BREAKING NEWS – ಸಾಗರ ಬಂದ್‌, ದಿನಾಂಕ ಪ್ರಕಟಿಸಿದ ಹೋರಾಟ ಸಮಿತಿ, ಬಂದ್‌ಗೆ ಕಾರಣವೇನು?

ಸಾಗರ: ಜಿಲ್ಲಾ ಕೇಂದ್ರ ಮಾಡಬೇಕು ಎಂದು ಆಗ್ರಹಿಸಿ ಡಿಸೆಂಬರ್‌ 17ರಂದು ಸಾಗರ ಬಂದ್‌ (Sagara Bandh) ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟೆನೆಗಳು ಬೆಂಬಲ ನೀಡಿವೆ ಎಂದು ಸಾಗರ ಜಿಲ್ಲೆ ಹೋರಾಟ ಸಮಿತಿಯ ತೀ.ನಾ.ಶ್ರೀನಿವಾಸ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್‌, ಸಾಗರವನ್ನು ಜಿಲ್ಲೆ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಬಂದ್‌ ಮಾಡಲಾಗುತ್ತಿದೆ. ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.

sagara-bandh-press-meet

ತೀರ್ಥಹಳ್ಳಿ, ಶಿಕಾರಿಪುರಕ್ಕೆ ಹೋಲಿಕೆ ಮಾಡಿದರೆ ಸಾಗರದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ. ಜಿಲ್ಲೆ ಮಾಡಿದರೆ ಅಭಿವೃದ್ಧಿ ಆಗಲಿದೆ. ತಮ್ಮ ಮನವಿಗೆ ಸ್ಪಂದಿಸಿದ ಶಾಸಕರು ಜಿಲ್ಲೆ ಮಾಡುವ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆದರೆ ಹೋರಾಟ ಸಮಿತಿಯ ಪ್ರಮುಖರು ಮುಖ್ಯಮಂತ್ರಿ ಭೇಟಿಗೆ ಶಾಸಕರು ವ್ಯವಸ್ಥೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ » ಭದ್ರಾವತಿಯಲ್ಲಿ ಡಬಲ್‌ ಮರ್ಡರ್‌, 25 ವರ್ಷದ ಯುವಕ, 65 ವರ್ಷದ ವ್ಯಕ್ತಿಯ ಹತ್ಯೆ, ಕಾರಣವೇನು?

ಸುದ್ದಿಗೋಷ್ಠಿಯಲ್ಲಿ ಸಾಗರ ಜಿಲ್ಲೆ ಹೋರಾಟ ಸಮಿತಿಯ ಪ್ರಮುಖರಾದ ಸುಂದರ್‌ ಸಿಂಗ್‌, ಕಾಸಿಂ ಸಾಬ್‌, ಜಯರಾಂ, ಅಕ್ಬರ್‌, ಡಿ.ಕೆ.ವೆಂಕಟೇಶ್‌, ಮಂಜುನಾಥ್‌ ಆಚಾರ್‌ ಸೇರಿ ಹಲವರು ಇದ್ದರು.

Sagara Bandh

sagara-bandh-press-meet

Leave a Comment