ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರು ನಜ್ಜುಗುಜ್ಜು, ಎಲ್ಲಿ? ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

 ಮುಖ್ಯಾಂಶ 

  • ಸಾಗರದ ಕಾಸ್ಪಾಡಿಯಲ್ಲಿ ಕಾರು-ಬಸ್ ಮುಖಾಮುಖಿ ಡಿಕ್ಕಿ.
  • ದಂಪತಿಗೆ ತಲೆಗೆ ಗಂಭೀರ ಗಾಯ.
  • ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಸಾಗರ: ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿದ್ದು (collision) ದಂಪತಿ ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಾಸ್ಪಾಡಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.

ಸಿದ್ದೇಶ್ವರ ಮತ್ತು ಅವರ ಪತ್ನಿ ತಲೆಗೆ ಗಂಭೀರ ಪೆಟ್ಟಾಗಿದೆ. ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಹೇಗಾಯ್ತು ಘಟನೆ?

ಬಸ್ಸು ಮಣಿಪಾಲದಿಂದ ಸಾಗರಕ್ಕೆ ತೆರಳುತ್ತಿತ್ತು. ಕಾರು ಸಾಗರದ ಕಡೆಯಿಂದ ದಾವಣಗೆರೆಗೆ ತೆರಳುತ್ತಿತ್ತು. ಕಾಸ್ಪಾಡಿ ಬಳಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನ ಒಂದು ಬದಿಗೆ ಹಾನಿಯಾಗಿದೆ.

car-and-bus-incident-at-Kaspadi-in-Sagara-Taluk

ಇದನ್ನೂ ಓದಿ » ಶಿವಮೊಗ್ಗದಲ್ಲಿ ಚಾಕು ಇರಿತ, ವ್ಯಕ್ತಿಗೆ ಗಂಭೀರ ಗಾಯ, ಎಲ್ಲಿ? ಹೇಗಾಯ್ತು ಘಟನೆ?

ದಾರಿಯಲ್ಲಿ ತೆರಳುತ್ತಿದ್ದವರು ಮತ್ತು ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿ ಮೂಲಕ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಸ್ಸಿನಲ್ಲಿ ಕಡಿಮೆ ಸಂಖ್ಯೆ ಪ್ರಯಾಣಿಕರು ಇದ್ದರು. ಯಾರಿಗು ಯಾವುದೇ ಸಮಸ್ಯೆ ಆಗಿಲ್ಲ ಎಂದು ತಿಳಿದು ಬಂದಿದೆ.

Leave a Comment