ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್‌ 10 ಜಾಗಗಳ ವಿವರ – ಕಳೆದ 24 ಗಂಟೆಯ ರಿಪೋರ್ಟ್‌

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE | 23 JULY 2023

SHIMOGA : ಇನ್ನು 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮೂರು ಸೇರಿ ರಾಜ್ಯದ 31 ತಾಲೂಕುಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

Hitech ready compound

ಮತ್ತೊಂದೆಡೆ ಜಿಲ್ಲೆಯಾದ್ಯಂತ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದೆ. ಅತಿ ಹಚ್ಚು ಮಳೆ (Heavy Rain) ಕಂಡಿರುವ ಶಿವಮೊಗ್ಗದ ಟಾಪ್‌ 10 ಸ್ಥಳಗಳ ವಿವರ ಇಲ್ಲಿದೆ.

ತೀರ್ಥಹಳ್ಳಿಯ ಆಗುಂಬೆ – 207.5 ಮಿ.ಮೀ

ಹೊಸನಗರದ ಸೋನಲೆ – 162.5 ಮಿ.ಮೀ

ಹೊಸನಗರದ ತ್ರಿಣಿವೆ – 151 ಮಿ.ಮೀ

ಹೊಸನಗರದ ಸುಳಗೋಡು – 130 ಮಿ.ಮೀ

ತೀರ್ಥಹಳ್ಳಿಯ ಹಾದಿಗಲ್ಲು – 129 ಮಿ.ಮೀ

ಹೊನಸಗರ ಮೇಲಿನ ಬೆಸಿಗೆ – 119 ಮಿ.ಮೀ

ತೀರ್ಥಹಳ್ಳಿಯ ಬಿದರಗೋಡು – 113 ಮಿ.ಮೀ

ಹೊನಸಗರದ ನಗರ – 110.5 ಮಿ.ಮೀ

ತೀರ್ಥಹಳ್ಳಿಯ ಹೊನ್ನೇತಾಳು – 106 ಮಿ.ಮೀ

ಹೊಸನಗರದ ಮುಂಬಾರು – 105.5 ಮಿ.ಮೀ

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಅಲರ್ಟ್‌, ತುಂಗಾ ಡ್ಯಾಂ ಎಲ್ಲ ಗೇಟ್‌ ಓಪನ್‌, ನಗರದಲ್ಲಿ ನದಿ ನೀರಿನ ಮಟ್ಟ ಏರಿಕೆ

ಆಗಂಬೆಗೆ ರಾಜ್ಯದಲ್ಲೇ ಎರಡನೇ ಸ್ಥಾನ

ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರದೇಶಗಳ ಪೈಕಿ ತೀರ್ಥಹಳ್ಳಿಯ ಆಗುಂಬೆ ಎರಡನೇ ಸ್ಥಾನದಲ್ಲಿದೆ. ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ನಿಲ್ಕುಂದದಲ್ಲಿ 217 ಮಿ.ಮೀ ಮಳೆಯಾಗಿದೆ. ಆಗುಂಬೆಯಲ್ಲಿ 207.5 ಮಿಮೀ ಮಳೆಯಾಗಿದೆ.

Parishrama NEET Academy

ಹೆಚ್ಚಿನ Shimoga News, Shivamogga News ಮತ್ತು NEWS, HOSANAGARA, SAGARA, THIRTHAHALLI ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಜುಲೈ 23, 2023

Leave a Comment