ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಸರ್ಕಾರಿ ಗೌರವದೊಂದಿಗೆ ಮಂಜುನಾಥ್‌ ಅಂತ್ಯಕ್ರಿಯೆ, ಚಿತಾಗಾರದಲ್ಲಿ ಏನೆಲ್ಲ ಆಯ್ತು?

ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಸಾವನ್ನಪ್ಪಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ ರಾವ್‌ ಅವರ ಅಂತ್ಯಕ್ರಿಯೆ (Final Rites) ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಪುತ್ರ ಅಭಿಜಯ್‌ ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಧಾರ್ಮಿಕ ವಿಧಿವಿಧಾನ, ಸರ್ಕಾರಿ ಗೌರವ

ಅಂತ್ಯಕ್ರಿಯೆಗು ಮುನ್ನ ರೋಟರಿ ಚಿತಾಗಾರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಯತು. ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಮನ ಸಲ್ಲಿಸಿದರು. ರಾಜ್ಯ ಸರ್ಕಾರದ ವತಿಯಿಂದ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿ ಹಲವರು ಇದ್ದರು.

ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗ ಸಿಟಿಯಲ್ಲಿ ಮಂಜುನಾಥ ರಾವ್‌ ಅಂತಿಮ ಯಾತ್ರೆ, ಹೇಗಿತ್ತು? ಯಾರೆಲ್ಲ ಇದ್ದರು?

ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಗುಂಡಾ ಭಟ್ಟರ ನೇತೃತ್ವದಲ್ಲಿ ನಾರಾಯಣ ಬಲಿ ಹೋಮ ನಡೆಸಲಾಯಿತು. ಆ ನಂತರ ಪುತ್ರ ಅಭಿಜಯ್‌, ಮಂಜುನಾಥ ರಾವ್‌ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ (Final Rites) ಮಾಡಿದರು.

Kalleshwara-Enterprises.webp
State-government-respect-for-Manjunatha-Rao-in-shimoga.
ಸರ್ಕಾರಿ ಗೌರವದೊಂದಿಗೆ ಮಂಜುನಾಥ ರಾವ್‌ ಅಂತ್ಯಕ್ರಿಯೆ.
ಮಂಜುನಾಥ ರಾವ್‌ ಪತ್ನಿ ಪಲ್ಲವಿ ಅವರಿಗೆ ಸಚಿವ ಮಧು ಬಂಗಾರಪ್ಪ ಸಾಂತ್ವನ ಹೇಳಿದರು.
ರೋಟರಿ ಚಿತಾಗಾರದಲ್ಲಿ ಮಂಜುನಾಥ ರಾವ್‌ ಪತ್ನಿ ಪಲ್ಲವಿ ಅವರಿಗೆ ಸಚಿವ ಮಧು ಬಂಗಾರಪ್ಪ ಸಾಂತ್ವನ ಹೇಳಿದರು.
https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment