ಅಡಿಕೆ ಹಾಳೆ ವಿಚಾರವಾಗಿ ಮನೆಗೆ ನುಗ್ಗಿ ಗಲಾಟೆ, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್‌

ಶಿವಮೊಗ್ಗ: ಅಡಿಕೆ ಹಾಳೆ (Areca leaf) ವಿಚಾರವಾಗಿ ನಡೆದ ಗಲಾಟೆ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಸಹೋದರಿ ಮತ್ತು ಆಕೆಯ ಪತಿಯ ವಿರುದ್ಧ ಮಹಿಳೆ (ಹೆಸರು ಗೌಪ್ಯ) ದೂರು ನೀಡಿದ್ದಾರೆ.

ಅಂಗಡಿಯಲ್ಲಿರುವ ಅಡಿಕೆ ಹಾಳೆಯನ್ನು ಉಚಿತವಾಗಿ ತಮಗೆ ನೀಡಬೇಕು ಎಂದು ಮಹಿಳೆಯ ಸಹೋದರಿ ಮತ್ತು ಆಕೆಯ ಪತಿ ಕೇಳಿದ್ದರು. ಅವರ ಬೇಡಿಕೆ ನಿರಾಕರಿಸಿದ್ದಕ್ಕೆ ತಡರಾತ್ರಿ ಮಹಿಳೆಯ ಮನೆಗೆ ಬಂದ ಸಹೋದರಿ ಮತ್ತು ಆಕೆಯ ಪತಿ ಮಹಿಳೆಯ ಮಗಳ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

https://chat.whatsapp.com/JPJ0lTQsTKf365Fqu6Q7cd

ಅಲ್ಲದೆ ಮಹಿಳೆಯ ಮನೆ ಬಾಗಿಲಿಗೆ ದೊಡ್ಡ ಕಲ್ಲು ಎತ್ತಿ ಹಾಕಿದ್ದಾರೆ. ಇದರಿಂದ ಕಬ್ಬಿಣದ ಬಾಗಿಲಿಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ತುರ್ತಾಗಿ ತನಿಖಾ ಆಯೋಗ ನೇಮಿಸಬೇಕು, ಶಿವಮೊಗ್ಗ ಸಮಾವೇಶದಲ್ಲಿ ಸಾಹಿತಿಗಳ ಪಟ್ಟು, ಕಾರಣವೇನು?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
crime name image

Leave a Comment