₹67 ಲಕ್ಷ ಕಳೆದುಕೊಂಡ ಶಿವಮೊಗ್ಗದ 22 ವರ್ಷದ ಯುವತಿ, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಆನ್‌ಲೈನ್ ಹೂಡಿಕೆ ಕಂಪನಿಯ ಹೆಸರಿನಲ್ಲಿ ಶಿವಮೊಗ್ಗದ 22 ವರ್ಷದ ಯುವತಿಗೆ ₹67 ಲಕ್ಷಕ್ಕು ಹೆಚ್ಚು ವಂಚನೆ (Scammed) ಮಾಡಲಾಗಿದೆ. ಈ ಸಂಬಂಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಯ್ತು ವಂಚನೆ?

ಶಿವಮೊಗ್ಗದ ಯುವತಿಗೆ ‘Funin’ ಕಂಪನಿಯ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಯುವತಿಯ ಹೆಸರಿನಲ್ಲಿ ಐ.ಡಿ ತೆರೆದು ಲಾಭದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಯುವತಿ 2025ರ ಜೂನ್ 9 ರಿಂದ ನವೆಂಬರ್ 26ರ ಮಧ್ಯೆ  ಒಟ್ಟು 559 ಹಂತಗಳಲ್ಲಿ ₹67,78,100 ಹಣ ವರ್ಗಾಯಿಸಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಪೊಲೀಸ್‌ ಅಧಿಕಾರಿಯ ಬೈಕ್‌ ನಾಪತ್ತೆ, ಎಲ್ಲಿ? ಆಗಿದ್ದೇನು?

ಹೂಡಿಕೆ ಮಾಡಿದ ಹಣ ವಾಪಸ್ಸು ಬಾರದೆ ಇದ್ದಾಗ ಅನುಮಾನ ಬಂದಿತ್ತು. ಅಲ್ಲದೆ ತಮ್ಮ ಐ.ಡಿಯಲ್ಲಿ ಡೆಪಾಸಿಟ್ ಹಾಗೂ ವಿತ್‌ಡ್ರಾ ಆಯ್ಕೆಗಳು ಬ್ಲಾಕ್ ಆಗಿದ್ದವು. ವಂಚನೆಗೊಳಗಾದ ಅರಿವಾದ ಹಿನ್ನೆಲೆ ಯುವತಿಯು ದೂರು ನೀಡಿದ್ದಾರೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment