ತಲೆ ಮೇಲೆ ಕಾರು ಹತ್ತಿಸಿ ವ್ಯಕ್ತಿಯ ಬರ್ಬರ ಹತ್ಯೆ, ರಸ್ತೆ ಬದಿಯಲ್ಲಿ ಮೃತದೇಹ ಪತ್ತೆ

Incident-near-Iginabailu-in-sagara-taluk-anandapura-limits-rafiq

SHIVAMOGGA LIVE NEWS | 01 MARCH 2024 ANANDAPURA : ವ್ಯಕ್ತಿಯೊಬ್ಬನ ತಲೆ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಾಗರ ತಾಲೂಕು ಆನಂದಪುರ ಸಮೀಪದ ನೆದರವಳ್ಳಿ ಬಳಿ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ಆನವಟ್ಟಿ ಸಮೀಪದ ಗ್ರಾಮವೊಂದರ ರಫೀಕ್‌ (38) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಕರೆತಂದು ಆತನನ್ನು ಕೆಳಗೆ ತಳ್ಳಿ ತಲೆ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ವೈಯಕ್ತಿಕ ಕಾರಣಕ್ಕೆ ಘಟನೆ ನಡೆದಿರುವ ಕುರಿತು ಪೊಲೀಸರು ಅನುಮಾನ … Read more

ಆನಂದಪುರ ಬಳಿ ಕಾರು, ಬೈಕ್‌ ಮುಖಾಮುಖಿ ಡಿಕ್ಕಿ, ಓರ್ವ ಸಾವು

Incident-near-Gouthamapura-at-Anandapura-in-Sagara-taluk

SHIVAMOGGA LIVE NEWS | 26 FEBRUARY 2024 ANANDAPURA : ಸಮೀಪದ ಗೌತಮಪುರದಲ್ಲಿ ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿಕಾರಿಪುರದಿಂದ ಆನಂದಪುರದ ಕಡೆ ಬರುತ್ತಿದ್ದ ಬೈಕ್ ಹಾಗೂ ಆನಂದಪುರದಿಂದ ಶಿಕಾರಿಪುರ ಕಡೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿವೆ. ಬೈಕ್‌ ಸವಾರ ಭೀಮೇಶ್‌ (42) ಮೃತ ವ್ಯಕ್ತಿ. ಮತ್ತೊಬ್ಬ ಸವಾರ ಪ್ರತಾಪ್‌ (26) ಗಂಭೀರವಾಗಿ ಗಾಯಗೊಂಡಿದ್ದಾನೆ.  ಆತನನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕಾರಿಪುರದ ಕಪ್ಪನಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಿ … Read more

ಪತ್ನಿ ಜೊತೆ ಮಾತನಾಡಿದವನ ಬೆರಳು ಕಟ್‌, ಕಾರಿನ ಗಾಜು ಪೀಸ್‌ ಪೀಸ್‌

Husband-attacks-youth-car-in-sagara

SHIVAMOGGA LIVE NEWS | 21 FEBRUARY 2024 SAGARA : ತನ್ನ ಪತ್ನಿಯೊಂದಿಗೆ ಮಾತನಾಡಿದ ಎಂದು ಆರೋಪಿಸಿ, ಆಕ್ರೋಶಗೊಂಡ ಪತಿ, ಎದುರು ಮನೆಯ ಯುವಕ ಮತ್ತು ಆತನ ಕಾರಿನ ಮೇಲೆ ದಾಳಿ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ಯುವಕನ ಸ್ನೇಹಿತನಿಗೂ ಪತಿರಾಯ ಪೆಟ್ಟು ಕೊಟ್ಟಿದ್ದಾನೆ. ಘಟನೆಯಲ್ಲಿ ಕಾರಿನ ಗಾಜು ಪುಡಿಯಾಗಿದೆ. ಯುವಕನ ಬೆರಳು ಕಟ್‌ ಆಗಿದೆ. ಏನಿದು ಘಟನೆ? ಹೇಗಾಯ್ತು ದಾಳಿ? ಸಾಗರ ತಾಲೂಕು ಬೆಳಲಮಕ್ಕಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ರವಿ ಹಲ್ಲೆ ನಡೆಸಿದ ಆರೋಪಿ. … Read more

ಖರೀದಿಸಿದ್ದು ಎರಡು ಜೀನ್ಸ್‌ ಪ್ಯಾಂಟ್‌, ಅಕೌಂಟ್‌ನಿಂದ ಖಾಲಿ ಆಗಿದ್ದು ಮೂರೂವರೆ ಲಕ್ಷ ರೂ., ಏನಿದು ಕೇಸ್‌?

Online-Fraud-In-Shimoga

SHIVAMOGGA LIVE NEWS | 19 FEBRUARY 2024 SAGARA : ಆನ್‌ಲೈನ್‌ನಲ್ಲಿ ಖರೀದಿಸಿದ್ದ ಜೀನ್ಸ್‌ ಪ್ಯಾಂಟ್‌ಗಳಿಗೆ ಗುಣಮಟ್ಟವಿಲ್ಲ ಎಂದು ಹಿಂತಿರುಗಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು 3.52 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚನೆ ಆಗಿದ್ದು ಹೇಗೆ? ಸಾಗರ ತಾಲೂಕಿನ ನಿವೃತ್ತ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ಫೇಸ್‌ಬುಕ್‌ನಲ್ಲಿ ಕಾಣಿಸಿದ ಆನ್‌ಲೈನ್‌ ಮಾರ್ಕೆಟಿಂಗ್‌ ಪೇಜ್‌ ಮೂಲಕ ಪ್ಯಾಂಟ್‌ಗಳನ್ನು ಖರೀದಿಸಿದ್ದರು. ಕೊರಿಯರ್‌ ಮೂಲಕ ಪ್ಯಾಂಟುಗಳು ಮನೆಗೆ ತಲುಪಿದ್ದವು. ಆದರೆ ಪ್ಯಾಂಟುಗಳ ಗುಣಮಟ್ಟ ಸರಿ ಇರದ ಹಿನ್ನೆಲೆ, ನಿವೃತ್ತ ಉದ್ಯೋಗಿ ಕಸ್ಟಮರ್‌ ಕೇರ್‌ಗೆ … Read more

ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶನ, ಜನರಲ್ಲಿ ಆತಂಕ, ಪೊಲೀಸರ ಮುಂದೆ ಪಿಸ್ತೂಲ್‌ನ ಅಸಲಿ ಕಥೆ ಬಹಿರಂಗ

Youth-verbal-spat-with-locals-at-market-road-in-Sagara.

SHIVAMOGGA LIVE NEWS | 12 FEBRUARY 2024 SAGARA : ಜಗಳದ ವೇಳೆ ಆಟಿಕೆ ಪಿಸ್ತೂಲು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆಂತಕ ಮೂಡಿಸಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದರು. ಸಾಗರದ ಜೆ.ಪಿ.ನಗರದಲ್ಲಿ ಕಳೆದ ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶಿಸಲಾಗಿತ್ತು. ಆಯನೂರಿನ ದರ್ಶನ್‌ (19) ಮತ್ತು ಸಾಗರದ ನವೀನ್‌ (25) ಎಂಬಾತನ ವಿಚಾರಣೆ ನಡೆಸಲಾಯಿತು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಫೆ.11ರ ರಾತ್ರಿ ಯುವಕರ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ದರ್ಶನ್‌, ಪಿಸ್ತೂಲು ತೋರಿಸಿದ್ದ. … Read more

ಸುಸಜ್ಜಿತ ವಕೀಲರ ಭವನ ರೆಡಿ, ಉದ್ಘಾಟನೆಗೆ ದಿನಾಂಕ ನಿಗದಿ, ಯಾರೆಲ್ಲ ಭಾಗವಹಿಸುತ್ತಿದ್ದಾರೆ?

Sagara-Vakilara-Bhavana-press-meet-sagara

SHIVAMOGGA LIVE NEWS | 9 FEBRUARY 2024  SAGARA : 4.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ವಕೀಲರ ಭವನ ಫೆ.11ರಂದು ಲೋಕಾರ್ಪಣೆಗೊಳ್ಳಲಿದೆ. ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್‌ ಅವರು ವಕೀಲರ ಭವನ ಉದ್ಘಾಟನೆ ಮಾಡಲಿದ್ದಾರೆ.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲರ ಸಂಘದ ಉಪಾಧ್ಯಕ್ಷ ಹೆಚ್‌.ಆರ್.‍ಶ್ರೀಧರ್‌, ನ್ಯಾಯಮೂರ್ತಿ ಆರ್.ದೇವದಾಸ್‌ ಅಧ್ಯಕ್ಷ ವಹಿಸಲಿದ್ದಾರೆ. ಸಚಿವರಾದ ಹೆಚ್‌.ಕೆ.ಪಾಟೀಲ್‌, ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಹಾಲೇಖನಾಧಿಕಾರಿ … Read more

ಶಿವಮೊಗ್ಗ, ಸಾಗರ ತಹಶೀಲ್ದಾರ್‌ಗಳ ವರ್ಗಾವಣೆ, ಯಾರು ಹೊಸ ತಹಶೀಲ್ದಾರ್‌?

Shimoga-Tahasildhar-nagaraj.webp

SHIVAMOGGA LIVE NEWS | 2 FEBRUARY 2024 SHIMOGA : ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವವ ರಾಜ್ಯದ ವಿವಿಧೆಡೆಯ ತಹಶೀಲ್ದಾರ್‌ಗಳನ್ನು ವರ್ಗಾಯಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್‌ಗಳು ಕೂಡ ವರ್ಗವಾಗಿದ್ದಾರೆ. ಯಾರೆಲ್ಲರ ವರ್ಗವಾಗಿದೆ? ಜಗಳೂರು ತಹಶೀಲ್ದಾರ್‌ ಕಲೀಂ ಉಲ್ಲಾ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಸಾಗರ ತಾಲೂಕು ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ ಅವರನ್ನು ದಾವಣಗೆರೆ ಜಿಲ್ಲೆ ಜಗಳೂರಿಗೆ ವರ್ಗಾಯಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಡಾ. ಎನ್‌.ಜೆ. ನಾಗರಾಜ್‌ ಅವರನ್ನು ಹಾವೇರಿ ತಾಲೂಕಿಗೆ ವರ್ಗಾಯಿಸಲಾಗಿದೆ. … Read more

ಸಾಗರದಲ್ಲಿ ಸಾಹಿತಿ ನಾ.ಡಿಸೋಜಾಗೆ ನಾಗರಿಕರ ಪರವಾಗಿ ಸನ್ಮಾನ

MLA-Beluru-Gopalakrishna-felicitation-to-Na-Disoza-in-sagara

SHIVAMOGGA LIVE NEWS | 27 JANUARY 2024 SAGARA : ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ಘೋಷಿಸಿರುವ ಹಿನ್ನೆಲೆ ಸಾಹಿತಿ ನಾ. ಡಿಸೋಜಾ ಅವರನ್ನು ನಾಗರಿಕರ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಸನ್ಮಾನಿಸಿದರು. ಮನೆ ಮುಂಭಾಗದಲ್ಲಿ ನಾ. ಡಿಸೋಜಾ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ರಾಜ್ಯ ಸರ್ಕಾರ ನಾ. ಡಿಸೋಜಾ ಅವರಿಗೆ ಪಂಪ ಪ್ರಶಸ್ತಿ ಘೋಷಿಸಿರುವುದು ಸಾಗರ ತಾಲೂಕಿನ ಜನ ಸಂಭ್ರಮ ಪಡುತ್ತಿದಾರೆ. ಈಗಾಗಲೇ ಹಲವು ಪ್ರಶಸ್ತಿಗಳು … Read more

ಹೆಂಡತಿ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಕೊಂದ ಗಂಡ

husband-attacks-wife-at-kudaruru-near-bykodu-sigandur.

SHIVAMOGGA LIVE NEWS | 20 JANUARY 2024 BYKODU : ಕೌಟುಂಬಿಕ ಕಲಹಕ್ಕೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಪತಿಯೇ ಪತ್ನಿಯ ಹತ್ಯೆಗೈದಿದ್ದಾನೆ. ಸಾಗರ ತಾಲೂಕು ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನೀಲಾವತಿ (29) ಮೃತ ದುರ್ದೈವಿ. ಇಂದು ಬೆಳಗ್ಗೆ ಪತಿ ಲೋಕೇಶ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ನೀಲಾವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನೀಲಾವತಿ ಕೊನೆಯುಸಿರೆಳೆದಿದ್ದಾರೆ. ತವರು ಮನೆಗೆ ಹೋಗಿದ್ದ ಮಹಿಳೆ ಕೌಟುಂಬಿಕ ಕಲಹದಿಂದ … Read more

ಆರೋಗ್ಯ ಕೇಂದ್ರದ ಮುಂದೆ ಗ್ರಾಮ ಪಂಚಾಯಿತಿ ಸದಸ್ಯನ ನೇತೃತ್ವದಲ್ಲಿ ಮೌನ ಪ್ರತಿಭಟನೆ

Protest-at-Kargal-Primary-Health-Centre

SHIVAMOGGA LIVE NEWS | 17 JANUARY 2024 KARGAL : ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿರುವ ಸಮಯಕ್ಕೆ ಸರಿಯಾಗಿ 108 ಆಂಬುಲೆನ್ಸ್ ಸೇವೆ ದೊರೆಯುತ್ತಿಲ್ಲ ಎಂದು ಆರೋಪಿಸಿ ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ಶರತ್ ಕಾಳಮಂಜಿ ನೇತೃತ್ವದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗ್ರಾಮಸ್ಥರು ಮೌನ ಪ್ರತಿಭಟನೆ ನಡೆಸಿದರು. ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್ ವಾಹನ ಲಭ್ಯವಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಓಡಾಟದ ಕುರಿತು ಯಾವುದೆ ಮಾಹಿತಿ ಲಭ್ಯವಿಲ್ಲ. ಆದ್ದರಿಂದ … Read more