ಬೆಳ್ಳಂಬೆಳಗ್ಗೆ ಸಾಗರದ ವಿವಿಧೆಡೆ ನಡು ರಸ್ತೆಯಲ್ಲಿ ಟೈರ್‌ಗೆ ಬೆಂಕಿ, ಕಾರಣವೇನು?

agara-Bandh-called-today.

ಸಾಗರ: ಸಾಗರವನ್ನು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಇಂದು ವಿವಿಧ ಸಂಘಟನೆಗಳು ಬಂದ್‌ಗೆ (sagara bandh) ಕರೆ ನೀಡಿವೆ. ಬಂದ್‌ ಹಿನ್ನೆಲೆ ಈಗಾಗಲೆ ಸಾಗರ ಪಟ್ಟಣದ ವಿವಿಧೆಡೆ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಗಿದೆ. ಬೆಳ್ಳಂಬೆಳಗ್ಗೆ ಸಾಗರ ಪಟ್ಟಣದ ಕೋರ್ಟ್ ಸಮೀಪ, ಐತಪ್ಪ ಸರ್ಕಲ್ ಸೇರಿದಂತೆ ವಿವಿಧೆಡೆ ನಡು ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಗಿದೆ. ಸಾಗರ ಜಿಲ್ಲೆ ಹೋರಾಟ ಸಮಿತಿ ವತಿಯಿಂದ ಇವತ್ತು ಸಾಗರ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಇದನ್ನೂ … Read more

ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ

Sagara-City-Muncipality-Nagarasabhe

ಸಾಗರ: ನಗರ ವ್ಯಾಪ್ತಿಯ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣ ಇನ್ನಿತರೆ ಕಡೆಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ನಗರಸಭೆ ಸೂಚಿಸಿದೆ (strict notice). ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಸಂಸ್ಥೆಗಳ ಆವರಣದಲ್ಲಿ ಯಾವುದೇ ಬೀದಿನಾಯಿಗಳು ವಾಸವಿದ್ದಲ್ಲಿ ಅವುಗಳನ್ನು ಪರಿಶೀಲಿಸಿ ಕೂಡಲೇ ಅವುಗಳ ಸಂಖ್ಯೆಯನ್ನು ಲೆಕ್ಕಹಾಕಿ ನಗರಸಭೆಗೆ ತಿಳಿಸಬೇಕು ಎಂದು ತಿಳಿಸಿದೆ. ಸಂಸ್ಥೆ ಆವರಣದಲ್ಲಿ ಬೀದಿನಾಯಿ ಉಪಟಳ ತಡೆಯಲು ಹಾಗೂ ಬೀದಿನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಂಸ್ಥೆ ವ್ಯಾಪ್ತಿಯಲ್ಲಿ ನಾಯಿ ವಾಸ … Read more

ಬಾವಿಗೆ ಬಿದ್ದ ಗೂಳಿ, ಹರಸಾಹಸ ಮಾಡಿ ಮೇಲೆತ್ತಿದ ಅಗ್ನಿಶಾಮಕ ಸಿಬ್ಬಂದಿ, ಆಗಿದ್ದೆಲ್ಲಿ?

Bull-rescued-from-the-well-in-Sagara

ಸಾಗರ: ಇಲ್ಲಿನ ಸೊರಬ ರಸ್ತೆಯ ಚಂದ್ರಮಾವಿನಕೊಪ್ಪಲು ಸಮೀಪ ಆನಂದ್ ಎಂಬುವವರ ಮನೆ ಹಿಂಭಾಗದ ಸುಮಾರು 20 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಗೂಳಿಯನ್ನು (Bull Rescued)  ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಗೂಳಿಯು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ತಂಡವು ಸುಮಾರು ಎರಡು ಗಂಟೆ ಕಠಿಣ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ … Read more

BREAKING NEWS – ಸಾಗರ ಬಂದ್‌, ದಿನಾಂಕ ಪ್ರಕಟಿಸಿದ ಹೋರಾಟ ಸಮಿತಿ, ಬಂದ್‌ಗೆ ಕಾರಣವೇನು?

sagara-bandh-press-meet

ಸಾಗರ: ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಡಿಸೆಂಬರ್‌ 17ರಂದು ಸಾಗರ ಬಂದ್‌ (Sagara Bandh) ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟೆನೆಗಳು ಬೆಂಬಲ ನೀಡಿವೆ ಎಂದು ಸಾಗರ ಜಿಲ್ಲೆ ಹೋರಾಟ ಸಮಿತಿಯ ತೀ.ನಾ.ಶ್ರೀನಿವಾಸ್‌ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್‌, ಸಾಗರವನ್ನು ಜಿಲ್ಲೆ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಬಂದ್‌ ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು. ತೀರ್ಥಹಳ್ಳಿ, ಶಿಕಾರಿಪುರಕ್ಕೆ ಹೋಲಿಕೆ ಮಾಡಿದರೆ … Read more

ಮಲೆನಾಡು ಶಾಸಕರಿಂದ ವಿಧಾನಸಭೆ ಸ್ಪೀಕರ್‌ಗೆ ಪತ್ರ, ಏನಿದೆ ಪತ್ರದಲ್ಲಿ? ಎಂಎಲ್‌ಎ ಹೇಳಿದ್ದೇನು?

Sagara-Beluru-Gopalakrishna-press-meet

ಸಾಗರ: ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಕಾಲವಕಾಶ ಕೋರಿ ಮಲೆನಾಡು ಭಾಗದ ಶಾಸಕರಿಂದ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕುಪತ್ರ, ವನ್ಯಜೀವಿಗಳ ಉಪಟಳ, ಅಡಿಕೆಗೆ ರೋಗಬಾಧೆ ಮತ್ತಿತರ ಸಮಸ್ಯೆಗಳು ಮಲೆನಾಡು ಜನರನ್ನು ಪ್ರತಿನಿತ್ಯ ಕಾಡುತ್ತಿವೆ. ಈ ಬಗ್ಗೆ ಶಾಸನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡು ಭಾಗದ ಶಾಸಕರೆಲ್ಲರೂ ಪಕ್ಷಾತೀತವಾಗಿ … Read more

ಜೋಗ ಮೆಸ್ಕಾಂ ವ್ಯಾಪ್ತಿಯಲ್ಲಿ ನಾಳೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ?

power cut mescom ELECTRICITY

ಕಾರ್ಗಲ್: ಹಳೆಯ ವಾಹಕ ಬದಲಾವಣೆ ಕಾಮಗಾರಿ ಕಾಮಗಾರಿ ಹಿನ್ನೆಲೆ ನ.25ರಂದು ಜೋಗ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಕಾರ್ಗಲ್‌ ಪಟ್ಟಣ ಪ್ರದೇಶ, ಭಾರಂಗಿ ಹೋಬಳಿಯ ಅರಳಗೋಡು ಮತ್ತು ಭಾನ್ಕುಳಿ ಪಂಚಾಯಿತಿ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೋಗ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರವೀಣ್‌ ತಿಳಿಸಿದ್ದಾರೆ. ಇದನ್ನೂ ಓದಿ » ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು

ರಾತ್ರೋರಾತ್ರಿ ಅಡಿಕೆ ಮರದಿಂದಲೇ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳವು

Areca-Farm-Adike-tota-in-Shimoga

ಆನಂದಪುರಂ: ಸಮೀಪದ ಗೌತಮಪುರದ ನಿವೃತ್ತ ಶಿಕ್ಷಕ ಮಂಜಪ್ಪ ಎಂಬುವವರ ಅಡಿಕೆ ತೋಟದಲ್ಲಿ ಮರದಿಂದ ಗೊನೆಗಳ ಕಳವು ಮಾಡಲಾಗಿದೆ. ಕೊಯ್ಲಿನ ಹಂತದಲ್ಲಿದ್ದ ಐದು ಕ್ವಿಂಟಾಲ್‌ನಷ್ಟು ಅಡಿಕೆ ಕಳುವಾಗಿದೆ ಎಂದು ತೋಟದ ಮಾಲೀಕ ಮಂಜಪ್ಪ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿನಿಮಾ ನಿರ್ಮಾಣಕ್ಕೆ ಕಂಠೀರವ ಸ್ಟುಡಿಯೊ, ಏನಂದ್ರು ಅಧ್ಯಕ್ಷರು?

ಆರು ಪೌರಾಣಿಕ ಪ್ರಸಂಗಗಳ ಯಕ್ಷಗಾನ ಪ್ರದರ್ಶನ, 50ಕ್ಕು ಹೆಚ್ಚು ಕಲಾವಿದರು ಭಾಗಿ

Sagara-News-Update.

ಸಾಗರ: ಲಾಲ್‌ ಬಹದ್ದೂ‌ರ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ನ.23ರಂದು ವಿದ್ವಾನ್ ದತ್ತಮೂರ್ತಿ ಭಟ್ ಅವರ ನಾಟ್ಯಶ್ರೀ ಕಲಾ ತಂಡ ಮತ್ತು ಶ್ರೀ ಗುರು ಯಕ್ಷಗಾನ ಮಂಡಳಿ ಸಾಗರ – ಶಿವಮೊಗ್ಗ ಅವರಿಂದ ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೆ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ದುಶ್ಯಂತ – ಶಾಕುಂತಲಾ, ಆದಿಚುಂಚನಗಿರಿ ಶ್ರೀ ಕಾಲಭೈರವೇಶ್ವರ ಮಹಾತ್ಮೆ, ದ್ರುಪದ ಗರ್ವಭಂಗ, ಲವಕುಶ, ರಾಜಾ ಉಗ್ರಸೇನ, ಚಕ್ರವ್ಯೂಹ ಹೀಗೆ ಆರು ಕಥಾನಕಗಳನ್ನು ಪ್ರಸಿದ್ಧ ಕಲಾವಿದರು ಪ್ರಸ್ತುತ ಪಡಿಸುವರು. ಸಾಗರದಲ್ಲಿ … Read more

ತುಮರಿ ಸುತ್ತಮುತ್ತ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಇಲ್ಲಿದೆ ಊರುಗಳ ಪಟ್ಟಿ

TUMARI-SAGARA-NEWS-1.jpg

ತುಮರಿ: ಬ್ಯಾಕೋಡಿನ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ನ. 20ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಜೋಗ ಉಪ ವಿಭಾಗದ ವಿವಿಧೆಡೆ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಸ್ಎಸ್ ಭೋಗ್, ತುಮರಿ, ಕುದರೂರು ಹಾಗೂ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ, … Read more

ಜನರ ಸಮಸ್ಯೆ ಆಲಿಸಲು ಸಚಿವರಿಂದ ಜನಸ್ಪಂದನಾ ಸಭೆ, ದಿನಾಂಕ, ಸ್ಥಳ ಪ್ರಕಟ

Madhu-Bangarappa-Minister

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ನ.18 ರಂದು ಸಾಗರ ತಾಲೂಕು ತಾಳಗುಪ್ಪದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 1.30ಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ  ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಮಟ್ಟದ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಗತ್ಯ ಮಾಹಿತಿಯೊಂದಿಗೆ ತಾವೇ ಖುದ್ದಾಗಿ ತಪ್ಪದೇ ಹಾಜರಾಗಬೇಕು. ತಮ್ಮ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಾಗರ ತಹಶೀಲ್ದಾರ್‌ … Read more