ಶಿವಮೊಗ್ಗದಲ್ಲಿ ಬೆಳಗ್ಗೆಯಿಂದಲೆ ಬಿರುಸುಗೊಂಡ ಮತದಾನ

271221 Election in Puradal Village

ಶಿವಮೊಗ್ಗದ ಲೈವ್.ಕಾಂ | SHIMOGA NEWS |  27 ಡಿಸೆಂಬರ್ 2021 ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಇವತ್ತು ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದ ಮತದಾನ ಬಿರುಸು ಪಡೆದುಕೊಂಡಿದೆ. ಶಿವಮೊಗ್ಗದ ಪುರದಾಳು, ಕುಂಸಿ, ಶಿಕಾರಿಪುರದ ಹಾರೋಗೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿದೆ. ಮತಗಟ್ಟೆ ಸುತ್ತಲು ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ಮೂರು ಪಂಚಾಯಿತಿ 39 ಸ್ಥಾನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಸ್ಥಾನಗಳಿಗೆ ಇವತ್ತು ಚುನಾವಣೆ ನಡೆಯುತ್ತಿದೆ. ಕುಂಸಿ ಗ್ರಾಮ ಪಂಚಾಯಿತಿಯ 16, … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ, ಡಿ.27ರಂದು ಕೆಲವು ಶಾಲೆ, ಕಾಲೇಜುಗಳಿಗೆ ರಜೆ

DC Office 1

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  23 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಡಿಸೆಂಬರ್ 27ರಂದು ಮತದಾನ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತದಾನ ಕೇಂದ್ರ ಇರಲಿದೆ. ಮತಗಟ್ಟೆಗಳು ಇರುವ ಶಾಲೆ, ಕಾಲೇಜುಗಳಿಗೆ ಆ ದಿನ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವಧಿ ಮುಗಿದ ಗ್ರಾಮ ಪಂಚಾಯಿತಿಗಳು ಮತ್ತು ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಡಿ.27ರಂದು ಉಪ ಚುನಾವಣೆ ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ ಮತಗಟ್ಟೆ … Read more

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಮೇಲೆ ಹಲ್ಲೆ, ಒಂದು ಲಕ್ಷ ಮೌಲ್ಯದ ಕನ್ನಡಕ ಹಾನಿ, ಕೇಸ್ ದಾಖಲು

SHIRALAKOPPA-SHIKARIPURA-NEWS

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021 ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ಒಂದು ಲಕ್ಷ ರೂ. ಮೌಲ್ಯದ ಕನ್ನಡಕ ಹಾಳು ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಏನಿದು ಪ್ರಕರಣ? ವೀರಭದ್ರಪ್ಪ ಪೂಜಾರ್ ಅವರ ಮೇಲೆ ಅವರ ಸಂಬಂಧಿಯೇ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಳೆ ದ್ವೇಷದ ಮೇಲೆ ಹಲ್ಲೆಯಾಗಿದೆ … Read more

ಸವಳಂಗ ಬಳಿ ಭೀಕರ ಅಪಘಾತ, ಭದ್ರಾವತಿಯ ಮೂವರು ಮಹಿಳೆಯರು ಸೇರಿ ನಾಲ್ವರು ಸಾವು, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

171221 Car Bus Accident Near Savalanga

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 17 ಡಿಸೆಂಬರ್ 2021 ಸವಳಂಗ ಸಮೀಪ KSRTC ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ KSRTC ಬಸ್’ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ. ಸವಳಂಗ ಸಮೀಪದ ಕಲ್ಲಾಪುರ ಬಳಿ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಚಾಲಕ ಮತ್ತು ಮತ್ತೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ … Read more

‘ಕಾಂಗ್ರೆಸ್ ಧೂಳಿಪಟವಾಗಲಿದೆ’, ಯಡಿಯೂರಪ್ಪ ಭವಿಷ್ಯ, ಪರಿಷತ್ ಚುನಾವಣೆ ಬಗ್ಗೆ ಮಾಜಿ ಸಿಎಂ ಹೇಳಿಕೆಯ ಪ್ರಮುಖಾಂಶ ಇಲ್ಲಿದೆ

101221 Yedyurappa Visit to Purasabhe in Shikaripura for voting

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 10 ಡಿಸೆಂಬರ್ 2021 ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 15 ಸ್ಥಾನ ಗೆಲ್ಲಲಿದೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಧೂಳಿಪಟವಾಗಿ ಬಿಜೆಪಿ ಪರವಾದ ಅಲೆ ಇದೆ ಅನ್ನುವುದು ಸ್ಪಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶಿಕಾರಿಪುರ ಪುರಸಭೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದರು. ಯಡಿಯೂರಪ್ಪ ಪ್ರತಿಕ್ರಿಯೆಯ ಪ್ರಮುಖಾಂಶಗಳು ‘ನಾನು ಈಗಾಗಲೆ ಹೇಳಿದ್ದೇನೆ ಕನಿಷ್ಠ 15 ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ.’ ‘ಶಿವಮೊಗ್ಗದಲ್ಲಿ … Read more

ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಮತದಾನ

101221 Yedyurappa and Raghavendra voting in shikaripura

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 10 ಡಿಸೆಂಬರ್ 2021 ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಹಕ್ಕು ಚಲಾಯಿಸಿದರು. ಶಿಕಾರಿಪುರ ಪುರಸಭೆ ಆವರಣದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರು ಒಟ್ಟಿಗೆ ಬಂದು ಮತದಾನ ಮಾಡಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಮತದಾನಕ್ಕೂ ಮೊದಲು ಯಡಿಯೂರಪ್ಪ, ಸಂಸದ ರಾಘವೇಂದ್ರ, ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಡಿ.ಎಸ್.ಅರುಣ್ ಅವರೊಂದಿಗೆ ವಿಶೇಷ … Read more

ರಸ್ತೆಗೆ ನಟ ಪುನೀತ್ ರಾಜಕುಮಾರ್ ಹೆಸರಿಡುವಂತೆ ಪುರಸಭೆಗೆ ಆಗ್ರಹ

071221 Puneeth Rajkumar Name to be named in Shikaripura

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 7 ಡಿಸೆಂಬರ್ 2021 ಪಟ್ಟಣದ ಬಸ್ ನಿಲ್ದಾಣ ಪಕ್ಕದ ಪೆಟ್ರೋಲ್ ಬಂಕ್ ರಸ್ತೆಗೆ ಕರ್ನಾಟಕರತ್ನ ಪುನೀತ್ ರಾಜ್‌ಕುಮಾರ್ ಹೆಸರಿಡುವಂತೆ ಆಗ್ರಹಿಸಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು. ಚಲನಚಿತ್ರ ನಿರ್ದೇಶಕ ಇ.ಬಸವರಾಜ್ ಮಾತನಾಡಿ, ಪುನೀತ್ ರಾಜ್‌ಕುಮಾರ್‌ ಕೇವಲ ನಟರಾಗಿರದೆ ಸಾಮಾಜಿಕ ಕಳಕಳಿಯ ದ್ಯೋತಕವಾಗಿದ್ದರು. ಅವರ ಸಹೃದಯತೆಯೇ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತ್ತು. ಅವರ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. … Read more

ಶಿಕಾರಿಪುರ ಪೊಲೀಸರ ದಾಳಿ, ಕುಂಬಾರಗುಂಡಿಯ ಮಹಿಳೆ ಸೇರಿ ಇಬ್ಬರು ಅರೆಸ್ಟ್

SHIKARIPURA-TALUK-NEWS-1.jpg

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 7 ಡಿಸೆಂಬರ್ 2021 ಬೈಕ್’ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಶಿಕಾರಿಪುರದ ಕುಂಬಾರಗುಂಡಿಯ ಯಾಸೀರ್ ಪಾಷಾ (27) ಮತ್ತು ಶಹನಾಜ್ ಬೇಗಂ (52) ಬಂಧಿತರು. ಬೈಕ್’ನಲ್ಲಿ ಗಾಂಜಾ ಇಟ್ಟುಕೊಂಡು, ಕುಂಬಾರಗುಂಡಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಕೆಜಿ 400 ಗ್ರಾಂ ಗಾಂಜಾ ವಶಕ್ಕೆ … Read more

ಕೆರೆಯಲ್ಲಿ ಮುಳುಗಿ ಯುವಕ ಸಾವು ಪ್ರಕರಣಕ್ಕೆ ಟ್ವಿಸ್ಟ್, ‘ಆಕಸ್ಮಿಕ ಸಾವಲ್ಲ ಕೊಲೆ’ ಅಂತಾ ದೂರು

crime name image

ಶಿವಮೊಗ್ಗ ಲೈವ್.ಕಾಂ | SHIMOGA / SHIKARIPURA NEWS | 7 ಡಿಸೆಂಬರ್ 2021 ಕೆರೆಯಲ್ಲಿ ಬಿದ್ದು ಇತ್ತೀಚೆಗೆ ಮೃತಪಟ್ಟಿದ್ದ ಯುವಕನ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಆಕಸ್ಮಿಕ ಸಾವಲ್ಲ ಕೊಲೆ ಎಂದು ಮೃತನ ಪಾಲಕರು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಅವರಿಗೆ ದೂರು ನೀಡಿದ್ದಾರೆ. ಶಿಕಾರಿಪುರ ತಾಲೂಕಿನ ಕೋಡಿಹಳ್ಳಿಯ ಸತೀಶ್ (29) ನ.30ರಂದು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ. ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸತೀಶ್ ಸಾವು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಮೃತ ಸತೀಶ್‌ನ ತಂದೆ ಮಂಚಪ್ಪ … Read more

ಮೂರು ವರ್ಷದ ಮಗುವಿನ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ ಆರೋಪ

Rape Representative Image 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 11 ನವೆಂಬರ್ 2021 ಮೂರು ವರ್ಷದ ಮಗುವಿನ ಮೇಲೆ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರದ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಮೂರು ವರ್ಷದ ಮಗುವಿನ ಮೇಲೆ ಪಕ್ಕದ ಮನೆಯ ಅಪ್ರಾಪ್ತ ಬಾಲಕ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಏನಿದು ಪ್ರಕರಣ? ಮೂರು ವರ್ಷದ ಮಗು ಮನೆ ಅಂಗಳದಲ್ಲಿ ಆಟವಾಡುತ್ತ ಪಕ್ಕದ ಮನೆಯೊಳಗೆ ಹೋಗಿದೆ. ಪಕ್ಕದ ಮನೆಯ 17 … Read more