ಮಂಡಗದ್ದೆ ಬಳಿ ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ, ಇಬ್ಬರು ಆರೋಪಿಗಳು ಅರೆಸ್ಟ್
ತೀರ್ಥಹಳ್ಳಿ: ಅಕ್ರಮವಾಗಿ ಶ್ರೀಗಂಧ (Sandal Wood) ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಡಗದ್ದೆ ವಲಯಾರಣ್ಯಧಿಕಾರಿ ವಿನಯಕುಮಾರ್ ನೇತೃತ್ವದ ಅರಣ್ಯ ಇಲಾಖೆ ಸಿಬ್ಬಂದಿ, ಸೋಮವಾರ ಬಂಧಿಸಿದೆ. ಕಣಗಲಕೊಪ್ಪ ಗಸ್ತು ವಿಭಾಗದಲ್ಲಿ 33 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಣೆಗೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಡಿಎಫ್‌ಒ ಅಜ್ಜಯ್ಯ, ಎಸಿಎಫ್ ಮಧುಸೂದನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೇಲಿನಪಟ್ರೊಳ್ಳಿ ಗ್ರಾಮದ ಸ.ನಂ.06ರಲ್ಲಿ ಶ್ರೀಗಂಧ ಮರ ಕಡಿತಲೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟ ತುಂಡುಗಳ ಜತೆಗೆ ಆರೋಪಿಗಳಾದ ಕಣಗಲಕೊಪ್ಪ ಗ್ರಾಮದ ಸತೀಶ್ … Read more