ವಿದ್ಯುತ್‌ ಗ್ರಿಡ್‌ನಿಂದ ಹಾರಿದ ಕಿಡಿಗೆ ಜಮೀನಿನಲ್ಲಿದ್ದ ಜೋಳ ಸಂಪೂರ್ಣ ಭಸ್ಮ

jower-burnt-due-to-a-spark-from-electric-grid.

ಆನವಟ್ಟಿ: ವಿದ್ಯುತ್‌ ಗ್ರಿಡ್‌ನಲ್ಲಿ (power grid) ಶಾರ್ಟ್‌ ಸರ್ಕಿಟ್‌ ಉಂಟಾಗಿ, ಪಕ್ಕದ ಜಮೀನಿನಲ್ಲಿ ಒಕ್ಕಲು ಮಾಡಿದ್ದ ನಾಲ್ಕು ಎಕರೆ ಜೋಳ ಸುಟ್ಟು ಕರಕಲಾಗಿದೆ. ಸೊರಬ ತಾಲೂಕು ಅನವಟ್ಟಿ ಸಮೀಪದ ಕೋಟಿಪುರ ಗ್ರಾಮದಲ್ಲಿರುವ ಘಟನೆ ಸಂಭವಿಸಿದೆ. ಗ್ರಾಮಸ್ಥರೆಲ್ಲ ಸೇರಿ ಬೆಂಕಿ ಆರಿಸಲು ಪ್ರಯತ್ನಿಸಿದರು. ಆದರೆ ಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಕೋಟಿಪುರ ತಾಂಡಾದ ಕೃಷಿಕ ಪೀರ್ಯಾನಾಯ್ಕ ಎಂಬುವವರಿಗೆ ಸೇರಿದ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಜೋಳ ಬೆಂಕಿಗೆ ಅಹುತಿಯಾಗಿದೆ. ಮೆಸ್ಕಾಂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು … Read more

ಚಂದ್ರಗುತ್ತಿ ದೇಗುಲದಲ್ಲಿ ಒಂದು ತಿಂಗಳು ವಿವಿಧ ಪೂಜೆ

Chandragutti-Temple-Soraba.

ಚಂದ್ರಗುತ್ತಿ: ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಧನುರ್ಮಾಸದ (Dhanurmasa) ಪೂಜೆ ಅಂಗವಾಗಿ ಡಿ.16ರಿಂದ ಮಕರ ಸಂಕ್ರಮಣದವರೆಗೆ ಒಂದು ತಿಂಗಳು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಲಿವೆ. ದೇವಿಗೆ ಪ್ರತಿದಿನ ಬೆಳಿಗ್ಗೆ 6.30ರಿಂದ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿವೆ. ಇದನ್ನು ದೇವಸ್ಥಾನದ ಪ್ರಧಾನ ಅರ್ಚಕರು ನೆರವೇರಿಸುವರು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ಇದನ್ನೂ ಓದಿ » ಸಾಗರ ಬಂದ್‌, ದಿನಾಂಕ ಪ್ರಕಟಿಸಿದ ಹೋರಾಟ ಸಮಿತಿ, ಬಂದ್‌ಗೆ ಕಾರಣವೇನು?

ಆನವಟ್ಟಿ ಸೇರಿ ವಿವಿಧೆಡೆ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ

soraba anavatti graphics

ಆನವಟ್ಟಿ: ಕೋಟಿಪುರ ವಿದ್ಯುತ್‌ (electricity) ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ ಆನವಟ್ಟಿ ಪಟ್ಟಣ ಮತ್ತು ಕೋಟಿಪುರ ಎನ್‌ಜೆವೈ 11 ಕೆ.ವಿ ಫೀಡರ್‌ಗಳಿಗೆ ಒಳಪಡುವ ಗ್ರಾಮಗಳಲ್ಲಿ ಡಿ. 14ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಆನವಟ್ಟಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೋರಿದ್ದಾರೆ.  ಇದನ್ನೂ ಓದಿ » ಗ್ಯಾರಂಟಿ ಯೋಜನೆಗಳು ಚುನಾವಣೆ ಲಕ್ಷ್ಮಿ, ಶಿವಮೊಗ್ಗದಲ್ಲಿ ವಿಜಯೇಂದ್ರ ವಿಶ್ಲೇಷಣೆ, ಏನಿದು?

ಹೊಲ, ಗದ್ದೆಯಲ್ಲಿ ಕಾಡಾನೆಗಳ ಸಂಚಾರ, ರೈತರಲ್ಲಿ ಅತಂಕ, ಅರಣ್ಯಾಧಿಕಾರಿಗಳ ಗಸ್ತು ಹೆಚ್ಚಳ

wild-elephants-at-Soraba-ulavi-hobli

ಸೊರಬ: ಕಳೆದ ಎರಡು ದಿನಗಳ ಹಿಂದೆ ಸೊರಬ ತಾಲೂಕಿನ ಉಳವಿ ಹೋಬಳಿ (Uluvi Hobli) ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಕಾಡಾನೆಗಳು (Wild Elephants) ಲಗ್ಗೆ ಇಟ್ಟಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿವೆ. ಎಲ್ಲೆಲ್ಲಿ ಕಾಡಾನೆ ಲಗ್ಗೆ? ಕಾನಹಳ್ಳಿ, ಕಣ್ಣೂರು ಮತ್ತು ಮೈಸಾವಿ ಗ್ರಾಮಗಳ ಸುತ್ತಮುತ್ತ ಬೆಳೆ ಕಟಾವು ಮಾಡಿದ ರೈತರ ಜಮೀನಿನಲ್ಲಿ (farmland) ಆನೆಗಳು ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತು ಹಾಗೂ ಲದ್ದಿ ಕಾಣಿಸಿದೆ. ಅಲ್ಲದೇ ಕೆಲವು ತೋಟದಲ್ಲಿ ಬಾಳೆಗಿಡಗಳನ್ನು ಕಿತ್ತು ತಿಂದು ಹಾನಿ ಮಾಡಿವೆ. ಇದನ್ನೂ ಓದಿ … Read more

ಚಂದ್ರಗುತ್ತಿಯಲ್ಲಿ ಇವತ್ತು ಲಕ್ಷ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

Chandragutti-Temple-Soraba.

ಸೊರಬ: ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ನ.20 ರಂದು ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ  ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಕೊನೆಯ ಕಾರ್ತಿಕ ಅಮಾವಾಸ್ಯೆಯಂದು ಲಕ್ಷ ದೀಪೋತ್ಸವವನ್ನು ಆಚರಿಸಲಾಗುವುದು. ದೇವಸ್ಥಾನದಲ್ಲಿ  ದೀಪಲಂಕಾರ ಸೇರಿದಂತೆ ಪ್ರಧಾನ ಅರ್ಚಕರಾದ ಅರವಿಂದ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಧಾರ್ಮಿಕ ಕಾರ್ಯಗಳು ನಡೆಯಲಿವೆ.   ಪರಿವಾರ ದೇವರುಗಳಾದ ನಾಗದೇವತೆ, ಕಾಲಭೈರವ, ಪರಶುರಾಮ, ಮಾತಂಗಿ, ತ್ರಿಶೂಲ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ … Read more

ಇಂದು ಉಚಿತವಾಗಿ ಹೃದಯ ತಪಾಸಣಾ ಶಿಬಿರ

soraba anavatti graphics

ಆನವಟ್ಟಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜನದನಿ ಸೇವಾ ಸಂಸ್ಥೆ, ಆಯುಷ್‌ ಇಲಾಖೆ ಹಾಗೂ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದ ಸಂಯುಕ್ತ ಆಶ್ರಯದಲ್ಲಿ ನ. 8ರಂದು ಚೌಡಮ್ಮನ ದೇವಸ್ಥಾನದ ಹತ್ತಿರ ಹೃದಯ ಉಚಿತ ತಪಾಸಣಾ (Heart Checkup) ಶಿಬಿರ ಹಮ್ಮಿಕೊಳ್ಳಲಾಗಿದೆ. ನ.15ರಂದು ವಿಶ್ವ ಭಾರತಿ ಶಾಲಾ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜನದನಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಾಕರ್‌, ಬಾಲಾಜಿ ನೃತ್ಯ ಶಾಲೆ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ನಟ– … Read more

ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ, ಮಿನಿಸ್ಟರ್‌ ಸಲಹೆ, ಏನಿದು ಲಸಿಕೆ?

Cattle-Vaccination-at-anavatti

ಆನವಟ್ಟಿ: ರಾಷ್ಟ್ರೀಯ ಜಾನುವಾರು (Cattles)ರೋಗಗಳ ನಿಯಂತ್ರಣ ಯೋಜನೆಯಡಿ ಜಾನುವಾರುಗಳಿಗೆ ನೀಡುತ್ತಿರುವ ಉಚಿತ ಲಸಿಕೆ ಸೌಲಭ್ಯವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ರೋಗ ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದರು. ಆನವಟ್ಟಿ ಸಮೀಪದ ಗಿಣಿವಾಲ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾಲುಬಾಯಿ ರೋಗ ಉಚಿತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಲಸಿಕಾದಾರರು ನಿಮ್ಮ ಮನೆ ಬಾಗಿಲಿಗೆ … Read more

‘ನಾನೂ ಸಚಿವ ಸ್ಥಾನದ ಅಕಾಂಕ್ಷಿ’, ಮಿನಿಸ್ಟರ್‌ ಪದವಿ ಬಗ್ಗೆ ಬೇಳೂರು ಏನೆಲ್ಲ ಹೇಳಿದರು?

Beluru-Gopalakrishna-Speaks-to-media-in-sagara

ಸಾಗರ: ನಾನು ಸಚಿವ (Minister) ಸ್ಥಾನದ ಪ್ರಬಲ ಆಕಾಂಕ್ಷಿ. ಸಂಪುಟ ವಿಸ್ತರಣೆ ಸಂದರ್ಭ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಎಂದು ಎಐಸಿಸಿ ಅಧ್ಯಕ್ಷ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈಡಿಗ ಸಮುದಾಯದ ಪ್ರಮುಖರು ನನಗೆ ಸಚಿವ ಸ್ಥಾನ ಕೊಡಿ ಎಂದು … Read more

ರಾತ್ರೋರಾತ್ರಿ ಲಾರಿ ಕದ್ದು ಎಸ್ಕೇಪ್‌ ಆಗಿದ್ದ ಆರೋಪಿ ಅರೆಸ್ಟ್‌

soraba-News-Update

ಸೊರಬ: ಪೆಟ್ರೋಲ್ ಬಂಕ್‌ವೊಂದರ ಮುಂಭಾಗ ನಿಲ್ಲಿಸಿದ್ದ ಲಾರಿ (Truck) ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾನುಕೇರಿ ಬಡಾವಣೆ ನಿವಾಸಿ ಇಬ್ರಾಹಿಂ ಅಹಮ್ಮದ್ (26) ಬಂಧಿತ. ಸೊರಬ ಪಟ್ಟಣದ ಪೆಟ್ರೋಲ್‌ ಬಂಕ್‌ ಮುಂಭಾಗ ಸಾಗರ ಪಟ್ಟಣದ ಗಾಂಧಿನಗರ ನಿವಾಸಿ ಆರೀಫ್ ಆಹ್ಮದ್ ಎಂಬುವರಿಗೆ ಸೇರಿದ ಲಾರಿ ಕಳ್ಳತನವಾಗಿತ್ತು. ಇದರ ಸಿಸಿಟಿವಿ ವಿಡಿಯೋಗಳು ವೈರಲ್‌ ಆಗಿದ್ದವು. ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಪಟ್ಟಣದ ಇಬ್ರಾಹಿಂ ಅಹಮ್ಮದ್‌ನನ್ನು ಬಂಧಿಸಿ, ಸುಮಾರು ₹4.90 ಲಕ್ಷದ ಲಾರಿಯನ್ನು ವಶಕ್ಕೆ … Read more

ಪೊಲೀಸ್‌ ಕಂಡು ಎಸ್ಕೇಪ್‌ ಆಗಲು ಯತ್ನ, ಹಿಡಿದು ವಿಚಾರಿಸಿದಾಗ ಹೊರಬಿತ್ತು ಸಾಲು ಸಾಲು ಕೇಸ್‌ಗಳ ವಿಷಯ

Soraba-Police-nab-temple-theif

ಸೊರಬ: ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 7 ಕಡೆ ದೇವಸ್ಥಾನಗಳಲ್ಲಿನ ಕಳ್ಳತನ (Temple) ಪ್ರಕರಣ ಬಯಲಿಗೆ ಬಂದಿದೆ. ಈತನಿಂದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸವಳಂಗದ ಅಯ್ಯಪ್ಪ ನಗರದ ಸಂದೀಪ.ಕೆ (24) ಬಂಧಿತ. ಸೊರಬದ ಪುರಸಭೆ ವೃತ್ತದಲ್ಲಿ ಗಸ್ತು ನಡೆಸುತ್ತಿದ್ದ ಪೊಲೀಸರನ್ನು ಕಂಡು ಸಂದೀಪ ಪರಾರಿಯಾಗಲು ಯತ್ನಿಸಿದ. ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸೊರಬ ಪೊಲೀಸ್‌ ಠಾಣೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧೆಡೆ … Read more