ವ್ಯಾಪಾರಿಗೆ ಕರೋನ, ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ, ಎಲ್ಲಿಯವರು? ಸೋಂಕು ತಗುಲಿದ್ದು ಹೇಗೆ?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | RIPPONPETE NEWS | 20 ಜೂನ್ 2020 ಅಂಗಡಿಗಳಿಗೆ ಜೂಸ್‌ ಕಬ್ಬು ಸರಬರಾಜು ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು, ರಿಪ್ಪನ್‌ಪೇಟೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ವ್ಯಾಪಾರಿಯ ಮನೆಯ ಸುತ್ತಲು ಈಗ ಕಂಟೈನ್ಮೆಂಟ್‌ ಜೋನ್‌ ರಚಿಸಲಾಗಿದೆ. ವ್ಯಾಪಾರಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಇನ್ನಷ್ಟು ಸಂಪರ್ಕಿತರ ಪತ್ತೆ ಕಾರ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಯಾರಿದು ವ್ಯಾಪಾರಿ? ರಿಪ್ಪನ್‌ಪೇಟೆ ಸಮೀಪದ ಗ್ರಾಮದವೊಂದರ ಜೂಸ್‌ ಕಬ್ಬು ವ್ಯಾಪಾರಿಯೊಬ್ಬರಲ್ಲಿ (೪೨) ಸೋಂಕು ಪತ್ತೆಯಾಗಿದೆ. ಇವರಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್‌ … Read more

ಗಾಜನೂರಿನ ತುಂಗಾ ಡ್ಯಾಮ್ ನಾಲ್ಕು ಗೇಟ್ ಓಪನ್, ಎಷ್ಟು ನೀರು ಹೊರ ಹರಿಸಲಾಗುತ್ತಿದೆ?

180620 Gajanur Tunga Dam Full Four Gates Opened 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜೂನ್ 2020 ಗಾಜನೂರಿನ ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ಮೇಲೆತ್ತಲಾಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಈ ಮಳೆಗಾಲದಲ್ಲಿ ಗೇಟ್ ತೆಗೆದು ನೀರು ಹೊರ ಹರಿಸುತ್ತಿರುವ ರಾಜ್ಯದ ಮೊದಲ ಡ್ಯಾಂ ಇದು. ಎಷ್ಟು ಗೇಟ್‍ಗಳನ್ನು ಮೇಲೆತ್ತಲಾಗಿದೆ? ಇವತ್ತು ಮಧ್ಯಾಹ್ನ ತುಂಗಾ ಜಲಾಶಯದ ನಾಲ್ಕು ಕ್ರಸ್ಟ್‍ ಗೇಟುಗಳನ್ನು ಮೇಲೆತ್ತಲಾಗಿದೆ. ಒಟ್ಟು 6836 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಪೈಕಿ ಕ್ರಸ್ಟ್ ಗೇಟುಗಳ ಮೂಲಕ 2086 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ವಿದ್ಯುತ್ … Read more

ಮರಕ್ಕೆ ಗುದ್ದಿದ ಕಾರು, ಸಾಫ್ಟ್‌ವೇರ್ ಎಂಜಿನಿಯರ್ ಸಾವು, ಇಬ್ಬರಿಗೆ ಗಾಯ

170620 Car Accident in Soraba 1

ಶಿವಮೊಗ್ಗ ಲೈವ್.ಕಾಂ | SORABA NEWS | 17 ಜೂನ್ 2020 ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಶಿರಸಿಯಿಂದ ತವನಂದಿ ಮಾರ್ಗವಾಗಿ ಬರುತ್ತಿದ್ದಾಗ ಹಳೆ ಸೊರಬ ಬಳಿ ಘಟನೆ ಸಂಭವಿಸಿದೆ. ಸಂತೋಷ್ (25) ಮೃತ ದುರ್ದೈವಿ. ಅಪಘಾತದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರು ಕೊನೆಯುಸಿರೆಳೆದಿದ್ದಾರೆ. ಇವರು ಶಿರಸಿಯವರು ಎಂದು ತಿಳಿದು ಬಂದಿದೆ. ಚಾಲಕ ರಾಘವ ಮತ್ತು ಕಾರಿನಲ್ಲಿದ್ದ ಗಣಪತಿ ಎಂಬುವವರಿಗೆ ಗಾಯವಾಗಿದೆ. ಚಾಲಕನ ನಿಯಂತ್ರಣ ತಪ್ಪಿ … Read more

ಮೂರು ವರ್ಷದ ಮಗು ಸೇರಿ ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್‌ನ ಐದು ಜನರಿಗೆ ಕರೋನ

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020 ಮಹಾರಾಷ್ಟ್ರದಿಂದ ಹಿಂತಿರುಗಿದ್ದ ಐವರಿಗೆ ಕರೋನ ಸೋಂಕು ತಗುಲಿದೆ. ಇವರೆಲ್ಲ ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್‍ನವರು. ಮಹಾರಾಷ್ಟ್ರದಿಂದ ಶನಿವಾರ ಹಿಂತಿರುಗಿದ್ದ ಐವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಕರೋನ ಸೋಂಕು ಇರುವುದು ದೃಢವಾಗಿದೆ. 3 ವರ್ಷದ ಗಂಡು ಮಗುವಿಗೂ ಸೋಂಕು ಮೂರು ವರ್ಷದ ಗಂಡು ಮಗು ಸೇರಿ ಐವರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಪಿ7265 (19 ವರ್ಷದ ಪುರುಷ), ಪಿ7266 (25 ವರ್ಷದ … Read more

ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ಬಂದ್, ಕಾರಣವೇನು? ಪರ್ಯಾಯ ಮಾರ್ಗವೇನು?

Agumbe Ghat 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜೂನ್ 2020 ಆಗುಂಬೆ ಘಾಟಿಯಲ್ಲಿ 12 ಟನ್‍ಗಿಂತಲೂ ಅಧಿಕ ತೂಕದ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಜೋರು ಮಳೆಯಾಗುತ್ತಿರುವ ಕಾರಣ ಭಾರೀ ವಾಹನ ಸಂಚಾರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಎಷ್ಟು ದಿನ ನಿಷೇಧ? ಆಗುಂಬೆ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಒಂದು ವೇಳೆ ಭಾರೀ ವಾಹನಗಳು ಘಾಟಿಯಲ್ಲಿ ಸಂಚರಿಸಿದರೆ, ಧರೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಇತರೆ ವಾಹನಗಳ ಸಂಚಾರವು ಕಷ್ಟವಾಗಲಿದೆ. ಹಾಗಾಗಿ 12 ಟನ್‍ಗಿಂತಲೂ … Read more

ಒಬ್ಬ ಶಾಸಕರಿಗೆ ಚೇರಿಲ್ಲ, ಮತ್ತೊಬ್ಬರು ವೇದಿಕೆಯ ಮೂಲೆಗೆ, ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳಿಗೇಕೆ ಅವಕಾಶ?

150620 MLC Prasanna Kumar Gets out of Stage 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜೂನ್ 2020 ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ, ಶಾಸಕರೊಬ್ಬರಿಗೆ ವೇದಿಕೆ ಮೇಲೆ ಚೇರ್‌ ಸಿಗದೆ ಸಿಟ್ಟಾದ ಘಟನೆ ನಡೆಯಿತು. ವೇದಿಕೆಯಿಂದಲೇ ಕೆಳಗಿಳಿಯಲು ಹೊರಟವರನ್ನು ಸಚಿವ, ಸಂಸದರು ಸಮಾಧಾನಪಡಿಸಿದರು. ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಇವತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ವೇಳೆ ವಿಧಾನ ಪರಿಷತ್‌ ಸದಸ್ಯ ಆರ್.ಪ್ರಸನ್ನ ಕುಮಾರ್‌ ಅವರಿಗೆ ಚೇರ್‌ ವ್ಯವಸ್ಥೆ ಮಾಡಿರಿಲಿಲ್ಲ. ವೇದಿಕೆ ಹತ್ತಿದ್ದ ಅವರು ಚೇರ್‌ ಸಿಗದೆ ಸಿಟ್ಟಾದರು. ತಾವು … Read more

ಆನ್‌ಲೈನ್‌ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

150620 Airport Work Inauguration in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜೂನ್ 2020 ಜಿಲ್ಲೆಯ ಜನತೆಯ ಬಹುದಿನಗಳ ಕನಸಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದಿಂದಾಗಿ ಜಿಲ್ಲೆಯ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ದೊರೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಿಂದ ಆನ್‍ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ 220 ಕೋಟಿ … Read more

ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಂದು ಕರೋನ ಪಾಸಿಟಿವ್, ಹಳ್ಳಿ ಸೀಲ್ ಡೌನ್

Corona PPE Kit and swab box

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 15 ಜೂನ್ 2020 ತೀರ್ಥಹಳ್ಳಿ ತಾಲೂಕಿನಲ್ಲಿ ಮೂರನೇ ಕರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮತ್ತೊಂದು ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿ ನಾಲ್ಕು ದಿನದ ಹಿಂದೆ ಊರಿಗೆ ಮರಳಿದ್ದರು. ಕಫ ಮತ್ತು ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆ, ಚಿಕಿತ್ಸೆಗಾಗಿ ಯುವತಿ ಜೆ.ಸಿ.ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಕರೋನ ಪಾಸಿಟಿವ್, ಶುರುವಾಯ್ತು ಭೀತಿ ಪರೀಕ್ಷೆ ಬಳಿಕ ಯುವತಿಯಲ್ಲಿ … Read more

ವಿಷ ಕುಡಿದು ಮಹಿಳೆ ಸಾವು, ವಿಜ್ಞಾನಿ, ಎಂಜಿನಿಯರ್, ಟೀಚರ್ ವಿರುದ್ಧ ಕೇಸ್, ವಿಷ ಸೇವಿಸಲು ಕಾರಣವೇನು?

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 14 ಜೂನ್ 2020 ಜಮೀನು ವಿಚಾರವಾಗಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ವಿಜ್ಞಾನಿ, ಎಂಜಿನಿಯರ್ ಮತ್ತು ಟೀಚರ್ ವಿರುದ್ಧ ಕೇಸ್ ದಾಖಲಾಗಿದೆ. ಶಿಕಾರಿಪುರ ತಾಲೂಕು ಕಾಗಿನೆಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾಗಿನೆಲ್ಲಿ ಗ್ರಾಮದ ಸುಶೀಲಮ್ಮ(43) ವಿಷ ಸೇವಿಸಿ ಮೃತರಾಗಿದ್ದಾರೆ. ಸುಶೀಲಮ್ಮ ಅವರು ಶನಿವಾರ ವಿಷ ಸೇವಿಸಿದ್ದಾರೆ. ಕೂಡಲೇ ಅವರನ್ನು ಶಿಕಾರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಪಕ್ಕ ಮೂರು ಲಕ್ಷ ಸಸಿ, ನೆಡಲು ಇವತ್ತಿಂದ ಚಾಲನೆ

130620 Eshwarappa Planting in Sappling 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜೂನ್ 2020 ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳ ಸುತ್ತ ಕನಿಷ್ಟ 3ಲಕ್ಷ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ವೀರಣ್ಣನಬೆನವಳ್ಳಿ ಗ್ರಾಮದ ಕೆರೆಯ ದಂಡೆಯಲ್ಲಿ ಸಸಿಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಂತರ್ಜಲ ಚೇತನ ಯೋಜನೆಯಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈಗಾಗಲೆ ಚಾಲನೆ ನೀಡಲಾಗಿದೆ. ಇದೀಗ ಪ್ರತಿ ಗ್ರಾಮ … Read more