ಶಿವಮೊಗ್ಗ ಜಿಲ್ಲೆಯ ವಿವಿಧೆಡೆ 3 ದಿನದಲ್ಲಿ ನಡೆಯಬೇಕಿದ್ದ 4 ಬಾಲ್ಯ ವಿವಾಹಕ್ಕೆ ಬ್ರೇಕ್, ಎಲ್ಲೆಲ್ಲಿ ನಡೆಯಲಿದ್ದವು ಮದುವೆ?

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಮೇ 2020 ಜಿಲ್ಲೆಯ ವಿವಿಧೆಡೆ ಕಳೆದ ಮೂರು ದಿನದಲ್ಲಿ ನಾಲ್ಕು ಕಡೆ ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಅಲ್ಲದೆ ಪೋಷಕರಿಗೆ ತಿಳಿ ಹೇಳಿ, ಮದುವೆ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರಕರಣ 1 ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ 16 ವರ್ಷದ ಬಾಲಕಿಯೊಬ್ಬಳ ಮದುವೆ ನಿಶ್ಚಯ ಮಾಡಲಾಗಿತ್ತು. ಮಾಹಿತಿ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿದ್ದಾರೆ. ಪ್ರಕರಣ 2 ಶಿಕಾರಿಪುರದ ಹಳ್ಳಿಯೊಂದರಲ್ಲಿ 15 ವರ್ಷದ ಬಾಲಕಿಯೊಬ್ಬಳ … Read more

ಪೊಲೀಸರ ಕಣ್ತಪ್ಪಿಸಿ, ಪಾಸ್ ಇಲ್ಲದೆ ಶಿವಮೊಗ್ಗ ಜಿಲ್ಲೆಯೊಳಗೆ ಬಂದಿದ್ದ ಆರು ಮಂದಿ ವಶಕ್ಕೆ, ಮೂರು ಬೈಕ್ ಸೀಜ್

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 5 ಮೇ 2020 ಅಧಿಕೃತ ಪಾಸ್‌ ಇಲ್ಲದೆ ಬದಲಿ ಮಾರ್ಗದಲ್ಲಿ ಶಿವಮೊಗ್ಗ ಜಿಲ್ಲೆಯೊಳಗೆ ಬಂದಿದ್ದ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂರು ಬೈಕ್‌ಗಳನ್ನು ಸೀಜ್‌ ಮಾಡಲಾಗಿದೆ. ಮುಖ್ಯ ರಸ್ತೆಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಕಣ್ತಪ್ಪಿಸಿ ಬದಲಿ ಮಾರ್ಗದಲ್ಲಿ ಆರು ಮಂದಿ ಬಂದಿದ್ದರು. ಹಾವೇರಿ ಜಿಲ್ಲೆಯಿಂದ ಗುಳೇದಹಳ್ಳಿ ಮತ್ತು ಮಾರವಳ್ಳಿ ಗ್ರಾಮದ ಮೂಲಕ ಇವರು ಶಿಕಾರಿಪುರಕ್ಕೆ ಆಗಮಿಸಿದ್ದರು. ಖಚಿತ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. … Read more

ಕೆಲಸಕ್ಕೆ ಅಂತಾ ಶಿಕಾರಿಪುರದಿಂದ ಹೋಗಿದ್ದವ್ರು ಲಾಕ್‌ಡೌನ್‌ನಲ್ಲಿ ಲಾಕ್, ಜೀವನ ನಡೆಸೋಕೆ ಕಷ್ಟ ಕಷ್ಟ ಅಂದಾಗ ನೆರವಾದರು ಸಿಎಂ

SHIKARIPURA MAP GRAPHICS 1

ಶಿವಮೊಗ್ಗ ಲೈವ್.ಕಾಂ | SHIKARIPURA | 1 ಮೇ 2020 ಲಾಕ್‌ಡೌನ್‌ ಪರಿಣಾಮ ಒಂದು ತಿಂಗಳಿಂದ ದಕ್ಷಿಣ ಕನ್ನಡದಲ್ಲಿ ಸಿಲುಕಿದ್ದ ಕುಟುಂಬವೊಂದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವಾಗಿದ್ದಾರೆ. ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದ ಕುಟುಂಬವನ್ನು, ತವರೂರಿಗೆ ತಲುಪಿಸಿದ್ದಾರೆ ಸಿಎಂ. ಶಿಕಾರಿಪುರದ ಓರ್ವ ಗರ್ಭಿಣಿ ಮತ್ತು ಆಕೆಯ ಕುಟುಂಬದವರು ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿ ಗ್ರಾಮದಲ್ಲಿ ಸಿಕ್ಕಿಬಿದ್ದಿದ್ದರು. ಒಂದು ತಿಂಗಳಿಂದ ಈ ಕುಟುಂಬ ಇಲ್ಲಿನ ಶಾಲೆಯಲ್ಲಿ ಉಳಿದುಕೊಂಡಿತ್ತು. ಆದರೆ ಜೀವನ ನಿರ್ವಹಣೆ ಕಷ್ಟಕರವಾದ ಹಿನ್ನೆಲೆ, ತಮ್ಮೂರಿಗೆ ತೆರಳಲು ಅವಕಾಶ ನೀಡೇಕು. ಇಲ್ಲವಾದರೆ … Read more

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ, ಚಾಲಕನ ಕಾಲು ಕಟ್, ಲಾರಿಗಳು ಜಖಂ

270420 Shikaripura Road Accident 1

ಶಿವಮೊಗ್ಗ ಲೈವ್.ಕಾಂ | SHIKARIPURA | 27 ಏಪ್ರಿಲ್ 2020 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಚಾಲಕನೊಬ್ಬನ ಕಾಲು ಕಟ್‌ ಆಗಿದೆ. ಶಿಕಾರಿಪುರ ತಾಲೂಕು ಬಳ್ಳಿಗಾವಿ ಕ್ರಾಸ್‌ ಬಳಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಶಿವಮೊಗ್ಗ ಮತ್ತು ತಡಸ ರಾಜ್ಯ ಹೆದ್ದಾರಿಯಲ್ಲಿ ಅಪಘಾತವಾಗಿದೆ. ಗೂಡ್ಸ್‌ ಲಾರಿ ಚಾಲಕ ಮಂಜುನಾಥ್‌ ಅವರ ಕಾಲು ಕಟ್‌ ಆಗಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೋರ್‌ವೆಲ್‌ ಲಾರಿ ಶಿಕಾರಿಪುರದ ಕಡೆಗೆ ಹೋಗುತಿತ್ತು. ಗೂಡ್ಸ್‌ … Read more

ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ, ಪ್ರಯಾಣಿಕರ ಪ್ರಾಣ ಉಳಿಸಿ ಕೊನೆಯುಸಿರೆಳೆದ ಡ್ರೈವರ್

050220 Bus Accident at Shikaripura 1

ಶಿವಮೊಗ್ಗ ಲೈವ್.ಕಾಂ | SHIMOGA | 5 ಫೆಬ್ರವರಿ 2020 ಬಸ್ ಚಾಲನೆ ಮಾಡುತ್ತಿದ್ದಾಗಲೇ ಖಾಸಗಿ ಬಸ್ ಚಾಲಕರೊಬ್ಬರಿಗೆ ಹೃದಯಾಘಾತವಾಗಿದೆ. ಆದರೆ ಈ ವೇಳೆಯಲ್ಲೂ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಮಾರ್ (32) ಹೃದಯಾಘಾತದಿಂದ ಮೃತರಾದ ಚಾಲಕ. ಖಾಸಗಿ ಬಸ್ ಶಿಕಾರಿಪುರದಿಂದ ಹೊನ್ನಾಳಿಗೆ ತೆರಳುತ್ತಿತ್ತು. ಕೆಂಗಟ್ಟೆ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕ ಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಆ ಸಮಯದಲ್ಲೂ ಬಸಿನ ವೇಗ ತಗ್ಗಿಸಿದ ಕುಮಾರ್, ಎಡ ಭಾಗದ ಮರಕ್ಕೆ ಗುದ್ದಿಸಿ, ನಿಲ್ಲಿಸಿದ್ದಾರೆ. ಬಸ್ಸಿನಲ್ಲಿದ್ದ … Read more

‘ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಸಂಘಟನೆಗಳು ಶಾಶ್ವತವಾಗಿ ಬ್ಯಾನ್ ಮಾಡಬೇಕು’

ಶಿವಮೊಗ್ಗ ಲೈವ್.ಕಾಂ | SHIKARIPURA | 18 ಜನವರಿ 2020 ಸಂಸದ ತೇಜಸ್ವಿ ಸೂರ್ಯ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ SDPI ಸಂಘಟನೆ ಸಂಚು ರೂಪಿಸಿದೆ ಎಂಬುದು ಸಾಬೀತಾಗಿದೆ. ಇಂತಹ ದೇಶದ್ರೋಹಿ ಸಂಘಟನೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಬೇಕು. ಮುಂದೆ ಈ ಸಂಘಟನೆ ತಲೆ ಎತ್ತದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಶಿಕಾರಿಪುರ ತಾಲೂಕು ಚಿಕ್ಕಮಾಗಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್ ಅವರು, SDPI ಮತ್ತು ಪಿಎಫ್ಐ ಸಂಘಟನೆಗಳ ಕುರಿತು ಹಿಂದಿನಿಂದಲು ಹೇಳುತ್ತಿದ್ದೇವೆ. … Read more

ಶಿಕಾರಿಪುರದಲ್ಲಿ ಸಿಎಂ ವಿಶೇಷ ಪೂಜೆ, ಕುಟುಂಬದೊಂದಿಗೆ ಸಂಕ್ರಾಂತಿ ಆಚರಣೆ

150120 CM Celebrates Sankranthi in Shikaripura 1

ಶಿವಮೊಗ್ಗ ಲೈವ್.ಕಾಂ | SHIKARIPURA | 15 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದೊಂದಿಗೆ ಇವತ್ತು ಸಂಕ್ರಾಂತಿ ಹಬ್ಬ ಆಚರಿಸಿದರು. ಶಿಕಾರಿಪುರದಲ್ಲಿ ತಮ್ಮ ಮನೆಯಲ್ಲಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಅವರು ಮನೆಗೆ ಆಗಮಿಸಿದ ಹಿನ್ನೆಲೆ, ಆಪ್ತರು, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆಗೆ ಭೇಟಿ ನೀಡಿದ್ದರು. ಬಂದಿದ್ದ ಎಲ್ಲರಿಗೂ ಯಡಿಯೂರಪ್ಪ ಅವರು ಎಳ್ಳ, ಬೆಲ್ಲ ನೀಡಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಕ್ರಾಂತಿ ಶುಭಾಶಯ ಕೋರಿದರು. ಅಲ್ಲದೆ ಸಚಿವ ಸಂಪುಟ … Read more

ಶಿಕಾರಿಪುರಕ್ಕೆ ಸಿಎಂ, ರೆಡಿಯಾಗ್ತಿದೆ ರೈತರ ಆದಾಯ ಹೆಚ್ಚಳಕ್ಕೆ ಯೋಜನೆ, ಬಜೆಟ್ ಡೇಟ್ ಫಿಕ್ಸ್ ಅಂದರು ಯಡಿಯೂರಪ್ಪ

ಶಿವಮೊಗ್ಗ ಲೈವ್.ಕಾಂ | SHIMOGA | 14 ಜನವರಿ 2020 ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರಕ್ಕೆ ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿಎಂ, ಸಂಜೆ ಶಿಕಾರಿಪುರಕ್ಕೆ ಆಗಮಿಸಿದ್ದಾರೆ. ಇಲ್ಲಿನ ಹೆಲಿಪ್ಯಾಡ್’ನಲ್ಲಿ ಸಿಎಂಗೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಶಿಕಾರಿಪುರದಲ್ಲಿ ತಮ್ಮ ಮನೆಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ, ಬಳಿಕ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಆರಂಭಿಸಲಾಗಿರುವ ನೀರಾವರಿ … Read more

ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭ, ಸಂಸದ ರಾಘವೇಂದ್ರ ಭರವಸೆ

Train engine and boggies

ಶಿವಮೊಗ್ಗ ಲೈವ್.ಕಾಂ | SHIKARIPURA | 24 ಡಿಸೆಂಬರ್ 2019 ಹೊಸ ವರ್ಷಕ್ಕೆ ಶಿವಮೊಗ್ಗದಿಂದ ಮತ್ತೆರಡು ಹೊಸ ರೈಲು ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಸುಗಂಧ ಬಳಗದ 14ನೇ ವರ್ಷದ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಈಗಾಗಲೇ ಶಿವಮೊಗ್ಗದಿಂದ ಚೆನ್ನೈ, ತಿರುಪತಿ, ಮೈಸೂರಿಗೆ ಮೂರು ರೈಲು ಸಂಚಾರ ಆರಂಭಿಸಿವೆ. ಹೊಸ ವರ್ಷಕ್ಕೆ ಇನ್ನು ಎರಡು ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ ಎಂದರು. ಇನ್ನು ಮೂರು ವರ್ಷದಲ್ಲಿ ಶಿವಮೊಗ್ಗದಿಂದ … Read more

SHIKARIPURA| ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರು ರೈಲ್ವೆ, ಭೂಸ್ವಾಧೀನಕ್ಕೆ ಸರ್ವೆ ಶುರು, ಎಲ್ಲಾಗುತ್ತೆ ಗೊತ್ತಾ ನಿಲ್ದಾಣ?

ಶಿವಮೊಗ್ಗ ಲೈವ್.ಕಾಂ | SHIKARIPURA | 20 ನವೆಂಬರ್ 2019 ಶಿವಮೊಗ್ಗ ಶಿಕಾರಿಪುರ ರಾಣೇಬೆನ್ನೂರು ರೈಲ್ವೆ ಮಾರ್ಗ ಯೋಜನೆಯ ಭೂ ಸ್ವಾಧೀನಕ್ಕೆ ಸರ್ವೇ ಕಾರ್ಯ ಆರಂಭವಾಗಿದೆ. ಭೂಸ್ವಾಧೀನಾಧಿಕಾರಿ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಇವತ್ತು ಸರ್ವೇ ಕಾರ್ಯ ಆರಂಭಿಸಿದ್ದಾರೆ. ಯೋಜನೆಯ ಭೂಸ್ವಾಧೀನಾಧಿಕಾರಿ ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ವೇ ಕಾರ್ಯ ಆರಂಭವಾಗಿದೆ. ಇವತ್ತು ಯೋಜನೆ ವ್ಯಾಪ್ತಿಯ ವಿವಿಧೆಡೆ ಸರ್ವೇ ನಡೆಸಿದರು. ಮಾರ್ಗ ಗುರುತಿಸಿದ ರೈಲ್ವೆ ರೈಲ್ವೆ ಇಲಾಖೆಯು ಮಾರ್ಗವನ್ನು ಗುರುತಿಸಿದೆ. ಅಲ್ಲದೆ ರೈಲ್ವೆ ಅಧಿಕಾರಿಗಳು ಈಗಾಗಲೇ ಸರ್ವೆ ಕಾರ್ಯವನ್ನು … Read more