ಸೊರಬದಲ್ಲೂ ಶರಾವತಿ ಹೋರಾಟ ಜೋರು, ಬೆಳಗ್ಗೆಯಿಂದ ಅಂಗಡಿಗಳು ಬಂದ್, ವಾಹನ ಸಂಚಾರ ಸ್ಥಗಿತ

ಶಿವಮೊಗ್ಗ ಲೈವ್.ಕಾಂ | ಸೊರಬ | 10 ಜುಲೈ 2019 ಶರಾವತಿ ನದಿಗಾಗಿ ನಡೆದ ಹೋರಾಟಕ್ಕೆ ಸೊರಬ ತಾಲೂಕಿನಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಸೊರಬ ಪಟ್ಟಣ ಬಂದ್ ಆಗಿತ್ತು. ಮೆಡಿಕಲ್ ಶಾಪ್, ಅಸ್ಪತ್ರೆ ಹೊರತು ಮತ್ತಿನ್ಯಾವ ಅಂಗಡಿಗಳು ಸೊರಬದಲ್ಲಿ ಬಾಗಿಲು ತೆಗೆದಿರಲಿಲ್ಲ. ವ್ಯಾಪಾರ ವಹಿವಾಟು ಸ್ಥಬ್ಧವಾಗಿತ್ತು. ಖಾಸಗಿ ಬಸ್’ಗಳು ರಸ್ತೆಗಿಳಿದಿರಲಿಲ್ಲ. ವಾಹನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ಸೊರಬದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣದ ಸರ್ಕಲ್’ವರೆಗೆ ಬಂದು ಅಲ್ಲಿಂದ ಪುನಃ ಶ್ರೀ … Read more

ಶರಾವತಿ ನದಿಗಾಗಿ ಹೊಸನಗರ ಸಂಪೂರ್ಣ ಬಂದ್, ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ ಪ್ರತಿಭಟನೆ

100719 Hosanagara Bandh For Sharavati River 1

ಶಿವಮೊಗ್ಗ ಲೈವ್.ಕಾಂ | ಹೊಸನಗರ | 10 ಜುಲೈ 2019 ಶರಾವತಿ ನದಿಗಾಗಿ ಕರೆ ನೀಡಿದ್ದ ಜಿಲ್ಲೆ ಬಂದ್’ಗೆ ಹೊಸನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಹಾಗಾಗಿ ಅಂಗಡಿ ಮುಂಗಟ್ಟು ಬಂದ್ ಆಗದ್ದವು. ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿತ್ತು. ಹಾಗಾಗಿ ಜನ ಸಂಚಾರವೂ ಕಡಿಮೆಯಾಗಿತ್ತು. ಇನ್ನು, ರಸ್ತೆಯಲ್ಲಿ ವಾಹನಗಳು ವಿರಳವಾಗಿದ್ದವು. ಮತ್ತೊಂದೆಡೆ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಳೆಯನ್ನೂ ಲೆಕ್ಕಿಸದೆ … Read more

ತೀರ್ಥಹಳ್ಳಿ ಸಂಪೂರ್ಣ ಸ್ಥಬ್ಧ, ಅಂಗಡಿಗಳು ಬಂದ್, ಖಾಸಗಿ ಬಸ್ ಸ್ಟಾಪ್

100719 Sharavathi Protest at thirthahalli 1

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 10 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರ್ಕಾರದ ಯೋಜನೆ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬಂದ್ ಮಾಡಲಾಯಿತು. ಜನರು ಸ್ವಯಂ ಪ್ರೇರಿತವಾಗಿ ಬಂದ್’ಗೆ ಬಂಬಲ ಘೋಷಿಸಿದ್ದರು. ಬಂದ್ ಹಿನ್ನೆಲೆ ತೀರ್ಥಹಳ್ಳಿಯಲ್ಲಿ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಬ್ಯಾಂಕು, ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದವು. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಇನ್ನು, ಶಿವಮೊಗ್ಗ – ಉಡುಪಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುತ್ತಿದ್ದ … Read more

ಶರಾವತಿ ನದಿಗಾಗಿ ಸಾಗರ ಸಂಪೂರ್ಣ ಬಂದ್, ಹಳ್ಳಿ ಹಳ್ಳಿಯಲ್ಲೂ ನಡೆಯುತ್ತಿದೆ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿ ಸಾಗರದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ತಾಲೂಕು ಕೇಂದ್ರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಸಾಗರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿವೆ. ಖಾಸಗಿ ಬಸ್ ಸೇವೆ ಸ್ಥಗಿತಗೊಂಡಿರುವುದರಿಂದ, ಸದಾ ಗಿಜಿಗುಡುತ್ತಿದ್ದ ಸಾಗರ ಖಾಸಗಿ ಬಸ್ ನಿಲ್ದಾಣದ ಸ್ಥಬ್ಧವಾಗಿದೆ. ಇನ್ನು ವಾಹನ ಸಂಚಾರವೂ ವಿರಳವಾಗಿದೆ. ಸಾಗರದ ಗ್ರಾಮೀಣ ಭಾಗದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಸಿಗಂದೂರಿಗೆ … Read more

ಹೊಸನಗರದ ನಗರದಲ್ಲಿ ಟೈರ್’ಗೆ ಬೆಂಕಿ ಹಚ್ಚಿ ಆಕ್ರೋಶ, ಶರಾವತಿ ನದಿಗಾಗಿ ಬೈಕ್ ಜಾಥಾ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಜುಲೈ 2019 ಭಾರೀ ಮಳೆಯ ನಡುವೆಯೂ ಹೊಸನಗರದ ನಗರ ಹೋಬಳಿಯಲ್ಲಿ ಶರಾವತಿ ನದಿಗಾಗಿ ಬಂದ್ ಆಚರಿಸಲಾಯಿತು. ನಗರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆ ಕಾರ್ಯಕರ್ತರು, ಸಾರ್ವಜನಿಕರು, ಟೈರ್’ಗೆ ಬೆಂಕಿ ಹಚ್ಚಿ, ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ನಗರದ ವಿವಿಧೆಡೆ ಬೈಕ್ ಜಾಥಾ ನಡೆಸಲಾಯಿತು. ಶರಾವತಿ ನದಿ ಪರವಾಗಿ ಘೋಷಣೆ ಕೂಗಿದ ಜನರು, ಸರ್ಕಾರ ಡಿಪಿಆರ್ ಸಿದ್ಧಪಡಿಸುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಗರದ ನಾಡ ಕಚೇರಿ, ಬ್ಯಾಂಕ್, … Read more

ಶರಾವತಿ ನದಿಗಾಗಿ ಸೊರಬದಲ್ಲೂ ಬಂದ್, ರಸ್ತೆಗಿಳಿಯದ ಬಸ್ಸುಗಳು, ಶಾಲೆಗಳಿಗೆ ರಜೆ, ಹೇಗಿದೆ ಬಂದ್ ವಾತಾವರಣ?

ಶಿವಮೊಗ್ಗ ಲೈವ್.ಕಾಂ | ಸೊರಬ | 10 ಜುಲೈ 2019 ಶರಾವತಿ ನದಿಗಾಗಿ ಕರೆ ನೀಡಿರುವ ಶಿವಮೊಗ್ಗ ಜಿಲ್ಲೆ ಬಂದ್’ಗೆ ಸೊರಬ ತಾಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಸೊರಬದಲ್ಲಿ ಖಾಸಗಿ ಬಸ್’ಗಳು ರಸ್ತೆ ಇಳಿದಿಲ್ಲ. ಆಟೋಗಳ ಸಂಚಾರ ವಿರಳವಾಗಿದೆ. ಅಂಗಡಿಗಳು ಬಂದ್ ಆಗಿವೆ. ಸೊರಬದಲ್ಲಿ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200 ಸುದ್ದಿಗಾಗಿ ಮೊಬೈಲ್ ನಂಬರ್ | 9964634494 ಈ ಮೇಲ್ … Read more

ಶರಾವತಿ ನದಿಗಾಗಿ ಹೊಸನಗರದಿಂದ ಶಿವಮೊಗ್ಗದವರೆಗೆ ಬೈಕ್ ಜಾಥಾ, ಸರ್ಕಾರ ನಡೆಗೆ ಸ್ವಾಮೀಜಿ ನೇತೃತ್ವದಲ್ಲಿ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 9 ಜುಲೈ 2019 ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಸರ್ಕಾರದ ನಡೆಯನ್ನು ವಿರೋಧಿಸಿ ಇವತ್ತು ಹೊಸನಗರದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ಜಾಥಾ ಆಯೋಜಿಸಲಾಗಿದೆ. ಮೂಲೆಗದ್ದೆ ಮಠದ ಸ್ವಾಮೀಜಿ ನೇತೃತ್ವದಲ್ಲಿ ಜಾಥಾ ನಡೆಯಿತು. ಹೊಸನಗರದಿಂದ ಬೆಳಗ್ಗೆ ಹೊರಟ ಬೈಕ್ ಜಾಥಾಗೆ ದಾರಿ ಉದ್ದಕ್ಕೂ ಸಾರ್ವಜನಿಕರು ಸ್ವಾಗತ ನೀಡಿದರು. ಮಧ್ಯಾಹ್ನದ ವೇಳೆಗೆ ಬೈಕ್ ಜಾಥಾ ಶಿವಮೊಗ್ಗ ನಗರಕ್ಕೆ ಆಗಮಿಸಿತು. ನಗರದ ವಿವಿಧೆಡೆ ರಾಲಿ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ … Read more

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಭದ್ರಾವತಿಯಲ್ಲಿ ಖಂಡನೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮೆರವಣಿಗೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 06 ಜುಲೈ 2019 ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ, ಭದ್ರಾವತಿಯಲ್ಲಿ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿತು. ಇನ್ನು, ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಎಬಿವಿಪಿ ಸಂಘಟನೆ ಹೆಸರಿಗೆ ಕಳಂಕ ತರುವಂತೆ ಮೆಸೇಜ್ ಪ್ರಕಟಿಸುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ್ ಕಚೇರಿ ಮುಂದೆ ಇವತ್ತು ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು … Read more

VISL ಖಾಸಗೀಕರಣ ವಿರೋಧಿಸಿ ಮಳೆಯನ್ನು ಲೆಕ್ಕಿಸದೆ ಕಾರ್ಮಿಕರ ಹೋರಾಟ, ಸಂಸದ ರಾಘವೇಂದ್ರ ರಾಜೀನಾಮೆಗೆ ಆಗ್ರಹ

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ | 05 ಜುಲೈ 2019 ವಿಐಎಸ್ಎಲ್ ಕಾರ್ಖಾನೆ ಮಾರಾಟಕ್ಕೆ ಉಕ್ಕು ಪ್ರಾಧಿಕಾರ ಟೆಂಡರ್ ಕರೆದಿರುವುದನ್ನು ವಿರೋಧಿಸಿ, ಕಾರ್ಮಿಕರು ಇವತ್ತು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ನಡೆ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವಿಐಎಸ್ಎಲ್ ಕಾರ್ಖಾನೆ ಮುಂದೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್, ವಿಐಎಸ್ಎಲ್ ಕಾರ್ಖಾನೆಯ ಅಭಿವೃದ್ಧಿಗೆ ಕೇಂದ್ರ … Read more

ಎಂಪಿಎಂ, ವಿಐಎಸ್ಎಲ್ ಉಳಿಸುವಂತೆ ಜಮ್ಮು, ಕಾಶ್ಮೀರದಲ್ಲಿ ಭದ್ರಾವತಿ ಯುವಕನ ಪ್ರತಿಭಟನೆ, ಘೋಷಣೆ

ಶಿವಮೊಗ್ಗ ಲೈವ್.ಕಾಂ | 5 ಜುಲೈ 2019 ಎಂಪಿಎಂ ಸ್ಥಗಿತದ ಆದೇಶ, ವಿಐಎಸ್ಎಲ್ ಮಾರಾಟಕ್ಕೆ ಟೆಂಡರ್ ಕರೆದಿರುವುದಕ್ಕೆ ಭದ್ರಾವತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆ ಭದ್ರಾವತಿಯ ಯುವಕನೊಬ್ಬ ಲಡಾಕ್’ನಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಿಂದ ಜಮ್ಮು ಕಾಶ್ಮೀರದ ಲಡಾಕ್’ವರೆಗೂ ಬೈಕ್ ರೈಡ್ ಮಾಡಿದ್ದ ಭದ್ರಾವತಿಯ ಜೀವನ್, ಎಂಪಿಎಂ, ವಿಐಎಸ್ಎಲ್ ಪುನಶ್ಚೇತನ ಮಾಡಬೇಕು ಎಂದು ಆಗ್ರಹಿಸಿ, ಬ್ಯಾನರ್ ಹಾಕಿ, ಕಾರ್ಖಾನೆ ಪರವಾಗಿ ಘೋಷಣೆ ಕೂಗಿದ್ದಾರೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಜೀವನ್, … Read more