ಮಲೆನಾಡು ಶಾಸಕರಿಂದ ವಿಧಾನಸಭೆ ಸ್ಪೀಕರ್‌ಗೆ ಪತ್ರ, ಏನಿದೆ ಪತ್ರದಲ್ಲಿ? ಎಂಎಲ್‌ಎ ಹೇಳಿದ್ದೇನು?

Sagara-Beluru-Gopalakrishna-press-meet

ಸಾಗರ: ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಕಾಲವಕಾಶ ಕೋರಿ ಮಲೆನಾಡು ಭಾಗದ ಶಾಸಕರಿಂದ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕುಪತ್ರ, ವನ್ಯಜೀವಿಗಳ ಉಪಟಳ, ಅಡಿಕೆಗೆ ರೋಗಬಾಧೆ ಮತ್ತಿತರ ಸಮಸ್ಯೆಗಳು ಮಲೆನಾಡು ಜನರನ್ನು ಪ್ರತಿನಿತ್ಯ ಕಾಡುತ್ತಿವೆ. ಈ ಬಗ್ಗೆ ಶಾಸನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡು ಭಾಗದ ಶಾಸಕರೆಲ್ಲರೂ ಪಕ್ಷಾತೀತವಾಗಿ … Read more

ಜೋಗ ಮೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

power cut mescom ELECTRICITY

ಕಾರ್ಗಲ್: ಹಳೆಯ ವಾಹಕ ಬದಲಾವಣೆ ಕಾಮಗಾರಿ ಕಾಮಗಾರಿ ಹಿನ್ನೆಲೆ ನ.25ರಂದು ಜೋಗ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಗಲ್‌ ಪಟ್ಟಣ ಪ್ರದೇಶ, ಭಾರಂಗಿ ಹೋಬಳಿಯ ಅರಳಗೋಡು ಮತ್ತು ಭಾನ್ಕುಳಿ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೋಗ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ » ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು

ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು

Areca-Farm-Adike-tota-in-Shimoga

ಆನಂದಪುರಂ: ಸಮೀಪದ ಗೌತಮಪುರದ ನಿವೃತ್ತ ಶಿಕ್ಷಕ ಮಂಜಪ್ಪ ಎಂಬುವವರ ಅಡಿಕೆ ತೋಟದಲ್ಲಿ ಮರದಿಂದ ಗೊನೆಗಳ ಕಳವು ಮಾಡಲಾಗಿದೆ. ಕೊಯ್ಲಿನ ಹಂತದಲ್ಲಿದ್ದ ಐದು ಕ್ವಿಂಟಾಲ್‌ನಷ್ಟು ಅಡಿಕೆ ಕಳುವಾಗಿದೆ ಎಂದು ತೋಟದ ಮಾಲೀಕ ಮಂಜಪ್ಪ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೊ, ಏನಂದ್ರು ಅಧ್ಯಕ್ಷರು?

ಆರು ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ, 50ಕ್ಕು ಹೆಚ್ಚು ಕಲಾವಿದರು ಭಾಗಿ

Sagara-News-Update.

ಸಾಗರ: ಲಾಲ್‌ ಬಹದ್ದೂ‌ರ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ನ.23ರಂದು ವಿದ್ವಾನ್ ದತ್ತಮೂರ್ತಿ ಭಟ್ ಅವರ ನಾಟ್ಯಶ್ರೀ ಕಲಾ ತಂಡ ಮತ್ತು ಶ್ರೀ ಗುರು ಯಕ್ಷಗಾನ ಮಂಡಳಿ ಸಾಗರ – ಶಿವಮೊಗ್ಗ ಅವರಿಂದ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದುಶ್ಯಂತ – ಶಾಕುಂತಲಾ, ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಮಹಾತ್ಮೆ, ದ್ರುಪದ ಗರ್ವಭಂಗ, ಲವಕುಶ, ರಾಜಾ ಉಗ್ರಸೇನ, ಚಕ್ರವ್ಯೂಹ ಹೀಗೆ ಆರು ಕಥಾನಕಗಳನ್ನು ಪ್ರಸಿದ್ಧ ಕಲಾವಿದರು ಪ್ರಸ್ತುತ ಪಡಿಸುವರು. ಸಾಗರದಲ್ಲಿ … Read more

ತುಮರಿ ಸುತ್ತಮುತ್ತ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

TUMARI-SAGARA-NEWS-1.jpg

ತುಮರಿ: ಬ್ಯಾಕೋಡಿನ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನ. 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಜೋಗ ಉಪ ವಿಭಾಗದ ವಿವಿಧೆಡೆ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸ್ಎಸ್ ಭೋಗ್, ತುಮರಿ, ಕುದರೂರು ಹಾಗೂ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ, … Read more

ಜನರ ಸಮಸ್ಯೆ ಆಲಿಸಲು ಸಚಿವರಿಂದ ಜನಸ್ಪಂದನಾ ಸಭೆ, ದಿನಾಂಕ, ಸ್ಥಳ ಪ್ರಕಟ

Madhu-Bangarappa-Minister

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ನ.18 ರಂದು ಸಾಗರ ತಾಲೂಕು ತಾಳಗುಪ್ಪದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 1.30ಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಮಟ್ಟದ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಗತ್ಯ ಮಾಹಿತಿಯೊಂದಿಗೆ ತಾವೇ ಖುದ್ದಾಗಿ ತಪ್ಪದೇ ಹಾಜರಾಗಬೇಕು. ತಮ್ಮ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಾಗರ ತಹಶೀಲ್ದಾರ್‌ … Read more

ಸಾಗರದಲ್ಲಿ ಅವ್ವ ಮಹಿಳಾ ಮಹಾ ಸಂತೆ, ಏನೇನಿರುತ್ತೆ?

Sagara-News-Update.

ಸಾಗರ: ಇಲ್ಲಿನ ಜೀವನ್ಮುಖಿ ಸಂಸ್ಥೆಯು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನ. 15ರಂದು ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಗಾಂಧಿ ಮೈದಾನದಲ್ಲಿ ಅವ್ವ ಮಹಿಳಾ ಮಹಾ ಸಂತೆ ಆಯೋಜಿಸಿದೆ ಎಂದು ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ, ಹೆಗ್ಗೋಡಿನ ಚರಕ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಈ ಸಂತೆಯಲ್ಲಿ ರಾಜ್ಯದ ವಿವಿಧ ಭಾಗಗಳ ಮಹಿಳಾ ಉದ್ಯಮಿಗಳು ಸಿದ್ಧಪಡಿಸಿರುವ ಗೃಹೋತ್ಪನ್ನಗಳು, ಕೈಮಗ್ಗದ ವಸ್ತುಗಳು, ಸ್ಥಳೀಯ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನ ಮಾರಾಟವಿರುತ್ತದೆ ಎಂದು ತಿಳಿಸಿದರು. ಚರಕ ಸಂಸ್ಥೆಯ ಉತ್ಪನ್ನಗಳನ್ನು … Read more

ಬೆಂಕಿ ಅನಾಹುತ, ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲು

House-incident-at-anandapura-in-Sagara-taluk

ಆನಂದಪುರಂ: ಸಮೀಪದ ನ್ಯಾವಟ್ಟಿ ಗ್ರಾಮದ ಜಯಮ್ಮ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಭಾಗಶಃ ಸುಟ್ಟು ಹೋದ ಘಟನೆ ನಡೆದಿದೆ. ಮನೆಯ (House) ಒಲೆಗೆ ಹಾಕಿದ್ದ ಬೆಂಕಿ ತಗುಲಿ ಈ ಘಟನೆ ನಡೆದಿದ್ದು ಸುಮಾರು ₹2 ಲಕ್ಷಕ್ಕು ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಶಾಸಕರ ಆಪ್ತ ಸಹಾಯಕ ಶ್ರೀನಿವಾಸ್ ಎಂ.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಉಮೇಶ್, ರಮಾನಂದ್, ರಹಮತುಲ್ಲಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ₹150 ಗಲಾಟೆ

ಸಾಗರದಲ್ಲಿ ಇವತ್ತು ಸಾಹಿತ್ಯ ಹುಣ್ಣಿಮೆ, ಎಲ್ಲಿ? ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ?

D-Manjunatha-about-kannada-shahitya-sammelana

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಏರ್ಪಡಿಸುವ ಮನೆ–ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 243 ನೇ ತಿಂಗಳ ಸಂಭ್ರಮ ಹಾಗೂ ರಾಜ್ಯೋತ್ಸವ ಕಾರ್ಯಕ್ರಮ ನ. 8ರ ಸಂಜೆ 6.30ಕ್ಕೆ ಲಯನ್ಸ್ ಸಂಸ್ಥೆ ಆತಿಥ್ಯದಲ್ಲಿ ಸಾಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಉದ್ಘಾಟಿಸಲಿದ್ದು, ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಕೀಲ ಹೆಚ್.ಟಿ. ರಾಘವೇಂದ್ರ, ಉದ್ಯಮಿಗಳಾದ ಎಲ್.ಎನ್‌. … Read more

ಅಡಿಕೆ ಕುರಿತು ವಿಜ್ಞಾನಿಗಳು, ಸಂಶೋಧಕರ ಸಮಾಲೋಚನೆ ಸಭೆ, ಯಾವಾಗ? ಎಲ್ಲಿ?

Areca-in-gunny-bag-APMC-Shimoga

ಸಾಗರ: ಅಡಿಕೆ (Adike) ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮುಂದಿನ 15 ದಿನದಲ್ಲಿ ನಗರದಲ್ಲಿ 15ಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಸಂಶೋಧಕರ ಸಮಾಲೋಚನಾ ಸಭೆ ಆಯೋಜನೆಗೆ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಸಿದ ಪದಾಧಿಕಾರಿಗಳು, ಶ್ರೀಲಂಕಾದಲ್ಲಿ ಈಚೆಗೆ ನಡೆದ 15 ದೇಶಗಳ ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಹಾನಿಕಾರಕ ಎಂದು ಪ್ರತಿಪಾದಿಸಿದೆ ಎಂಬ ವರದಿ ಕೆಲ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಇದರಿಂದ … Read more