ಹೊಸನಗರದ ಸೋನಲೆಯಲ್ಲಿ ಅಹೋರಾತ್ರಿ ಧರಣಿಯ ವಾರ್ನಿಂಗ್, ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟನೆ ಶುರು

030220 Sonale Protest for doctor 1

ಶಿವಮೊಗ್ಗ ಲೈವ್.ಕಾಂ | HOSANAGARA | 3 ಫೆಬ್ರವರಿ 2020 ಕರ್ತವ್ಯನಿರತ ವೈದ್ಯರನ್ನು ಬೇರೆಡೆಗೆ ನಿಯೋಜಿಸಿರುವುದರನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಹೊಸನಗರ ತಾಲೂಕು ಸೋನಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಾರುತಿ ಅವರನ್ನು ರಿಪ್ಪನ್’ಪೇಟೆ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇದರ ವಿರುದ್ಧ ಸೋನಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಗ್ರಾಮಸ್ಥರು ಪ್ರಾತಿಭಟನೆ ನಡೆಸುತ್ತಿದ್ದಾರೆ. ಸೋನಲೆ ಸುತ್ತಮುತ್ತಲು ಇವರೊಬ್ಬರೇ ವೈದ್ಯರಿದ್ದಾರೆ. ಇವರನ್ನು ಈಗ ರಿಪ್ಪನ್’ಪೇಟೆಗೆ ನಿಯೋಜಿಸಿದರೆ ಈ ಭಾಗದ ಗ್ರಾಮಸ್ಥರಿಗೆ … Read more

ತೋಟದ ಮನೆಗೆ ಆಕಸ್ಮಿಕ ಬೆಂಕಿ, ಧಗಧಗ ಉರಿದು ಹೋದ ವಸ್ತುಗಳು

ಶಿವಮೊಗ್ಗ ಲೈವ್.ಕಾಂ | SAGARA | 3 ಫೆಬ್ರವರಿ 2020 ತೋಟದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಲವು ವಸ್ತುಗಳು ಸುಟ್ಟು ಭಸ್ಮವಾಗಿದೆ. ಸಾಗರ ತಾಲೂಕು ಆವಿನಹಳ್ಳಿ ಗ್ರಾಮದ ಸಿಗಂದೂರು ರಸ್ತೆಯಲ್ಲಿ ಘಟನೆ ಸಂಭವಿಸಿದೆ. ನಾರಾಯಣಪ್ಪ ಎಂಬುವವರಿಗೆ ಸೇರಿದ ತೋಟದ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಬೈಕ್ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮವಾಗಿವೆ. ಜಿಲ್ಲಾ ಪಂಚಾಯಿತಿ ಸದಸ್ಯ ಭೀಮನೇರಿ ಶಿವಪ್ಪ, ಮಾಜಿ … Read more

ಅಪರಿಚಿತ ವಾಹನ ಡಿಕ್ಕಿ, ಭದ್ರಾವತಿ ಪೇಪರ್ ಟೌನ್ ನಿವಾಸಿ ಸ್ಥಳದಲ್ಲೆ ಸಾವು

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | BHADRAVATHI | 3 ಫೆಬ್ರವರಿ 2020 ಅಪರಿಚಿತ ವಾಹನ ಡಿಕ್ಕಿ ಹೊಡೆದು ಭದ್ರಾವತಿ ಪೇಪರ್ ಟೌನ್ ನಿವಾಸಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಜ್ಜಿನಿಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದೆ. ಕೇಬಲ್ ಮಂಜುನಾಥ ಗೌಡ (35) ಮೃತ ದುರ್ದೈವಿ. ಭದ್ರಾವತಿ ತಾಲೂಕು ಅಂತರಗಂಗೆಯಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಘಟನೆ ಸಂಭವಿಸಿದೆ. ಬೈಕ್’ನಲ್ಲಿ ಮನೆಗೆ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪೇಪರ್ … Read more

ಕಾಮಗಾರಿ ಗುದ್ದಲಿ ಪೂಜೆ ಸ್ಥಳದಲ್ಲಿದ್ದ ಫ್ಲೆಕ್ಸ್’ನಲ್ಲಿ ಕಣ್ಮರೆಯಾದ ಫೋಟೊ, ಮಾಜಿ ಮೇಯರ್ ಗರಂ

ಶಿವಮೊಗ್ಗ ಲೈವ್.ಕಾಂ | SHIMOGA | 1 ಫೆಬ್ರವರಿ 2020 ಅನುಪಿನಕಟ್ಟೆಯ ಕಸ ವಿಲೇವಾರಿ ಘಟಕದಿಂದ ಪುರದಾಳು ಗ್ರಾಮದವರೆಗಿನ ರಸ್ತೆ ಕಾಮಗಾರಿಗೆ ಇವತ್ತು ಗುದ್ದಲಿ ಪೂಜೆ ನೆರವೇರಿಸಲಾಯಿತು. ಆದರೆ ಈ ವೇಳೆ ಫ್ಲೆಕ್ಸ್’ನಲ್ಲಿ ಫೋಟೊ ಬಳಸದೆ ಇರುವುದಕ್ಕೆ ಶಿವಮೊಗ್ಗದ ಮಾಜಿ ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಮೇಯರ್ ಲತಾ ಗಣೇಶ್, ಮಾಜಿ ಉಪ ಮೇಯರ್ ಚನ್ನಬಸಪ್ಪ ಅವರು ಗುದ್ದಲಿ ಪೂಜೆ … Read more

ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ವಿರುದ್ಧ ಅವಿಶ್ವಾಸದ ನೊಟೀಸ್, ಕೂಡಲೇ ಸಭೆ ಕರೆಯುವಂತೆ ಸದಸ್ಯರ ಆಗ್ರಹ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA | 1 ಫೆಬ್ರವರಿ 2020 ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಲು ಹನ್ನೊಂದು ಸದಸ್ಯರು ಜಿಲ್ಲಾಧಿಕಾರಿ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ನೀಡಿದ್ದಾರೆ. ನಾಲ್ಕು ತಿಂಗಳಿನಿಂದ ಸಭೆಯನ್ನೇ ಕರೆದಿಲ್ಲ. ಅಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿಲ್ಲ. ಹೀಗಾಗಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಬೇಕು ಎಂದು ಮನವಿ ಮಾಡಿದ್ದಾರೆ. ಬಿಜೆಪಿಯ 6, ಕಾಂಗ್ರೆಸ್ ಮತ್ತು ಜೆಡಿಎಸ್‌ನ ತಲಾ ಒಬ್ಬರು, ಮೂವರು ಪಕ್ಷೇತರರು … Read more

ಪಿಕಪ್ ವಾಹನ, ಬೈಕ್ ನಡುವೆ ಭೀಕರ ಅಪಘಾತ, ತಂದೆ, ಮಗಳು ಸಾವು, ಆರೋಗ್ಯ ಕೇಂದ್ರದ ಮುಂದೆ ಜನಾಕ್ರೋಶ

ಶಿವಮೊಗ್ಗ ಲೈವ್.ಕಾಂ | SHIMOGA | 31 ಜನವರಿ 2020 ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ತಂದೆ ಮಗಳು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಿಪ್ಪನ್’ಪೇಟೆಯ ವರನಹೊಂಡ ಗ್ರಾಮದ ಬಳಿ ಘಟನೆ ನಡೆದಿದೆ. ರಾಘವೇಂದ್ರ ಮತ್ತು ಸಾಹಿತ್ಯ (11) ಮೃತರು.  ರಿಪ್ಪನ್’ಪೇಟೆಯ ಖಾಸಗಿ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆತರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಾಹಿತ್ಯ ಸ್ಥಳದಲ್ಲೆ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗಿದೆ. ಗಂಭೀರ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಯತು. ಆದರೆ ಮಾರ್ಗ … Read more

ಕುಪ್ಪಳ್ಳಿ ಕವಿಮನೆಯಲ್ಲಿ ಕಳ್ಳತನ ಮಾಡಿದ್ದ ಅಪರಾಧಿಗಳಿಗೆ ಶಿಕ್ಷೆ, ಎಷ್ಟು ವರ್ಷ ಜೈಲು, ದಂಡದ ಮೊತ್ತ ಎಷ್ಟು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | THIRTHAHALLI | 30 ಜನವರಿ 2020 ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತು ಕಳ್ಳತನವಾಗಿತ್ತು. ಈ ಪ್ರಕರಣದ ಅಪರಾಧಿಗಳಿಗೆ ಎರಡು ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಮೊದಲ ಅಪರಾಧಿ ಮೃತಪಟ್ಟಿದ್ದಾನೆ. ದಾವಣಗೆರೆ ಜಿಲ್ಲೆ ತುರಚಘಟ್ಟದ ಬೆಳಂದೂರಿನ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತನಾಗಿದ್ದಾನೆ. ಇನ್ನು, ರೇವಣಸಿದ್ದಪ್ಪಗೆ … Read more

ಕೆಲಸದಿಂದ ಹೊರಟವಳು ಮನೆ ತಲುಪಲಿಲ್ಲ, ಬೆಳಗ್ಗೆ ಬಾವಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಯುವತಿ ಮೃತದೇಹ

280120 girl suspicious death 1

ಶಿವಮೊಗ್ಗ ಲೈವ್.ಕಾಂ | SHIMOGA | 28 ಜನವರಿ 2020 ಬಾವಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಸಾಗರದ  ತಿಲಕ ರಸ್ತೆಯ ಮನೆಯೊಂದರ ಕಾಂಪೌಂಡ್’ನಲ್ಲಿರುವ ಬಾವಿಯಲ್ಲಿ, ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತಳನ್ನು ಸುಚಿತ್ರಾ ಶೆಟ್ಟಿ (25) ಎಂದು ಗುರುತಿಸಲಾಗಿದೆ. ತಿಲಕ ನಗರದ  ಆಭರಣದ ಅಂಗಡಿಯೊಂದರಲ್ಲಿ ಸುಚಿತ್ರಾ ಶೆಟ್ಟಿ ಕೆಲಸ ಮಾಡುತ್ತಿದ್ದಳು. ಸೋಮವಾರ ಕೆಲಸ ಮುಗಿಸಿ ಅಂಗಡಿಯಿಂದ ತೆರಳಿದ್ದ ಈಕೆ ಮನೆಗೆ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಇವತ್ತು ಬೆಳಗ್ಗೆ ಬಾವಿಯೊಳಗೆ ಸುಚಿತ್ರಾ … Read more

ಸೇತುವೆಯಿಂದ ಕೆಳಗೆ ಹಾರಿದ ಕಂಟೈನರ್ ಲಾರಿ, ಅಫಘಾತದಲ್ಲಿ ಲಾರಿ ಜಖಂ

ಶಿವಮೊಗ್ಗ ಲೈವ್.ಕಾಂ | SHIMOGA | 26 ಜನವರಿ 2020 ತಾಲೂಕಿನ ಸೂಡೂರು ಸೇತುವೆಯಿಂದ ಕುಮದ್ವತಿ ನದಿಗೆ ಶನಿವಾರ ಸಂಜೆ ಟ್ರಕ್‌ವೊಂದು ಕೆಳಕ್ಕೆ ಬಿದ್ದ ಪರಿಣಾಮ ಟ್ರಕ್ ಚಾಲಕನಿಗೆ ಕಾಲು ಹಾಗೂ ತಲೆಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಂಟೈನರ್ ಕೊಂಡೊಯ್ಯುತ್ತಿದ್ದ ಟ್ರಕ್‌ ಶಿವಮೊಗ್ಗ ಕಡೆಯಿಂದ ಹೊಸನಗರ ಮಾರ್ಗವಾಗಿ ಕುಂದಾಪುರಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತ ಸಂಭವಿಸಿದ ಸ್ಥಳ ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಗಡಿ ಪ್ರದೇಶದಲ್ಲಿದೆ. ಸ್ಥಳಕ್ಕೆ ಕುಂಸಿ ಹಾಗೂ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿದರು. ಆದರೆ … Read more

ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಬೇಟೆ, ಆನೆ ದಂತ, ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದವರು ಅಂಧರ್

ಶಿವಮೊಗ್ಗ ಲೈವ್.ಕಾಂ | SHIMOGA | 25 ಜನವರಿ 2020 ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ಇವತ್ತು  ಎರಡು ಪ್ರತ್ಯೇಕ ಕಾರ್ಯಾಚರಣೆ ನಡೆಸಿ, ಚಿರತೆ ಉಗುರು ಮತ್ತು ಆನೆ ದಂತ ಮಾರಾಟ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿದ್ದಾರೆ. ಕೇಸ್ 1 | ಆನೆ ದಂತ ಮಾರಾಟಕ್ಕೆ ಯತ್ನಿಸಿದವರು ಅರೆಸ್ಟ್ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರು ಚಿಕ್ಕಮಗಳೂರು ತಾಲೂಕು ನಾಲೂರು ಗ್ರಾಮದ ರಾಜಗೋಪಾಲ ಮತ್ತು ನೆರಟೂರು ಗ್ರಾಮದ … Read more