ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020
ಕರೋನ ಲಾಕ್’ಡೌನ್ ಹೂವು ಕೃಷಿಗೆ ಭಾರೀ ಪೆಟ್ಟು ನೀಡಿದೆ. ಹೂವುಗಳನ್ನು ಬೆಳೆದವರ ಬದುಕು ಬೀದಿಗೆ ಬರುವಂತಾಗಿದೆ. ಹಾಗಾಗಿ, ಅರಳಿ ನಿಂತ ಹೂವುಗಳನ್ನು ಮಾರಾಟ ಮಾಡಲಾಗದೆ, ಹೂವು ಕೃಷಿಕರೊಬ್ಬರು ಅವುಗಳನ್ನು ಕಿತ್ತೊಗೆದಿದ್ದಾರೆ.
ಕಾಶಿಪುರದ ನಿವಾಸಿ ಕೃಷಿಕ ಮಹಿಳೆ ಲಕ್ಷ್ಮೀ ನರಸಿಂಹಮೂರ್ತಿ ಅವರು ಎರಡು ಎಕರೆಯಲ್ಲಿ ಹೂವು ಬೆಳೆದಿದ್ದಾರೆ. ಸುಗಂಧರಾಜ ಹೂವು ಇವರ ಬದುಕನ್ನು ಅರಳಿಸಬೇಕಿತ್ತು. ಆದರೆ ಲಾಕ್’ಡೌನ್ ಆಗುತ್ತಿದ್ದಂತೆ ಹೂವು ಖರೀದಿಗೆ ಯಾರು ಬರುತ್ತಿಲ್ಲ. ಹೊರ ಹೋಗಿ ಮಾರಾಟ ಮಾಡಲು ಅನುಮತಿ ಇಲ್ಲ.
ನೀರುಣಿಸಿದ ಕೈಯಿಂದಲೇ ಹೊಸಕಿ ಹಾಕಿದರು
ಲಕ್ಷ್ಮೀ ಅವರ ಹೊಲದಲ್ಲಿ ಸುಗಂಧರಾಜ ಗಿಡಗಳು ಚೆನ್ನಾಗಿ ಬೆಳೆದು ನಿಂತಿವೆ. ಹೂವುಗಳು ಕೂಡ ಅರಳಿ ನಿಂತಿದ್ದವು. ಆದರೆ ಮಾರಾಟಕ್ಕೆ ಅವಕಾಶವಿಲ್ಲದ್ದರಿಂದ ಮನನೊಂದು, ಅವುಗಳನ್ನು ಕಿತ್ತೊಗೆದರು. ಈ ವೇಳೆ ಲಾಕ್’ಡೌನ್, ಕರೋನ ವೈರಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಾರಣರಾದವರಿಗೆ ಶಾಪ ಹಾಕಿದರು.
ಸಂಕಷ್ಟದಲ್ಲಿ ಶಿವಮೊಗ್ಗದ ಪುಷ್ಪೋದ್ಯಮ
ಲಕ್ಷ್ಮೀ ಅವರು ಪ್ರತಿದಿನ ಸುಮಾರು ನೂರು ಕೆ.ಜಿಯಷ್ಟು ಹೂವುನ್ನು ಶಿವಮೊಗ್ಗದ ಹೂವು ಮಾರುಕಟ್ಟೆಗೆ ಕಳುಹಿಸುತ್ತಿದ್ದರು. ಇದುವೆ ಇವರ ಜೀವನದ ಆಧಾರವಾಗಿತ್ತು. ಹಬ್ಬದ ಸೀಸನ್ ಆಗಿರುವುದರಿಂದ, ಹೂವಿಗೆ ಒಳ್ಳೆ ರೇಟ್ ಸಿಗುವ ನಿರೀಕ್ಷೆಯಿತ್ತು. ಲಾಕ್’ಡೌನ್ ಘೋಷಿಸುತ್ತಿದ್ದಂತೆ ಹೂವಿನ ಮಾರುಕಟ್ಟೆ ಬಂದ್ ಮಾಡಲಾಯಿತು. ಹಾಗಾಗಿ ಶಿವಮೊಗ್ಗದಲ್ಲಿ ಹೂವು ಕೊಳ್ಳಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಸದ್ಯ ತರಕಾರಿ ಮತ್ತು ಹಣ್ಣು ಮಾರಾಟಕ್ಕಷ್ಟೇ ಸರ್ಕಾರ ಅನುಮತಿ ನೀಡಿದ್ದು, ರೈತರು ಖುಷಿ ಪಟ್ಟಿದ್ದರು. ಆದರೆ ಪುಷ್ಪೋದ್ಯಮ ಮಾತ್ರ ಇನ್ನು ಸಂಕಷ್ಟದಲ್ಲಿಯೇ ಉಳಿದುಕೊಂಡಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200