ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು, ನಾಲ್ವರು ಯುವಕರಿಗೆ ತಲಾ 25 ವರ್ಷ ಜೈಲು, ಶಿಕ್ಷೆ ಆಗಿದ್ದೇಕೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 6 OCTOBER 2023

SHIMOGA : ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ನಾಲ್ವರಿಗೆ 25 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Jail) ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಆರೈಕೆಗೆ ಬಂದಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.

ಏನಿದು ಪ್ರಕರಣ?

2020ರ ಡಿಸೆಂಬರ್ 6ರಂದು ಘಟನೆ ಸಂಭವಿಸಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಾಲಕಿಯ ತಾಯಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದಲ್ಲಿ ಗಲಭೆ ಹಿನ್ನಲೆ ಅಂದು ನಿಷೇಧಾಜ್ಞೆ ವಿಧಿಸಲಾಗಿತ್ತು. ಹೀಗಾಗಿ ಅಲ್ಲಿನ ಕ್ಯಾಂಟೀನ್ ಬಂದ್ ಆಗಿತ್ತು. ಊಟ, ಹಣ್ಣು, ಹಾಲು ಹತ್ತಿರದಲ್ಲಿ ಸಿಗುತ್ತಿರಲಿಲ್ಲ. ತಾಯಿಗೆ ಊಟ ತರಲು ಬಾಲಕಿ ಹೊರಗೆ ತೆರಳಿದ್ದಳು. ಇದನ್ನೇ ಬಳಸಿಕೊಂಡಿದ್ದ ಆರೋಪಿಗಳು, ಊಟ ಕೊಡಿಸುವುದಾಗಿ ಬಾಲಕಿಯನ್ನು ಒಮ್ನಿ ವಾಹನದಲ್ಲಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಬಳಿಕ ವಾಪಸ್ ಆಸ್ಪತ್ರೆ ಬಳಿ ಕರೆತಂದು ಬಿಟ್ಟಿದ್ದರು. ಅಲ್ಲಿದ್ದವರು ಗಮನಿಸಿ ಆಸ್ಪತ್ರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ನಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ- BREAKING NEWS – ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡ ಶಿವಮೊಗ್ಗ, ತೀರ್ಥಹಳ್ಳಿ ಮನೆಗಳ ಮೇಲೆ ED ದಾಳಿ

ಕಠಿಣ ಶಿಕ್ಷೆ ಪ್ರಕಟ

ಘಟನೆ ಸಂಬಂಧ ಮನೋಜ್, ಪ್ರಜ್ವಲ್, ವಿನಯ್ ಹಾಗೂ ಸಂದೀಪ್ ಎಂಬುವವರನ್ನು ಬಂಧಿಸಿ ಮಹಿಳಾ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಇನ್ಸ್‌ಪೆಕ್ಟರ್‌ ಅಭಯ್‌ ಪ್ರಕಾಶ್‌ ಸೋಮನಾಳ್‌ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದೆ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ 20 ವರ್ಷ ಕಠಿಣ ಶಿಕ್ಷೆಯ ಜತೆಗೆ 1 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಜೈಲು (Jail) ಶಿಕ್ಷೆ ಎದುರಿಸಬೇಕಿದೆ.

ಕಲಂ 366 ಅಡಿ ಮೂರು ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ಕಲಂ 506ರ ಅಡಿ ಎರಡು ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿದೆ. ನೊಂದ ಬಾಲಕಿಗೆ ಸರ್ಕಾರದಿಂದ 4 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ.

ನ್ಯಾಯಾಧೀಶರಾದ ಮೋಹನ್ ಅವರು ಆದೇಶ ನೀಡಿದ್ದು, ಬಾಲಕಿಯ ಪರವಾಗಿ ಸರ್ಕಾರಿ ವಕೀಲ ಹರಿಪ್ರಸಾದ್ ವಾದ ಮಂಡಿಸಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment