ಮತ್ತೆ ಕೈ ತಪ್ಪಿದ ಸಚಿವ ಸ್ಥಾನ, ತೀರ್ಥಹಳ್ಳಿಯಲ್ಲಿ ಪ್ರತಿಭಟನೆ, ಎಂಎಲ್ಎ ಪರವಾಗಿ ಫೇಸ್’ಬುಕ್’ನಲ್ಲಿ ಪಕ್ಷಾತೀತ ಬೆಂಬಲ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 21 ಆಗಸ್ಟ್ 2019 ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ತೀರ್ಥಹಳ್ಳಿಯಲ್ಲಿ ಪಕ್ಷಾತೀತವಾಗಿ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಪರವಾಗಿ ಪೋಸ್ಟ್’ಗಳು ಪ್ರಕಟಗೊಳ್ಳುತ್ತಿದ್ದರೆ, ಮತ್ತೊಂದೆಡೆ ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯು ನಡೆದಿದೆ. ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರಮುಖರು, ಆರಗ ಜ್ಞಾನೇಂದ್ರ ಅವರಿಗೆ ಉದ್ದೇಶಪುರ್ವಕವಾಗಿಯೇ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದು … Read more

‘ಶರಾವತಿ ನದಿಗಾಗಿ’ ಮಾದರಿಯಲ್ಲೇ ಸಾಗರ ತಾಲೂಕಲ್ಲಿ ಮತ್ತೊಂದು ಹೋರಾಟಕ್ಕೆ ಸಿದ್ಧತೆ, ಹೋರಾಟ ಸಮಿತಿ ಅಸ್ಥಿತ್ವಕ್ಕೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಆಗಸ್ಟ್ 2019 ‘ಶರಾವತಿ ನದಿಗಾಗಿ’ ಹೋರಾಟದ ಮಾದರಿಯಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಹೋರಾಟ ಸಮಿತಿಯು ಅಸ್ಥಿತ್ವಕ್ಕೆ ಬಂದಿದೆ. ಕಲ್ಲೊಡ್ಡು ಜಲಾಶಯ ನಿರ್ಮಾಣ ವಿರೋಧಿಸಿ ಹೋರಾಟಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ. ಕಲ್ಲೊಡ್ಡು ಯೋಜನೆ ವಿರೋಧ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು ಗೌರವಾಧ್ಯಕ್ಷರಾಗಿ ಬರೂರು ವೀರೇಶ್ ಗೌಡ, ಅಧ್ಯಕ್ಷರಾಗಿ ಟಾಕಪ್ಪ ಕುಂದೂರು, ಕಾರ್ಯದರ್ಶಿಯಾಗಿ ಮಂಜುನಾಥ್ ಮಡಿವಾಳನಕಟ್ಟೆ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹೇಗಿರುತ್ತೆ ಯೋಜನೆ ವಿರುದ್ಧದ ಹೋರಾಟ? ಶರಾವತಿ ನದಿಗಾಗಿ ಹೋರಾಟದ … Read more

ಮತ್ತೊಮ್ಮೆ ಭದ್ರಾ ಜಲಾಶಯದಿಂದ ನೀರು ಹೊರಕ್ಕೆ, ನಾಲ್ಕು ಗೇಟುಗಳು ಓಪನ್

100819 Bhadra Dam Water Released 1

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 19 ಆಗಸ್ಟ್ 2019 ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟುಗಳನ್ನು ತೆರೆದು ಮತ್ತೊಮ್ಮೆ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 185.1 ಅಡಿ ತಲುಪಿದ ಹಿನ್ನೆಲೆಯಲ್ಲಿ ಗೇಟ್ ತೆರೆಯಲಾಗಿದೆ. ಗೇಟನ್ನು ಅರ್ಧ ಅಡಿಯಷ್ಟು ಮೇಲಕ್ಕೆತ್ತಲಾಗಿದ್ದು, 4,400 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಭದ್ರಾ ಹಿನ್ನೀರು ಮಳೆ ನಿರಂತರವಾಗಿ ಆಗುತ್ತಿರುವುದರಿಂದ, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚುತ್ತಿದೆ.   ಆಗಸ್ಟ್ 10ರಂದು ಜಲಾಶಯದ ಗೇಟು ತೆಗೆದು, 6 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. … Read more

ಮಾಹಿತಿ ಕೊಟ್ಟರು ಬರ್ತಿಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ಪುರದಾಳು ಡ್ಯಾಂ ಕಥೆ ಏನಾಗುತ್ತೋ ಅಂತಾ ಗ್ರಾಮಸ್ಥರ ಆತಂಕ

140819 Purdal Dam Kodi at Rain 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 14 ಆಗಸ್ಟ್ 2019 ಕಳೆದ ವಾರ ಸುರಿದ ಭಾರಿ ಮಳೆ ಮತ್ತು ನೀರಿನ ರಭಸಕ್ಕೆ, ಶಿವಮೊಗ್ಗ ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಭೂಮಿ ಕೊಚ್ಚಿ ಹೋಗಿದೆ. ಚೆಕ್ ಡ್ಯಾಂನ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ನೀರು ರಭಸವಾಗಿ ಹರಿಯಲು ಆರಂಭವಾದಂತೆ ಡ್ಯಾಂ ಸಮೀಪದ ಕೋಡಿ ಕೊಚ್ಚಿ ಹೋಗುವ ಆತಂಕ ಎದುರಾಗಿತ್ತು. ಹಾಗಾಗಿ ಗ್ರಾಮಸ್ಥರು ಕೂಡಲೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಆದರೆ ಯಾರೊಬ್ಬರು ಇತ್ತ ಸುಳಿಯಲಿಲ್ಲ. ಈವರೆಗು ಅಧಿಕಾರಿಗಳು … Read more

ಗುಡ್ಡ ಕುಸಿದು ಬೆಳೆ ಹಾನಿಯಾದ ತೀರ್ಥಹಳ್ಳಿಯ ಗ್ರಾಮಕ್ಕೆ ಸಿಎಂ ಭೇಟಿ, ಜಾನುವಾರು ಕಳೆದುಕೊಂಡವರಿಗೆ ಸ್ಥಳದಲ್ಲೆ ಚೆಕ್

130819 Yedyurappa Visits Hegalathi in Thirthahalli 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 13 ಆಗಸ್ಟ್ 2019 ಭಾರಿ ಮಳೆಗೆ ಗುಡ್ಡ ಕುಸಿದು ಸುಮಾರು 40 ಎಕರೆ ಜಮೀನು ಹಾನಿಯಾಗಿರುವ ಹೆಗಲತ್ತಿ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದರು. ಜಮೀನು ಹಾನಿಯಾಗಿರುವುದನ್ನು ಪರಿಶೀಲನೆ ನಡೆಸಿದ ಸಿಎಂ, ರೈತರಿಗೆ ಪರಿಹಾರದ ಭರವಸೆ ನೀಡಿದರು. ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ 40 ಎಕರೆಯಷ್ಟು ಜಮೀನು ಹಾನಿಯಾಗಿದೆ. ಅಡಕೆ ಮರಗಳು ನೆಲಸಮವಾಗಿವೆ. ಬಾಳೆ ಬೆಳೆ ಹಾನಿಯಾಗಿದೆ. ವರದಿ ಬಳಿಕ ಪರಿಹಾರ ಇನ್ನು, ಹೆಗಲತ್ತಿ ಗ್ರಾಮದಲ್ಲಿ ಬೆಳೆಹಾನಿ ಕುರಿತು ಕಂದಾಯ … Read more

ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾಮ ಜಲಾವೃತ, ಕನ್ನಂಗಿಯಲ್ಲಿ ಸೇತುವೆ ಕುಸಿತ, ಮಳೆಯಿಂದಾಗಿ ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

100819 Kannangi Bridge Collapse 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಆಗಸ್ಟ್ 2019 ಸತತ ಮಳೆಯಿಂದಾಗಿ ತೀರ್ಥಹಳ್ಳಿ ತಾಲೂನಲ್ಲಿ ಭಾರಿ ಹಾನಿ ಸಂಭವಿಸಿದೆ. ಸೇತುವೆಗಳು ಕುಸಿದು ಬಿದ್ದಿವೆ. ರಸ್ತೆ ಸಂಪರ್ಕ ಕಡಿತವಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮೂರನೆ ದಿನವು ರಾಮ ಮಂಟಪದ ಮೇಲೆ ನೀರು ಭಾರಿ ಮಳೆಗೆ ತುಂಗಾ ನದಿ ತುಂಬಿ ಹರಿಯುತ್ತಿದೆ. ರಾಮ ಮಂಟಪದ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದೆ. ಕ್ಷಣ ಕ್ಷಣಕ್ಕು ತುಂಗಾ … Read more

ಭದ್ರಾ ಜಲಾಶಯದ ಕ್ರಸ್ಟ್ ಗೇಟ್’ಗಳು ಓಪನ್, ನದಿಗೆ ನೀರು ರಿಲೀಸ್

100819 Bhadra Dam Water Released 1

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಆಗಸ್ಟ್ 2019 ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟುಗಳನ್ನು ತೆರೆಯಲಾಗಿದೆ. ನದಿಗೆ ಆರು ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸಂಜೆ 4 ಗಂಟೆಗೆ ಭದ್ರಾ ಜಲಾಶಯದ ಗೇಟುಗಳನ್ನು ತೆರೆಯಲಾಯಿತು. ಸದ್ಯ ನದಿಗೆ ಆರು ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕ್ರಸ್ಟ್ ಗೇಟುಗಳನ್ನು ತೆಗೆಯುತ್ತಿದ್ದಂತೆ ಜನರು ಉತ್ಸಾಹದಿಂದ ಕೂಗಿದರು. ಇನ್ನು, ಡ್ಯಾಂನಿಂದ ನೀರು ಬಿಡುತ್ತಿರುವುದರಿಂದ, ನದಿ ಪಾತ್ರದ ಜನರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | … Read more

ಮತ್ತೆ ಫೀಲ್ಡಿಗಿಳಿದರು ಕಾಗೋಡು ತಿಮ್ಮಪ್ಪ, ಅನಾರೋಗ್ಯ ಲೆಕ್ಕಿಸದೆ ನೆರೆ ಸಂತ್ರಸ್ತರ ನೋವು ಆಲಿಸಿದ ಮಾಜಿ ಮಿನಿಸ್ಟರ್

080819 Kagodu Thimmappa Visits Ripponpete 1

ಶಿವಮೊಗ್ಗ ಲೈವ್.ಕಾಂ | ರಿಪ್ಪನ್’ಪೇಟೆ | 08 ಆಗಸ್ಟ್ 2019 ಹದಗೆಟ್ಟ ಆರೋಗ್ಯ ಲೆಕ್ಕಕ್ಕಿಲ್ಲ. ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು ಕ್ಯಾರೆ ಅನ್ನಲ್ಲಿಲ್ಲ. ಭಾರಿ ಮಳೆಯಿಂದ ಜನರು ಸಂಕಷ್ಟಕ್ಕೀಡಾದ ವಿಚಾರ ತಿಳಿಯುತ್ತಿದ್ದಂತೆ ಫೀಲ್ಡಿಗಿಳಿದರು ಮಾಜಿ ಮಿನಿಸ್ಟರ್. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇವತ್ತು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಮಳೆ ಹಾನಿ ಕುರಿತು ಜನರಿಂದ ಮಾಹಿತಿ ಪಡೆದರು. ರಿಪ್ಪನ್’ಪೇಟೆ ಸುತ್ತಮುತ್ತಲು ವಿವಿಧ ಗ್ರಾಮಗಳಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ … Read more

ತೀರ್ಥಹಳ್ಳಿಯಲ್ಲಿ ಪ್ರವಾಹ ಭೀತಿ, ಅಲರ್ಟ್ ಇರುವಂತೆ ಎಂಎಲ್ಎ ಸೂಚನೆ, ಮರ ಬಿದ್ದು ಇಬ್ಬರಿಗೆ ಗಾಯ

060818 Heavy Rain at Thirthahalli Tunga river Bridge 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 6 ಆಗಸ್ಟ್ 2019 ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಇನ್ನು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಭಾರಿ ಮಳೆಯಿಂದಾಗಿ ತುಂಗೆ, ಮಾಲತಿ ಮತ್ತು ಕುಶಾವತಿ ನದಿಗಳು ತುಂಬಿ ಹರಿಯುತ್ತಿವೆ. ಮಳೆ ಪ್ರಮಾಣ ಹೆಚ್ಚಾದರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಭೀತಿ ಎದುರಾಗಿದೆ. ಹಾಗಾಗಿ ನದಿ ಪಾತ್ರದಲ್ಲಿ ವಾಸಿಸುವವರು ಎಚ್ಚರದಿಂದ ಇರುವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ. … Read more

ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ, ಮರ ಬಿದ್ದ ಸ್ಥಳ ಪರಿಶೀಲನೆ

060819 DC Visit Thirthahalli 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 6 ಆಗಸ್ಟ್ 2019 ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಿನ್ನೆ ಧರೆ ಕುಸಿದು ಮೃತಪಟ್ಟಿದ್ದ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕನ್ನಂಗಿಯ ಗ್ರಮ ಪಂಚಾಯಿತಿಯ ಕಳವತ್ತಿಯ ರೈತ ರಮೇಶ್ ಮೃತಪಟ್ಟಿದ್ದರು. ಜಿಲ್ಲಾಧಿಕಾರಿ ಅವರು ಇವತ್ತು ಆಸ್ಪತ್ರೆಗೆ ಭೇಟಿ ನೀಡಿ, ಮೃತದೇಹ ವೀಕ್ಷಿಸಿದರು. ನಂತರ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಜೆಸಿ ಆಸ್ಪತ್ರೆಯ ಮೂಲಸೌಕರ್ಯ ಕುರಿತು ಪರಿಶೀಲನೆ ನಡೆಸಿ, ವೈದ್ಯಾಧಿಕಾರಿಯಿಂದ ಮಾಹಿತಿ ಪಡೆದರು. ಇದೇ ವೇಳೆ … Read more