ಮಾಲೀಕನ ಮನೆಗೆ ಹೋಗಿದ್ದ ಕೆಲಸದ ಹುಡುಗ ಹಿಂತಿರುಗಲೇ ಇಲ್ಲ, ಪರಿಶೀಲಿಸಿದಾಗ ಮಾಲೀಕನಿಗೆ ಬಿಗ್‌ ಶಾಕ್‌

crime name image

ಶಿಕಾರಿಪುರ: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ (Money) ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ. ರಾಜಸ್ಥಾನ ಮೂಲದ ಸೆಯನ್‌ ಸಿಂಗ್‌ ಶಿಕಾರಿಪುರದಲ್ಲಿ ಚಪ್ಪಲಿಗಳ ಹೋಲ್‌ಸೇಲ್‌ ವ್ಯಾಪಾರ ಮಾಡುತ್ತಿದ್ದಾರೆ. ವ್ಯಾಪಾರದ ಹಣವನ್ನು ತಮ್ಮ ಮನೆಯ ಡಬ್ಬಿಯಲ್ಲಿ ಇಡುತ್ತಿದ್ದರು. ಕಳೆದ ವಾರ ಮೂರು ದಿನ ಬ್ಯಾಂಕ್‌ ರಜೆ ಇದ್ದಿದ್ದರಿಂದ 11 ಲಕ್ಷ ರೂ. ಹಣವನ್ನು ಮನೆಯಲ್ಲಿ ಇಟ್ಟಿದ್ದರು. (ಮತ್ತಷ್ಟು ಸುದ್ದಿ ಈ ಜಾಹೀರಾತಿನ … Read more

ಧಗಧಗ ಹೊತ್ತು ಉರಿದ ವಿದ್ಯುತ್‌ ಕಂಬದಲ್ಲಿದ್ದ ಕೇಬಲ್‌, ಸ್ಥಳೀಯರಲ್ಲಿ ಆತಂಕ

Cable-Wire-burnt-at-manchikere-vaddigere

[su_divider top=”no” style=”dotted” divider_color=”#696969″ link_color=”#000000″ size=”2″ margin=”5″] [su_divider top=”no” style=”dotted” divider_color=”#696969″ link_color=”#000000″ size=”2″ margin=”5″] ಶಿಕಾರಿಪುರ: ಶಾರ್ಟ್‌ ಸರ್ಕ್ಯೂಟ್‌ನಿಂದ (Short Circuit) ವಿದ್ಯುತ್‌ ಕಂಬದಲ್ಲಿದ್ದ ಕೇಬಲ್‌ ಹೊತ್ತಿ ಉರಿದಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಮಂಚಿನಕೊಪ್ಪ ವಡ್ಡಿಗೇರೆ ಬಳಿ ಘಟನೆ ಸಂಭವಿಸಿದೆ. ವಿದ್ಯುತ್‌ ಕಂಬದಲ್ಲಿ ಅಳವಡಿಸಿದ್ದ ಕೇಬಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿದಿದೆ. ರಸ್ತೆಯಲ್ಲಿ ಹೋಗುವವರು ಇದನ್ನು ಗಮನಿಸಿ ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ … Read more

ಕಾರುಗಳು ಮುಖಾಮುಖಿ ಡಿಕ್ಕಿ, ಮಹಿಳೆ ಸ್ಥಳದಲ್ಲೆ ಸಾವು, ಎಲ್ಲಿ? ಹೇಗಾಯ್ತು?

Car-Mishap-in-shikaripura-shiralakoppa-road.

ಶಿಕಾರಿಪುರ : ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ (Mishap) ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ರಸ್ತೆಯ ಕುಮದ್ವತಿ ನದಿ ಸೇತುವೆ ಮೇಲೆ ಇಂದು ಅಪಘಾತ ಸಂಭವಿಸಿದೆ. ಚನ್ನಗಿರಿ ತಾಲೂಕು ಕಾಕನೂರು ಗ್ರಾಮದ ರೂಪ (40) ಮೃತರು. ಕಾರಿನಲ್ಲಿದ್ದ ರೂಪ ಅವರ ಪತಿ ಕಾಂತರಾಜ್‌, ಸಹೋದರಿ ರೇಖಾ ಗಂಭೀರ ಗಾಯಗೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಕಾಳಿಯಪ್ಪನ್, ಸೋಮಶೇಖರ್, ಸುರೇಶ್ ಕುಮಾರ್ ಹಾಗೂ ಯಮುನಪ್ಪ ಎಂಬುವವರಿಗು ಗಾಯವಾಗಿದೆ. ಎಲ್ಲರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.   ಘಟನೆಯಲ್ಲಿ (Mishap) … Read more

ಶಿರಾಳಕೊಪ್ಪದಲ್ಲಿ ಬೀದಿಗಿಳಿದ ಮುಸ್ಲಿಮ್‌ ಸಮುದಾಯ, ಕೇಂದ್ರದ ವಿರುದ್ಧ ಆಕ್ರೋಶ

Waqf-bill-protest-at-Shiralakoppa-in-Shikaripura

ಶಿಕಾರಿಪುರ : ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಅಂಜುಮನ್‌ ಎ ಇಸ್ಲಾಂ ಸಂಘಟನೆ ನೇತೃತ್ವದಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ (Protest) ನಡೆಸಿತು. ಶಿರಾಳಕೊಪ್ಪದ ಪ್ರಮುಖ ರಸ್ತೆಯಲ್ಲಿ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿರಾಳಕೊಪ್ಪದ ಹಿರೇಕೆರೂರು ರಸ್ತೆಯಿಂದ ಪಟ್ಟಣ ಪಂಚಾಯಿತಿವರೆಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಕ್ಫ್‌ ಕಾಯ್ದೆ ತಿದ್ದುಪಡಿ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ … Read more

ಖಾಸಗಿ ಬಸ್‌, ಟಾಟಾ ಏಸ್‌ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು

Bus-Tata-Ace-crash-in-Shiralakoppa-in-Shikaripura-taluk

ಶಿಕಾರಿಪುರ : ಖಾಸಗಿ ಬಸ್‌ ಮತ್ತು ಟಾಟಾ ಏಸ್‌ ವಾಹನ ಡಿಕ್ಕಿಯಾಗಿ (Crash) ಐವರು ಗಾಯಗೊಂಡಿದ್ದಾರೆ. 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ನರಸಾಪುರ ಸಮೀಪ ಇಂದು ಸಂಜೆ ಘಟನೆ ಸಂಭವಿಸಿದೆ. ಶಿರಾಳಕೊಪ್ಪದ ಕಡೆಯಿಂದ ಹೋಗುತ್ತಿದ್ದ ಖಾಸಗಿ ಬಸ್ಸು, ಚಿಕ್ಕೇರೂರು ಕಡೆಯಿಂದ ಬರುತ್ತಿದ್ದ ಕುರಿಗಾಹಿಗಳ ಟಾಟಾ ಏಸ್‌ ವಾಹನ ಡಿಕ್ಕಿಯಾಗಿವೆ (Crash). ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು ಟಾಟಾ ಏಸ್‌ನಲ್ಲಿದ್ದ ಕುರಿಗಾಹಿಗಳು ಗಾಯಗೊಂಡಿದ್ದಾರೆ. ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಟಾಟಾ ಏಸ್‌ ಸಂಪೂರ್ಣ ಹಾನಿಗೀಡಾಗಿದೆ. ಶಿರಾಳಕೊಪ್ಪ ಪೊಲೀಸ್‌ … Read more

ಸಾವಿರ ಸಾವಿರ ಭಕ್ತರ ಸಮ್ಮುಖದಲ್ಲಿ ಹುಚ್ಚರಾಯಸ್ವಾಮಿಯ ವಿಜೃಂಭಣೆಯ ರಥೋತ್ಸವ

ಶಿಕಾರಿಪುರ : ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ದವನದ ಹುಣ್ಣಿಮೆಯಂದು ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥೋತ್ಸವ (Ratotsava) ನೆರವೇರಿತು. ಶನಿವಾರ ಬೆಳಗ್ಗೆ 8.30ರ ವೃಷಭ ಲಗ್ನದಲ್ಲಿ ಶ್ರೀ ಹುಚ್ಚರಾಯಸ್ವಾಮಿಯ ರಥಾರೋಹಣ, ಫಲ ಸಮರ್ಪಣೆ, ಮಹಾಮಂಗಳಾರತಿ ನಂತರ ವಾದ್ಯಗೋಷ್ಠಿಗಳ ನಡುವೆ ರಥಬೀದಿಯಲ್ಲಿ ತೇರು (Ratotsava) ಸಂಚರಿಸಿತು. ಭಕ್ತರು ಬಾಳೆಹಣ್ಣು, ದವನದ ಸೊಪ್ಪನ್ನು ತೇರಿಗೆ ಎಸೆದರು. ಮಾರಿಕಾಂಬ ಗದ್ದುಗೆವರೆಗೆ ರಥವನ್ನು ಎಳೆಯಲಾಯಿತು. ನಂತರ ಭಕ್ತರಿಗೆ ಹಣ್ಣು ಕಾಯಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಯಿತು. ಗರುಡ ದರ್ಶನದಿಂದ ಹರ್ಷೋದ್ಗೋರ … Read more

BREAKING NEWS – ತೀರ್ಥಹಳ್ಳಿಯ ಮಠದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಕಾಲಿಗೆ ಶಿಕಾರಿಪುರದಲ್ಲಿ ಗುಂಡೇಟು

FULL-BREAKING-NEWS-PLATE

ಶಿಕಾರಿಪುರ : ತೀರ್ಥಹಳ್ಳಿಯ ಮಹಿಷಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬಂಧಿಸಲು ತೆರಳಿದ್ದ ಪೊಲೀಸ್‌ (Police) ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ ಹಿನ್ನೆಲೆ ಪೊಲೀಸರು ಆರೋಪಿಯ ಎಡಗಾಲಿಗೆ ಗುಂಡು ಹೊಡೆದಿದ್ದಾರೆ. ಶಿಕಾರಿಪುರ ಪಟ್ಟಣದ ಟ್ಯಾಂಕ್‌ ಬಂಡ್‌ ಸಮೀಪ ಆರೋಪಿ ಶ್ರೀನಿವಾಸ ಅಲಿಯಾಸ್‌ ಸೀನಾ (25) ಎಂಬಾತನನ್ನು ಬಂಧಿಸಲು ತೀರ್ಥಹಳ್ಳಿಯ ಮಾಳೂರು ಠಾಣೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಶ್ರೀನಿವಾಸ, ಪೊಲೀಸ್‌ ಸಿಬ್ಬಂದಿ ಸಂತೋಷ್‌ ಅವರ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ … Read more

ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ ಖದೀಮರು

Crime-News-General-Image

ಶಿಕಾರಿಪುರ : ಸಿಟಿಯ ಚನ್ನಕೇಶವ ನಗರದಲ್ಲಿ ಸರಣಿ ಮನೆಗಳ್ಳತನವಾಗಿದೆ (theft). ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ನಗದು ಕಳವುವಾಗಿದೆ ಎಂದು ಆರೋಸಪಿಸಲಾಗಿದೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಚನ್ನಕೇಶವ ನಗರದ 15ನೇ ಅಡ್ಡರಸ್ತೆ ನಿವಾಸಿ ನಂದ ಬಣಕಾರ್ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಕಳ್ಳರು ಅವರ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಸೇರಿದಂತೆ ಅಂದಾಜು 14 ಲಕ್ಷ ರೂ. ಮೌಲ್ಯದ ಒಡವೆ ಹಾಗೂ 50 ಸಾವಿರ ರೂ. ನಗದು ಕಳವು ಮಾಡಿದ್ದಾರೆ.  ಇದೇ ಕೇರಿಯಲ್ಲಿರುವ ಮೆಸ್ಕಾಂ … Read more

ಸೇತುವೆ ಬಳಿ ದಾಳಿ, ಕಾರು, ಬೈಕು ಸಹಿತ ನಾಲ್ವರು ಅರೆಸ್ಟ್‌, ಏನಿದು ಕೇಸ್‌?

Four-arrest-with-car-and-bike-NDPS-Case-at-shikaripura

ಶಿಕಾರಿಪುರ : ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ (RAID) ನಡೆಸಿದ ಸಿ.ಇ.ಎನ್‌ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 70 ಸಾವಿರ ರೂ. ಮೌಲ್ಯದ 2 ಕೆ.ಜಿ 52 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಬೈಕ್‌ ವಶಕ್ಕೆ ಪಡೆದಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆಸರಗಟ್ಟೆ ಮೀಸಲು ಅರಣ್ಯ ಪ್ರದೇಶದ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು ಎಂದು ಪ್ರಕಟಣೆಯಲ್ಲಿ … Read more

ಸಾಗರ, ಸೊರಬ, ಶಿಕಾರಿಪುರದಲ್ಲಿ ಏನೇನಾಯ್ತು? ಇಲ್ಲಿದೆ ಫಟಾಫಟ್‌ NEWS

SHUBHODAYA-SHIVAMOGGA-FATAFAT-SAGARA-SORABA-SHIKARIPURA

ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್‌ ಓದಲು ಶುಭೋದಯ ಶಿವಮೊಗ್ಗ NEWS. [su_note note_color=”#eaeff0″ text_color=”#000000″ radius=”0″] ಕೆಎಸ್‌ಆರ್‌ಟಿಸಿ ಬಸ್‌ ಜಫ್ತಿ ಸಾಗರ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕನ ಕುಟುಂಬಕ್ಕೆ ನ್ಯಾಯಾಲಯದ ಆದೇಶದ ಪ್ರಕಾರ ಪರಿಹಾರ ವಿತರಿಸದ ಕೆಎಸ್‌ಆರ್‌ಟಿಸಿ ಶಿರಸಿ ಡಿಪೊದ ಬಸ್ ಅನ್ನು ಜಪ್ತಿ ಮಾಡಲಾಗಿದೆ. 2022ರ ಜುಲೈ 7ರಂದು ಬೆಳಲಮಕ್ಕಿಯ ನಿವಾಸಿ ಗಣೇಶ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಪ್ರವಾಸಿ ಮಂದಿರದ ಎದುರು … Read more