ಆಯನೂರು ಸಮೀಪ ರಾತ್ರಿ ಕುರಿ ಹಿಂಡಿನ ಮೇಲೆ ಹರಿದ ಲಾರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜೂನ್ 2020 ರಸ್ತೆ ಬದಿಯಲ್ಲಿ ಬರುತ್ತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದಿದೆ. ಘಟನೆಯಲ್ಲಿ 18 ಕುರಿಗಳು ಸಾವನ್ನಪ್ಪಿವೆ. ಆಯನೂರು ಸಮೀಪ ರಾತ್ರಿ ಘಟನೆ ಸಂಭವಿಸಿದೆ. ಉತ್ತರ ಕರ್ನಾಟಕದ ಕುಟುಂಬವೊಂದು ಕುರಿಗಳನ್ನು ಮೇಯಿಸಿಕೊಂಡು ಬಂದಿತ್ತು. ರಾತ್ರಿ ತಂಗಲು ವ್ಯವಸ್ಥೆ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕುಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.   ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ … Read more

ಭದ್ರಾವತಿಯ ಕಂಟೈನ್ಮೆಂಟ್ ಜೋನ್‌ಗೆ ಜಿಲ್ಲಾಧಿಕಾರಿ ಭೇಟಿ, ಅಗತ್ಯ ಕ್ರಮಗಳ ಕುರಿತು ಪರಿಶೀಲನೆ

120620 DC Visit Bhadravathi Containment Zone 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 12 ಜೂನ್ 2020 ಭದ್ರಾವತಿ ರಂಗಪ್ಪ ಸರ್ಕಲ್‌ ಸಮೀಪದ ಕಂಟೈನ್ಮೆಂಟ್‌ ಜೋನ್‌ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಭೇಟಿ ನೀಡಿದ್ದರು. ಆರೋಗ್ಯ ಇಲಾಖೆ, ನಗರಸಭೆ ಅಧಿಕಾರಿಗಳ ಜೊತೆಗೆ ಪರಿಸ್ಥಿತಿಯ ಅವಲೋಕನ ನಡೆಸಿದರು. ರಂಗಪ್ಪ ಸರ್ಕಲ್‌ ಸಮೀಪದ ಕಂಟೈನ್ಮೆಂಟ್‌ ಜೋನ್‌ಗೆ ಡಿಸಿ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ಸುರಕ್ಷತಾ ಕ್ರಮಗಳ ಕುರಿತು ತಿಳಿಸಿದರು. ಉಪ ವಿಭಾಗಾಧಿಕಾರಿ ಪ್ರಕಾಶ್‌ ಸೇರಿದಂತೆ ಹಲವರು ಈ ವೇಳೆ ಇದ್ದರು. ಶಿವಮೊಗ್ಗ ಲೈವ್.ಕಾಂನಲ್ಲಿ … Read more

ಭದ್ರಾವತಿಯಲ್ಲಿರುವ ತವರು ಮನೆಗೆ ಬಂದಿದ್ದ ಗರ್ಭಿಣಿಗೆ ಸೋಂಕು, ಪ್ರಾಥಮಿಕ ಸಂಪರ್ಕವೆಷ್ಟು? ಯಾರೆಲ್ಲ ಕ್ವಾರಂಟೈನ್ ಆಗಿದ್ದಾರೆ?

110620 Bhadravathi Rangappa Circle Sealdown 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 12 ಜೂನ್ 2020 ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದ ಗರ್ಭಿಣಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಭದ್ರಾವತಿಯ ಚನ್ನಗಿರಿ ರಸ್ತೆಯನ್ನು ಸೀಲ್‍ ಡೌನ್ ಮಾಡಲಾಗಿದೆ. ಗರ್ಭಿಣಿ ಬಂದಿದ್ದು ಹೇಗೆ? ಬೆಂಗಳೂರಿನಲ್ಲಿರುವ ಗಂಡನ ಮನೆಯಿಂದ ಭದ್ರಾವತಿಯಲ್ಲಿರುವ ತವರು ಮನೆಗೆ ಮೂರು ದಿನದ ಹಿಂದೆ ಮಹಿಳೆ ಹಿಂತಿರುಗಿದ್ದರು. ಸಹೋದರ ಸಂಬಂಧಿಯೊಬ್ಬರ ಕಾರಿನಲ್ಲಿ ಅವರನ್ನು ಕರೆತರಲಾಗಿತ್ತು. ಸೋಂಕು ಕಾಣಿಸಿಕೊಂಡಿದ್ದು ಹೇಗೆ? ಆರೋಗ್ಯ ತಪಾಸಣೆಗಾಗಿ ಭದ್ರಾವತಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದಾಗ, ಕರೋನ ತಪಾಸಣೆ … Read more

ಭದ್ರಾವತಿಯಲ್ಲೂ ಕಂಟೈನ್ಮೆಂಟ್ ಜೋನ್, ರಂಗಪ್ಪ ಸರ್ಕಲ್ ಸಮೀಪದ ರಸ್ತೆ ಸೀಲ್ ಡೌನ್

110620 Bhadravathi Rangappa Circle Sealdown 1

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 11 ಜೂನ್ 2020 ಭದ್ರಾವತಿ ರಂಗಪ್ಪ ಸರ್ಕಲ್ ಸಮೀಪದ ರಸ್ತೆಯೊಂದನ್ನು ಸೀಲ್‍ ಡೌನ್ ಮಾಡಲಾಗಿದೆ. ಇವತ್ತು ಬೆಳಗ್ಗೆ ರಸ್ತೆಯ ಎರಡು ಕಡೆಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ರಂಗಪ್ಪ ಸರ್ಕಲ್‍ನಿಂದ ಹೊಳೆಹೊನ್ನೂರು ಕಡೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಿ, ಸ್ಯಾನಿಟೈಸ್ ಮಾಡಲಾಗಿದೆ. ಈ ರಸ್ತೆಯಲ್ಲಿ ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಇನ್ನು 14 ದಿನ ಈ ರಸ್ತೆಯನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇಲ್ಲಿನ … Read more

ಮುಂಬೈನಿಂದ ರೈಲಿನಲ್ಲಿ ಬಂದು ಮನೆ ಸೇರಿದ್ದ ಯುವಕನಿಗೆ ಕರೋನ, ಕುಟುಂಬದವರೆಲ್ಲ ಕ್ವಾರಂಟೈನ್‍ಗೆ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 10 ಜೂನ್ 2020 ಮುಂಬೈನಿಂದ ಬಂದಿದ್ದ ಯುವಕನೊಬ್ಬನಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಸಾಗರ ತಾಲೂಕಿನಲ್ಲಿ ಆತಂಕ ಮೂಡಿದೆ. ಮುಂಬೈನಿಂದ ರೈಲಿನಲ್ಲಿ ಬಂದಿದ್ದ ಈತ ಬೈಕ್‍ನಲ್ಲಿ ಮನೆ ಸೇರಿದ್ದ ಎಂದು ತಿಳಿದು ಬಂದಿದೆ. ಆ ಬಳಿಕ ಈತನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಾಗರ ತಾಲೂಕಿನ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ವರ್ಷದ ಯುವಕನಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಈತ ಮುಂಬೈನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಹಾರಾಷ್ಟ್ರದಿಂದ ರೈಲಿನ … Read more

ತೀರ್ಥಹಳ್ಳಿಯಿಂದ ಎಸ್ಕೇಪ್ ಆಗಿದ್ದ ಮಂಜುನಾಥಗೌಡ ಅರೆಸ್ಟ್, ಎಲ್ಲಿದ್ದರು? ಪತ್ತೆಯಾಗಿದ್ದು ಹೇಗೆ? ಘಟನೆ ಹಿನ್ನೆಲೆ ಏನು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಬುಲೆಟ್ ಬೈಕ್ ಸೌಂಡ್ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಿ, ಬಳಿಕ ಅಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಪರಾರಿಯಾಗಿದ್ದ ಕುಣಜೆ ಮಂಜುನಾಥಗೌಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಯೊಬ್ಬರ ಮನೆಯಲ್ಲಿ ಈತ ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ. ಮಂಜುನಾಥಗೌಡ ಸಿಕ್ಕಿ ಬಿದ್ದಿದ್ದು ಹೇಗೆ? ಎಲ್ಲಿ? ಗಲಾಟೆ ವೇಳೆ ಗಾಯಗೊಂಡಿದ್ದ ಕುಣಜೆ ಮಂಜುನಾಥಗೌಡ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಪರಾರಿಯಾಗಿದ್ದ ಈತ ಶೃಂಗೇರಿಯಲ್ಲಿರುವ … Read more

ಒಂದೂವರೆ ಎಕರೆ ಕಬ್ಬಿಗೆ ಹೊಸನಗರ ರೈತನಿಂದ ಬೆಂಕಿ, ಇದು ಕರೋನ ಲಾಕ್ ಡೌನ್ ಎಫೆಕ್ಟ್

090620 Fire On Sugar Cane in Haramballi Hosanagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಕರೋನ ಲಾಕ್‍ ಡೌನ್ ಹಿನ್ನೆಲೆ ಖರೀದಿದಾರರು ಇಲ್ಲದೆ, ಬೆಲೆಯೂ ಸಿಗದೆ ರೈತರೊಬ್ಬರು ತಾವು ಬೆಳೆದ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಒಂದೂವರೆ ಎಕೆರೆಯಲ್ಲಿ ಬೆಳೆದಿದ್ದ ಕಬ್ಬು ಧಗಧಗ ಹೊತ್ತಿ ಉರಿದಿದೆ. ಹೊಸನಗರ ತಾಲೂಕು ಹಾರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ಚಂದ್ರಶೇಖರ್ ಅವರು ತಾವು ಬೆಳೆದ ಜ್ಯೂಸ್ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಇವತ್ತು ಬೆಳಗ್ಗೆ ಕಬ್ಬಿಗೆ ಹಚ್ಚಲಾಗಿದೆ. ಕರೋನ ಲಾಕ್‍ ಡೌನ್ ಪರಿಣಾಮ ಕಬ್ಬು ಖರೀದಿಗೆ … Read more

ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದ ಮಹಿಳೆಗೆ ಕರೋನ ಪಾಸಿಟಿವ್, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಕಂಟೈನ್ಮೆಂಟ್ ಜೋನ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಕಂಟೈನ್ಮೆಂಟ್ ಜೋನ್ ನಿರ್ಮಿಸಲಾಗಿದೆ. ಮುಂಬೈನಿಂದ ಉಡುಪಿ ಜಿಲ್ಲೆಯ ಮೂಲಕ ಹೊಸನಗರಕ್ಕೆ ಬಂದಿದ್ದ ಮಹಿಳೆಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಹೊಸನಗರದಲ್ಲಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಕಂಟೈನ್ಮೆಂಟ್ ಜೋನ್‍ಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಹೊಸ ಕಂಟೈನ್ಮೆಂಟ್ ಜೋನ್ ಯಾವುದು? ಹೊಸನಗರ ತಾಲೂಕಿನ ಜಯನಗರ  ನೂತನ ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಮಹಿಳೆ ಉಳಿದುಕೊಂಡಿದ್ದ ಮನೆಯನ್ನು ಸೀಲ್‍ ಡೌನ್ … Read more

ಕಾಡಲ್ಲಿ ವೀಕೆಂಡ್ ಪಾರ್ಟಿ ಮಾಡುತ್ತಿದ್ದವರ ಕಿಕ್ ಇಳಿಸಿದ ಶಿವಮೊಗ್ಗ ಅಬಕಾರಿ ಅಧಿಕಾರಿಗಳು

080620 Abakari Raid in Shimoga Forest 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020 ಅರಣ್ಯ ಪ್ರದೇಶದಲ್ಲಿ ವೀಕೆಂಡ್ ಪಾರ್ಟಿ ಮಾಡುತ್ತಿದ್ದವರಿಗೆ ಶಿವಮೊಗ್ಗದ ಅಬಕಾರಿ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದಿಢೀರ್ ದಾಳಿ ಮಾಡಿ ಕೇಸ್ ದಾಖಲಿಸಿದ್ದಾರೆ. ಶಿವಮೊಗ್ಗ ಅಬಕಾರಿ ರೇಂಜ್ ವ್ಯಾಪ್ತಿಯಲ್ಲಿ ಹಲವು ಕಡೆ ದಾಳಿ ನಡೆಸಲಾಗಿದೆ. ಸಾರ್ವಜನಿಕ ಪ್ರದೇಶ, ಅರಣ್ಯಗಳಲ್ಲಿ ಪಾರ್ಟಿ ಮಾಡುತ್ತಿದ್ದವರ ಕಿಕ್ ಇಳಿಸಲಾಗಿದೆ. ಎಷ್ಟು ಕಡೆ ದಾಳಿಯಾಗಿದೆ? ಎಷ್ಟು ಮದ್ಯ ವಶವಾಗಿದೆ? ಶಿವಮೊಗ್ಗ ರೇಂಜ್ ‍ವ್ಯಾಪ್ತಿಯ ಹಲವು ಕಡೆ ಅರಣ್ಯಗಳಲ್ಲಿ ಕೂಂಬಿಂಗ್ ಮಾಡಲಾಗಿದೆ. 25 … Read more

ರಸ್ತೆ ಪಕ್ಕದ ಗುಂಡಿಗಿಳಿದ KSRTC ಬಸ್, ಸ್ವಲ್ಪದರಲ್ಲಿ ತಪ್ಪಿತು ಭಾರಿ ಅನಾಹುತ

040620 Biranahalli KSRTC bus Accident 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜೂನ್ 2020 ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‍ಆರ್‍ಟಿಸಿ ಬಸ್ ರಸ್ತೆಯಿಂದ ಕೆಳಗಿಳಿದಿದೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಶಿವಮೊಗ್ಗ ತಾಲೂಕು ಬಿ.ಬೀರನಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ಸಿನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಬಸ್ಸಿನ ವೇಗ ಕಡಿಮೆ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿತು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | … Read more