ತೀರ್ಥಹಳ್ಳಿಯ ಈ ಯುವಕನ ಬಗ್ಗೆ ಸುಳಿವು ಕೊಟ್ಟರೆ 3 ಲಕ್ಷ ರೂ. ಬಹುಮಾನ, ಯಾರವನು? ಬಹುಮಾನ ಯಾಕೆ?

140520 Thirthahalli Terrorist ISIS 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಮೇ 2020 ತಲೆಮರೆಸಿಕೊಂಡಿರುವ ತೀರ್ಥಹಳ್ಳಿಯ ಯುವಕನೊಬ್ಬನ ಕುರಿತು ಸುಳಿವು ನೀಡಿದರೆ ಮೂರು ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಘೋಷಿಸಿದೆ. ಈ ಕುರಿತು ಎನ್‍ಐಎ ಪ್ರಕಟಣೆಯನ್ನು ಹೊರಡಿಸಿದೆ. ಯಾರು ಆ ಯುವಕ? ಎಲ್ಲಿಯವನು? ಅಬ್ದುಲ್ ಮತೀನ್ ಅಹ್ಮದ್ ತಾಹಾ (26), ಈತನ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲು ನಿರ್ಧರಿಸಲಾಗಿದೆ. ಅಬ್ದುಲ್ ಮತೀನ್ ತಾಹಾ ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆ ಗ್ರಾಮದ ಮೀನು ಮಾರ್ಕೆಟ್ ರಸ್ತೆಯ … Read more

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ 3 ದಿನದಲ್ಲಿ ನಡೆಯಬೇಕಿದ್ದ 4 ಬಾಲ್ಯ ವಿವಾಹಕ್ಕೆ ಬ್ರೇಕ್, ಎಲ್ಲೆಲ್ಲಿ ನಡೆಯಲಿದ್ದವು ಮದುವೆ?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಮೇ 2020 ಜಿಲ್ಲೆಯ ವಿವಿಧೆಡೆ ಕಳೆದ ಮೂರು ದಿನದಲ್ಲಿ ನಾಲ್ಕು ಕಡೆ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಪೋಷಕರಿಗೆ ತಿಳಿ ಹೇಳಿ, ಮದುವೆ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಕರಣ 1 ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ 16 ವರ್ಷದ ಬಾಲಕಿಯೊಬ್ಬಳ ಮದುವೆ ನಿಶ್ಚಯ ಮಾಡಲಾಗಿತ್ತು. ಮಾಹಿತಿ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿದ್ದಾರೆ. ಪ್ರಕರಣ 2 ಶಿಕಾರಿಪುರದ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯೊಬ್ಬಳ … Read more

ಹೊಳೆಹೊನ್ನೂರು ಚೆಕ್ ಪೋಸ್ಟ್‌ನಲ್ಲಿ ತಪಾಸಣೆ ಚುರುಕು, ಕ್ವಾರಂಟೈನ್‌ಗೆ ಒಂದೆಡೆ ಗ್ರಾಮಸ್ಥರಿಂದ ಎಸ್, ಮತ್ತೊಂದೆಡೆ ನೋ

140520 Holehonnuru checkpost checking 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಮೇ 2020 ದಾವಣಗೆರೆ ಜಿಲ್ಲೆಯಿಂದ ಶಿವಮೊಗ್ಗಕ್ಕೆ ಬರುವವರ ಆರೋಗ್ಯ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಭಾಗದಲ್ಲಿ ತಪಾಸಣೆಗೆ ಇಳಿದಿರುವ ಸಿಬ್ಬಂದಿಗೆ ಪಿಪಿಇ ಮಾದರಿಯ ಕಿಟ್ ನೀಡಲಾಗಿದೆ. ಪಿಪಿಇ ಕಿಟ್ ಮಾದರಿಯಲ್ಲಿರುವ ಸುರಕ್ಷಿತ ಸಾಧನ ಧರಿಸಿಕೊಂಡು, ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಬರುವವರ ತಪಾಸಣೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಕ್ವಾರಂಟೈನ್‍ಗೆ ಇಲ್ಲಿ ಒಪ್ಪಿಗೆ, ಅಲ್ಲಿ ನಿರಾಕರಣೆ ಹಂಚಿನ ಸಿದ್ಧಾಪುರ ಮತ್ತು ಆನವೇರಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ … Read more

ತೀರ್ಥಹಳ್ಳಿಯಲ್ಲಿ ಮತ್ತೊಬ್ಬ ಮಹಿಳೆಗೆ KFD ಪಾಸಿಟಿವ್, ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟಾಗಿದೆ ಗೊತ್ತಾ ಕೇಸ್?

KFD Van By VDL Lab in Shimoga Mangana Kayale 1

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 13 ಮೇ 2020 ತೀರ್ಥಹಳ್ಳಿ ತಾಲೂಕು ಗುಡ್ಡೆಕೊಪ್ಪ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಾಳಿಗಮನೆ ಗ್ರಾಮದ ಮಹಿಳೆಯೊಬ್ಬರಿಗೆ ಕೆಎಫ್‍ಡಿ ಪಾಸಿಟಿವ್ ಬಂದಿದೆ. ಮಹಿಳೆಯನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಮುಂದುವರೆದಿದೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ 137ಕ್ಕೆ ಏರಿದೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ | shivamoggalive@gmail.com

ವೈರಲ್ ಆಯ್ತು ಸಕ್ರೆಬೈಲು ಬಳಿ ಸಂಭವಿಸಿದ ಭೀಕರ ಅಪಘಾತದ ವಿಡಿಯೋ, ಹೇಗಾಯ್ತು? ಅಪಘಾತಕ್ಕೇನು ಕಾರಣ?

110520 Accident In Shimoga Sakrebyle 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಮೇ 2020 ಸಕ್ರೆಬೈಲು ಸಮೀಪ ಭಾನುವಾರ ಸಂಭವಿಸಿದ ಭೀಕರ ಅಪಘಾತದ ವಿಡಿಯೋ ವೈರಲ್ ಆಗಿದೆ. ಮಳೆಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾಗ ಅಪಘಾತ ಸೆರೆಯಾಗಿದೆ. ಹೇಗಾಯ್ತು ಅಪಘಾತ? ಭಾರಿ ಮಳೆ ಸುರಿಯುತ್ತಿದ್ದ ವೇಳೆ ಅಪಘಾತವಾಗಿದೆ. ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಲಕ್ಕೆ ಜಾರಿದೆ. ಎದುರಿನಿಂದ ಬರುತ್ತಿದ್ದ ಬೈಕ್‍ಗೆ ಲಾರಿಯ ಹಿಂಭಾಗ ಅಪ್ಪಳಿಸಿದೆ. ಬಳಿಕ ಬೈಕ್‍ನ ಹಿಂದೆ ಬರುತ್ತಿದ್ದ ಕಾರಿಗೂ ಲಾರಿ ಗುದ್ದಿದೆ. ಕಾರಿನ … Read more

ಮಾಸ್ಕ್ ಹಾಕದೆ ಭದ್ರಾವತಿಯಲ್ಲಿ ಆಸ್ಪತ್ರೆಗೆ ಬಂದವರಿಗೆ ಬಿತ್ತು ದಂಡ, ಎಷ್ಟು ಗೊತ್ತಾ ಫೈನ್?

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 10 ಮೇ 2020 ಮಾಸ್ಕ್ ಧರಿಸದೆ ಆಸ್ಪತ್ರೆಗೆ ಬಂದವರಿಗೆ ವೈದ್ಯಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ. ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಮಾಸ್ಕ್ ಧರಿಸದೆ ಬಂದವರಿಗೆ ದಂಡ ವಿಧಿಸಲಾಗಿದೆ. ಮೊದಲ ದಿನ 10 ಮಂದಿಗೆ ದಂಡ ಹಾಕಲಾಗಿದೆ. ಒಬ್ಬರಿಗೆ 50 ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಮಾಸ್ಕ್ ಧರಿಸದೆ ಬಂದಿದ್ದಕ್ಕಾಗಿ ಅಸ್ಪತ್ರೆ ಪ್ರವೇಶವನ್ನು ನಿರಾಕರಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಡಾ.ಓ.ಮಲ್ಲಪ್ಪ, ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್, ಮುನಿರಾಜ್, … Read more

ತೀರ್ಥಹಳ್ಳಿಯಲ್ಲಿ ಹಾರ್ಡ್‌ವೇರ್ ಸಾಮಗ್ರಿ ಹೊತ್ತ ಲಾರಿ ಪಲ್ಟಿ, ಶಿವಮೊಗ್ಗ ಭದ್ರಾವತಿ ನಡುವೆ ಲಾರಿ ಅಪಘಾತ

080520 Lorry Accident Near Thirthahalli 1

ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020 ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಯಲ್ಲಿ ಎರಡು ಲಾರಿಗಳು ಅಪಘಾತಕ್ಕೀಡಾಗಿವೆ. ತೀರ್ಥಹಳ್ಳಿ ರಿಪೋರ್ಟ್ ಹಾರ್ಡ್‍ವೇರ್ ಸಾಮಾಗ್ರಿಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಬಳಿ ಉರುಳಿ ಬಿದ್ದಿದೆ. ಆಂಧ್ರ ಪ್ರದೇಶದಿಂದ ತೀರ್ಥಹಳ್ಳಿಯ ಸಿರಿಬೈಲು ಗ್ರಾಮದ ಅಂಗಡಿಯೊಂದಕ್ಕೆ ಹಾರ್ಡ್‍ವೇರ್ ವಸ್ತುಗಳನ್ನು ತುಂಬಿಕೊಂಡು ಬರುತ್ತಿತ್ತು. ನಿದ್ರೆ ಮಂಪರಿನಲ್ಲಿ ಅಪಘಾತ ಸಂಭವಿಸಿರುವ ಶಂಕೆ ಇದೆ. ಶಿವಮೊಗ್ಗ ವರದಿ ಶಿವಮೊಗ್ಗದ ಭದ್ರಾವತಿ ಹೈವೇಯಲ್ಲಿ ಲಾರಿಯೊಂದ ಪಲ್ಟಿಯಾಗಿದೆ. ಮಲವಗೊಪ್ಪದ ಬಳಿ … Read more

ಸೂಗೂರಲ್ಲಿ ಮೊಬೈಲ್ ಸ್ಫೋಟ, ಬಾಲಕನ ಕಣ್ಣು, ಕೈ, ಮೊಣಕಾಲುಗಳಿಗೆ ಗಾಯ

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA | 8 ಮೇ 2020 ಕೀಪ್ಯಾಡ್ ಮೊಬೈಲ್ ಸ್ಪೋಟಗೊಂಡು ಬಾಲಕನೊಬ್ಬನಿಗೆ ಗಾಯವಾಗಿದೆ. ಶಿವಮೊಗ್ಗ ತಾಲೂಕು ಸೂಗುರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರಾಕೇಶ್, ಗಾಯಗೊಂಡ ಬಾಲಕ. ಬಲಗಣ್ಣು, ಕೈ ಮತ್ತು ಮೊಣಕಾಲುಗಳಿಗೆ ಗಾಯವಾಗಿದೆ. ಪೋಷಕರು ಕೂಡಲೇ ರಾಕೇಶ್‍ನನ್ನು ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಮೊಬೈಲ್ ಬಳಕೆ ಮಾಡುವ ಹೊತ್ತಿಗೆ ಸ್ಫೋಟಗೊಂಡಿದ್ದು, ಬಾಲಕ ಗಾಯಗೊಂಡಿದ್ದಾನೆ. ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494 ವಾಟ್ಸಪ್ ನಂಬರ್ | 7411700200 ಈ ಮೇಲ್ ಐಡಿ … Read more

ಪೊಲೀಸರ ಕಣ್ತಪ್ಪಿಸಿ, ಪಾಸ್ ಇಲ್ಲದೆ ಶಿವಮೊಗ್ಗ ಜಿಲ್ಲೆಯೊಳಗೆ ಬಂದಿದ್ದ ಆರು ಮಂದಿ ವಶಕ್ಕೆ, ಮೂರು ಬೈಕ್ ಸೀಜ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 5 ಮೇ 2020 ಅಧಿಕೃತ ಪಾಸ್‌ ಇಲ್ಲದೆ ಬದಲಿ ಮಾರ್ಗದಲ್ಲಿ ಶಿವಮೊಗ್ಗ ಜಿಲ್ಲೆಯೊಳಗೆ ಬಂದಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರು ಬೈಕ್‌ಗಳನ್ನು ಸೀಜ್‌ ಮಾಡಲಾಗಿದೆ. ಮುಖ್ಯ ರಸ್ತೆಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಕಣ್ತಪ್ಪಿಸಿ ಬದಲಿ ಮಾರ್ಗದಲ್ಲಿ ಆರು ಮಂದಿ ಬಂದಿದ್ದರು. ಹಾವೇರಿ ಜಿಲ್ಲೆಯಿಂದ ಗುಳೇದಹಳ್ಳಿ ಮತ್ತು ಮಾರವಳ್ಳಿ ಗ್ರಾಮದ ಮೂಲಕ ಇವರು ಶಿಕಾರಿಪುರಕ್ಕೆ ಆಗಮಿಸಿದ್ದರು. ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. … Read more

ಶಿವಮೊಗ್ಗ – ದಾವಣಗೆರೆ ಗಡಿಯಲ್ಲಿ ಬಂದೋಬಸ್ತ್ ಹೆಚ್ಚಳ, ಚೆಕ್‌ಪೋಸ್ಟ್‌ಗೆ ಡಿಸಿ, ಎಸ್ಪಿ ದಿಢೀರ್ ಭೇಟಿ

050520 Suttukote Checkpost Visit By DC SP copy 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020 ದಾವಣಗೆರೆಯಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಶಿವಮೊಗ್ಗದ ಗಡಿ ಭಾಗಗಳಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ದಾವಣಗೆರೆ ಕಡೆಯಿಂದ ಬರುವ ವಾಹನಗಳನ್ನು ಯಾವುದೆ ಕಾರಣಕ್ಕೂ ಜಿಲ್ಲೆಯೊಳಗೆ ಪ್ರವೇಶ ನೀಡದಂತೆ ಕಠಿಣ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಮತ್ತು ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್‍.ಟಿ.ಶೇಖರ್‍ ಅವರು ಇವತ್ತು ಶಿವಮೊಗ್ಗದ ಗಡಿ ಭಾಗದಲ್ಲಿರುವ ಚೆಕ್‍ಪೋಸ್ಟ್‍ಗೆ ದಿಢೀರ್ ಭೇಟಿ ನೀಡಿದ್ದರು. ಸುತ್ತುಕೋಟೆ ಚೆಕ್‍ಪೋಸ್ಟ್‍ಗೆ ತೆರಳಿದ್ದ ಅಧಿಕಾರಿಗಳು, ಯಾವ ವಾಹನವನ್ನೂ … Read more