ಆಯನೂರಿನಲ್ಲಿ ಬಸ್ಸು, ಬೈಕ್ ಡಿಕ್ಕಿ, CCTVಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

-Bus-Bike-accident-Near-Ayanur-in-Shimoga

ಶಿವಮೊಗ್ಗ | ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ (ACCIDENT) ಸಂಭವಿಸಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಈ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಆಯನೂರಿನಲ್ಲಿ (AYANUR) ಘಟನೆ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರಕ್ಕೆ (SAGARA) ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಆಯನೂರಿನ ಸರ್ಕಲ್’ನಲ್ಲಿ ಬಸ್ಸು ತೆರಳುತ್ತಿದ್ದ ಸಂದರ್ಭ, ದಿಢೀರನೆ ಬೈಕ್ ಅಡ್ಡ ಬಂದಿದೆ. ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಮಲೆಬೆನ್ನೂರು ಗ್ರಾಮದ ಹಬೀಬುಲ್ಲಾ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ … Read more

ಮಂಡಗದ್ದೆಯಿಂದ ಹಿಂತಿರುಗುವಾಗ ಭೀಕರ ಅಪಘಾತ, ದಾವಣಗೆರೆಯ ವ್ಯಕ್ತಿ ಸ್ಥಳದಲ್ಲೇ ಸಾವು

crime name image

ಶಿವಮೊಗ್ಗ | ಸ್ನೇಹಿತರೊಂದಿಗೆ ಮಂಡಗದ್ದೆಯಲ್ಲಿ (MANDAGADDE) ಊಟ ಮುಗಿಸಿಕೊಂಡು ಬರುವಾಗ ಕಾರುಗಳು ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಕ್ರೆಬೈಲು ಸಮೀಪದ ಹುಲಿಹಳ್ಳದಲ್ಲಿ ಗುರುವಾರ ಸಂಜೆ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ದಾವಣಗೆರೆಯ ದೇವರಾಜ್ ಅರಸು ಬಡಾವಣೆಯ ಮಹೇಂದ್ರ ಮೃತ ವ್ಯಕ್ತಿ. ಅದೇ ಬಡಾವಣೆಯ ಜಿ.ರಾಘವೇಂದ್ರ, ಶ್ರೀನಿವಾಸ್, ಕಿಶೋರ್ ಮತ್ತು ರಾಘವೇಂದ್ರ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಐವರು ಕಾರಿನಲ್ಲಿ ಗುರುವಾರ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಗೆ (MANDAGADDE) ಬಂದಿದ್ದರು. ಸಂಜೆ … Read more

ಮನೆ ಮುಂದೆ ಮರದ ಕೆಳಗೆ ನಿಲ್ಲಿಸಿದ್ದ ಮೂರು ಬೈಕುಗಳಿಗೆ ಬೆಂಕಿ

crime name image

ಶಿವಮೊಗ್ಗ | ಮನೆಯೊಂದರ ಮುಂದೆ ಇರುವ ಮರದ ಕಳೆಗೆ ನಿಲ್ಲಿಸಿದ್ದ ಮೂರು ಬೈಕುಗಳಿಗೆ ದುಷ್ಕರ್ಮಿಗಳು ಬೆಂಕಿ (MISCREANTS SET FIRE) ಹಚ್ಚಿದ್ದಾರೆ. ಘಟನೆಯಲ್ಲಿ ಮೂರು ಬೈಕುಗಳು ಸುಟ್ಟು ಕರಕಲಾಗಿವೆ. ವಿರೂಪಿನಕೊಪ್ಪ (VIRUPINAKOPPA) ಗ್ರಾಮದ ಅಡಕೆ ಮಂಡಿ ಲೇಔಟ್’ನಲ್ಲಿ ಘಟನೆ ಸಂಭವಿಸಿದೆ. ಆ.31ರ ನಡುರಾತ್ರಿ ಘಟನೆ ಸಂಭವಿಸಿದೆ. ವೆಂಕಟೇಶ್ ಎಂಬುವವರು ತಮ್ಮ ಮನೆ ಮುಂಭಾಗದ ಮರದ ಕಳೆಗೆ ತಮ್ಮ SPLENDOR PLUS ಬೈಕ್ ನಿಲ್ಲಿಸಿದ್ದರು. ನಡುರಾತ್ರಿ ಹೊರಗೆ ಶಬ್ದ ಕೇಳುತ್ತಿದ್ದರಿಂದ ವೆಂಕಟೇಶ್ ಅವರ ಕುಟುಂಬದರು ಹೊರಗೆ ನೋಡಿದಾಗ ಬೈಕಿಗೆ … Read more

ಶಿವಮೊಗ್ಗದಲ್ಲಿ ಇವತ್ತು ಮದ್ಯ ಮಾರಾಟ ಇಲ್ಲ, ಭದ್ರಾವತಿಯಲ್ಲೂ DRY DAY ಘೋಷಣೆ, ಯಾವ್ಯಾವಾಗ?

Alcohol-liquor-ban

ಶಿವಮೊಗ್ಗ | ಗಣಪತಿ ವಿಸರ್ಜನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಯಾ ತಾಲೂಕಿನಲ್ಲಿ ಪ್ರಮುಖ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟ ಇರುವುದಿಲ್ಲ. ಆ ದಿನವನ್ನು DRY DAY ಎಂದು ಘೋಷಿಸಲಾಗಿದೆ. ನಿಷೇಧಕ್ಕೆ ಕಾರಣವೇನು? ಶಿವಮೊಗ್ಗ ಜಿಲ್ಲೆಯ ಪ್ರಮುಖ ಮತ್ತು ಅತಿ ಸೂಕ್ಷ್ಮ ಅನಿಸುವ ಗಣಪತಿ ವಿಸರ್ಜನೆ ವೇಳೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಶಾಂತಿ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ಪೊಲೀಸ್ ಇಲಾಖೆ ಕೋರಿಕೆಯನ್ನು ಪರಿಗಣಿಸಿ DRY … Read more

ಶಿವಮೊಗ್ಗದಲ್ಲಿ ಬೋನಿಗೆ ಬಿತ್ತು ಚಿರತೆ, ನಿಟ್ಟುಸಿರು ಬಿಟ್ಟರು ಜನ

Cheetha-Caught-Near-Kommanalu-Village-in-Shimoga

ಶಿವಮೊಗ್ಗ | ಕಳೆದ ಕೆಲವು ತಿಂಗಳಿಂದ ತೀವ್ರ ಆತಂಕ ಮೂಡಿಸಿದ್ದ ಚಿರತೆಯೊಂದು (CHEETAH CAUGHT) ಅರಣ್ಯ ಇಲಾಖೆಯ (FOREST DEPARTMENT) ಬೋನಿಗೆ ಬಿದ್ದಿದೆ. ತಾಲೂಕಿನ ಕೊಮ್ಮನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಳ್ಳಿ ಸೋಮಿನಕೊಪ್ಪದಲ್ಲಿ ಹೆಣ್ಣು  ಚಿರತೆ ಸೆರೆಯಾಗಿದೆ. ಬೆಳಗ್ಗೆ ರೈತರೊಬ್ಬರು ಜಮೀನಿಗೆ ಹೋಗಿದ್ದ ಸಂದರ್ಭ ಚಿರತೆ ಬೋನಿಗೆ ಬಿದ್ದಿರುವ ವಿಚಾರ ಗೊತ್ತಾಗಿದೆ. ಕೂಡಲೆ ಅರಣ್ಯ ಇಲಾಖೆ ಮತ್ತು ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ. ಆತಂಕ ಮೂಡಿಸಿದ್ದ ಚಿರತೆ ಶಿವಮೊಗ್ಗ – ದಾವಣಗೆರೆ ಗಡಿ ಭಾಗದಲ್ಲಿ ಚಿರತೆಯಿಂದ ಆತಂಕ ಉಂಟಾಗಿತ್ತು. … Read more

ಕೈದಿ ನೋಡಲು ಶಿವಮೊಗ್ಗ ಜೈಲಿಗೆ ಬಂದಿದ್ದ ಸ್ನೇಹಿತರು ಜೈಲುಪಾಲು, ಜೀನ್ಸ್ ಪ್ಯಾಂಟು, ಶರ್ಟ್ ಕಾರಣ

shimoga central jail building

ಶಿವಮೊಗ್ಗ | ಕೈದಿಗೆ ನೀಡಲು ತಂದಿದ್ದ ಬಟ್ಟೆ ಬ್ಯಾಗಿನಲ್ಲಿ ಗಾಂಜಾ (GANJA SUPPLY) ಪತ್ತೆಯಾಗಿದೆ. ಪೊಲೀಸರ (POLICE) ಕಣ್ತಪ್ಪಿಸಿ ಕೇಂದ್ರ ಕಾರಾಗೃಹದ (CENTRAL JAIL) ಒಳಗೆ ಗಾಂಜಾ ಸಾಗಣೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗ (SHIMOGA) ಜೆ.ಪಿ.ನಗರದ ಮೊಹಮ್ಮದ್ ಮುಸಿಮಿನ್ (26), ರಾಜೀವ್ ಗಾಂಧಿ ಬಡಾವಣೆಯ ಅಬ್ದುಲ್ ಹಫೀಜ್ (24) ಮತ್ತು ಮೊಹಮ್ಮದ್ ಹುಸೇನ್ (22) ಎಂಬುವವರನ್ನು ಬಂಧಿಸಲಾಗಿದೆ. ಜೀನ್ಸ್ ಪ್ಯಾಂಟು, ಶರ್ಟು, ಬ್ಯಾಗ್ ವಿಚಾರಣಾಧೀನ ಕೈದಿಯೊಬ್ಬನನ್ನು ಭೇಟಿಯಾಗಿ, ಆತನಿಗೆ ಬಟ್ಟೆ ನೀಡಲು ಈ ಮೂವರು … Read more

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಇಬ್ಬರು ಸವಾರರು ಸ್ಥಳದಲ್ಲೇ ಸಾವು

Accident-at-Abbalagere-Village

ಶಿವಮೊಗ್ಗ| ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ (LORRY) ಬೈಕ್ (BIKE) ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಅಬ್ಬಲಗೆರೆ ಬಳಿ ಇಂದು ಬೆಳಗಿನ ಜಾವ ಘಟನೆ (ACCIDENT) ಸಂಭವಿಸಿದೆ. ನ್ಯಾಮತಿಯ ರಾಮಕುಮಾರ್ (22) ಮತ್ತು ಮಲ್ಲಿಕಾರ್ಜುನ (30) ಎಂಬುವವರು ಮೃತರು. ಅಬ್ಬಲಗೆರೆ (ABBALAGERE) ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಇವರು ಸಾಗುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮಕುಮಾರ್ ಮತ್ತು ಮಲ್ಲಿಕಾರ್ಜುನ ಅವರು ಸವಳಂಗ ರಸ್ತೆ ಮೂಲಕ ಕಾರ್ಖಾನೆಯ ಕೆಲಸಕ್ಕೆ … Read more

BREAKING NEWS | ರಾತ್ರಿ ವೇಳೆಗೆ ತುಂಗಾ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ

Tunga-River-Full-During-Rain

ಶಿವಮೊಗ್ಗ | ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದ ಹಿನ್ನೆಲೆ ತುಂಗಾ ಜಲಾಶಯದ ಒಳ ಹರಿವು ಪ್ರಮಾಣ ಏರಿಕೆಯಾಗಿದೆ. ಆದ್ದರಿಂದ ತುಂಗಾ ಜಲಾಶಯದಿಂದ ಮತ್ತಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸಂಜೆ 7.30ರಿಂದ ಗಾಜನೂರಿನ ತುಂಗಾ ಜಲಾಶಯದಿಂದ 61,347 ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಜೋರು ಮಳೆ, ಲಿಂಗನಮಕ್ಕಿ ಜಲಾಶಯದಿಂದ ಮತ್ತೊಂದು ಮುನ್ನೆಚ್ಚರಿಕೆ, ಏನದು? ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು … Read more

‘ಜನರ ಪ್ರಾಣ ಮುಖ್ಯವೋ, ಧ್ವಜ ಮುಖ್ಯವೋ?’ ಶಿವಮೊಗ್ಗ ಕಾಂಗ್ರೆಸ್ ನಾಯಕಿ ಆಕ್ರೋಶ

G-pallavi-argues-with-pdo-in-Kommanalu

ಶಿವಮೊಗ್ಗ | ಜನರ ಹೆಣದ ಮೇಲೆ ಬಾವುಟ (FLAG) ನೆಡಲು ಹೊರಟಿದ್ದೀರಾ? ಜನರ ಪ್ರಾಣ ಮುಖ್ಯವೋ ಬಾವುಟ ಹಾರಿಸುವುದು ಮುಖ್ಯವೋ? ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರೆ ಜಿ.ಪಲ್ಲವಿ, ಪಿಡಿಓ ಒಬ್ಬರಿಗೆ ತರಾಟೆಗೆ ತೆಗೆದುಕೊಂಡ ಪರಿ ಇದು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಹಲವು ಮನೆಗಳು ಕುಸಿದು ಹೋಗಿವೆ. ವಿವಿಧ ಗ್ರಾಮಗಳಿಗೆ ಕಾಂಗ್ರೆಸ್ ಜಿಲ್ಲಾ ವಕ್ತಾರೆ ಪಲ್ಲವಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಧನಸಹಾಯ ಮಾಡಿದರು. ಬಾವುಟಕ್ಕೆ ಕೋಲು ತರುವುದೆ ಮುಖ್ಯಾನಾ? ಕೊಮ್ಮನಾಳು ಗ್ರಾಮದಲ್ಲಿ ಯಶೋದಮ್ಮ … Read more

ಗಾಜನೂರು ತುಂಗಾ ಡ್ಯಾಂಗೆ ಇವತ್ತು ಎಷ್ಟಿದೆ ಒಳ, ಹೊರ ಹರಿವು?

Gajanur-Tunga-Dam-water-release.

ಶಿವಮೊಗ್ಗ | ತೀರ್ಥಹಳ್ಳಿ ತಾಲೂಕಿನಾದ್ಯಂತ ಮಳೆ ಬಿರುಸಾಗಿದೆ. ಹಾಗಾಗಿ ತುಂಗಾ ಜಲಾಶಯಕ್ಕೆ (TUNGA DAM) ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪ್ರಸ್ತುತ ತುಂಗಾ ಜಲಾಶಯಕ್ಕೆ 48,317 ಕ್ಯೂಸೆಕ್ ಒಳೆ ಹರಿವು ಇದೆ. ಅಷ್ಟೆ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. 21 ಗೇಟುಗಳನ್ನು ತೆಗೆದು ನೀರನ್ನು ಹೊಳೆಗೆ ಬಿಡಲಾಗುತ್ತಿದೆ. ಇದನ್ನೂ ಓದಿ – ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಎರಡೂವರೆ ಅಡಿಯಷ್ಟು ನೀರು ADVERTISEMENT ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, … Read more