ಆನಂದಪುರ ಸುತ್ತಮುತ್ತ ಗ್ರಾಮಗಳಲ್ಲಿ ಭಾರಿ ಗಾಳಿ, ಮಳೆ, ಮನೆಗಳ ಮೇಲೆ ಬಿದ್ದ ಮರ, ಯುವತಿಗೆ ಗಾಯ

050420 Tree Fall on Houses 1

ಶಿವಮೊಗ್ಗ ಲೈವ್.ಕಾಂ | SAGARA | 5 ಏಪ್ರಿಲ್ 2020 ಆನಂದಪುರ ಸುತ್ತಮುತ್ತ ಶನಿವಾರ ಭಾರಿ ಗಾಳಿ, ಮಳೆಯಾಗಿದೆ. ಗಾಳಿಯ ರಭಸಕ್ಕೆ ಮರಗಳು ಬುಡಮೇಲಾಗಿದ್ದು, ಮನೆಗಳ ಮೇಲೆ ಉರುಳಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ. ಚನ್ನಶೆಟ್ಟಿಕೊಪ್ಪ ಗ್ರಾಮದ ಮೋಹನ್ ವಜ್ರಪ್ಪ ಎಂಬುವವರ ಮನೆ ಮೇಲೆ ತೆಂಗಿನ ಮರ ಬಿದ್ದು ಮೇಲ್ಛಾವಣಿ ಜಖಂ ಆಗಿದೆ. ಮನೆಯೊಳಗಿದ್ದ ಮೇಘಾ (20) ಎಂಬ ಯುವತಿ ತಲೆ ಮೇಲೆ ಹೆಂಚು ಮತ್ತು ರೀಪು ಬಿದ್ದು ಪೆಟ್ಟಾಗಿದೆ. ಗಾಯಾಳುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು … Read more

ಗಾಂಜಾ ಮಾರಲು ತೆರಳುತ್ತಿದ್ದವರ ಮೇಲೆ ಪೊಲೀಸ್ ರೇಡ್, ಮಗ ಅರೆಸ್ಟ್, ಅಪ್ಪ ಎಸ್ಕೇಪ್

Sagara Rural Police Station

ಶಿವಮೊಗ್ಗ ಲೈವ್.ಕಾಂ | SHIMOGA | 4 ಏಪ್ರಿಲ್ 2020 ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಸಾಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ. ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಉಳುವಿಯಿಂದ ಸಾಗರದ ಕಡೆಗೆ ಬೈಕ್’ನಲ್ಲಿ ತೆರೆಳುತ್ತಿದ್ದ ಇಬ್ಬರ ಮೇಲೆ ದಾಳಿ ನಡೆಸಿ, ಒಂದು ಕೆ.ಜಿ. ನೂರು ಗ್ರಾಂ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಸೊರಬ ತಾಲೂಕಿನ ಉಳವಿ ಗ್ರಾಮದ ಜನತಾ … Read more

ಆಯನೂರು ಸಮೀಪ 70ಕ್ಕೂ ಹೆಚ್ಚು ಮಂದಿಯಿಂದ ನಮಾಜ್, ಏಳು ಮಂದಿಗೆ ಜ್ವರದ ಲಕ್ಷಣ, ಎಲ್ಲರಿಗೂ ಈಗ ಕ್ವಾರಂಟೈನ್

030420 Namaaz in Ayanuru 1

ಶಿವಮೊಗ್ಗ ಲೈವ್.ಕಾಂ | SHIMOGA | 3 ಏಪ್ರಿಲ್ 2020 ಲಾಕ್’ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ. ನಮಾಜ್’ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಯಲ್ಲಿ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ. ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರದ ನಮಾಜ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಅಂತಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಡಾಕ್ಟರ್ ಸ್ಥಳಕ್ಕೆ ಭೇಟಿ … Read more

ಲಾಕ್’ಡೌನ್ ಪರಿಣಾಮ, ಶಿವಮೊಗ್ಗದಲ್ಲಿ ಎರಡು ಎಕರೆಯಲ್ಲಿ ಬೆಳೆದ ಸುಗಂಧರಾಜ ಕಿತ್ತೊಗೆದ ರೈತ ಮಹಿಳೆ

020420 Flower Cut By Farmer Woman 1

ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020 ಕರೋನ ಲಾಕ್’ಡೌನ್ ಹೂವು ಕೃಷಿಗೆ ಭಾರೀ ಪೆಟ್ಟು ನೀಡಿದೆ. ಹೂವುಗಳನ್ನು ಬೆಳೆದವರ ಬದುಕು ಬೀದಿಗೆ ಬರುವಂತಾಗಿದೆ. ಹಾಗಾಗಿ, ಅರಳಿ ನಿಂತ ಹೂವುಗಳನ್ನು ಮಾರಾಟ ಮಾಡಲಾಗದೆ, ಹೂವು ಕೃಷಿಕರೊಬ್ಬರು ಅವುಗಳನ್ನು ಕಿತ್ತೊಗೆದಿದ್ದಾರೆ. ಕಾಶಿಪುರದ ನಿವಾಸಿ ಕೃಷಿಕ ಮಹಿಳೆ ಲಕ್ಷ್ಮೀ ನರಸಿಂಹಮೂರ್ತಿ ಅವರು ಎರಡು ಎಕರೆಯಲ್ಲಿ ಹೂವು ಬೆಳೆದಿದ್ದಾರೆ. ಸುಗಂಧರಾಜ ಹೂವು ಇವರ ಬದುಕನ್ನು ಅರಳಿಸಬೇಕಿತ್ತು. ಆದರೆ ಲಾಕ್’ಡೌನ್ ಆಗುತ್ತಿದ್ದಂತೆ ಹೂವು ಖರೀದಿಗೆ ಯಾರು ಬರುತ್ತಿಲ್ಲ. ಹೊರ ಹೋಗಿ … Read more

ಕರೋನ ಬಾದಿತ ದೇಶದಿಂದ ಬಂದರು ಹೊಸನಗರ ಸಿಟಿ, ಹಳ್ಳಿಗಳಲೆಲ್ಲ ಸುತ್ತಾಡಿದರು, ಈಗ ಎಚ್ಚರಿಕೆ ಜೊತೆಗೆ ಬಿತ್ತು ಕೇಸ್

Hosanagara Police Station 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರಬೇಕು ಎಂದು ವೈದ್ಯರು ಸೂಚಿಸಿದ್ದರು, ಹೊಸನಗರದ ವ್ಯಕ್ತಿಯೊಬ್ಬರು ಹೊಸನಗರ ಪಟ್ಟಣ ಮತ್ತು ಸುತ್ತಮುತ್ತ ಹಳ್ಳಿಗಳಿಗೆ ಹೋಗಿ ಬಂದಿದ್ದಾರೆ. ಇದು ತಿಳಿಯುತ್ತಿದ್ದಂತೆ ಆ ವ್ಯಕ್ತಿ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರದ ಡಾ.ಅಂಬೇಡ್ಕರ್ ಕಾಲೋನಿಯ ರಾಧಾಕೃಷ್ಣ ಅವರು ಕರೋನ ಬಾದಿತ ಫ್ರಾನ್ಸ್ ದೇಶದಿಂದ ಬಂದಿದ್ದರು. ಇವರ ಪರೀಕ್ಷೆ ನಡೆಸಿದ್ದ ವೈದ್ಯರು, 14 ದಿನ ಹೋಂ ಕ್ವಾರಂಟೈನ್’ನಲ್ಲಿ ಇರುವಂತೆ ಸೂಚಿಸಿದ್ದರು. ಆದರೂ … Read more

14 ದಿನ ಮನೆಯಲ್ಲಿರದೆ ಪದೇ ಪದೇ ಸುತ್ತಾಡ್ತಿದ್ದ ವ್ಯಕ್ತಿ ವಿರುದ್ಧ ತೀರ್ಥಹಳ್ಳಿಯಲ್ಲಿ ಕೇಸ್, ಕೊನೆಗೇನು ಮಾಡಿದ್ರು ಗೊತ್ತಾ ಅಧಿಕಾರಿಗಳು?

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಕಾರಿನಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಕ್ವಾರಂಟೈನ್ ವಿಭಾಗಕ್ಕೆ ಸೇರಿಸಲಾಗಿದೆ. ಕರೋನ ಬಾದಿತ ಪ್ರದೇಶದಿಂದ ಬಂದಿರುವವರು 14 ದಿನ ಕಡ್ಡಾಯವಾಗಿ ಮನೆಯಲ್ಲಿ ಇರಬೇಕು ಎಂದು ಕಟ್ಟುನಿಟ್ಟು ಸೂಚನೆ ನೀಡಲಾಗಿದೆ. ಹೀಗಿದ್ದು ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮದ ಕಿರಣ ಎಂಬುವವರು ಮನೆಯಲ್ಲಿ ಇರದೆ ಹೊರಗೆ ಸುತ್ತಾಡುತ್ತಿದ್ದರು. ಈ ಕುರಿತು ಎಚ್ಚರಿಕೆ ನೀಡಲಾಗಿತ್ತು. ತಾಲೂಕು ಕಾರ್ಯನಿರ್ವಾಹಕ … Read more

14 ದಿನ ಮನೆಯಲ್ಲಿರದೆ ಕೆರೆ ಬೇಟೆಗೆ ಹೋಗಿದ್ದ ಬೆಂಗಳೂರು ವಕೀಲರೊಬ್ಬರ ಮೇಲೆ ಸೊರಬದಲ್ಲಿ ಕೇಸ್

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020 14 ದಿನ ಮನೆಯಲ್ಲಿರಬೇಕು ಎಂದು ಸೂಚಿಸಿದ್ದರು ಅದನ್ನು ಉಲ್ಲಂಘಸಿ, ಕೆರೆ ಬೇಟೆಗೆ ಹೋಗಿದ್ದ ವಕೀಲರೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಕರೋನ ಬಾದಿತ ಪ್ರದೇಶದಿಂದ ಬಂದಿದ್ದ ವಕೀಲರೊಬ್ಬರಿಗೆ ಮನೆ ಬಿಟ್ಟು ಹೊರಬಾರದಂತೆ ಸೂಚಿಸಲಾಗಿತ್ತು. ಆದರೂ ಇದನ್ನು ವಿರೋಧಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕಾಶ್ ನಾಯ್ಕ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸೊರಬ ತಾಲೂಕು ದೇವಕಾತಿಕೊಪ್ಪದ ಬಳಿ ಕೆರೆ ಬೇಟೆಯಲ್ಲಿ ಇವರು ಭಾಗವಹಿಸಿದ್ದರು. 14 … Read more

ಚಾರಣಿಗರ ಹಾಟ್ ಫೇವರೆಟ್ ತಾಣ ಬಂದ್, ಕೊಡಚಾದ್ರಿಗೆ ಪ್ರವಾಸಿಗರ ಎಂಟ್ರಿ ನಿಷೇಧ

Kodachadri Mountain Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA | 17 ಮಾರ್ಚ್ 2020 ಚಾರಣಿಗರು ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕೊಡಚಾದ್ರಿ ಮತ್ತು ಹಿಂಡ್ಲುಮನೆ ಫಾಲ್ಸ್ ಬಂದ್ ಮಾಡಲಾಗಿದೆ. ಮಾರ್ಚ್ 17ರಿಂದ ಪ್ರವಾಸಿಗರನ್ನು ನಿಷೇಧಿಸಿ ಕೊಲ್ಲೂರು ವಲಯ ಅರಣ್ಯ ತಿಳಿಸಿದೆ. ಕೊಡಚಾದ್ರಿಯು ಪ್ರವಾಸಿ ಮತ್ತು ಧಾರ್ಮಿಕ ತಾಣವಾಗಿದೆ. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಿಗೆ ರಜೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಕೊರೋನ ಸೋಂಕು ಭೀತಿ ಹಿನ್ನೆಲೆ, ಕೊಡಚಾದ್ರಿಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ಈ … Read more

ಕಾರು ಚಾಲಕ, ಪತ್ನಿ ಆತ್ಮಹತ್ಯೆ ಪ್ರಕರಣ, ಸಾಗರದಲ್ಲಿ ಮೌನ ಪ್ರತಿಭಟನೆ

160320 Protest Against Car Driver Suicide 1

ಶಿವಮೊಗ್ಗ ಲೈವ್.ಕಾಂ | SAGARA | 16 ಮಾರ್ಚ್ 2020 ಕಾರು ಚಾಲಕ ಹರ್ಷಕುಮಾರ್ ಮತ್ತು ಅವರ ಪತ್ನಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು ಎಂದು ವಿವಿಧ ಸಂಘಟನೆಗಳು ಸಾಗರದಲ್ಲಿ ಇವತ್ತು ಮೌನ ಪ್ರತಿಭಟನೆ ನಡೆಸಿದವು. ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಬೇಕು. ಹರ್ಷಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ಹಿಂದೆ ಕಾಣದ ಕೈಗಳಿವೆ ಎಂದು ಆರೋಪಿಸಿದರು. ಹರ್ಷಕುಮಾರ್ ಅವರ ಸಹೋದರಿ ಆಶಾರಾಣಿ, ಪ್ರಮುಖರಾದ ಗಿರೀಶ್ … Read more

ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ತಟ್ಟಿದ ಮಹಾಮಾರಿ ಕರೋನ ಬಿಸಿ

160320 Jog Falls Closed due to corona 1

ಶಿವಮೊಗ್ಗ ಲೈವ್.ಕಾಂ | SHIMOGA | 16 ಮಾರ್ಚ್ 2020 ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಕರೋನ ಬಿಸಿ ತಟ್ಟಿದೆ. ಕರೋನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಜೋಗ ಜಲಪಾತದ ಗೇಟ್’ಗೆ ಬೀಗ ಹಾಕಲಾಗಿದೆ. ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲು ಗೇಟ್ ಮುಚ್ಚಲಾಗಿದೆ. ಜೋಗ ಜಲಪಾತ ವೀಕ್ಷಣೆಗೆ ರಾಜ್ಯ, ಹೊರ ರಾಜ್ಯ ಮತ್ತು ವಿದೇಶದಿಂದ ಪ್ರವಾಸಿಗರು ಆಗಮಿಸುವ ಹಿನ್ನೆಲೆ, ಗೇಟ್ ಬಂದ್ ಮಾಡಲಾಗಿದೆ. ಇದರ ಮಾಹಿತಿ ಇಲ್ಲದೆ ಬಂದ ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದಾರೆ. ಕರೋನ ಸೋಂಕು ಹಬ್ಬುವುದನ್ನು ತಡೆಗಟ್ಟುವ ಹಿನ್ನೆಲೆ ರಾಜ್ಯ … Read more