ಮನೆ ಮೇಲೆ ಕಲ್ಲು ತೂರಾಟ, ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ, ಹೇಳಿಕೆಯ 5 ಪಾಯಿಂಟ್ ಇಲ್ಲಿದೆ

BS-Yedyurappa-Reaction-on-his-house-attack-at-Shikaripura

SHIVAMOGGA LIVE NEWS | 27 MARCH 2023 BENGALURU : ತಮ್ಮ ಮನೆ ಮೇಲೆ ಕಲ್ಲು ತೂರಾಟದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ (Reaction) ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ಹೇಳಿದ ಐದು ಪ್ರಮುಖ ಸಂಗತಿ ಇಲ್ಲಿದೆ. ಐದು ಪ್ರಮುಖ ವಿಚಾರ ಬಂಜಾರ ಸಮುದಾಯದವರ ಸಹಕಾರದಿಂದ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ನಾಳೆ, ನಾಡಿದ್ದು ಶಿಕಾರಿಪುರಕ್ಕೆ ತೆರಳಿ ಅವರೆಲ್ಲರನ್ನು ಕರೆಯಿಸಿ ಮಾತನಾಡುತ್ತೇನೆ. ಸಮಾಜದ ಮುಖಂಡರೊಂದಿಗೆ ಘಟನೆಗೆ ಕಾರಣವೇನು, ಹಿನ್ನಲೆ … Read more

ಶಿಕಾರಿಪುರದಲ್ಲಿ ಈಗ ಹೇಗಿದೆ ಪರಿಸ್ಥಿತಿ? ಸೆಕ್ಷನ್ 144 ಜಾರಿ ಬಗ್ಗೆ ಪೊಲೀಸ್ ಇಲಾಖೆ ಹೇಳಿದ್ದೇನು?

Stone-Pelting-and-Lati-Charge-in-Shikaripura-Yedyurappa-house

SHIVAMOGGA LIVE NEWS | 27 MARCH 2023 SHIKARIPURA : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ (Stone Pelting) ಮಾಡಿದ ಹಿನ್ನೆಲೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮಧ್ಯೆ ಶಿಕಾರಿಪುರ ಪಟ್ಟಣದಲ್ಲಿ ವಾತಾವರಣ ಶಾಂತವಾಗಿದೆ. ಪರಿಶಿಷ್ಟ ಜಾತಿ, ಪಂಡಗದವರಿಗೆ ಮೀಸಲಾತಿ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ಆರೋಪಿಸಿ ಶಿಕಾರಿಪುರದಲ್ಲಿ ಇವತ್ತು ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತಿತ್ತು. … Read more

BREAKING NEWS – ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಬ್ಯಾನರ್, ಸೀರೆಗೆ ಬೆಂಕಿ, ಲಾಠಿ ಚಾರ್ಜ್

Stone pelting on yedyurappa house

SHIVAMOGGA LIVE NEWS | 27 MARCH 2023 SHIKARIPURA : ಮೀಸಲಾತಿ ಕಡಿತ ಖಂಡಿಸಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯತ್ತ ಕಲ್ಲು ತೂರಾಟ (stone pelting) ಮಾಡಲಾಗಿದೆ. ಅಲ್ಲದೆ ಪಟ್ಟಣದಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಹರಿದು ಹಾಕಲಾಗಿದೆ. ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಸೇರಿದಂತೆ ವಿವಿಧ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕಲ್ಲು ತೂರಾಟ (stone pelting), ಟೈರ್‌ಗೆ ಬೆಂಕಿ ಹಚ್ಚಲಾಗಿದೆ. … Read more

ತಾಲೂಕು ಕೇಂದ್ರದಲ್ಲಿ ಜಿಲ್ಲಾ ಕೇಂದ್ರ ಮಾದರಿಯ ಸುಸಜ್ಜಿತ ಬಸ್ ನಿಲ್ದಾಣ, 20 ಬಸ್ಗಳ ಸಂಚಾರ ಶುರು

Shikaripura-KSRTC-Bus-Stand-Inaugurated

SHIVAMOGGA LIVE NEWS | 18 MARCH 2023 SHIKARIPURA : ಪಟ್ಟಣದಲ್ಲಿ ನಿರ್ಮಿಸಿರುವ ಸುಸಜ್ಜಿತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ (Bus Stand), ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, 4.80 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ (Bus Stand) ಪೂರ್ಣಗೊಂಡಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುವಂತಹ ಬಸ್ ನಿಲ್ದಾಣವನ್ನು ತಾಲೂಕು ಕೇಂದ್ರದಲ್ಲಿ ನಿರ್ಮಿಸಲಾಗಿದೆ. ಇಂದಿನಿಂದಲೇ 20 ನೂತನ ಬಸ್‌ಗಳಿಗೆ ಚಾಲನೆ ನೀಡುತ್ತಿರುವುದು … Read more

ವಿಐಎಸ್ಎಲ್ ಕುರಿತು ಕಾರ್ಮಿಕರ ನಿಯೋಗಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಮಹತ್ವದ ಭರವಸೆ

VISL-Workers-Meet-CM-Basavaraja-Bommai

SHIVAMOGGA LIVE NEWS | 18 MARCH 2023 SHIKARIPURA : VISL ಕಾರ್ಖಾನೆಯನ್ನು (Factory) ಯಾವುದೆ ಕಾರಣಕ್ಕು ಮುಚ್ಚಲು ಬಿಡುವುದಿಲ್ಲ. ಕಾರ್ಖಾನೆ ಮುಚ್ಚದಿರುವ ಕುರಿತು ಕೇಂದ್ರದ ನಾಯಕರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ವಿಐಎಸ್ಎಲ್ ಕಾರ್ಖಾನೆಯನ್ನು (Factory) ಮುಚ್ಚಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. … Read more

ಶಿಕಾರಿಪುರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಯಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

Basavaraja-Bommai-CM-Chief-Minister

SHIVAMOGGA LIVE NEWS | 16 MARCH 2023 SHIMOGA : ಮುಖ್ಯಮಂತ್ರಿ (Chief Minister) ಬಸವರಾಜ ಬೊಮ್ಮಾಯಿ ಅವರು ಮಾ.17ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಶಿಕಾರಿಪುರಕ್ಕೆ ಆಗಮಿಸಲಿದ್ದಾರೆ. ಹುಚ್ಚರಾಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಆಸ್ಪತ್ರೆ, ಶಿಕಾರಿಪುರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಸಿಎಂ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಲಾಡ್ಜ್ ಗಳಲ್ಲಿ ಪೊಲೀಸರಿಂದ ದಿಢೀರ್ ಪರಿಶೀಲನೆ, ಮಾಲೀಕರಿಗೆ 4 ಪಾಯಿಂಟ್ ಸೂಚನೆ

200223 Police Check Lodges in Shimoga Districts

SHIVAMOGGA LIVE NEWS | 20 FEBRURARY 2023 SHIMOGA : ಜಿಲ್ಲೆಯಾದ್ಯಂತ ಲಾಡ್ಜ್, ರೆಸಾರ್ಟ್ ಗಳಲ್ಲಿ (shimoga lodges) ಪೊಲೀಸರು ದಿಢೀರ್ ತಪಾಸಣೆ ಕೈಗೊಂಡಿದ್ದಾರೆ. ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪಿಎಸ್ಐಗಳು, ಸಿಬ್ಬಂದಿ ಲಾಡ್ಜ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಏನೆಲ್ಲ ತಪಾಸಣೆ ಮಾಡಿದರು? ಲಾಡ್ಜ್, ರೆಸಾರ್ಟ್ ಗಳಿಗೆ (shimoga lodges) ಆಗಮಿಸಿದ್ದ ಗ್ರಾಹಕರ ಕುರಿತು ಪೊಲೀಸರು ಮಾಹಿತಿ ಪಡೆದರು. 15 ದಿನದಿಂದ ಬಂದಿರುವ ಗ್ರಾಹಕರ ಕುರಿತು ರಿಜಿಸ್ಟರ್ ನಲ್ಲಿ ದಾಖಲಾಗಿರುವ ಕುರಿತು ಪರಿಶೀಲನೆ ನಡೆಸಿದರು. ಇನ್ನು, … Read more

ಸಾಗರ, ಆನಂದಪುರ, ಶಿಕಾರಿಪುರ, ಶಿರಾಳಕೊಪ್ಪದಲ್ಲಿ ಆರ್.ಎ.ಎಫ್, ಪೊಲೀಸ್ ಪಥ ಸಂಚಲನ

Police-RAF-route-March-in-Sagara

SHIVAMOGGA LIVE NEWS | 20 JANUARY 2023 SAGARA / SHIKARIPURA | ವಿಧಾನ ಸಭೆ ಚುನಾವಣೆ ಹಿನ್ನೆಲೆ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAPID ACTION FORCE) ವತಿಯಿಂದ ಸಾಗರ, ಆನಂದಪುರ ಮತ್ತು ಶಿಕಾರಿಪುರ ಪಟ್ಟಣಗಳಲ್ಲಿ ಪಥ ಸಂಚಲನ (ROUTE MARCH) ನಡೆಸಲಾಯಿತು. ಆರ್.ಎ.ಎಫ್ ಸಿಬ್ಬಂದಿ ಮತ್ತು ಪೊಲೀಸರು ವಿವಿಧೆಡೆ ಪಥ ಸಂಚಲನ ನಡೆಸಿದರು. ಸಾಗರ ರಿಪೋರ್ಟ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಆರ್.ಎ.ಎಫ್ ಡೆಪ್ಯೂಟಿ ಕಮಾಂಡೆಂಟ್ ನಯನಾ ನಂದಿ ಅವರ ನೇತೃತ್ವದಲ್ಲಿ ಸಾಗರ ಪಟ್ಟಣ … Read more

ಹೋರಿ ಹಬ್ಬದ ವೇಳೆ ಗಂಭೀರ ಗಾಯಗೊಂಡಿದ್ದ ಇಬ್ಬರು ಸಾವು

crime name image

SHIVAMOGGA LIVE NEWS | 16 JANUARY 2023 SHIMOGA : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೋರಿ ಬೆದರಿಸುವ (hori habba) ಸ್ಪರ್ಧೆ ವೇಳೆ ಗಾಯಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ 1 : ಶಿಕಾರಿಪುರ ಜ.14ರಂದು ಶಿಕಾರಿಪುರ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ (hori habba) ಸ್ಪರ್ಧೆ ಆಯೋಜಿಸಲಾಗಿತ್ತು. ರಂಗನಾಥ್ (24) ಎಂಬುವವರಿಗೆ ಗಂಭೀರ ಗಾಯವಾಗಿತ್ತು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ರಂಗನಾಥ್ … Read more

ಅಂಬ್ಲಿಗೊಳ್ಳ ಜಲಾಶಯದಲ್ಲಿ ಮುಳುಗಿ ವ್ಯಕ್ತಿ ನಾಪತ್ತೆ, ಮುಂದುವರೆದ ಶೋಧ ಕಾರ್ಯ

Ambligola-Dam-in-Shikaripura

SHIVAMOGGA LIVE NEWS | 9 JANUARY 2023 ಶಿಕಾರಿಪುರ : ಸ್ನೇಹಿತರೊಂದಿಗೆ ಅಂಬ್ಲಿಗೊಳ್ಳ ಜಲಾಶಯಕ್ಕೆ (ambligola dam) ತೆರಳಿದ್ದ ವ್ಯಕ್ತಿಯೊಬ್ಬರು ಡ್ಯಾಂನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ನಿವಾಸಿ ಜಗದೀಶ್ (37) ನಾಪತ್ತೆ ಆದವರು. ಜಗದೀಶ್ ಅವರು ತಮ್ಮ ಸ್ನೇಹಿತರೊಂದಿಗೆ ಭಾನುವಾರ ಸಂಜೆ ಅಂಬ್ಲಿಗೊಳ್ಳ ಜಲಾಶಯಕ್ಕೆ ಬಂದಿದ್ದರು. ತಂಡದಲ್ಲಿದ್ದವರು ಅಂಬ್ಲಿಗೊಳ್ಳ ಜಲಾಶಯದಲ್ಲಿ (ambligola dam) ಈಜಲು ಮುಂದಾಗಿದ್ದರು. ಜಗದೀಶ್ ಅವರು ಜಲಾಶಯದಲ್ಲಿ ಸ್ನಾನಕ್ಕೆ ಮುಂದಾಗಿದ್ದರು. ಈ ವೇಳೆ ಅವರು … Read more