ತೀರ್ಥಹಳ್ಳಿಯಲ್ಲಿ ಜೋರು ಮಳೆ, ನಾಳೆ ಸ್ಕೂಲ್’ಗಳಿಗೆ ರಜೆ, ಮರಗಳು ಧರೆಗೆ, ಗದ್ದೆಯಲ್ಲಿ ನಿಂತ ನೀರು

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 5 ಆಗಸ್ಟ್ 2019 ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಕೆಲವು ಕಡೆ ಮರ ಬಿದ್ದ ವರದಿಯಾಗಿದೆ. ತೀರ್ಥಹಳ್ಳಿ ತಾಲೂಕಿನಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 69.6 ಮಿ.ಮೀ ಮಳೆಯಾಗಿದೆ. ಇನ್ನು, ಆಗುಂಬೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, 110 ಮಿ.ಮೀ ಮಳೆ ದಾಖಲಾಗಿದೆ. ನಿರಂತರ ಮಳೆಯಿಂದಾಗಿ ಗದ್ದೆಗಳು ಜಲಾವೃತವಾಗಿವೆ. ಕೆಲವು ಕಡೆಗೆ ವಿದ್ಯುತ್ ವ್ಯತ್ಯೆಯದ ವರದಿಯಾಗಿದೆ. ಗಾಳಿ, ಮಳೆಗೆ ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆ ಮುಂಭಾಗ ಮರ … Read more

ಭದ್ರಾವತಿಯಲ್ಲಿ ಪಿಯುಸಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ, ಮನೆಯಲ್ಲೇ ಕತ್ತು ಸೀಳಿ ಕೊಲೆ

BHADRAVATHI-MAP-GRAPHICS

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 4 ಆಗಸ್ಟ್ 2019 ಭದ್ರಾವತಿಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯ ಬರ್ಬರ ಹತ್ಯೆ ಮಾಡಲಾಗಿದೆ. ಮನೆಯಲ್ಲೇ ವಿದ್ಯಾರ್ಥಿನಿಯ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಭದ್ರಾವತಿಯ ಕಾಳಿಂಗನಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದಿರಾ (16) ಕೊಲೆಯಾಗಿರುವ ವಿದ್ಯಾರ್ಥಿನಿ. ರಾತ್ರಿಯೇ ಇಂದಿರಾಳ ಹತ್ಯೆಯಾಗಿರುವ ಶಂಕೆಯಿದ್ದು, ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್, ಭದ್ರಾವತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆಗೆ ನಿಖರ … Read more

ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್’ಶಿಪ್, ಲ್ಯಾಪ್’ಟಾಪ್ ವಿತರಣೆ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 2 ಆಗಸ್ಟ್ 2019 ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ, ಶಾಸಕ ಆರಗ ಜ್ಞಾನೇಂದ್ರ ಅವರು ಸ್ಕಾಲರ್’ಶಿಪ್ ಮತ್ತು ಲ್ಯಾಪ್’ಟಾಪ್ ವಿತರಿಸಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದೇ ವೇಳೆ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ವಿದ್ಯಾರ್ಥಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಂಡು, ಉನ್ನತ ಸ್ಥಾನಕ್ಕೇರುವಂತೆ ಸಲಹೆ ನೀಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ತಹಶೀಲ್ದಾರ್ ಭಾಗ್ಯ, ಪಟ್ಟಣ ಪಂಚಾಯಿತಿ … Read more

ತೀರ್ಥಹಳ್ಳಿಯಲ್ಲಿ ಆಷಾಢ ಮಾಸದ ‘ಆಟಿಡು ಒಂಜಿ’ ದಿನ, ಏನಿದರ ವಿಶೇಷ? ಹೇಗಿತ್ತು ಗೊತ್ತಾ ಕಾರ್ಯಕ್ರಮ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 2 ಆಗಸ್ಟ್ 2019 ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ತೀರ್ಥಹಳ್ಳಿಯಲ್ಲಿ ಆಷಾಢ ಮಾಸದ ಆಟಿಡು ಒಂಜಿ ದಿನ ಆಯೋಜಿಸಲಾಯಿತು. ಇದರ ಅಂಗವಾಗಿ, ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಒಟ್ಟಿಗೆ ಸವಿದು ಮಹಿಳೆಯರು ಸಂಭ್ರಮಿಸಿದರು. ಪಟ್ಟಣದ ಬಂಟರ ಭವನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ ಎಂ ಶೆಟ್ಟಿ, ನಮ್ಮ ಸಂಸ್ಕೃತಿಯಲ್ಲಿ ಆಷಾಢ ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಧಾರ್ಮಿಕ, ಜಾನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಈ ಮಾಸದಲ್ಲಿ … Read more

ಮೂರು ಬಾರಿ ಶಾಸಕರಾದ ಹರತಾಳು ಹಾಲಪ್ಪ ಸಚಿವರಾಗಬೇಕು, ಆಗ್ರಹ

Haratalu-Halappa

ಶಿವಮೊಗ್ಗ ಲೈವ್.ಕಾಂ | ಸಾಗರ | 1 ಆಗಸ್ಟ್ 2019 ಶಾಸಕ ಹರತಾಳು ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಾಗರದ ಆರ್ಯ ಈಡಿಗರ ಸಂಘ ಒತ್ತಾಯಿಸಿದೆ. ಹಾಲಪ್ಪ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಈಡಿಗ ಸಮುದಾಯಕ್ಕೆ ನ್ಯಾಯ ಒದಗಿಸಿದಂತೆ ಆಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಪರಶುರಾಮಪ್ಪ ತಿಳಿಸಿದ್ದಾರೆ. ಈಡಿಗ ಸಮುದಾಯ, ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಈ ಸಮುದಾಯದಿಂದ ಆಯ್ಕೆಯಾಗಿರುವ ಹರತಾಳು ಹಾಲಪ್ಪ, ಮುರು ಬಾರಿ … Read more

ಹೊಸನಗರದ ಅಂಗಡಿಗಳು, ಗ್ಯಾರೇಜ್, ಹೊಟೇಲ್, ಬೇಕರಿಗಳಲ್ಲಿ ಪೊಲೀಸ್, ವಿವಿಧ ಇಲಾಖೆ ಅಧಿಕಾರಿಗಳಿಂದ ತಲಾಷ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಜುಲೈ 2019 ಹೊಸನಗರದಲ್ಲಿ ಇವತ್ತು ಆಪರೇಷನ್ ಮುಸ್ಕಾನ್ ನಡೆಸಲಾಗಿದೆ. ಅಂಗಡಿ, ಗ್ಯಾರೇಜ್, ಹೊಟೇಲ್, ಬೇಕರಿ ಸೇರಿದಂತೆ ವಿವಿಧೆಡೆ ಕಾರ್ಮಿಕ ಇಲಾಖೆ, ಪೊಲೀಸರು, ಮಕ್ಕಳ ಸಹಾಯವಾಣಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ನೇತೃತ್ವದಲ್ಲಿ ಭರ್ಜರಿ ತಪಾಸಣೆ ನಡೆಸಲಾಗಿದೆ. 14 ವರ್ಷದೊಳಗಿನ ಬಾಲ ಕಾರ್ಮಿಕರು, 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆಯೆ ಎಂಬುದನ್ನು ಪರಿಶೀಲಿಸಲಾಯಿತು. ಹೊಸನಗರದ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು ತಪಾಸಣೆ ನಡೆಸಿ, ಬಾಲ ಕಾರ್ಮಿಕ ಪದ್ಧತಿ … Read more

ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಿದವರಿಗೆ ಶಾಕ್, ಸ್ಥಳಕ್ಕೆ ಡಿಸಿ ಭೇಟಿ, ಗುತ್ತಿಗೆಯನ್ನೇ ರದ್ದುಗೊಳಿಸಿ ಆದೇಶ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 25 ಜುಲೈ 2019 ನಿಯಮ ಉಲ್ಲಂಘಿಸಿ ನದಿ ಮಧ್ಯ ಭಾಗದಿಂದ ಮರಳು ತೆಗೆಯುತ್ತಿದ್ದ ಆರೋಪದ ಮೇಲೆ, ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿಯಲ್ಲಿ ಮರಳು ಗಣಿಗಾರಿಕೆಯ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರ ಆದೇಶದ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಹುಣಸವಳ್ಳಿಯ ಸರ್ವೇ ನಮಬರ್ 11,12 ಮತ್ತು 13ರಲ್ಲಿ ಮರಳು ಗಣಿಗಾರಿಕೆ ನಡೆಸಲು ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿದೆ. ಭದ್ರಾವತಿಯ ಬಸವೇಶ್ವರ ಟ್ರೇಡಿಂಗ್ ಸಂಸ್ಥೆಗೆ 2018ರಿಂದ ಐದು ವರ್ಷ ಮರಳು ಗಣಿಗಾರಿಕೆಗೆ … Read more

ಕುವೆಂಪು ವಿವಿ ಪ್ರೊಫೆಸರ್ ಮನೆಯಲ್ಲಿ ಚಿನ್ನ, ವಜ್ರದ ಆಭರಣ ಕದ್ದಿದ್ದ ಕಳ್ಳ ಒಂದೇ ದಿನದಲ್ಲಿ ಭದ್ರಾವತಿ ಪೊಲೀಸರ ಬಲೆಗೆ

Kuvempu-University

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 22 ಜುಲೈ 2019 ಕುವೆಂಪು ವಿಶ್ವವಿದ್ಯಾಲಯದ ಪ್ರೊಫೆಸರ್ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು, ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ್ದಾರೆ. ಈತನಿಂದ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಶಂಕರಘಟ್ಟದಲ್ಲಿರುವ ಕುವೆಂಪು ವಿವಿ ಕ್ಯಾಂಪಸ್’ನ ಸಿಬ್ಬಂದಿಗಳ ಕ್ವಾರ್ಟರ್ಸ್’ನಲ್ಲಿ ಕಳ್ಳತನವಾಗಿತ್ತು. ಪ್ರೊಫೆಸರ್ ನಮ್ರತಾ ಅವರ ಮನೆಯಲ್ಲಿದ್ದ 7.87 ಲಕ್ಷ ರೂ. ಮೌಲ್ಯದ 217.5 ಗ್ರಾಂ ತೂಕದ ಬಂಗಾರ ಮತ್ತು ವಜ್ರದ ಆಭರಣಗಳು ಕಳುವಾಗಿದ್ದವು. ಜುಲೈ 20ರಂದು ಕಳ್ಳತನವಾಗಿತ್ತು. … Read more

ಸೊರಬದಲ್ಲಿ ಯುವತಿ ಕೊಲೆ ಪ್ರಕರಣ, ಎರಡೇ ದಿನದಲ್ಲಿ ಆರೋಪಿ ಅರೆಸ್ಟ್, ಹತ್ಯೆಗೆ ಕಾರಣವೇನು ಗೊತ್ತಾ?

SORABA MAP GRAPHICS 1

ಶಿವಮೊಗ್ಗ ಲೈವ್.ಕಾಂ | ಸೊರಬ | 17 ಜುಲೈ 2019 ಕಾನಕೇರಿ ಬಡಾವಣೆಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸೊರಬ ಪೊಲೀಸರು ಎರಡೇ ದಿನದಲ್ಲಿ ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ, ಯುವಕನೊಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ರಮೇಶ್ (25) ಬಂಧಿತ ಯುವಕ. ಜು.15ರಂದು ಅಶ್ವಿನಿ ಕಲ್ಲಹಳ್ಳಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ತನಿಖೆ ಆರಂಭಿಸಿದ ಸೊರಬ ಪೊಲೀಸರಿಗೆ ಪ್ರಿಯಕರನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಮೊಬೈಲ್ ನೆಟ್’ವರ್ಕ್’ನಿಂದ ಸಿಕ್ತು ಸುಳಿವು ಅಶ್ವಿನಿ ಮತ್ತು ರಮೇಶ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಅಶ್ವಿನಿ ಅನುಮಾನಾಸ್ಪದವಾಗಿ … Read more

ಕರೆಂಟ್ ಶಾಕ್, ಅಡಕೆ ತೋಟಕ್ಕೆ ಅಲುಮಿನಿಯಮ್ ಏಣಿ ಕೊಂಡೊಯ್ಯುತ್ತಿದ್ದ ರೈತ ಸಾವು

THIRTHAHALLI MAP GRAPHICS 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 16 ಜುಲೈ 2019 ಅಡಕೆ ತೋಟದಲ್ಲಿ ಕೃಷಿ ಕೆಲಸಕ್ಕೆ ಅಲುಮಿನಿಯಮ್ ಏಣಿ ತರುವಾಗ ವಿದ್ಯುತ್ ತಂತಿಗೆ ತಗುಲಿ, ರೈತರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಾಲೂಕಿನ ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರಳಿಯಲ್ಲಿ ನಡೆದಿದೆ. ನಾಗಪ್ಪಗೌಡ (64) ಮೃತ ರೈತ. ತೋಟದಲ್ಲಿ ಕೆಲಸಕ್ಕಾಗಿ ಅಲುಮಿನಿಯಮ್ ಏಣಿ ತರುವಾಗ ಘಟನೆ ನಡೆದಿದೆ. ಮೆಸ್ಕಾಂ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ … Read more