ಹಂದಿಗಾಗಿ ಕೈ ಕೈ ಮಿಲಾಯಿಸಿ ಆಸ್ಪತ್ರೆ ಸೇರಿದ ಯುವಕರು, ದೂರು, ಪ್ರತಿದೂರು ದಾಖಲು

ಶಿವಮೊಗ್ಗ : ಹಂದಿ (Pig) ವಿಚಾರವಾಗಿ ಇಬ್ಬರು ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ.

ಶಿವಮೊಗ್ಗದ ಗೋಪಾಳದ ಕೆಹೆಚ್‌ಬಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಅರ್ಜುನ್‌ ಮತ್ತು ಮಂಜುನಾಥ್‌ ಮಧ್ಯೆ ಗಲಾಟೆಯಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Altercation-between-two-men-crime-news

ಅರ್ಜುನ್‌ ದೂರಿನಲ್ಲಿ ಏನಿದೆ?

ತಮ್ಮ ಪುತ್ರನನ್ನು ಶಾಲೆಯಿಂದ ಕರೆತರಲು ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರು ಯುವಕರು ಹಂದಿ ಕಳ್ಳತನ ಮಾಡುತ್ತಿದ್ದರು. ಬೈಕ್‌ ನಿಲ್ಲಿಸಿ ತಮ್ಮ ಹಂದಿಗಳನ್ನು ಯಾಕೆ ಕಳ್ಳತನ ಮಾಡುತ್ತಿದ್ದೀರ ಎಂದು ಪ್ರಶ್ನಿಸಿದಾಗ ನಾಲ್ವರು ಯುವಕರು ಅಲ್ಲಿಂದ ಓಡಿ ಹೋಗಿದ್ದಾರೆ. ಮಂಜುನಾಥ ಎಂಬಾತ ತನ್ನ ಬಳಿ ಬಂದು ಮಚ್ಚು ಮತ್ತು ರಿಪೀಸಿನಿಂದ ತಲೆಗೆ ಹೊಡೆದಿದ್ದಾನೆ. ತಾನು ಪ್ರಜ್ಞಾಹೀನನಾಗಿ ಬಿದ್ದಿದ್ದೆ. ಬಳಿಕ ತಮ್ಮ ತಂದೆ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಆರೋಪಿಸಿ ಅರ್ಜುನ್‌ ದೂರು ನೀಡಿದ್ದಾನೆ.

Parishrama

ಮಂಜುನಾಥನಿಂದ ಪ್ರತಿ ದೂರು

ಇದಕ್ಕೆ ಮಂಜುನಾಥ್‌ ಪ್ರತಿದೂರು ನೀಡಿದ್ದಾನೆ. ತಾನು ಹಂದಿ ಸಾಕಾಣಿಕೆ ಮಾಡುತ್ತಿದ್ದು, ಹಂದಿಗಳನ್ನು ನೋಡಲು ಗೋಪಾಳಕ್ಕೆ ಹೋದಾಗ ಘಟನೆ ನಡೆದಿದೆ. ತಾನು ಹಂದಿಗಳನ್ನು ನೋಡುತ್ತಿದ್ದಾಗ ಅರ್ಜುನ್‌ ಸ್ಥಳಕ್ಕೆ ಬಂದಿದ್ದ. ‘ನಮ್ಮ ಏರಿಯಾಗೆ ಏಕೆ ಬಂದಿದ್ದೀಯ’ ಎಂದು ಪ್ರಶ್ನಿಸಿದ್ದ. ಆಗ ತಾನು ‘ನಮ್ಮ ಐದು ಹಂದಿಗಳನ್ನು ಹಿಡಿದುಕೊಂಡು ಹೋಗಿದ್ದೇಕೆʼ ಎಂದು ವಿಚಾರಿಸಿದ್ದೆ. ಅದಕ್ಕೆ ಅರ್ಜುನ್‌, ‘ಇನ್ನಷ್ಟು ಹಂದಿಗಳನ್ನು ಹೊಡೆದುಕೊಂಡು ಹೋಗುತ್ತೇನೆʼ ಎಂದು ಬೆದರಿಸಿದ್ದ. ಕೊನೆಗೆ ರಿಪೀಸ್‌ನಿಂದ ಹಲ್ಲೆ ನಡೆಸಿದ್ದಾನೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದಾಗಿ ಮಂಜುನಾಥ್‌ ದೂರು ನೀಡಿದ್ದಾನೆ.

Kalleshwara-Enterprises.webp

ಘಟನೆ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

NATIONAL-PUBLIC-SCHOOL-scaled

ಇದನ್ನೂ ಓದಿ » ದುಬೈನಿಂದ ಶಿವಮೊಗ್ಗಕ್ಕೆ ಮರಳಿದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment