ಕುಟುಂಬಕ್ಕೆ ಬಹಿಷ್ಕಾರ, ಇವರೊಂದಿಗೆ ಮಾತನಾಡಿದರೆ ₹5000 ದಂಡ, ತಹಶೀಲ್ದಾರ್‌ಗೆ ದೂರು

family-lodges-complaint-to-tahasildhar-at-soraba.w

ಸೊರಬ: ಗ್ರಾಮಸ್ಥರು ಕುಟುಂಬವೊಂದಕ್ಕೆ (Family) ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಕುಟುಂಬ ಸದಸ್ಯರು ಸೊರಬ ತಹಶೀಲ್ದಾರ್‌ ಮಂಜುಳಾ ಹೆಗಡಾಳ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸೊರಬ ತಾಲ್ಲೂಕಿನ ಮೂಡದೀವಳಿಗೆ ಗ್ರಾಮದ ಮಂಜಪ್ಪ ಅವರ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಜಮೀನಿನ ಪಕ್ಕದಲ್ಲಿ ಕೃಷಿ ಚಟುವಟಿಕೆಗೆ ದಾರಿ ಬಿಡಲಾಗಿದೆ. ಆದರೆ ಜಮೀನಿನ ಮಧ್ಯ ಭಾಗದಲ್ಲೇ ದಾರಿ ಬಿಡುವಂತೆ ಒತ್ತಾಯಿಸಿ ಸಾಮಾಜಿಕ ಬಹಿಷ್ಕಾರ ಹಕಿದ್ದಾರೆ. ತಮ್ಮೊಂದಿಗೆ ಮಾತನಾಡುವವರಿಗೆ ₹5000 ದಂಡ ವಿಧಿಸುವುದಾಗಿ ಕೆಲವರು ನಿರ್ಣಯಿಸಿದ್ದಾರೆ ಎಂದು … Read more

ಆಯನೂರು ಸಮೀಪ ಮನೆ ಗೋಡೆ ಕುಸಿದು ವೃದ್ಧೆ ಸಾವು, ಮಹಿಳೆಗೆ ಗಂಭೀರ ಗಾಯ

House-wall-collapse-at-mandagatta

ಶಿವಮೊಗ್ಗ: ಭಾರಿ ಮಳೆಗೆ ಮನೆ ಗೋಡೆ ಕುಸಿದು (collapse) ವೃದ್ಧೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಶಿವಮೊಗ್ಗ ತಾಲೂಕು ಆಯನೂರು ಸಮೀಪದ ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿ ಗ್ರಾಮದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಮನೆಯ ಗೋಡೆ ಕುಸಿದು ವೃದ್ಧೆ ಸಿದ್ದಮ್ಮ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ಹೇಮಾವತಿ ಎಂಬುವವರಿಗೆ ಗಂಭೀರ ಗಾಯವಾಗಿದೆ. ಪರಶುರಾಮ, ಪಲ್ಲವಿ, ಚೇತನ್‌ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು … Read more

ರಿಪ್ಪನ್‌ಪೇಟೆ ಬಳಿ ಎರಡು ಮನೆಗಳ ಬಾಗಿಲು ಬೀಗ ಮುರಿದ ಕಳ್ಳರು

Ripponepete-Board-in-Hosaganagara-Shmoga-News-Live

SHIVAMOGGA LIVE NEWS, 3 DECEMBER 2024 ರಿಪ್ಪನ್‌ಪೇಟೆ : ಯಾರೂ ಇಲ್ಲದ ವೇಳೆ ಕಳ್ಳರು ಮನೆಯೊಳಗೆ ನುಗ್ಗಿ ಚಿನ್ನಾಭರಣ ಕಳ್ಳತನ (Theft) ಮಾಡಲಾಗಿದೆ. ಈ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್‌ ಅಪಘಾತ

ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು

Baby-swallo-bottel-cap.

SHIKARIPURA, 6 SEPTEMBER 2024 : ಮನೆಯಲ್ಲಿ ಆಟವಾಡುವಾಗ ಜ್ಯೂಸ್ ಬಾಟಲಿ ಮುಚ್ಚಳ (Cap) ನುಂಗಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಶಿಕಾರಿಪುರ ತಾಲೂಕು ಹರಗುವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗಂಗಾಧರಶಾಸ್ತ್ರಿ ಹಿರೇಮಠ, ಅನುಷಾ ದಂಪತಿಯ ಪುತ್ರ ನಂದೀಶ ಮೃತಪಟ್ಟ ಮಗು. ಜ್ಯೂಸ್ ಬಾಟಲಿ ಹಿಡಿದುಕೊಂಡು ಆಟವಾಡುತ್ತಿದ್ದಾಗ ಮುಚ್ಚಳ ನುಂಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಗಂಟಲಿನಿಂದ ಹೊರ ತೆಗೆಯುವ ಪ್ರಯತ್ನ ಮಾಡಿದರೂ ಪ್ರಯೋಜವಾಗಿಲ್ಲ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದಲ್ಲೆ ಮಗು ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದೆ. ವೈದ್ಯರು ಮುಚ್ಚಳ … Read more

ಹೊಳಲೂರಿನ ಮೂವರಿಗೆ ಜೀವಾವಧಿ ಶಿಕ್ಷೆ, 20 ಸಾವಿರ ದಂಡ, ಶಿವಮೊಗ್ಗ ಕೋರ್ಟ್‌ ತೀರ್ಪು

Shimoga District Court

SHIVAMOGGA LIVE NEWS | 5 JULY 2024 SHIMOGA : ವೈಯಕ್ತಿಕ ದ್ವೇಷಕ್ಕೆ ಹೊಳಲೂರಿನಲ್ಲಿ ಮಾರಕಾಸ್ತ್ರಗಳಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದ ಮೂವರಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ (Life Time) ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ನೀಡಿ ಆದೇಶಿಸಿದೆ. ಹೊಳಲೂರು ಗ್ರಾಮದ ರಿಯಾಸ್(22), ಮುನಿರಾಜು (33) ಮತ್ತು ಅರುಣ್(20) ಶಿಕ್ಷೆಗೊಳಗಾದವರು. 2020ರ … Read more

ತರಲಘಟ್ಟ ಬಳಿ ಭೀಕರ ಅಪಘಾತ, ಬೈಕ್‌ಗೆ ಆಂಬುಲೆನ್ಸ್‌ ಡಿಕ್ಕಿ, ಮೂವರು ಸಾವು

Ambulance

SHIVAMOGGA LIVE NEWS | 29 JUNE 2024 SHIKARIPURA : ಆಂಬುಲೆನ್ಸ್‌ (Ambulance) ಮತ್ತು ಬೈಕ್‌ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಮೃತರನ್ನು ಪ್ರಸನ್ನ (25), ಕಾರ್ತಿಕ್‌ (27) ಮತ್ತು ಅಜಯ್‌ (25) ಎಂದು ಗುರುತಿಸಲಾಗಿದೆ. ಆಂಬುಲೆನ್ಸ್‌ ಶಿವಮೊಗ್ಗದಿಂದ ಹಾವೇರಿ ಕಡೆಗೆ ತೆರಳುತ್ತಿತ್ತು. ಬೈಕ್‌ನಲ್ಲಿದ್ದವರು ಶಿಕಾರಿಪುರದಿಂದ ಹೊಸ ಜೋಗ ಕಡೆಗೆ ಹೋಗುತ್ತಿದ್ದರು. ಡಿಕ್ಕಿಯಾದ ಮೇಲೆ ಎರಡು ವಾಹನಗಳು ರಸ್ತೆಯಿಂದ ಹೊರಭಾಗಕ್ಕೆ ಹೋಗಿ ನಿಂತಿವೆ. ಭೀಕರ … Read more

BREAKING NEWS – ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ, ಶಿವಮೊಗ್ಗ ಮೂಲದ 13 ಮಂದಿ ಸಾವು

haveri-mishap.

SHIVAMOGGA LIVE NEWS | 28 JUNE 2024 HAVERI : ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿಯಾಗಿ (MISHAP) ಶಿವಮೊಗ್ಗ ಜಿಲ್ಲೆಯ 13 ಮಂದಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್‌ ಬಳಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. ಬೆಳಗಾವಿ ಸವದತ್ತಿಯ ರೇಣುಕಾ ಯಲ್ಲಮ್ಮ  ದೇವಿ ದರ್ಶನ ಪಡೆದು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ … Read more

ಮರದ ಕೆಳಗೆ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆ

new born baby found at holaluru village in Shimoga taluk

SHIVAMOGGA LIVE NEWS | 21 JUNE 2024 SHIMOGA : ಗ್ರಾಮದ ಮರವೊಂದರ ಬಳಿ ನವಜಾತ ಗಂಡು ಶಿಶುವಿನ (Baby) ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊಳಲೂರು ಗ್ರಾಮದ ಬನ್ನಿ ಮರದ ಕೆಳಗೆ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ. ಬೈಕ್‌ನಲ್ಲಿ ಬಂದ ಪುರುಷ ಮತ್ತು ಮಹಿಳೆ ಶಿಶುವನ್ನು ಅಲ್ಲಿ ಇಟ್ಟು ಹೋಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ … Read more

ಬೆಳ್ಳಂಬೆಳಗ್ಗೆ ಅರಸಾಳು ಬಳಿ ಕಾಡಾನೆ ದಾಳಿ, ವ್ಯಕ್ತಿ ಸಾವು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡು

Elephant-attack-near-arasalu-in-hosanagara

SHIVAMOGGA LIVE NEWS | 3 MAY 2024 ARASALU : ದರಗೆಲೆ ತರಲು ಕಾಡಿಗೆ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿದೆ. ಹೊಸನಗರ ತಾಲೂಕು ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ಬಳಿ ಕಾಡಿನಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಗ್ರಾಮದ ತಿಮ್ಮಪ್ಪ (58) ಮೃತರು. ಘಟನೆ ಸಂಭವಿಸಿದ್ದು ಹೇಗೆ? ದರಗೆಲೆ ತರಲು ತಿಮ್ಮಪ್ಪ ಅವರು ಇವತ್ತು ಬೆಳಗ್ಗೆ ಸಮೀಪದ ಕಾಡಿಗೆ ತೆರಳಿದ್ದರು. ಈ ಸಂದರ್ಭ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ತಿಮ್ಮಪ್ಪ … Read more

ಪುರಾತನ ಮನೆಯಲ್ಲಿ ಬೆಂಕಿ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ, ಹೇಗಾಯ್ತು ಘಟನೆ?

200-year-house-at-hurali-near-bykodu-sigandur-incident

SHIVAMOGGA LIVE NEWS | 28 APRIL 2024 BYKODU : ಸಮೀಪದ ಹುರುಳಿಯ ಮಹಾವೀರ ಜೈನ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಒಂದೇ ಮನೆಯಲ್ಲಿ ವಿಜಯ್ ಕುಮಾರ್ ಮತ್ತು ಮಹಾವೀರ ಅವರ ಕುಟುಂಬಗಳು ವಾಸವಾಗಿದ್ದವು. ಎರಡು ಕುಟುಂಬದ ಸದಸ್ಯರು ಶನಿವಾರ ಬೇರಾಳದ ಚಂದ್ರನಾಥ ಬಸದಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಹೊಗೆ ಕಂಡ ನೆರೆಹೊರೆಯವರು ಮನೆ ಬಾಗಿಲು ಒಡೆದು ಸಮಾರೋಪಾದಿಯಲ್ಲಿ … Read more