ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜೂನ್ 2020
ಗಾಜನೂರಿನ ತುಂಗಾ ಜಲಾಶಯದ ಕ್ರಸ್ಟ್ ಗೇಟುಗಳನ್ನು ಮೇಲೆತ್ತಲಾಗಿದ್ದು, ನದಿಗೆ ನೀರು ಹರಿಸಲಾಗುತ್ತಿದೆ. ಈ ಮಳೆಗಾಲದಲ್ಲಿ ಗೇಟ್ ತೆಗೆದು ನೀರು ಹೊರ ಹರಿಸುತ್ತಿರುವ ರಾಜ್ಯದ ಮೊದಲ ಡ್ಯಾಂ ಇದು.
ಎಷ್ಟು ಗೇಟ್ಗಳನ್ನು ಮೇಲೆತ್ತಲಾಗಿದೆ?
ಇವತ್ತು ಮಧ್ಯಾಹ್ನ ತುಂಗಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟುಗಳನ್ನು ಮೇಲೆತ್ತಲಾಗಿದೆ. ಒಟ್ಟು 6836 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಪೈಕಿ ಕ್ರಸ್ಟ್ ಗೇಟುಗಳ ಮೂಲಕ 2086 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿರುವ 4750 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.

ವಿಶೇಷ ಪೂಜೆ ಬಳಿಕ ಗೇಟ್ ಓಪನ್
ಗೇಟ್ ಓಪನ್ ಮಾಡುವ ಮೊದಲು ಜಲಾಶಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಒಂದೊಂದೆ ಗೇಟುಗಳನ್ನು ತೆಗೆದು ನೀರು ಹರಿಸಲಾಯಿತು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com






