ಸಾಗರ – ಸಿಗಂದೂರು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್‌ ಮರ

Tree-fall-in-Sagara-Sigandur-road

SHIVAMOGGA LIVE NEWS | 13 JULY 2024 SAGARA : ಚಲಿಸುತ್ತಿದ್ದ ಕಾರಿನ ಮೇಲೆ ಮರ (Tree) ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಸಾಗರ – ಸಿಗಂದೂರು ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಹುಲ್ಲತ್ತಿ ಗ್ರಾಮದ ಪುನಿತ್‌ ಮತ್ತು ರವಿ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದ ತಿಳಿದು ಬಂದಿದೆ. ಗಾಯಾಳುಗಳನ್ನು ಕೂಡಲೆ ಸಾಗರದ ಉಪ ವಿಭಾಗೀಯ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರ ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಇನ್ನು, ಮರ ಬಿದ್ದಿದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. … Read more

ಬಂಕ್‌ನಲ್ಲಿ ಅಳತೆ ಮೋಸ, ಅಧಿಕಾರಿಗಳು ದಾಳಿ, ಮುಟ್ಟುಗೋಲು

gas-bunk-seized-by-officials.

SHIVAMOGGA LIVE NEWS | 12 JULY 2024 SAGARA : ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಲು ಕಾನೂನು ಮಾಪನ ಇಲಾಖೆಯ ಸೀಲು ಹಾಳು ಮಾಡಿದ ಆರೋಪದ ಹಿನ್ನೆಲೆ ನಗರದ ಆವಿನಹಳ್ಳಿ ರಸ್ತೆಯ ಗ್ಯಾಸ್ ಬಂಕ್‌ನ್ನು (Bunk) ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಘಟಕದಲ್ಲಿನ ಮದರ್ ಬೋರ್ಡ್‌ ಅನ್ನು ಅಳತೆಯ ನಿಖರತೆ ಕಾಪಾಡುವ ಸಲುವಾಗಿ ನಿಯಮಿತ ಅವಧಿಯವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ಪರಿಶೀಲಿಸಿ, ಸೀಲ್ ಮಾಡುವ ನಿಯಮ ಚಾಲ್ತಿಯಲ್ಲಿದೆ. ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಈ … Read more

ಲಿಂಗನಮಕ್ಕಿ ಜಲಾಶಯದ ಒಳ ಹರಿವು ಮತ್ತಷ್ಟು ಇಳಿಕೆ, ಇವತ್ತು ಎಷ್ಟಿದೆ ನೀರಿನ ಮಟ್ಟ?

-Linganamakki-Dam-General-Image

SHIVAMOGGA LIVE NEWS | 12 JULY 2024 DAM LEVEL : ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ತೀವ್ರ ಕುಸಿತ ಕಂಡಿದೆ. ಇವತ್ತು ಜಲಾಶಯಕ್ಕೆ 10,999 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 0.45 ಅಡಿಯಷ್ಟು ಏರಿಕೆಯಾಗಿದೆ. ಜಲಾಶಯದಿಂದ 3440.05 ಕ್ಯೂಸೆಕ್‌ ಹೊರ ಹರಿವು ಇದೆ. ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 1772.50 ಅಡಿಗೆ ಏರಿಕೆಯಾಗಿದೆ. ಸದ್ಯ 43.09 ಟಿಎಂಸಿ ನೀರಿನ ಸಂಗ್ರಹವಿದೆ. … Read more

ತಹಶೀಲ್ದಾರ್‌ ಕಚೇರಿಯಲ್ಲಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಲೆಕ್ಕಾಧಿಕಾರಿ, ಡೆತ್‌ ನೋಟ್‌ ಪತ್ತೆ

Village-accountant-vimala-sagara-attempt.

SHIVAMOGGA LIVE NEWS | 12 JULY 2024 SAGARA : ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ (Village Accountant) ಕರ್ತವ್ಯ ನಿರ್ವಹಿಸುತ್ತಿರುವ ವಿಮಲಾ ಅವರು ಗುರುವಾರ ಮಧ್ಯಾಹ್ನ ನಗರದ ತಹಸೀಲ್ದಾ‌ರ್ ಕಚೇರಿಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದ ಅವರಿಗೆ ಸ್ಥಳೀಯ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೇಟೆ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಣೆ ನಡೆಸಿದರು. ವಿಮಲಾ ಅವರ ಬಳಿ ಸಿಕ್ಕಿರುವ ಚೀಟಿಯಲ್ಲಿ ಆರೋಗ್ಯದ … Read more

ತಗ್ಗಿತು ಲಿಂಗನಮಕ್ಕಿ ಒಳ ಹರಿವು, ಇವತ್ತು ಎಷ್ಟು ನೀರು ಬರುತ್ತಿದೆ? ನೀರಿನ ಮಟ್ಟ ಎಷ್ಟಾಗಿದೆ?

-Linganamakki-Dam-General-Image

SHIVAMOGGA LIVE NEWS | 11 JULY 2024 DAM LEVEL : ಶರಾವತಿ ಕಣವೆಯಲ್ಲಿಯು ಮಳೆ ಪ್ರಮಾಣ ಕುಸಿತ ಕಂಡಿದೆ. ಹಾಗಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ದಿನೇ ದಿನೆ ಇಳಿಕೆಯಾಗುತ್ತಿದೆ. ಇವತ್ತು ಜಲಾಶಯಕ್ಕೆ 13,128 ಕ್ಯೂಸೆಕ್‌ ಒಳ ಹರಿವು ಇದೆ. 3422.14 ಕ್ಯೂಸೆಕ್‌ ಹೊರ ಹರಿವು ದಾಖಲಾಗಿದೆ. ಇವತ್ತು ಜಲಾಶಯದ ನೀರಿನ ಮಟ್ಟ 1772.05 ಅಡಿಗೆ ತಲುಪಿದೆ. ಈವರೆಗೂ 42.44 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಮತ್ತಷ್ಟು … Read more

ಲಿಂಗನಮಕ್ಕಿ ಡ್ಯಾಂಗೆ ಒಳ ಹರಿವು ಇಳಿಕೆ, ಇವತ್ತು ಎಷ್ಟು ನೀರು ಹರಿದು ಬರುತ್ತಿದೆ?

-Linganamakki-Dam-General-Image

SHIVAMOGGA LIVE NEWS | 10 JULY 2024 DAM LEVEL : ಮಳೆ ಪ್ರಮಾಣ ಇಳಿಕೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಇವತ್ತು ಲಿಂಗನಮಕ್ಕಿ ಜಲಾಶಯದ ಒಳ ಹರಿವು 13,659 ಕ್ಯೂಸೆಕ್‌ ದಾಖಲಾಗಿದೆ. ಜಲಾಶಯದ ಗರಿಷ್ಠ ನೀರನ ಸಂಗ್ರಹ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1771.45 ಅಡಿ ಇದೆ. ಈವರೆಗೆ ಸಂಗ್ರಹವಾದ ನೀರು 41.60 ಟಿಎಂಸಿ. ಇದನ್ನೂ ಓದಿ – ಭದ್ರಾ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ಈವರೆಗೂ ಸಂಗ್ರಹವಾಗಿರುವ … Read more

ಸೊಪ್ಪು ತರಲು ಕಾಡಿಗೆ ಹೋಗಿದ್ದ ವ್ಯಕ್ತಿ ಮೇಲೆ ಹಂದಿ ದಾಳಿ

TUMARI-SAGARA-NEWS-1.jpg

SHIVAMOGGA LIVE NEWS | 10 JULY 2024 SAGARA : ಸೊಪ್ಪು ತರಲು ಕಾಡಿಗೆ (forest) ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡು ಹಂದಿ ದಾಳಿ ಮಾಡಿದೆ. ಕೂಡೂರಿನ ಚೌಡನಾಯ್ಕ (52) ಗಾಯಗೊಂಡವರು. ತುಮರಿ ಸಮೀಪದ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ ಸೊಪ್ಪಿನ ಬೆಟ್ಟದಲ್ಲಿ ಸೊಪ್ಪು ತರಲು ಹೋಗಿದ್ದಾಗ ಘಟನೆ ಸಂಭವಿಸಿದೆ. ಚೌಡನಾಯ್ಕ ಮೇಲೆ ದಾಳಿ ನಡೆಸಿದ ಹಂದಿ ಕಚ್ಚಿ ಗಾಯಗೊಳಿಸಿದೆ. ರಕ್ತಸ್ರಾವವಾಗಿ ನಿತ್ರಾಣಗೊಂಡಿದ್ದ ಚೌಡನಾಯ್ಕ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಕಾಡು ಹಂದಿಯಿಂದ ಜನರು ಭಯದಲ್ಲಿ ಬದುಕುವಂತಾಗಿದೆ. … Read more

ಜೋಗಕ್ಕೆ ಸಾವಿರ ಸಾವಿರ ಜನ, ಮಳೆ, ಮಂಜಿನ ನಡುವೆ ಕಣ್ತುಂಬಿಕೊಂಡರು ಜಲಪಾತದ ವೈಭವ

jog-falls-in-Sagara-in-Shimoga-district

SHIVAMOGGA LIVE NEWS | 8 JULY 2024 SAGARA : ಶರಾವತಿ ಕಣಿವೆಯಲ್ಲಿ ಮಳೆ ಬಿರುಸು ಪಡೆದ ಹಿನ್ನೆಲೆ ವಿ‍ಶ್ವವಿಖ್ಯಾತ ಜೋಗ ಜಲಪಾತಕ್ಕೆ (Jog Falls) ಜೀವ ಕಳೆ ಬಂದಿದೆ. ಭಾನುವಾರ ದೊಡ್ಡ ಸಂಖ್ಯೆಯ ಪ್ರವಾಸಿಗರು ಜಲಪಾತ ವೀಕ್ಷಿಸಿದ್ದಾರೆ. ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಜಲಪಾತದ ವೈಭವಕ್ಕೆ ಮನಸೋತಿದ್ದಾರೆ. ಮಳೆ, ಮಂಜು ಮತ್ತು ಜಲಪಾತ ಜೋಗದ ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಮೈದುಂಬಿಕೊಂಡಿವೆ. ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ಜಲಪಾತವನ್ನು ಸಾವಿರಾರು ಜನರು ಕಣ್ತುಂಬಿಕೊಂಡು, ಮೊಬೈಲ್‌ ಮತ್ತು … Read more

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 2.70 ಅಡಿ ಏರಿಕೆ, ಇವತ್ತು ಒಳ ಹರಿವು ಹೆಚ್ಚಳ, ಎಷ್ಟಿದೆ?

-Linganamakki-Dam-General-Image

SHIVAMOGGA LIVE NEWS | 8 JULY 2024 DAM LEVEL : ಶರಾವತಿ ಕಣಿವೆಯಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 2.70 ಅಡಿ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು 41,048 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. 1709 ಕ್ಯೂಸೆಕ್‌ ಹೊರ ಹರಿವು ಇದೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1769.40 ಅಡಿಗೆ ತಲುಪಿದೆ. … Read more

ಲಿಂಗನಮಕ್ಕಿ ಡ್ಯಾಂ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?

-Linganamakki-Dam-General-Image

SHIVAMOGGA LIVE NEWS | 7 JULY 2024 DAM LEVEL : ಶರಾವತಿ ಕಣಿವೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಗಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ತುಸು ಹೆಚ್ಚಳವಾಗಿದೆ. ಶನಿವಾರ 20 ಸಾವಿರ ಕ್ಯೂಸೆಕ್‌ ಒಳ ಹರಿವು ಇತ್ತು. ಭಾನುವಾರ 29,044 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಜಲಾಶಯದಲ್ಲಿ ಇವತ್ತಿನ ನೀರಿನ ಮಟ್ಟ 1766.70 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 1.90 ಅಡಿ ಏರಿಕೆಯಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿ. … Read more