ಶಿವಮೊಗ್ಗದಲ್ಲಿ ಬಸ್‌ ಹತ್ತಿ ಆಧಾರ್‌ ಕಾರ್ಡ್‌ ತೋರಿಸಲು ಮುಂದಾದ ಮಹಿಳೆಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image-Shimoga-Bangalore

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ (Bus) ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್‌ನಿಂದ ಪರ್ಸ್‌, ಚಿನ್ನಾಭರಣ ಕಳ್ಳತನ ಪ್ರಕರಣಗಳು ಮುಂದುವರೆದಿದೆ. ಗಾಂಧಿ ಬಜಾರ್‌ನ ಧರ್ಮರಾಯನ ಬೀದಿಯ ಗಾಯತ್ರಿ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚನ್ನದ ಸರ, ನಗದು ಮತ್ತು ಆಧಾರ್‌ ಕಾರ್ಡ್‌ ಕಳ್ಳತನ ಮಾಡಲಾಗಿದೆ. ಗಾಯತ್ರಿ ಅವರು ಹಿರೇಕೆರೂರಿನಲ್ಲಿರುವ ತಾಯಿ ಮನೆಗೆ ತೆರಳುತ್ತಿದ್ದರು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಬಸ್‌ ಹತ್ತಿದ್ದರು. ರಶ್‌ ಇದ್ದಿದ್ದರಿಂದ ನೂಕುನುಗ್ಗಲಿನಲ್ಲೆ ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ ತೋರಿಸಲು ವ್ಯಾನಿಟಿ ಬ್ಯಾಗ್‌ಗೆ ಕೈ … Read more

ಶಿವಮೊಗ್ಗ ಸಿಟಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್‌ ಪೊಲೀಸ್‌

traffic-police-stops-ksrtc-buses-in-Shimoga-city.- ಕೆಎಸ್‌ಆರ್‌ಟಿಸಿ ಬಸ್‌

ಶಿವಮೊಗ್ಗ: ಭಾರಿ ವಾಹನ ಸಂಚಾರ ನಿಷೇಧವಿದ್ದರು ಶಿವಮೊಗ್ಗ ಸಿಟಿಯೊಳಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಸಂಚಾರ ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಟ್ರಾಫಿಕ್‌ ಪೊಲೀಸರ ಜೊತೆಗೆ ಕೆಎಸ್‌ಆರ್‌ಟಿಸಿ ಬಸ್‌ ಸಿಬ್ಬಂದಿ, ಪ್ರಯಾಣಿಕರು ವಾಗ್ವಾದ ನಡೆಸಿದರು. ಇಂದು ಗೋಪಿ ವೃತ್ತದಲ್ಲಿ ಸಂಚಾರ ಠಾಣೆ ಪೊಲೀಸರು ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ತಡೆದರು. ನಗರದ ಒಳಗೆ ಭಾರಿ ವಾಹನ ಸಂಚಾರ ನಿಷೇಧವಿದ್ದರು ಬಸ್ಸುಗಳು ನಗರದ ಒಳಗೆ ಸಂಚರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಈ ಸಂದರ್ಭ ವಾಗ್ವಾದ ನಡೆಯಿತು. ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ … Read more

ಭದ್ರಾವತಿಯ ವ್ಯಕ್ತಿಗೆ ₹10 ಲಕ್ಷದ ಪರಿಹಾರ ನಿಧಿ ಚೆಕ್‌ ವಿತರಿಸಿದ KSRTC

KSRTC-issued-cheque-for-Bhadravathi-person

ಶಿವಮೊಗ್ಗ: ಬಸ್ಸಿನಿಂದ ಕೆಳಗೆ ಬಿದ್ದು ಯುವತಿ ಮೃತಪಟ್ಟಿದ್ದ ಪ್ರಕರಣ ಸಂಬಂಧ ಅವರ ಕುಟುಂದವರಿಗೆ KSRTC ವತಿಯಿಂದ ಅಪಘಾತ ಪರಿಹಾರ ನಿಧಿ ಚೆಕ್‌ ವಿತರಣೆ ಮಾಡಲಾಯಿತು. 2024ರ ಅಕ್ಟೋಬರ್ 22 ರಂದು ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಪಯಣಿಸುತ್ತಿದ್ದಾಗ ಭದ್ರಾವತಿ ತಾಲೂಕು ಹಳೇ ಭಂಡಾರಹಳ್ಳಿ ವಾಸಿ ಹೇಮಾವತಿ (19) ಬಸ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಾರಿಗೆ ನಿಗಮದ ವತಿಯಿಂದ ಹೇಮಾವತಿ ಅವರ ತಂದೆ ರಮೇಶ್‌ ಅವರಿಗೆ ಅಪಘಾತ ಪರಿಹಾರ ನಿಧಿಯ ₹10 ಲಕ್ಷದ ಚೆಕ್‌ ವಿತರಿಸಲಾಯಿತು. ಶಿವಮೊಗ್ಗ … Read more

ಸಾಗರದಲ್ಲಿ ಬಸ್‌ ಹತ್ತಿದ ದಾವಣಗೆರೆ ಮಹಿಳೆ, ಐಬಿ ಸರ್ಕಲ್‌ ಬಳಿ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

ಸಾಗರ: KSRTC ಬಸ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣವಿದ್ದ ಪರ್ಸ್‌ ಕಳ್ಳತನ ಮಾಡಲಾಗಿದೆ. ಸಾಗರ ಬಸ್‌ ನಿಲ್ದಾಣದಲ್ಲಿ ಕಳ್ಳತನ ನಡೆದಿರುವ ಕುರಿತು ಶಂಕೆ ಇದೆ. ನಯನಾ ಎಂಬುವವರು ಸಾಗರ ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ದಾವಣಗೆರೆಗೆ ಬಸ್‌ ಹತ್ತಿದ್ದರು. ಐಬಿ ಸರ್ಕಲ್‌ ಬಳಿ ಬಸ್‌ ತೆರಳುತ್ತಿರುವಾಗ ಟಿಕೆಟ್‌ ಮಾಡಿಸಲು ಬ್ಯಾಗ್‌ನಲ್ಲಿದ್ದ ಪರ್ಸ್‌ ತೆಗೆಯಲು ಮುಂದಾದರು. ಆಗ ಪರ್ಸ್‌ ಇಲ್ಲದಿರುವುದು ಗೊತ್ತಾಗಿದೆ. ಪರ್ಸ್‌ನಲ್ಲಿ ₹1.73 ಲಕ್ಷದ ಚಿನ್ನಾಭರಣ ಇತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಸ್‌ ಹತ್ತುವುದಕ್ಕು ಮುನ್ನ ನಯನಾ ಅವರಿಗೆ ಕರೆ ಬಂದಿತ್ತು. … Read more

KGFಗೆ ತೆರಳಲು ಶಿವಮೊಗ್ಗದಲ್ಲಿ ಬೆಂಗಳೂರು ಬಸ್‌ ಹತ್ತಿದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

161025-shimoga-ksrtc-bus-stand-general-image.webp

ಶಿವಮೊಗ್ಗ: KSRTC ಬಸ್‌ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ಮತ್ತೆ ಹೆಚ್ಚಳವಾಗಿವೆ. ಮಹಿಳೆಯರ ಬ್ಯಾಗುಗಳೆ ಕಳ್ಳರ ಟಾರ್ಗೆಟ್‌ ಆಗಿವೆ. ದೀಪಾವಳಿ ಹಬ್ಬ ಮುಗಿಸಿಕೊಂಡು ಕೋಲಾರದ ಕೆಜಿಎಫ್‌ಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ, ಮೊಬೈಲ್‌ ಕಳ್ಳತನ ಮಾಡಲಾಗಿದೆ. ಭಾರ್ಗವಿ ಎಂಬುವವರು ಹೊಳೆಹೊನ್ನೂರಿನ ತಮ್ಮೂರಿನಲ್ಲಿ ದೀಪಾವಳಿ ಹಬ್ಬ ಆಚರಿಸಿ ಪತಿಯೊಂದಿಗೆ ಕೋಲಾರದ ಕೆಜಿಎಫ್‌ಗೆ ತೆರಳುತ್ತಿದ್ದರು. ಅ.23ರ ರಾತ್ರಿ ಶಿವಮೊಗ್ಗ ಕೆಎಸ್‌ಆರ್‌ಟಿಸ್‌ ಬಸ್‌ ನಿಲ್ದಾಣದಲ್ಲಿ ಬೆಂಗಳೂರು ಬಸ್‌ ಹತ್ತುವಾಗ ರಶ್‌ ಇತ್ತು. ಭಾರ್ಗವಿ ಅವರು ಬಸ್‌ ಹತ್ತಿದ ಬಳಿಕ ಅವರ ಬ್ಯಾಗ್‌ನ ಜಿಪ್‌ ತೆರದಿರುವುದು … Read more

ಬಸ್ಸಿನ ಸೀಟಿನಲ್ಲಿ ಕುಳಿತು ವ್ಯಾನಿಟಿ ಬ್ಯಾಗ್‌ ಕಡೆ ಗಮನ ಹರಿಸಿದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-Stand-In-Shimoga

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಖದೀಮರ ಹಾವಳಿ ಮುಂದುವರೆದಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ (Jewels), ನಗದು ಕಳ್ಳತನವಾಗಿದೆ ಎಂದು ಮಲ್ಲಿಗೇನಹಳ್ಳಿಯ ಬಂಗಾರಮ್ಮ ಎಂಬುವವರು ದೂರು ನೀಡಿದ್ದಾರೆ. ಬಂಗಾರಮ್ಮ ಸೊರಬದ ತಮ್ಮೂರಿಗೆ ತೆರಳಲು ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಆಗಮಿಸಿದ್ದರು. ಆನವಟ್ಟಿಗೆ ತೆರಳುವ ಬಸ್‌ ಬಂದಿದ್ದು, ಸೀಟು ಹಿಡಿದು ಕುಳಿತಿದ್ದರು. ಟಿಕೆಟ್‌ ಮಾಡಿಸಲು ವ್ಯಾನಿಟಿ ಬ್ಯಾಗ್‌ ತೆಗೆಯಲು ಮುಂದಾದಾಗ ಬ್ಯಾಗಿನ ಜಿಪ್‌ ತೆರೆದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಅದರೊಳಗೆ ಇದ್ದ 25 ಗ್ರಾಂ ತೂಕದ ಒಂದು ಲಕ್ಷ ಮೌಲ್ಯದ ಕಾಸಿನ ಸರ, ₹2.29 … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದಿಂದ ರಾತ್ರಿ ಹೊರ ಬಂದ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು?

161025-shimoga-ksrtc-bus-stand-general-image.webp

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಗೆ ಹೋಗಿ ಬರುವಷ್ಟರಲ್ಲಿ ಸ್ಪ್ಲೆಂಡರ್‌ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಯೊಬ್ಬ (Student) ದೂರು ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿಯ ಚಂದ್ರಾನಾಯ್ಕ್‌  ರಾತ್ರಿ 9.15ಕ್ಕೆ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಅನ್ನು ಅಶೋಕ ಲಾಡ್ಜ್‌ ಮುಂಭಾಗ ನಿಲ್ಲಿಸಿದ್ದರು. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಗೆ ಹೋಗಿ ರಾತ್ರಿ 10 ಗಂಟೆಗೆ ಹಿಂತಿರುಗಿದ್ದರು. ಈ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಮಹಿಳೆ ಅಸ್ವಸ್ಥ, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು

KSRTC-Bus-Stand-in-Shimoga

ಶಿವಮೊಗ್ಗ: KSRTC ಬಸ್‌ ನಿಲ್ದಾಣದಲ್ಲಿ ಅಸ್ವಸ್ಥರಾಗಿದ್ದ ಮಹಿಳೆಯೊಬ್ಬರು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದಿದ್ದು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮಹಿಳೆಯ ಗುರುತು ಗೊತ್ತಾಗದ ಹಿನ್ನೆಲೆ ವಾರಸುದಾರರ ಪತ್ತೆಗೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತ ಮಹಿಳೆ 35 ರಿಂದ 42 ವರ್ಷ ವಯಸ್ಸಿನವರು. ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡನೆಯ ಮುಖ ಹಾಗೂ ದೃಢವಾದ ಮೈಕಟ್ಟು ಹೊಂದಿದ್ದಾರೆ. ತಲೆಯಲ್ಲಿ ಸುಮಾರು 8 ಇಂಚು ಉದ್ದದ ಕಪ್ಪು ಬಿಳಿ ಬಣ್ಣದ ತಲೆ ಕೂದಲು, … Read more

ನಡುರಾತ್ರಿ ಮೈಸೂರು ಬಸ್‌ ಹತ್ತಿ ಸೀಟಿನಲ್ಲಿ ಕುಳಿತು ಶಾಲು ಹೊದ್ದುಕೊಂಡ ನಂತರ ನರ್ಸ್‌ಗೆ ಕಾದಿತ್ತು ಶಾಕ್

ksrtc-bus-stand-shimoga-shivamogga

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್‌ ಹತ್ತುವಾಗ ನರ್ಸ್‌ (Nurse) ಒಬ್ಬರ ಮಾಂಗಲ್ಯ ಸರ ಕಳವು ಮಾಡಲಾಗಿದೆ. ನಡುರಾತ್ರಿ ಗೀತಾ ಎಂಬುವವರು ಶಿವಮೊಗ್ಗದಿಂದ ಮೈಸೂರು ಬಸ್‌ ಹತ್ತಿದ್ದಾರೆ. ಸೀಟಿನಲ್ಲಿ ಕುಳಿತು ಚಳಿ ಇದ್ದರಿಂದ ಶಾಲ್‌ ಹೊದ್ದುಕೊಂಡಿದ್ದಾರೆ. ಆಗ ಕೊರಳಲಿದ್ದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ. ಬಸ್‌ ಹತ್ತುವಾಗ ಜನ ಸಂದಣಿ ಇತ್ತು. ಆ ಸಂದರ್ಭ ಮಾಂಗಲ್ಯ ಸರ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳುವಾಗಿರುವುದು ₹2.24 ಲಕ್ಷದ … Read more

ಬಸ್ಸಲ್ಲಿ ಸೀಟ್‌ ಸಿಗದಿದ್ದಕ್ಕೆ ಕೆಳಗಿಳಿದು ಮುಖ ಒರೆಸಿಕೊಂಡ ತಕ್ಷಣ ಮಹಿಳೆಗೆ ಕಾದಿತ್ತು ಶಾಕ್‌, ದಾಖಲಾಯ್ತು ಕೇಸ್‌

KSRTC-Bus-Stand-Shivamogga

ಶಿವಮೊಗ್ಗ: ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಬಸ್‌ ಹತ್ತಿದ್ದ ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಳ್ಳತನ ಮಾಡಲಾಗಿದೆ. ವೀಣಾ ಎಂಬುವವರು ತಮ್ಮೂರು ಆನವಟ್ಟಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಹಾನಗಲ್‌ ಮಾರ್ಗ ಬಸ್‌ ಹತ್ತಿದ್ದರು. ಆದರೆ ರಶ್‌ ಇದ್ದಿದ್ದರಿಂದ ಸೀಟ್‌ ಸಿಗದ ಕಾರಣಕ್ಕೆ ಕೆಳಗಿಳಿದು ಮುಖ, ಕೊರಳು ಒರೆಸಿಕೊಂಡಿದ್ದರು. ಆಗ ಅವರ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. 22 ಗ್ರಾಂ ತೂಕದ ₹1.20 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ … Read more