ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 12 MAY 2024
SHIMOGA : ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಏಕಾಏಕಿ 11.24 ಲಕ್ಷ ರೂ. ಹಣ ಕಡಿತವಾಗಿದೆ. ಬ್ಯಾಂಕ್‌ಗೆ ತೆರಳಿ ಮ್ಯಾನೇಜರ್ ಬಳಿ ವಿಚಾರಿಸಿದಾಗ ಆ್ಯಪ್ ಬಳಸಿ ಹಣ ಕಬಳಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಶಿವಮೊಗ್ಗದ ನಿವಾಸಿ ನಿವೃತ್ತ ನೌಕರರೊಬ್ಬರ ಮೊಬೈಲ್‌ಗೆ ಕೆನರಾ ಬ್ಯಾಂಕ್‌ನಿಂದ 12 ಮೆಸೇಜ್ ಬಂದಿತ್ತು. ಹಂತ ಹಂತವಾಗಿ ಅವರ ಖಾತೆಯಿಂದ 11.24 ಲಕ್ಷ ರೂ. ಹಣ ಕಡಿತವಾಗಿರುವ ಮಾಹಿತಿ ಎಸ್‌ಎಂಎಸ್‌ನಲ್ಲಿತ್ತು. ಕೂಡಲೆ ಬ್ಯಾಂಕ್‌ಗೆ ತೆರಳಿ ವಿಚಾರಣೆ ಮಾಡಿದಾಗ ನಿವೃತ್ತ ನೌಕರನ ಬ್ಯಾಂಕ್ ಖಾತೆಯಿಂದ ಬೇರಾವುದೇ ಖಾತೆಗೂ ಹಣ ವರ್ಗಾವಣೆ ಆಗಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು.
ಯಾವುದೋ ಆ್ಯಪ್ ಬಳಸಿ ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂದ ನಿವೃತ್ತ ನೌಕರ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ 3 ಮರ್ಡರ್, ಬಂಧಿತರ ಹೆಸರು ಬಹಿರಂಗ, ಬಿಗಿ ಬಂದೋಬಸ್ತ್‌ನಲ್ಲಿ ಯಾಸಿನ್ ಅಂತ್ಯಸಂಸ್ಕಾರ






