ಸಿಗಂದೂರು ರಸ್ತೆಯಲ್ಲಿ ಹಿಟ್ ಅಂಡ್ ರನ್, ಪಾದಚಾರಿ ಸ್ಥಳದಲ್ಲೇ ಸಾವು

Breaking News Plate

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜುಲೈ 2021 ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರದ ಸಿಗಂದೂರು ರಸ್ತೆಯ ಸಂಜಯ್ ಮೆಮೋರಿಯಲ್ ಕಾಲೇಜು ಬಳಿ ಘಟನೆ ಸಂಭವಿಸಿದೆ. ಆದಿಶಕ್ತಿ ನಗರದ ಬಾಬು (47) ಎಂಬಾತ ಮೃತ ದುರ್ದೈವಿ. ಸಂಜೆ ಘಟನೆ ಸಂಭವಿಸಿದೆ. ಬಾಬು ಅವರು ನಡೆದು ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಬು ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ವಾಹನ ಪರಾರಿಯಾಗಿದೆ. ಸಾಗರ ಠಾಣೆ ಇನ್ಸ್​​ಪೆಕ್ಟರ್​​ … Read more

ಸಿಗಂದೂರಿಗೆ ಇವತ್ತು ಜನವೋ ಜನ, ಕೋವಿಡ್ ನಿಯಮ ಕೇಳೋರಿಲ್ಲ, ದ್ವೀಪದ ಜನರಲ್ಲಿ ಢವಢವ

090721 No Covid Rules During in Sigandur Launch 1

ಶಿವಮೊಗ್ಗ ಲೈವ್.ಕಾಂ | TUMARI NEWS | 9 ಜುಲೈ 2021 ಅಮವಾಸ್ಯೆ ಹಿನ್ನೆಲೆ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಇವತ್ತು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬಹುತೇಕರು ಕೋವಿಡ್ ನಿಯಮಕ್ಕೆ ಕ್ಯಾರೆ ಅನ್ನದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಅಮವಾಸ್ಯೆ ಮತ್ತು ಶುಕ್ರವಾರ ಆದ್ದರಿಂದ ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ಬೆಳಗ್ಗೆಯಿಂದ ದೊಡ್ಡ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ. ದೂರದ ಊರುಗಳಿಂದ ವಾಹನಗಳಲ್ಲಿ ಬರುತ್ತಿರುವ ಭಕ್ತರು ಲಾಂಚ್‍ನಲ್ಲಿ ಹೊಳೆ ದಾಟುತ್ತಿದ್ದಾರೆ. ಕೋವಿಡ್ ನಿಯಮ ಮಾಯ ಲಾಕ್ ಡೌನ್ ಇದ್ದ … Read more

ಜೋಗ ಜಲಪಾತ ವೀಕ್ಷಣೆಗೆ ಬರ್ತಿಲ್ಲ ಜನ, ವೀಕೆಂಡ್ ಲಾಕ್ಡೌನ್ ತೆರವು ಕಾರಣಾನಾ?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SAGARA NEWS | 9 ಜುಲೈ 2021 ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ವೀಕೆಂಡ್‍ನಲ್ಲಿ ಹೆಚ್ಚಿನ ಪ್ರವಾಸಿಗರು ಜೋಗಕ್ಕೆ ಬರುವ ನಿರೀಕ್ಷೆ ಇದೆ. ಜಲಪಾತದ ಹಿನ್ನೀರು ಭಾಗದಲ್ಲಿ ಮಳೆಯಾಗುತ್ತಿದೆ. ಹಾಗಾಗಿ ಜೋಗ ಜಲಪಾತದ ರಾಜಾ, ರಾಣಿ, ರೋರರ್, ರಾಕೆಟ್ ಜಲಪಾತಗಳು ಧುಮ್ಮಿಕ್ಕುತ್ತಿವೆ. ಇದು ನಯನ ಮನೋಹರ ದೃಶ್ಯವಾಗಿದೆ. ಲಾಕ್‍ಡೌನ್ ಬಳಿಕ ಆರಂಭಿಕ ಉತ್ಸಾಹ ಲಾಕ್‍ ಡೌನ್ ಹಿನ್ನೆಲೆ ಜೋಗ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. … Read more

ಅಬಕಾರಿ ಇಲಾಖೆ ಅಧಿಕಾರಿಗಳಿಂದ ಮೂರು ಕಡೆ ದಾಳಿ

080721 Abakari Raid at Sagara Soraba 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2021 ಅಬಕಾರಿ ಇಲಾಖೆ ಅಧಿಕಾರಿಗಳು ಇವತ್ತು ಮೂರು ಕಡೆ ದಾಳಿ ನಡೆಸಿದ್ದಾರೆ. ಕಳ್ಳಬಟ್ಟಿ ಮತ್ತು ಅದನ್ನು ತಯಾರಿಸಲು ಇರಿಸಿದ್ದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲೆಲ್ಲಿ ದಾಳಿ ಮಾಡಲಾಗಿದೆ? ದಾಳಿ 1 – ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಗ್ರಾಮದ ಬಲವೀಂದ್ರಪ್ಪ  ಎಂಬುವವರ ಮನೆ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯ ಹಿಂಬದಿಯಲ್ಲಿ ಕಳ್ಳಬಟ್ಟಿ ತಯಾರಿಗೆ ಸಂಗ್ರಹಿಸಿ ಇಟ್ಟಿದ್ದ 110 ಲೀಟರ್ ಬೆಲ್ಲದ … Read more

ಮನೆಯಲ್ಲಿ ಅಡುಗೆ ಅನಿಲ ಸೋರಿಕೆ, ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ

070721 Sagara gas leakage in house resuce 1

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಜುಲೈ 2021 ಯುವಕರ ಸಮಯ ಪ್ರಜ್ಞೆಯಿಂದಾಗಿ ಸಾಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿದ ಯುವಕರು, ಅನಿಲ ಸೋರಿಕೆಯನ್ನು ತಡೆದಿದ್ದಾರೆ. ಏನಿದು ಘಟನೆ? ಸಾಗರ ಪಟ್ಟಣದ ಎಸ್‍.ಎನ್.ನಗರದ ಬಾಳೆಕಾಯಿ ನಾಗರಾಜ್ ಅವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದೆ. ಇದರಿಂದ ಮನೆಯಲ್ಲಿದ್ದವರು ಆತಂಕಕ್ಕೀಡಾಗಿದ್ದರು. ಅಕ್ಕಪಕ್ಕದ ಮನೆಗಳಲ್ಲೂ ಭೀತಿ ಸೃಷ್ಟಿಯಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ನಾಗರಾಜ್, ವಿನೋದ್ ರಾಜ್, ಪ್ರಕಾಶ್, ರವಿ, ಸ್ಥಳೀಯ … Read more

ಕಂಬದಲ್ಲಿ ದುರಸ್ತಿ ವೇಳೆ ಪವರ್ ಮ್ಯಾನ್​​ಗೆ ವಿದ್ಯುತ್ ಶಾಕ್, ಸಾವು

sagara graphics

ಶಿವಮೊಗ್ಗ ಲೈವ್.ಕಾಂ | SAGARA NEWS | 7 ಜುಲೈ 2021 ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ಅವಘಡ ಸಂಭವಿಸಿದ್ದು ಕಿರಿಯ ಪವರ್‍ ಮ್ಯಾನ್ ಮೃತಪಟ್ಟಿದ್ದಾರೆ. ಸುಳ್ಳಳ್ಳಿ ಬ್ಯಾಕೋಡು ಭಾಗದ ಹೊಸ್ಮನೆ ಜಯೇಂದ್ರ (30) ಮೃತ ದುರ್ದೈವಿ. ವಿದ್ಯುತ್ ಶಾಕ್‍ಗೆ ಒಳಗಾದ ಕೂಡಲೆ ಜಯೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಾಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಕಾಲೇಜು ಸಮೀಪ ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ಶಾಕ್‍ಗೆ ಒಳಗಾಗಿ … Read more

ಬ್ಯಾಕೋಡು ಜೋಡಿ ಕೊಲೆ ಘಟನಾ ಸ್ಥಳಕ್ಕೆ ಕಾಗೋಡು ತಿಮ್ಮಪ್ಪ ಭೇಟಿ

111020 Kagodu Thimmappa General Image 1

ಶಿವಮೊಗ್ಗ ಲೈವ್.ಕಾಂ | SAGARA NEWS | 30 JUNE 2021 ಸಾಗರ ತಾಲೂಕು ಬ್ಯಾಕೋಡಿನಲ್ಲಿ ವೃದ್ಧ ದಂಪತಿ ಕೊಲೆ ಪ್ರಕರಣ ಆರೋಪಿಗಳ ಬಂಧನವಾಗದೆ ಇರುವುದಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರೂರು ಹೋಬಳಿಯ ದ್ವೀಪದಲ್ಲಿ ಘಟನೆ ನಡೆದ ಮನೆಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಜೋಡಿ ಕೊಲೆ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ | ಕತ್ತು ಕೊಯ್ದು ವೃದ್ಧ ದಂಪತಿಯ ಬರ್ಬರ ಹತ್ಯೆ, … Read more

ತಾಳಗುಪ್ಪ – ಬೆಂಗಳೂರು ರೈಲಿಗೆ ಸಿಲುಕಿದ್ದ ಯುವಕ ಮಂಗಳೂರಿಗೆ ಶಿಫ್ಟ್, ಹೇಗಿದೆ ಆರೋಗ್ಯ?

Talaguppa Graphics

ಶಿವಮೊಗ್ಗ ಲೈವ್.ಕಾಂ | SAGARA NEWS | 30 JUNE 2021 ತಾಳಗುಪ್ಪದಲ್ಲಿ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಕಸ್ಮಿಕವಾಗಿ ರೈಲಿನಡಿ ಸಿಲುಕಿ ಕೈ, ಕಾಲು ತುಂಡಾಗಿದ್ದ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿತ್ತು. ತಾಳಗುಪ್ಪ – ಬೆಂಗಳೂರು ರೈಲು ಹತ್ತುವಾಗ ನವೀನ್ (18) ಪ್ಲಾಟ್‍ಫಾರಂನಿಂದ ಜಾರಿಬಿದ್ದಿದ್ದ. ಸಾಗರದಿಂದ ಮಂಗಳೂರಿಗೆ ಶಿಫ್ಟ್ ಘಟನೆ ಬಳಿಕ ನವೀನ್‍ನನ್ನು ಸಾಗರದ ಉಪ ವಿಭಾಗೀಯ … Read more

ಚೇತರಿಕೆಯತ್ತ ಶಿವಮೊಗ್ಗ ಪ್ರವಾಸೋದ್ಯಮ, ಜೋಗ, ಕುಪ್ಪಳಿಗೆ ಮೊದಲ ದಿನ ಭೇಟಿ ಕೊಟ್ಟವರೆಷ್ಟು?

180621 Jog Falls Sagara 2021 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 JUNE 2021 ಲಾಕ್‍ ಡೌನ್, ವಾರಾಂತ್ಯದ ಕರ್ಫ್ಯೂ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯತ್ತ ಹೆಜ್ಜೆ ಇಟ್ಟಿದೆ. ಪ್ರವಾಸಿ ತಾಣಗಳತ್ತ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತವಾಗಿದೆ. ಮೊದಲ ದಿನ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಜೋಗಕ್ಕೆ ಬಂದಿದ್ದರು. ರಾಜ, ರಾಣಿ, ರೊರರ್, ರಾಕೆಟ್‍ ಜಲಪಾತಗಳ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು. ಜೋಗಕ್ಕೆ ದೂರದೂರುಗಳಿಂದ ಪ್ರವಾಸಿಗರು ಮೊದಲ ದಿನ 991 ಪ್ರವಾಸಿಗರು ಜೋಗಕ್ಕೆ ಬಂದಿದ್ದರು. 150 … Read more

BREAKING NEWS | ತಾಳಗುಪ್ಪ – ಬೆಂಗಳೂರು ರೈಲಿನಡಿ ಸಿಲುಕಿ ಯುವಕನ ಕಾಲು ಕಟ್

breaking news graphics

ಶಿವಮೊಗ್ಗ ಲೈವ್.ಕಾಂ | TALAGUPPA NEWS | 28 JUNE 2021 ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ‌. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಳಗುಪ್ಪ – ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಯುವಕ ಸಿಲುಕಿದ್ದಾನೆ. ಹೇಗಾಯ್ತು ಘಟನೆ? ಸಿದ್ದಾಪುರ ತಾಲೂಕಿನ ನವೀನ್ (18) ರೈಲಿಗೆ ಸಿಲುಕಿದ ಯುವಕ. ಪ್ಲಾಟ್‌ಫಾರಂ ಜಾರುತ್ತಿದ್ದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪ್ಲಾಟ್‌ಫಾರಂನಿಂದ ಜಾರಿದ ನವೀನ್ ರೈಲಿನ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರೈಲು … Read more