತಿಯ ರಾಮೇನಕೊಪ್ಪದಲ್ಲಿ ೬ ಕೋಟಿ ವೆಚ್ಚದ ರಸ್ತೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಇದು ಹಾಯ್ ಹೊಳೆ ರಸ್ತೆಯಿಂದ ಬಸವಾಪುರ, ಈಚವಾಡಿ, ರಾಮೇನಕೊಪ್ಪದಿಂದ ನಗರದ ಎನ್.ಟಿ. ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಬಳಿಕ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಅಭಿವೃದ್ಧಿಯ ಪರ್ವ ಕೈಗೊಂಡಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು … Read more

ಮಾಜಿ ಶಾಸಕ ಅಪ್ಪಾಜಿಗೌಡ ಮನೆಗೆ ಬಜರಂಗದಳ ಕಾರ್ಯಕರ್ತರ ಭೇಟಿ, ಭಾವಚಿತ್ರಕ್ಕೆ ಪುಷ್ಪನಮನ

100920 Bajarangadal Workers Visit Appaji Gowda House 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 ಸೆಪ್ಟಂಬರ್ 2020 ಮಾಜಿ ಶಾಸಕ ಅಪ್ಪಾಜಿಗೌಡ ನಿಧನಕ್ಕೆ ಬಜರಂಗದಳ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ. ಭದ್ರಾವತಿಯಲ್ಲಿ ಅಪ್ಪಾಜಿಗೌಡರ ನಿವಾಸಕ್ಕೆ ಭೇಟಿ ನೀಡಿದ ಬಜರಂಗದಳ ಕಾರ್ಯಕರ್ತರು, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮೌನಾಚರಣೆ ಮಾಡಿದರು. ಈ ವೇಳೆ  ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್, ಅಪ್ಪಾಜಿಗೌಡ ಅವರು ಬಡವರು, ಸಮಾಜದ ಕುರಿತು ಕಾಳಜಿ ಹೊಂದಿದ್ದರು. ಕ್ಷೇತ್ರದ ಭವಿಷ್ಯದ ಕುರಿತು ಭಗೀರಥನಂತೆ ಕನಸು ಕಂಡಿದ್ದರು. ಅವರನ್ನು ಕಳೆದುಕೊಂಡಿದ್ದು ದುಃಖದ … Read more

ಹೊಸಳ್ಳಿ ಏತ ನೀರಾವರಿ ಯೋಜನೆ ಸ್ಥಳಕ್ಕೆ ಅಂಜಾನಪುರದ ರೈತರೊಂದಿಗೆ ಸಂಸದ ರಾಘವೇಂದ್ರ ಭೇಟಿ

100920 BY Raghavendra Visit to Hosalli water Project 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 10 ಸೆಪ್ಟಂಬರ್ 2020 ಹೊಸಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಸ್ಥಳಕ್ಕೆ ಅಂಜನಾಪುರ ಹೋಬಳಿ ರೈತರೊಂದಿಗೆ ತೆರಳಿದ ಸಂಸದ ಬಿ.ವೈ.ರಾಘವೇಂದ್ರ, ಕಾಮಗಾರಿಯ ಪರಿಶೀಲನೆ ನಡೆಸಿದರು. ಅಲ್ಲದೆ ನೀರಾವರಿ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಏತ ನೀರಾವರಿ ಯೋಜನೆ ಮೂಲಕ ಅಂಜನಾಪುರ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. 250 ಕೋಟಿಯ ಈ ಯೋಜನೆಯಿಂದ ಶಿಕಾರಿಪುರದ 18 ಗ್ರಾಮಗಳು, ಶಿವಮೊಗ್ಗದ 32 ಗ್ರಾಮಗಳಿಗೆ ನೀರು ಹರಿಸಲಾಗುತ್ತದೆ. ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಗಳಿಗು … Read more

ಡ್ರಗ್ಸ್ ದಂಧೆಕೋರರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ, ಸಾಗರದಲ್ಲಿ ಪ್ರತಿಭಟನೆ, ಸರ್ಕಾರಕ್ಕೆ ಒತ್ತಾಯ

100920 ABVP Protest Against Drugs in Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 10 ಸೆಪ್ಟಂಬರ್ 2020 ಡ್ರಗ್ಸ್ ಜಾಲದ ಹಿಂದಿರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಸೇವನೆ ಆರೋಪ ಕೇಳಿ ಬಂದಿದೆ. ಇದರ ಹಿಂದೆ ರಾಜಕಾರಣಿಗಳ ಮಕ್ಕಳು ಇರುವ ಕುರಿತು ಹೇಳಲಾಗುತ್ತಿದೆ. ಯಾರ ಪ್ರಭಾವಕ್ಕೂ ಮಣಿಯದೆ ತಪ್ಪಿತಸ್ಥರ … Read more

ಸಾಗರದ ವಿವಿಧೆಡೆ ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, ನೂರು ಲೀಟರ್ ಬೆಲ್ಲದ ಕೊಳೆ, ನಾಲ್ಕು ಲೀಟರ್ ಕಳ್ಳಭಟ್ಟಿ ವಶಕ್ಕೆ

090920 Excise Department Raid At Sagara 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಸೆಪ್ಟಂಬರ್ 2020 ಸಾಗರ ತಾಲೂಕಿನ ವಿವಿಧೆಡೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ನೂರು ಲೀಟರ್ ಬೆಲ್ಲದ ಕೊಳೆ ಮತ್ತು ನಾಲ್ಕು ಲೀಟರ್ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ತಡಗಳಲೆ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಕನ್ನಪ್ಪ (40) ಎಂಬುವವರ ಮನೆ ಮತ್ತು ಆವರಣದಲ್ಲಿ ದಾಸ್ತಾನು ಮಾಡಿದ್ದ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯದ 11,500 ರಂದು ಅಂದಾಜು ಮಾಡಲಾಗಿದೆ. … Read more

ಆಗುಂಬೆ ಘಾಟಿಯಲ್ಲಿ ಎಲ್ಲ ವಾಹನ ಸಂಚಾರಕ್ಕೆ ಅನುಮತಿ, ಮಳೆ ಬಂದರೆ ಪರ್ಯಾಯ ಮಾರ್ಗ, ಯಾವುದದು?

Agumbe Ghat 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020 ಆಗುಂಬೆಯಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಜೋರು ಮಳೆಯಾಗುತ್ತಿದ್ದರಿಂದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಜೋರು ಮಳೆ ಹಿನ್ನೆಲೆ ತೀರ್ಥಹಳ್ಳಿ – ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಈಗ ನಿರ್ಬಂಧ ತೆರವು ಮಾಡಲಾಗಿದೆ. 12 ಟನ್‍ಗಿಂತಲು ಹೆಚ್ಚು ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು. ಜೂ.15 ರಿಂದ … Read more

ಭರ್ತಿಯಾದ ಭದ್ರಾ ಜಲಾಶಯಕ್ಕೆ ಕುಟುಂಬ ಸಹಿತಿ ಬಾಗಿನ ಅರ್ಪಿಸಿದ ಭದ್ರಾವತಿ ಎಂಎಲ್ಎ

090920 MLA Sangameshwara Bagina To Bhadra Dam 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಸೆಪ್ಟಂಬರ್ 2020 ಭರ್ತಿಯಾದ ಭದ್ರಾ ಜಲಾಶಯಕ್ಕೆ ಭದ್ರಾವತಿ ಶಾಸಕ ಸಂಗಮೇಶ್ವರ ಅವರು ಬಾಗಿನ ಅರ್ಪಿಸಿದರು. ಕುಟುಂಬ ಸಹಿತ ಭದ್ರಾ ಡ್ಯಾಂಗೆ ತೆರಳಿದ್ದ ಅವರು ಬಾಗಿನ ಅರ್ಪಿಸಿದರು. ಕರೋನ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರಿಗೆ ಆಹ್ವಾನ ನೀಡಿರಲಿಲ್ಲ. ಕುಟುಂಬದ ಸಹಿತಿ ಬಿಆರ್‍ಪಿಗೆ ಆಗಮಿಸಿದ್ದ ಸಂಗಮೇಶ್ವರ ಅವರು, ಬೋಟ್‍ನಲ್ಲಿ ತೆರಳಿ ಬಾಗಿನ ಅರ್ಪಿಸಿದರು. ಸಹೋದರ ಬಿ.ಕೆ.ಜಗನ್ನಾಥ್, ಬಿ.ಕೆ.ಶಿವಕುಮಾರ್ ಹಾಗೂ ಕುಟುಂಬದವರು ಇದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ … Read more

ಶಿಕಾರಿಪುರ ಪುರಸಭೆಗೆ ಕರೋನ ಶಾಕ್, 14 ದಿನ ಸಂಪೂರ್ಣ ಆಡಳಿತ ಬಂದ್

090920 Shikaripura Purasabhe Closed for 14 days 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 9 ಸೆಪ್ಟಂಬರ್ 2020 ಪುರಸಭೆ ಮುಖ್ಯಾಧಿಕಾರಿ ಸೇರಿ ಹಲವು ಸಿಬ್ಬಂದಿಗಳಿಗೆ ಕರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಹಾಗಾಗಿ ಶಿಕಾರಿಪುರ ಪುರಸಭೆಯನ್ನು 14 ದಿನ ಬಂದ್ ಮಾಡಲಾಗಿದೆ. ಪುರಸಭೆಗೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ಗೇಟ್ ಬಂದ್ ಮಾಡಲಾಗಿದೆ. ಪುರಸಭೆ ಬಂದ್ ಆಗಿರುವ ಕುರಿತು ಗೇಟ್ ಮುಂದೆ ಬೋರ್ಡ್ ತೂಗು ಹಾಕಲಾಗಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಬಂದು ಹಿಂತಿರುಗುತ್ತಿದ್ದಾರೆ. ಪುರಸಭೆಯನ್ನು ಮಂಗಳವಾರದಿಂದ 14 ದಿನ ಬಂದ್ ಮಾಡಲಾಗಿದೆ. ಆಡಳಿತಾತ್ಮಕ ಸೇವೆಗಳು ಯಾವುದು … Read more

ಸಿಗಂದೂರು ಚೌಡೇಶ್ವರಿ ದೇಗುಲ ಮುಜರಾಯಿಗೆ ಬೇಡ, ಅಂತಹ ಪ್ರಯತ್ನವಾದರೆ ಉಗ್ರ ಹೋರಾಟ

090920 Protest in Favour of Siganduru 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಸೆಪ್ಟಂಬರ್ 2020 ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿಗೆ ಸೇರಿಸದಂತೆ ಆಗ್ರಹಿಸಿದ ಸಾಗರದಲ್ಲಿ ನಾಗರಿಕ ವೇದಿಕೆ ವತಿಯಿಂದ ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಿಗಂದೂರು ಕ್ಷೇತ್ರಕ್ಕೆ ಶತಮಾನಗಳ ಐತಿಹ್ಯವಿದೆ. ಧರ್ಮದರ್ಶಿ ರಾಮಪ್ಪ ಅವರು ಸುಮಾರು 30 ವರ್ಷದಿಂದ ದೇಗುಲದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿಗಂದೂರು ಚೌಡೇಶ್ವರಿ ಟ್ರಸ್ಟ್‍ ಮೂಲಕ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ದೇಗುಲಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸುತ್ತಿದ್ದಾರೆ … Read more