ಆನಂದಪುರ ಬಳಿ ನೇಣು ಬಿಗಿದುಕೊಂಡಿದ್ದ KSRTC ಚಾಲಕ ಶಿವಮೊಗ್ಗದಲ್ಲಿ ಸಾವು, ಕಾರಣವೇನು?

KSRTC-Driver-Nagappa-breathed-last-in-Shimoga

ಸಾಗರ: ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ KSRTC ಚಾಲಕ (KSRTC driver) ಮೆಗ್ಗಾನ್‌ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಕೆಲಸದ ಸ್ಥಳದಲ್ಲಿನ ಕಿರುಕುಳವೆ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಲಾಗಿದೆ. ಸಾಗರ ತಾಲೂಕು ತ್ಯಾಗರ್ತಿಯ ನೀಚಡಿ ಬಳಿಯ ಮಳ್ಳ ಗ್ರಾಮದ ನಾಗಪ್ಪ (58) ಮೃತರು. ಕಳೆದ ಸೋಮವಾರ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ ನಾಗಪ್ಪ, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ಬಳಿಕ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣವೇನು? ಕಳೆದ ಒಂದೂವರೆ ತಿಂಗಳಿನಿಂದ ತಮಗೆ ಡ್ಯೂಟಿ ನೀಡದೆ ಕಿರುಕುಳ ನೀಡಲಾಗುತ್ತಿತ್ತು … Read more

ಸಾಗರದಲ್ಲಿ ಇಂದಿನಿಂದ ‘ರಜತ ಸಾಗರೋತ್ಸವʼ, ಏನೇನೆಲ್ಲ ಕಾರ್ಯಕ್ರಮ ಇರಲಿದೆ?

Sagara-News-Update.

ಸಾಗರ: ಸಹೃದಯ ಬಳಗ, ತಾಲೂಕು ಇತಿಹಾಸ ವೇದಿಕೆಯ ಆಶ್ರಯದಲ್ಲಿ ಜನವರಿ 3 ಮತ್ತು 4ರಂದು ಗಾಂಧಿ ಮೈದಾನದಲ್ಲಿ ರಜತ ಸಾಗರೋತ್ಸವ (Sagarotsava) 2026 ಕಾರ್ಯಕ್ರಮ ನಡೆಯಲಿದೆ. ಜನವರಿ 3ರಂದು ಸಂಜೆ 5ಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆನಂದಪುರದ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕೆಳದಿ ರಾಜಗುರು ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಹೃದಯ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಶಾರದಾಂಬಾ ಕಲಾ ಕೇಂದ್ರದಿಂದ … Read more

ಸಿಗಂದೂರು ಜಾತ್ರೆ, ಸೇತುವೆ ಉದ್ಘಾಟನೆ ನಂತರ ಮೊದಲ ಜಾತ್ರೆ, ಏನೇನು ಕಾರ್ಯಕ್ರಮ ಇರಲಿದೆ?

Siganduru-Temple-Sagara

ಶಿವಮೊಗ್ಗ: ಸಿಗಂದೂರಿನಲ್ಲಿ (Sigandur) ಜನವರಿ 14 ಮತ್ತು 15 ರಂದು ಸಂಕ್ರಾಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಜರುಗಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ. ಏನೇನು ಕಾರ್ಯಕ್ರಮ ಆಯೋಜಿಸಲಾಗಿದೆ? ಜನವರಿ 14 ರಂದು ಬೆಳಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ ನಡೆಯಲಿದೆ. 8 ಗಂಟೆಗೆ ರಥಪೂಜೆಯ ಮೂಲಕ ರಥ … Read more

ಸಾಗರದ ಸಿದ್ದಪ್ಪಗೆ 4 ವರ್ಷ ಕಠಿಣ ಜೈಲು ಶಿಕ್ಷೆ, ದಂಡ, ಕಾರಣವೇನು?

Jail-and-fine-for-Siddappa-in-Sagara

ಸಾಗರ: ಕ್ಷುಲಕ ವಿಚಾರಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರ ಕೊಲೆ ಮಾಡಿದ್ದಕ್ಕಾಗಿ ಸಾಗರ (Sagara man) ತಾಲೂಕು ಮೂರಳ್ಳಿ ಮಾರತಿ ಗ್ರಾಮದ ಸಿದ್ದಪ್ಪ (38) ಎಂಬಾತನಿಗೆ ಜೈಲು ಶಿಕ್ಷೆಯಾಗಿದೆ. 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹13,000 ದಂಡ ವಿಧಿಸಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಮೊಬೈಲ್‌ ಚಾರ್ಜ್‌ ವಿಚಾರದಲ್ಲಿ ಕಿರಿಕ್‌ ಸಿದ್ದಪ್ಪ ಮೂರಳ್ಳಿ ಮಾರತಿ ಗ್ರಾಮದ ತಿಮ್ಮಪ್ಪ ಮತ್ತು ಲಕ್ಷ್ಮಿ ದಂಪತಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮೊಬೈಲ್‌ … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರು ನಜ್ಜುಗುಜ್ಜು, ಎಲ್ಲಿ? ಹೇಗಾಯ್ತು ಘಟನೆ?

car-and-bus-incident-at-Kaspadi-in-Sagara-Taluk

ಸಾಗರ: ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿದ್ದು (collision) ದಂಪತಿ ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಾಸ್ಪಾಡಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಸಿದ್ದೇಶ್ವರ ಮತ್ತು ಅವರ ಪತ್ನಿ ತಲೆಗೆ ಗಂಭೀರ ಪೆಟ್ಟಾಗಿದೆ. ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಹೇಗಾಯ್ತು ಘಟನೆ? ಬಸ್ಸು ಮಣಿಪಾಲದಿಂದ ಸಾಗರಕ್ಕೆ ತೆರಳುತ್ತಿತ್ತು. ಕಾರು ಸಾಗರದ ಕಡೆಯಿಂದ ದಾವಣಗೆರೆಗೆ ತೆರಳುತ್ತಿತ್ತು. ಕಾಸ್ಪಾಡಿ ಬಳಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕಾರಿನ ಮುಂಭಾಗ … Read more

ಆನಂದಪುರ ಸುತ್ತಮುತ್ತ ಕೆಲವು ದಿನ ವಿದ್ಯುತ್‌ ವ್ಯತ್ಯಯ, ಕಾರಣವೇನು?

Anandapura Sagara Graphics

ಆನಂದಪುರಂ: ಮಲಂದೂರು ಗ್ರಾಮದ ವಿದ್ಯುತ್‌ ಪರಿವರ್ತಕ ಘಟಕದಲ್ಲಿನ 10 ಎಂ.ವಿ.ಎ. ಪರಿವರ್ತಕದಲ್ಲಿ ತಾಂತ್ರಿಕ ಸಮಸ್ಯೆಯಾಗಿದೆ. ಈ ಹಿನ್ನೆಲೆ ಆನಂದಪುರಂ, ಆಚಾಪುರ, ಯಡೇಹಳ್ಳಿ, ಹೊಸೂರು, ತ್ಯಾಗರ್ತಿ, ಉಳ್ಳೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲವು ದಿನ ಕೆಲವು ಸಮಯ ಆಗಾಗ ವಿದ್ಯುತ್ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ » ಶಿವಮೊಗ್ಗ ಡಿಸಿಸಿ ಬ್ಯಾಂಕ್‌, 72 ವರ್ಷದಲ್ಲಿ ಅತ್ಯಧಿಕ ಲಾಭ ಗಳಿಕೆ, ಮುಂದನ ವರ್ಷದ ಟಾರ್ಗೆಟ್‌ ಎಷ್ಟು?

ಸಾಗರ ಜಿಲ್ಲಾ ಕೇಂದ್ರ ವಿಚಾರ, ಡಿಸೆಂಬರ್‌ 31ರ ಒಳಗೆ ಪ್ರಸ್ತಾವನೆಗೆ ಹಾಲಪ್ಪ ಆಗ್ರಹ, ಕಾರಣವೇನು?

Former-Minister-Haratalu-Halappa-BJP

ಸಾಗರ: ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕೆಂಬ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಡಿಸೆಂಬರ್‌ 31ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ (proposal) ಕಳುಹಿಸಬೇಕು. ಇಲ್ಲವಾದಲ್ಲಿ ಮುಂದಿನ 18 ತಿಂಗಳಲ್ಲಿ ಈ ವಿಷಯ ನನೆಗುದಿಗೆ ಬೀಳುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ. ನೂತನ ಜಿಲ್ಲೆಗಳ ರಚನೆ ಸಂಬಂಧ ಡಿ. 31ರೊಳಗೆ ಪ್ರಸ್ತಾವನೆ ಕಳುಹಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಹಾಗಾಗಿ … Read more

ತಾಳಗುಪ್ಪ – ಮೈಸೂರು ರೈಲಿಗೆ ಸಿಲುಕಿದ ವ್ಯಕ್ತಿ

Man-falls-in-front-of-running-train-in-sagara

ಸಾಗರ: ತಾಳಗುಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿಗೆ (train) ವೃದ್ಧನೋರ್ವ ಸಿಲುಕಿ ತಲೆಗೆ ಗಂಭೀರ ಗಾಯವಾಗಿದೆ. ಹೊಸನಗರ ತಾಲೂಕಿನ ಮುಗುಡ್ತಿ ಗ್ರಾಮದ ನರೇಂದ್ರ ಕುಮಾ‌ರ್ (61) ಗಾಯಗೊಂಡವರು. ನರೇಂದ್ರ ಕುಮಾರ್‌ ಅವರನ್ನು ಸ್ಥಳೀಯರು ತಕ್ಷಣ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ » ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು

ಸಾಗರ ಬಂದ್‌, ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ, ಹೇಗಿತ್ತು ಜನರ ಪ್ರತಿಕ್ರಿಯೆ?

Sagara-Bandh

ಸಾಗರ: ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಬುಧವಾರ ನೀಡಿದ್ದ ಸಾಗರ ಬಂದ್ (Sagara Bandh) ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೇಗಿತ್ತು ಬಂದ್‌? ಇಲ್ಲಿದೆ ಪಾಯಿಂಟ್ಸ್‌ ನಗರವ್ಯಾಪ್ತಿಯ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು. ಬೀದಿ ಬದಿ ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ನ್ಯಾಯಾಲಯದ ಕಾರ್ಯಕಲಾಪಗಳಿಂದ ವಕೀಲರು ದೂರ ಉಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪಟ್ಟಣದಲ್ಲಿ ಪ್ರತಿಭಟನಾ … Read more

KSRTC ಬಸ್‌, ಶಾಲೆ ಬಸ್ಸು ಮುಖಾಮುಖಿ ಡಿಕ್ಕಿ

KSRTC-Bus-and-School-bus-collided-at-sagara

ಸಾಗರ: KSRTC ಬಸ್‌ ಮತ್ತು ಶಾಲೆ ಬಸ್‌ ಮುಖಾಮುಖ ಡಿಕ್ಕಿಯಾಗಿವೆ (bus accident). ಚಾಲಕ ಸೇರಿ ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ » ಮೂರು ದಿನದ ಗಂಡು ಮಗವನ್ನು ರಸ್ತೆ ಬದಿ ಬಿಟ್ಟು ಹೋದ ದುರುಳರು ಸಾಗರ ತಾಲೂಕು ಇಡುವಾಣಿ ಬಳಿ ಘಟನೆ ಸಂಭವಿಸಿದೆ. ಸಾಗರದಿಂದ ಕಾರ್ಗಲ್‌ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಖಾಸಗಿ ಶಾಲೆ ಬಸ್‌ ಡಿಕ್ಕಿಯಾಗಿವೆ. ಘಟನೆಯಲ್ಲಿ ಎರಡು ಬಸ್ಸುಗಳ ಚಾಲಕರ ತಲೆ, ಕಾಲಿಗೆ ಗಾಯವಾಗಿವೆ. ಇಬ್ಬರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲು … Read more