ಶಿವಮೊಗ್ಗ ಸಿಟಿಯಲ್ಲಿ ATMನಿಂದ ಹಣ ದರೋಡೆಗೆ ಯತ್ನ, ಇಲ್ಲಿದೆ ಘಟನೆಯ ಕಂಪ್ಲೀಟ್‌ ಡಿಟೇಲ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 27 JANUARY 2025

ಶಿವಮೊಗ್ಗ : ATM ಮೆಷಿನ್‌ ಮುರಿದು ಹಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ. ನೆಹರು ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಕಳ್ಳತನಕ್ಕೆ ಪ್ರಯತ್ನವಾಗಿದೆ. ಘಟನೆ ನಡೆದು ಕೆಲವೇ ಹೊತ್ತಿಗೆ ಪೊಲೀಸರು ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಎಟಿಎಂ ಮೆಷಿನ್‌ ಮುರಿಯಲು ಯತ್ನ

Canara Bank ATM Theft attempt at Nehru Road

  • ಕಳೆದ ರಾತ್ರಿ 10.45ರ ಹೊತ್ತಿಗೆ ಕಳ್ಳತನಕ್ಕೆ ಯತ್ನವಾಗಿದೆ. ಬ್ಯಾಗ್‌, ತಲೆಗೆ ಟೋಪಿ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಎಟಿಎಂ ಯಂತ್ರ ಮುರಿಯಲು ಯತ್ನಿಸಿದ್ದಾನೆ.

Canara Bank ATM Theft attempt at Nehru Road

  • ಎಟಿಎಂ ಕೇಂದ್ರದಲ್ಲಿ ಎರಡು ಎಟಿಎಂ ಮೆಷಿನ್‌ಗಳಿವೆ. ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತ ಒಳ ಬಂದ ವ್ಯಕ್ತಿ, ಮೊದಲು ಒಂದು ಯಂತ್ರ ಪರಿಶೀಲಿಸಿದ್ದಾನೆ. ಬಳಿಕ ಪಕ್ಕದ ಎಟಿಎಂ ಯಂತ್ರವನ್ನು ಚೆಕ್‌ ಮಾಡಿ, ಅದರ ಲಾಕ್‌ಗಳನ್ನು ತೆಗೆದು ಹಣ ಕದಿಯಲು ಯತ್ನಿಸಿದ್ದ.

ATM-theft-attempt-at-Shimoga-nehru-road

  • ಬಳಿಕ ಪಕ್ಕದ ಎಟಿಎಂ ಮೆಷಿನ್ನಿನ ಲಾಕ್‌ ತೆರೆಯಲು ಪ್ರಯತ್ನಿಸಿದ್ದ. ಆಗ ಎಟಿಎಂ ಕೇಂದ್ರದ ಒಳಗೆ ಸೈರನ್‌ ಆನ್‌ ಆಗಿದೆ. ಬೆಚ್ಚಿದ ಕಳ್ಳ ಅಲ್ಲಿಂದ ಪರಾರಿಯಾಗಿದ್ದ.

ಕೆಲವೇ ಹೊತ್ತಿನಲ್ಲಿ ಆರೋಪಿ ವಶಕ್ಕೆ

ಎಟಿಎಂನಲ್ಲಿ ಕಳ್ಳತನ ಯತ್ನದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್‌ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಿಸಿಟಿವಿ ಪರಿಶೀಲಿಸಿದರು.

Canara Bank ATM Theft attempt at Nehru Road

ತಕ್ಷಣದಿಂದಲೇ ಕಾರ್ಯಪ್ರವೃತ್ತರಾದ ಕೋಟೆ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದರು. ಕೆಲವೇ ಹೊತ್ತಿನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಯುತ್ತಿದೆ. ಆರೋಪಿ ಬಿಹಾರ ಮೂಲದವನು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

Canara Bank ATM Theft attempt at Nehru Road

ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬವ ವಾಹನ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಮಂಗಳೂರಿನಲ್ಲಿ ಬ್ಯಾಂಕ್‌ ರಾಬರಿ ಪ್ರಕರಣದಿಂದ ರಾಜ್ಯದಲ್ಲಿ ಆತಂಕ ಮೂಡಿತ್ತು. ಈಗ ಶಿವಮೊಗ್ಗದಲ್ಲಿಯು ಎಟಿಎಂ ಮೆಷಿನ್‌ ಮುರಿದು ಹಣ ಕಳ್ಳತನಕ್ಕೆ ವಿಫಲ ಯತ್ನವಾಗಿದೆ.

ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಎಟಿಎಂ ಮೆಷಿನ್‌ಗಳಿಗೆ ಹಾನಿಯಾಗಿರುವ ಹಿನ್ನೆಲೆ ಎಟಿಎಂ ಕೇಂದ್ರವನ್ನು ಬಂದ್‌ ಮಾಡಲಾಗಿದೆ.

ಇದನ್ನೂ ಓದಿ » ಆಯನೂರು ATMನಲ್ಲಿ ಹಣ ಬಿಡಿಸಿದ ರೈತ, 20 ನಿಮಿಷದಲ್ಲೇ ಕಾದಿತ್ತು ಶಾಕ್‌, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 27, 2025

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ಸರ್ವೆಗೆ ಹೋದಾಗ ಇಂಜಿನಿಯರ್‌, ಸರ್ವೇಯರ್‌ ಮೇಲೆ ಕೋಲು, ಕಲ್ಲುಗಳಿಂದ ದಾಳಿ

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ರಾಮಚಂದ್ರಾಪುರ ಮಠದಲ್ಲಿ ರಾಮೋತ್ಸವ, ಯಾವ್ಯಾವ ದಿನ ಏನೇನು ಕಾರ್ಯಕ್ರಮ ಇರಲಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಶಿವಮೊಗ್ಗದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ, ಏನೇನೆಲ್ಲ ಇರುತ್ತೆ? ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ?

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಮನೆಗೆ ತಾಯಿ ಬಂದಾಗ ತೆರೆದಿತ್ತು ಹಿಂಬಾಗಿಲು; ಮಗಳು ಬಂದಾಗ ಹೊರಬಿತ್ತು ಶಾಕಿಂಗ್‌ ವಿಚಾರ

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಾನಿ, ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಫಟಾಫಟ್‌ ಅಪ್‌ಡೇಟ್‌

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ಆಟೋ ನಾಪತ್ತೆಯಾಗಿ ಒಂದು ವರ್ಷದ ಬಳಿಕ ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

Leave a Comment