ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳ ವಿವರ – ಕಳೆದ 24 ಗಂಟೆಯ ರಿಪೋರ್ಟ್‌

Rain-at-Shimoga-Kote-Road

SHIVAMOGGA LIVE | 23 JULY 2023 SHIMOGA : ಇನ್ನು 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ಸೇರಿ ರಾಜ್ಯದ 31 ತಾಲೂಕುಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದೆ. ಅತಿ ಹಚ್ಚು ಮಳೆ (Heavy Rain) ಕಂಡಿರುವ ಶಿವಮೊಗ್ಗದ ಟಾಪ್‌ 10 … Read more

ಶಿವಮೊಗ್ಗಕ್ಕೆ ರಾಜ್ಯಪಾಲ ಥಾವರ್‌ ಚೆಂದ್‌ ಗೆಹ್ಲೋಟ್‌, 2 ದಿನ ಪ್ರವಾಸ, ಎಲ್ಲಿಗೆಲ್ಲ ಭೇಟಿ ನೀಡಲಿದ್ದಾರೆ?

Karnataka-Governer-Thawar-Chand-Gehlot-in-Kuvempu-University

SHIVAMOGGA LIVE | 19 JULY 2023 SHIMOGA : ರಾಜ್ಯಪಾಲ (Governor) ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಎರಡು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಜು.21 ಮತ್ತು 22ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಎರಡು ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲರ ಭೇಟಿಯ ವಿವರ ರಾಜ್ಯಪಾಲ (Governor) ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಜು.21ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ರಾಜಭವನದಿಂದ ನಿರ್ಗಮಿಸಲಿದ್ದಾರೆ. ಚಿತ್ರದುರ್ಗ ಮಾರ್ಗವಾಗಿ ಮಧ್ಯಾಹ್ನ 1.45ಕ್ಕೆ ಶಿವಮೊಗ್ಗ ತಲುಪಲಿದ್ದಾರೆ. ನಗರದ … Read more

ಅಂಗನವಾಡಿ ಬೀಗ ಮುರಿದ ಕಳ್ಳರು, ಮಕ್ಕಳ ಪಾಲಿನ ಬೇಳೆ ಚೆಲ್ಲಿ, ಮೊಟ್ಟೆ ಒಡೆದು ಹಾಕಿದ ಖದೀಮರು

Anganavadi-Theft-Attempt-at-Sagara

SHIVAMOGGA LIVE | 18 JULY 2023 SAGARA : ಅಂಗಡಿಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಈ ವೇಳೆ ಅಂಗನವಾಡಿಯಲ್ಲಿದ್ದ ಬೇಳೆ ಚೀಲ ಹರಿಯಲಾಗಿದೆ. ಮಕ್ಕಳಿಗೆ ಕೊಡಲು ಇಟ್ಟಿದ್ದ ಮೊಟ್ಟೆಗಳನ್ನು ಒಡೆದು ಹಾಕಲಾಗಿದೆ. ಸಾಗರ ಪಟ್ಟಣದ ಅರಳಿಕಟ್ಟೆ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿಯಲ್ಲಿ ಭಾನುವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಕಳ್ಳರು ಅಂಗನವಾಡಿ ಕೇಂದ್ರದಲ್ಲಿದ್ದ ಬೇಳೆ ಚೀಲವನ್ನು ಹರಿದು ಬೇಳೆಯನ್ನು ಚೆಲ್ಲಿದ್ದಾರೆ. ಮೊಟ್ಟೆಗಳ ಒಡೆದು ಹಾಕಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ KSRTC ಬಸ್‌ … Read more

ಹೆದ್ದಾರಿಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್

Private-Bus-Incident-near-hosuru-in-Sagara

SHIVAMOGGA LIVE | 17 JULY 2023 SAGARA | ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ (Private Bus) ಸುಟ್ಟು ಹೋಗಿದೆ. ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿತ್ತು. ಇದನ್ನೂ ಓದಿ – ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ … Read more

ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ ಕದ್ದ ಖದೀಮರು

Electric-Wire-Theft-at-Sagara-SS-Bhog-village

SHIVAMOGGA LIVE | 17 JULY 2023 SAGARA : ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ರಾತ್ರೋರಾತ್ರಿ ವಿದ್ಯುತ್‌ ತಂತಿ  (Power Cable) ಕಳ್ಳತನ ಮಾಡಲಾಗಿದೆ. ಸುಮಾರು ಒಂದು ಸಾವಿರ ಮೀಟರ್‌ ವಿದ್ಯುತ್‌ ತಂತಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ಏನಿದು ಪ್ರಕರಣ? ಸಾಗರ ತಾಲೂಕು ಎಸ್‌.ಎಸ್.ಭೋಗ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಸೇರಿದಂತೆ ಇತರೆ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಲಾಗಿದೆ. ಕಳ್ಳರು ಇಕ್ಕಿಬೀಳು ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್‌ ಹರಿವು ನಿಲ್ಲಿಸಿ, ಚಾರ್ಜರ್‌ … Read more

ಹೈವೇಯಲ್ಲಿ ಅಪಘಾತ, ಕಾರಿನ ಹಿಂಬದಿ ಸೀಟ್‌ನಲ್ಲಿದ್ದ ಡ್ರಮ್‌ ಕಂಡು ಜನಕ್ಕೆ ಶಾಕ್‌ – ಮತ್ತಷ್ಟು ಸುದ್ದಿ ಇಲ್ಲಿದೆ

Suspicious-Drum-found-in-a-car-near-Iginabailu

SHIVAMOGGA LIVE | 16 JULY 2023 ಅಪಘಾತಕ್ಕೀಡಾದ ಕಾರಿನ ಹಿಂಬದಿ ಸೀಟಿನಲ್ಲಿ ಡ್ರಮ್‌ನಲ್ಲಿ ಮಾಂಸ SAGARA : ಚಲಿಸುತ್ತಿದ್ದ ಎರಡು ಕಾರುಗಳಿಗೆ (CAR) ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಈ ವೇಳೆ ಒಂದು ಕಾರಿನ ಹಿಂಬದಿ ಸೀಟ್‌ನಲ್ಲಿ ಡ್ರಮ್‌ನಲ್ಲಿ ಮಾಂಸ ಪತ್ತೆಯಾಗಿದ್ದು, ಗೋಮಾಂಸದ ಕುರಿತು ಶಂಕೆ ವ್ಯಕ್ತವಾಗಿದೆ. ಸಾಗರ ತಾಲೂಕು ಐಗಿನ ಬೈಲು ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್‌, ಇನ್ನೋವಾ ಮತ್ತು ಅಸೆಂಟ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಕಾರುಗಳು ರಸ್ತೆ ಬದಿಗೆ ಹೋಗಿ … Read more

ಸಿಗಂದೂರು, ಹಸಿರುಮಕ್ಕಿ ಲಾಂಚ್‌ಗಳ ಸೇವೆ ಯಥಾಸ್ಥಿತಿಗೆ, ಸ್ಥಳೀಯರಲ್ಲಿ ನಿಟ್ಟುಸಿರು, ಪ್ರವಾಸಿಗರು ಫುಲ್‌ ಖುಷ್‌

Sigandur-Launch-in-Sharavathi-River

SHIVAMOGGA LIVE | 10 JULY 2023 SAGARA / HOSANAGARA : ಶರಾವತಿ ಹಿನ್ನೀರು ಭಾಗದಲ್ಲಿ ಲಾಂಚ್‌ಗಳ (Launch) ಸೇವೆ ಯಥಾಸ್ಥಿತಿಗೆ ಮರಳಿವೆ. ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಹಸಿರುಮಕ್ಕಿ ಲಾಂಚ್‌ ಸೇವೆ ಸ್ಥಗಿತವಾಗಿತ್ತು. ಸಿಗಂದೂರು ಲಾಂಚ್‌ನಲ್ಲಿ ಜನ ಸಂಚಾರಕ್ಕಷ್ಟೆ ಅವಕಾಶ ಕಲ್ಪಿಸಲಾಗಿತ್ತು. ನೀರಿನ ಮಟ್ಟ ಹೆಚ್ಚಳ ಆಗಿರುವುದರಿಂದ ಲಾಂಚ್‌ ಸೇವೆ ಯಥಾಸ್ಥಿತಿಗೆ ಮರಳಿದೆ. ಇದರಿಂದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ. ಯಥಾಸ್ಥಿತಿಗೆ ಸಿಗಂದೂರು ಲಾಂಚ್‌ ಸಿಗಂದೂರು ಲಾಂಚ್‌ (Launch) ಸೇವೆ ಯಥಾಸ್ಥಿತಿಗೆ ಮರಳಿದೆ. ಶರಾವತಿ ನದಿಯಲ್ಲಿ … Read more

ಜೋಗ ಜಲಪಾತದ ವೈಭವ, ಕಣ್ತುಂಬಿಕೊಳ್ಳಲು ಜನವೋ ಜನ

Jog-Falls-during-Monsoon-with-mist-covered.

SHIVAMOGGA LIVE | 9 JULY 2023 SAGARA : ವೀಕೆಂಡ್ ಹಿನ್ನೆಲೆ ವಿಶ್ವವಿಖ್ಯಾತ ಜೋಗ ಜಲಪಾತ (JOG FALLS) ವೀಕ್ಷಣೆಗೆ ಇವತ್ತು ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ಮಂಜಿನ ಮರೆಯಲಿ, ಜೋರು ಮಳೆಯ ನಡುವೆ ಜಲಪಾತದಲ್ಲಿ ನೀರು ಧುಮ್ಮಿಕ್ಕುವುದನ್ನು ಕಣ್ತುಂಬಿಕೊಂಡು ಪ್ರವಾಸಿಗರು ಖುಷಿ ಪಟ್ಟರು. ಉತ್ತರ ಕನ್ನಡ ಜಿಲ್ಲೆ ಮತ್ತು ಸಾಗರ ತಾಲೂಕಿನಲ್ಲಿ ಮಳೆ ಜೋರಾಗಿದೆ. ಈ ಹಿನ್ನೆಲೆ ಜೋಗ ಜಲಪಾತ ಕಳೆಗಟ್ಟಿದೆ. ರಾಜ, ರಾಣಿ, ರೋರರ್‌, ರಾಕೆಟ್‌ ಜಲಪಾತಗಳು ಭೊರ್ಗರೆಯುತ್ತ ಧುಮ್ಮಕ್ಕುತ್ತಿವೆ. ಇದನ್ನು ಕಣ್ತುಂಬಿಕೊಳ್ಳಲು ದೂರದೂರುಗಳಿಂದ ಪ್ರವಾಸಿಗರು … Read more

ಕಂಡಕಂಡಲ್ಲಿ ಉಪಟಳ, ಪುಂಡಾಟ ಮಾಡಿದ ಹುಚ್ಚು ಹಸು, ಸುರಿಯುವ ಮಳೆಯಲ್ಲೂ ಬಲೆ ಬೀಸಿದ ಯುವಕರು

Youths-Caught-Lunatic-Cow-at-Sagara-vinobanagara

SHIVAMOGGA LIVE | 9 JULY 2023 SAGARA : ಕೆಲವು ದಿನದಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಹುಚ್ಚು ಹಸುವೊಂದನ್ನು (Cow) ಮೂವರು ಯುವಕರು ಸಾರ್ವಜನಿಕರ ಸಹಕಾರದೊಂದಿಗೆ ಹರಸಾಹಸ ಪಟ್ಟು ಹಿಡಿದಿದ್ದಾರೆ. ನಾಲ್ಕೈದು ದಿನದಿಂದ ಸಾಗರ ಪಟ್ಟಣದ ವಿವಿಧೆಡೆ ಹುಚ್ಚು ಹಿಡಿದ ಹಸುವೊಂದು ಉಪಟಳ ನೀಡುತ್ತಿತ್ತು. ಜನರು, ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಶುಕ್ರವಾರ ಬೆಳಗ್ಗೆ ಮಂಕಳಲೆ ಭಾಗದಲ್ಲಿ ಹಸು ತೊಂದರೆ ಕೊಟ್ಟಿತ್ತು. ಮಧ್ಯಾಹ್ನದ ವೇಳೆಗೆ ವಿನೋಬಗರದಲ್ಲಿ ಪುಂಡಾಟ ಮಾಡಿತ್ತು. ಗಾಂಧಿ ನಗರದ ಆನಂದ್‌, ಮಾರುತಿ … Read more

ಶಾಲೆಗಳಿಗೆ ರಜೆ ವಿಚಾರ, ವೈರಲ್‌ ಆಯ್ತು ತಪ್ಪು ಸಂದೇಶ, ವಾಸ್ತವದಲ್ಲಿ ಶಿಕ್ಷಣ ಇಲಾಖೆ ಘೋಷಿಸಿದ್ದೇನು?

Maxx-Hospital-lady-Staff-walking-holding-umbrella-in-Rain

SHIVAMOGGA LIVE | 7 JULY 2023 SAGARA / HOSANAGARA : ವ್ಯಾಪಕ ಮಳೆಯಾಗುತ್ತಿರುವ ಪ್ರದೇಶದಲ್ಲಿ ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಮತ್ತು ಆಡಳಿತ ಮಂಡಳಿ ತೀರ್ಮಾನದಂತೆ ರಜೆ (Holiday) ಘೋಷಿಸಲು ಶಿಕ್ಷಣ ಇಲಾಖೆ ಮೌಖಿಕವಾಗಿ ಆದೇಶಿಸಿದೆ. ಈ ಮಧ್ಯೆ ಶಾಲೆಗಳಿಗೆ ರಜೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಗೊಂದಲ ಸೃಷ್ಟಿಯಾಗಿತ್ತು. ಸಾಗರದ ಕರೂರು ಹೋಬಳಿ ಸಾಗರ ತಾಲೂಕು ಕರೂರು ಹೋಬಳಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 82.4 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ … Read more