ಬೈಪಾಸ್‌ನಿಂದ ಬೈಕ್‌ನಲ್ಲಿ ಬಂದು ವಿಳಾಸ ಕೇಳಿದರು, ಏಕಾಏಕಿ ದಾಳಿ ಮಾಡಿ ಮೊಬೈಲ್ ಕಸಿದು ಪರಾರಿಯಾದರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIVAMOGGA LIVE NEWS | 24 JUNE 2024
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

SHIMOGA : ಕೇಬಲ್‌ ವಯರ್‌ ಅಳವಡಿಸುತ್ತಿದ್ದ ಟೆಕ್ನಿಷಿಯನ್‌ (technician) ಮೇಲೆ ಅಪರಿಚಿತರು ದಾಳಿ ಮಾಡಿ, ಗಾಯಗೊಳಿಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದೇ ವೇಳೆ ಮತ್ತೊಬ್ಬ ವ್ಯಕ್ತಿಯಿಂದ ನಗದು ಕಸಿದುಕೊಂಡು ಹೋಗಿದ್ದಾರೆ.

ಶಿವಮೊಗ್ಗದ ಟೆಂಪೊ ಸ್ಟಾಂಡ್‌ ಬಳಿ ರಾತ್ರಿ 1.30ರ ಹೊತ್ತಿಗೆ ಕೇಬಲ್‌ ವೈಯರ್‌ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಟೆಕ್ನಿಷಿಯನ್‌ ಮಾರ್ಕ್‌ ಎಂಬಾತ ಕೆಲಸ ಮಾಡುತ್ತಿದ್ದ ವೇಳೆ ಬೈಪಾಸ್‌ ರಸ್ತೆಯಿಂದ ಒಂದೇ ಬೈಕ್‌ನಲ್ಲಿ ಬಂದ ಮೂವರು ವಿಳಾಸ ಕೇಳಿದ್ದರು. ತನಗೆ ವಿಳಾಸ ಗೊತ್ತಿಲ್ಲ ಎಂದು ಮಾರ್ಕ್‌ ತಿಳಿಸಿದ್ದಾನೆ. ಆಗ ಬೈಕ್‌ನಲ್ಲಿದ್ದವರು ಮಾರ್ಕ್‌ ಕೈಯಲ್ಲಿದ್ದ ಮೊಬೈಲ್‌ ಕಸಿದುಕೊಂಡಿದ್ದಾರೆ.

ಈ ಮೇಳೆ ಮಾರ್ಕ್‌ ಮೇಲೆ ಹಲ್ಲೆ ನಡೆಸಿದ್ದು ತಲೆ ಮತ್ತು ದವಡೆಗೆ ಹೊಡೆದು ಗಾಯಗೊಳಿಸಿದ್ದಾರೆ. ದೂರದಲ್ಲಿದ್ದ ಸಹೋದ್ಯೋಗಿಗಳು ನೆರವಿಗೆ ಧಾವಿಸುತ್ತಿದ್ದಂತೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದೇ ವೇಳೆ ಕುಂಬಾರ ಗುಂಡಿ ನಿವಾಸಿ ವಿಜಯ್‌ ಟಿಕಾರ್‌ ಎಂಬುವವರನ್ನು ಅಡ್ಡಗಟ್ಟಿ 1500 ರೂ. ನಗದು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಇದನ್ನೂ ಓದಿ – ಕಾರು ಡಿಕ್ಕಿಯಾಗಿ ಮುರಿದು ಬಿದ್ದ ವಿದ್ಯುತ್‌ ಕಂಬ, CCTVಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

Leave a Comment