ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 26 JULY 2024 : ಶಿವಮೊಗ್ಗ ನಗರದ ಮೂರು ಪ್ರಮುಖ ಅಪರಾಧ ಸುದ್ದಿಗಳು ಫಟಾಫಟ್.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಜೀವ್ ಗಾಂಧಿ ಬಡಾವಣೆ ಕಂಟ್ರಿ ಕ್ಲಬ್ ಮುಂದೆ ಉದ್ಯಮಿ ಮೇಲೆ ಹಲ್ಲೆ ಶಿವಮೊಗ್ಗ ಲೈವ್.ಕಾಂ : ರಾಜೀವ್ ಗಾಂಧಿ ಬಡಾವಣೆಯಲ್ಲಿರುವ ಕಂಟ್ರಿ ಕ್ಲಬ್ (Club) ಮುಂಭಾಗ ಉದ್ಯಮಿಯೊಬ್ಬರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ. ವ್ಯವಹಾರ ಕರಿತು ಸ್ನೇಹಿತರ ಜೊತೆಗೆ ಚರ್ಚೆಗೆ ತೆರಳಿದ್ದ ಪ್ರದೀಪ್ ಎಂಬುವವರ ಮೇಲೆ ಹಲ್ಲೆಯಾಗಿದೆ. ಜು.18ರ ರಾತ್ರಿ ಚರ್ಚೆ ಮುಗಿಸಿ ಪ್ರದೀಪ್ ಅವರು ಕಂಟ್ರಿ ಕ್ಲಬ್‌ನಿಂದ ಕಾರಿನಲ್ಲಿ ಹೊರಗೆ ತೆರಳುತ್ತಿದ್ದರು. ಈ ವೇಳೆ ಯುವಕರ ಗುಂಪೊಂದು ಸೆಕ್ಯೂರಿಟಿ ಗಾರ್ಡ್ ಜೊತೆಗೆ ವಾಗ್ವಾದ ನಡೆಸುತ್ತಿತ್ತು. ಪ್ರದೀಪ್ ಅವರು ಇದನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಪೂಜಿನಗರ ಫೋನ್ ಪೇ ವಿಚಾರವಾಗಿ ಇಬ್ಬರ ಮೇಲೆ ಹಲ್ಲೆ ಶಿವಮೊಗ್ಗ ಲೈವ್.ಕಾಂ : ಬಾಪೂಜಿ ನಗರದ ಗಂಗಮ್ಮ ದೇವಸ್ಥಾನದ ಬಳಿ ಅಂಗಡಿಯೊಂದರಲ್ಲಿ ಫೋನ್ ಪೇ ಮೂಲಕ ಹಣ ಪಾವತಿ ವಿಚಾರವಾಗಿ ಯುವಕರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದೆ. ಕಿರಣ ಮತ್ತು ರಾಘವೇಂದ್ರ ಗಾಯಗೊಂಡಿದ್ದಾರೆ. ರಾಘವೇಂದ್ರ ಅವರು ಅಂಗಡಿಯಲ್ಲಿ ಗುಟ್ಕಾ ಖರೀದಿಸಿ ಫೋನ್ ಪೇ ಮೂಲಕ ಹಣ ಪಾವತಿಸಲು ಮುಂದಾದರು. ಪಕ್ಕದಲ್ಲಿದ್ದ ಐದಾರು ಯುವಕರು ಫೋನ್ ಪೇ ಮಾಡದಂತೆ ಸೂಚಿಸಿದ್ದಾರೆ. ಇದೇ ವಿಚಾರವಾಗಿ ರಾಘವೇಂದ್ರ ಮತ್ತು ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಗಾನೆ ಲಕ್ಷ ಲಕ್ಷದ ಚಿನ್ನಾಭರಣ, ನಗದು ಕಳವು ಶಿವಮೊಗ್ಗ ಲೈವ್.ಕಾಂ : ಮನೆಯಲ್ಲಿ ಯಾರೂ ಇಲ್ಲದಾಗ ಹಿಂಬದಿಯ ಹೆಂಚು ಇಳಿಸಿ, ಹಿಂದಿನ ಬಾಗಿಲು ತೆಗೆದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಸೋಗಾನೆಯ ರೆಡ್ಡಿ ಕ್ಯಾಂಪ್‌ನ ಚಂದ್ರಮ್ಮ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಚಂದ್ರಮ್ಮ ಅವರು ಮೈಸೂರಿನಲ್ಲಿರುವ ಮಗಳ ಮನೆಗೆ ಹೋಗಿದ್ದರು. ಈ ವೇಳೆ ಕಳ್ಳತನವಾಗಿದೆ. 4.80 ಲಕ್ಷ ರೂ. ನಗದು ಮತ್ತು ಚಿನ್ನಾಭರಣ ಸೇರಿ 12.04 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇓
ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?