ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ನವೆಂಬರ್ 2021
ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿ ಕೊಡುವಂತೆ ಸೂಚಿಸಿದ್ದಕ್ಕೆ ಮನೆಯವರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೆ ವೇಳೆ ಮಹಾನಗರ ಪಾಲಿಕೆ ವಾಹನದ ಗಾಜ ಹಾನಿ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ 25ನೇ ವಾರ್ಡ್ ಜೆಪಿ ನಗರದಲ್ಲಿ ಕಸ ಸಂಗ್ರಹ ಮಾಡಲು ಹೋಗಿದ್ದಾಗ ಘಟನೆ ಸಂಭವಿಸಿದೆ.
ಹೇಗಾಯ್ತು ಘಟನೆ?
ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹ ವಾಹನ ಜೆಪಿ ನಗರದಲ್ಲಿ ಕಸ ಸಂಗ್ರಹ ಮಾಡಲು ಹೋಗಿತ್ತು. ಈ ವೇಳೆ ಜೆಪಿ ನಗರದ ಮನೆಯೊಂದರಲ್ಲಿ ಚೀಲದಲ್ಲಿ ಕಸ ಕೊಟ್ಟಿದ್ದಾರೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಕೊಡಬೇಕು. ಇಲ್ಲವಾದಲ್ಲಿ ಕಸ ಸಂಗ್ರಹಿಸದಂತೆ ಸೂಚನೆ ಎಂದು ಲೋಡರ್ ದೇವರಾಜ್ ತಿಳಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಯುವಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪಾಲಿಕೆಯ ಕಸ ಸಂಗ್ರಹ ವಾಹನದ ಮುಂದಿನ ಗ್ಲಾಸ್’ಗೆ ಹಾನಿ ಮಾಡಲಾಗಿದೆ. ವಾಹನ ಚಾಲಕ ಮಂಜಾ ನಾಯ್ಕ್ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ದೇವರಾಜ್ ಮತ್ತು ಮಂಜಾ ನಾಯ್ಕ್ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ.
ಪೌರ ಕಾರ್ಮಿಕರ ಆಕ್ರೋಶ
ಪೌರ ಕಾರ್ಮಿಕರ ಮೇಲಿನ ಹಲ್ಲೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರವನ್ನು ಸ್ವಚ್ಛವಾಗಿ ಇಡುವಲ್ಲಿ ಶ್ರಮಿಸುತ್ತಿರುವವರ ಮೇಲೆ ಹಲ್ಲೆ ನಡೆಸುವವರ ವಿರುದ್ದ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಇನ್ಮುಂದೆ ಶಿವಮೊಗ್ಗ ನಗರದಲ್ಲಿ ಕಸ ವಿಂಗಡಣೆ ಕಡ್ಡಾಯ, ವಾರದಲ್ಲಿ ಎರಡು ದಿನ ಮಾತ್ರ ಒಣ ಕಸ ಸಂಗ್ರಹ