ಭದ್ರಾವತಿ ಹಳೇ ನಗರ ಪೊಲೀಸ್ ಸ್ಟೇಷನ್ ಸಂಪೂರ್ಣ ಸ್ಯಾನಿಟೈಸ್, ಕಟ್ಟಡದೊಳಗೆ ಯಾರೂ ಕಾಲಿಡುವಂತಿಲ್ಲ, ಕಾರಣವೇನು?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 3 ಜೂನ್ 2020 ಕೆಎಸ್‍ಆರ್‍ಪಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿರುವ ಹಿನ್ನೆಲೆ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ರಂಜಾನ್ ಹಬ್ಬದ ಸಂದರ್ಭ ಬಂದೋಬಸ್ತ್‍ಗಾಗಿ ಭದ್ರಾವತಿಗೆ ಆಗಮಿಸಿದ್ದ ಕೆಎಸ್‍ಆರ್‍ಪಿ ಸಿಬ್ಬಂದಿಗಳು ಭದ್ರಾವತಿ ಹಳೇ ನಗರ ಠಾಣೆಯಲ್ಲಿ ಉಳಿದುಕೊಂಡಿದ್ದರು. ಈ ಪೈಕಿ ಒಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಹಾಗಾಗಿ ಹಳೇ ನಗರ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಯಾರೊಬ್ಬರು ಠಾಣೆಯೊಳಗೆ ಹೋಗುವಂತಿಲ್ಲ. ಹಾಗಾಗಿ ತಾತ್ಕಾಲಿಕವಾಗಿ … Read more

ಸೀಲ್‌ಡೌನ್ ಏರಿಯಾದವರಿಂದ ಹಳ್ಳಿ ಮೇಲೆ ಕಲ್ಲು ತೂರಾಟ, ಐದು ಜನ ಮೆಗ್ಗಾನ್ ಆಸ್ಪತ್ರೆಗೆ, ಕಾರು ಗ್ಲಾಸ್ ಪೀಸ್ ಪೀಸ್

020620 Hakki Pikki Clash in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020 ಕೊರೊನಾ ಸೋಂಕು ಹಿನ್ನೆಲೆ ಸೀಲ್ ಡೌನ್ ಆಗಿದ್ದ ಪ್ರದೇಶದ ನಿವಾಸಿಗಳು ಪಕ್ಕದ ಹಳ್ಳಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಭವಿಸಿದ್ದು ಎಲ್ಲಿ? ಶಿವಮೊಗ್ಗ ತಾಲೂಕು ಹಸೂಡಿ ಸಮೀಪದ ಹಕ್ಕಿ ಪಿಕ್ಕಿ ಕ್ಯಾಂಪ್‌ನವರು ಚಿಕ್ಕಮರಡಿ ಗ್ರಾಮದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ … Read more

ಸಾಗರದ ಸಾಜೀಲ್ ಹತ್ಯೆ ಕೇಸ್, ಐವರು ಬಂಧನ, ಯಾರೆಲ್ಲ ಅರೆಸ್ಟ್ ಆಗಿದ್ದಾರೆ?

050620 Sagara Police Arrest Murder Case 1

ಶಿವಮೊಗ್ಗ ಲೈವ್.ಕಾಂ | SAGARA NEWS | 2 ಜೂನ್ 2020 ಮೊಬೈಲ್ ವಿಚಾರವಾಗಿ ಸಾಗರದಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. ಮೇ 28ರಂದು ಸಂಜೆ ಹತ್ಯೆಯಾಗಿತ್ತು. ಅರಳಿಕೊಪ್ಪ ಗ್ರಾಮದಲ್ಲಿ ಸಾಜೀಲ್ ಹುಸೇನ್ (23) ಎಂಬಾತನ ಹತ್ಯೆ ನಡೆದಿತ್ತು. ಈ ಸಂಬಂಧ ಸಾಜೀಲ್ ಕುಟುಂಬದವರು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ. ಸಾಗರದ ಜನ್ನತ್ ನಗರ ನಿವಾಸಿ ಸುಫೇಲ್ ಅಲಿಯಾಸ್ ಸುಕ್ಕಾ (26), ಹಾನಂಬಿ ನೆಹರು … Read more

ಡಾಕ್ಟರ್‌ಗೆ ಕರೋನ ಪಾಸಿಟಿವ್, ಸೋಂಕು ತಗುಲಲು ಕಾರಣ ಪಿ1305

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜೂನ್ 2020 ಶಿವಮೊಗ್ಗ ತಾಲೂಕು ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ಒಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಇವರಿಂದ ಹಲವರು ಚಿಕಿತ್ಸೆ ಪಡೆದಿದ್ದು, ಈ ಭಾಗದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯೆಗೆ ಸೋಂಕು ತಗುಲಿದ್ದು ಹೇಗೆ? ವೃದ್ದರೊಬ್ಬರು (ಪೇಷೆಂಟ್ ನಂಬರ್ 1305) ಆರೋಗ್ಯ ಸಮಸ್ಯೆಗಾಗಿ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ತಪಾಸಣೆ ನಡೆಸಿದ್ದರು. ಇದಾದ ಬಳಿಕ ಪಿ1305ಗೆ ಕರೋನ ದೃಢವಾಗಿತ್ತು. ಕರೋನ ರಿಪೋರ್ಟ್ … Read more

ಟ್ಯಾಂಕರ್, ಮರಳು ಲಾರಿ ಡಿಕ್ಕಿ, ಹೊಸನಗರ, ಸಾಗರ ನಡುವೆ ವಾಹನ ಸಂಚಾರ ಕೆಲಕಾಲ ಬಂದ್

310520 Hosanaga Truck and Tanker Accident 1

ಶಿವಮೊಗ್ಗ ಲೈವ್.ಕಾಂ | HOSANAGARA NEWS | 31 ಮೇ 2020 ಟ್ಯಾಂಕರ್ ಮತ್ತು ಮರಳು ಲಾರಿ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಟ್ಯಾಂಕರ್ ಲಾರಿ ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಇದರಿಂದ ಸಾಗರ, ಹೊಸನಗರ ನಡುವೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹೊಸನಗರ ತಾಲೂಕು ಬ್ರಹ್ಮೇಶ್ವರ ಬಳಿಯ ಅರಳಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಬಳಿಕ ಘಟನೆ ಸಂಭವಿಸಿದೆ. ಸಾಗರದಿಂದ ಮಂಗಳೂರಿಗೆ ಕಡೆಗೆ ಹೊರಟಿದ್ದ ಟ್ಯಾಂಕರ್, ಹೊಸನಗರದಿಂದ ಸಾಗರ ಕಡೆಗೆ ಹೋಗುತ್ತಿದ್ದ ಮರಳು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಟ್ಯಾಂಕರ್ … Read more

ಪಂಜಾಬ್‌ನಿಂದ ಬಂದ ಮೂವರಿಗೆ ಕರೋನ, ಶಿವಮೊಗ್ಗದಲ್ಲಿ ಮತ್ತೊಂದು ಕಂಟೈನ್ಮೆಂಟ್ ಜೋನ್, ಈಗ ಎಷ್ಟು ಜೋನ್‌ಗಳಿವೆ?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಪಾಸಿಟಿವ್‌ ಪ್ರಕರಣಗಳು ಹೆಚ್ಚಳದ ಜೊತೆಗೆ ಕಂಟೈನ್ಮೆಂಟ್‌ ಜೋನ್‌ಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಮೂರು ಮಂದಿಗೆ ಪಾಸಿಟಿವ್‌ ಬಂದ ಹಿನ್ನೆಲೆ, ಹೊಸದಾಗಿ ಮತ್ತೊಂದು ಕಂಟೈನ್ಮೆಂಟ್‌ ಜೋನ್‌ ರಚಿಸಲಾಗಿದೆ. ಪಂಜಾಬ್‌ನಿಂದ ಬಂದವರಿಗೆ ಸೋಂಕು ಪಂಜಾಬ್‌ ರಾಜ್ಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಮೂವರಿಗೆ ಕರೋನ ಪಾಸಿಟಿವ್‌ ಬಂದಿದೆ. ಹಾಗಾಗಿ ಹೊಸ ಕಂಟೈನ್ಮೆಂಟ್‌ ಜೋನ್‌ ರಚಿಸಲಾಗಿದೆ. ಪೇಷೆಂಟ್‌ ನಂಬರ್ 2853 – 7 ವರ್ಷದ ಹುಡುಗ, ಪಿ2854 … Read more

ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್

KFD Van By VDL Lab in Shimoga Mangana Kayale 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 30 ಮೇ 2020 ತೀರ್ಥಹಳ್ಳಿ ತಾಲೂಕಿನಲ್ಲಿ ಮತ್ತೆ ಒಬ್ಬರಿಗೆ ಮಂಗನ ಕಾಯಿಲೆ (ಕೆಎಫ್‌ಡಿ) ಪಾಸಿಟಿವ್ ಬಂದಿದೆ. ಕರೋನ ಆಘಾತದ ನಡುವೆ ತಾಲೂಕಿನಲ್ಲಿ ದಿನೇ ದಿನೇ ಕೆಎಫ್ಡಿ ಭೀತಿಯು ಹೆಚ್ಚಾಗುತ್ತಿದೆ. ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 45 ವರ್ಷದ ಮಹಿಳೆಯೊಬ್ಬರಿಗೆ ಕೆಎಫ್‌ಡಿ ಸೋಂಕು ದೃಢಪಟ್ಟಿದೆ. ಕೂಡಲೇ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಈತನಕ 141 ಮಂದಿಗೆ ಕೆಎಫ್‌ಡಿ ಸೋಂಕು ತಗುಲಿದೆ.   ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ … Read more

ಮನೆಗೆ ಬಂದು 4 ಗಂಟೆ ಕಳೆಯೋದರಲ್ಲಿ ಬಂತು ಕರೋನ ಪರೀಕ್ಷೆಯ ರಿಪೋರ್ಟ್, ಏನಿತ್ತು ವರದಿಯಲ್ಲಿ? ಮುಂದೇನಾಯ್ತು?

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಮೇ 2020 ಹೊರ ರಾಜ್ಯದಿಂದ ಬಂದು ಕ್ವಾರಂಟೈನ್‍ ಅವಧಿ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಂತೆ ಮಹಿಳೆಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಕೂಡಲೆ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಆರಂಭಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 35 ವರ್ಷದ ಮಹಿಳೆಯೊಬ್ಬರಿಗೆ ಕರೋನ ಪಾಸಿಟಿವ್ ಬಂದಿದೆ. ಇವರನ್ನು ಪೇಷೆಂಟ್ ನಂಬರ್ 2583 ಎಂದು ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್‍ನಲ್ಲಿ ಗುರುತಿಸಲಾಗಿದೆ. ಕ್ವಾರಂಟೈನ್ ಪೂರ್ಣಗೊಳಿಸಿ ಮನೆಗೆ ಹೋಗಿದ್ದರು ಪಿ2583 ಅವರು ನವದೆಹಲಿಯಿಂದ ಹಿಂತಿರುಗಿದ್ದರು. … Read more

ತಮಿಳುನಾಡಿನಿಂದ ಭದ್ರಾವತಿಗೆ ಬಂದಿದ್ದ ಎಂಟು ಮಂದಿಗೆ ಕ್ವಾರಂಟೈನ್, ಇವರು ಬಂದಿದ್ದೇಕೆ? ಎಷ್ಟು ದಿನ ಕ್ವಾರಂಟೈನ್?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 29 ಮೇ 2020 ಸಂಬಂಧಿಯೊಬ್ಬರ ಸಾವಿನ ಹಿನ್ನೆಲೆ ತಮಿಳುನಾಡಿನಿಂದ ಭದ್ರಾವತಿ ತಾಲೂಕಿನ ಗ್ರಾಮವೊಂದಕ್ಕೆ ಬಂದಿರುವ ಎಂಟು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಇವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಎಲ್ಲಿಗೆ ಬಂದಿದ್ದರು? ಭದ್ರಾವತಿ ತಾಲೂಕಿನ ಭೂತನಗುಡಿ ಗ್ರಾಮದಲ್ಲಿ ಸಂಬಂಧಿಯೊಬ್ಬರು ಮೃತಪಟ್ಟ ಹಿನ್ನೆಲೆ, ಎಂಟು ಮಂದಿ ತಮಿಳುನಾಡಿನಿಂದ ಆಗಮಿಸಿದ್ದರು. ಇವರ ಬಳಿ ಅಧಿಕೃತ ಪಾಸ್‌ ಇದೆ ಎನ್ನಲಾಗುತ್ತಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನು ತಾಲೂಕಿನ ಕ್ವಾರಂಟೈನ್‌ ಸೆಂಟರ್‌ ಒಂದರಲ್ಲಿ ಇರಿಸಲಾಗಿದೆ. ರಿಪೋರ್ಟ್‌ … Read more

ಸಾಗರದಲ್ಲಿ ಯುವಕನ ಬರ್ಬರ ಕೊಲೆ, ಹೇಗಾಯ್ತು ಘಟನೆ? ಹತ್ಯೆಗೆ ಕಾರಣವೇನು?

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 29 ಮೇ 2020 ಮಾರಕಾಸ್ತ್ರಗಳಿಂದ ಯುವಕನೊಬ್ಬನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದ್ದು, ತೀವ್ರ ರಕ್ತಸ್ರಾವದಿಂದ ಯುವಕ ಮೃತಪಟ್ಟಿದ್ದಾನೆ. ಸಾಜೀಲ್‌ (೨೪) ಮೃತ ಯುವಕ. ಮಾರಕಾಸ್ತ್ರಗಳಿಂದ ಸಾಜೀಲ್‌ ತಲೆಗೆ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು. ಕೂಡಲೆ ಸಾಜೀಲ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹೇಗಾಯ್ತು ಘಟನೆ? ಸಾಗರದ ಅರಳಿಕೊಪ್ಪ ಗ್ರಾಮದ ಲೇಔಟ್‌ ಹಿಂಭಾಗ ಸಾಜೀಲ್‌ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ … Read more